Google Health ನ ಆರೋಗ್ಯ ಸೇವಾ ತಂತ್ರಜ್ಞಾನ ಸುಧಾರಣೆಗಳ ಹಿಂದಿರುವ ತಜ್ಞರನ್ನು ಭೇಟಿ ಮಾಡಿ
ವೈಜ್ಞಾನಿಕ ಉತ್ಕೃಷ್ಟತೆ, ಮಾನವ-ಕೇಂದ್ರಿತ ತಂತ್ರಜ್ಞಾನಗಳು ಮತ್ತು ವಿಶ್ವಾಸಾರ್ಹ ಮೂಲ ಸೌಕರ್ಯದ ಮೂಲಕ ಆರೋಗ್ಯದ ಭವಿಷ್ಯವನ್ನು ಪರಿವರ್ತಿಸಲು ನಮ್ಮ ತಜ್ಞರ ತಂಡ ಬದ್ಧವಾಗಿದೆ. ನಮ್ಮ ತಂಡದಲ್ಲಿ ಇಂಜಿನಿಯರ್‌ಗಳು, ವೈದ್ಯರು, ಡಿಸೈನರ್‌ಗಳು, ಸಂಶೋಧಕರು ಮತ್ತು ಎಲ್ಲಾ ಪ್ರಕಾರಗಳ ತಜ್ಞರಿದ್ದಾರೆ ಹಾಗೂ ಅವರು ಉತ್ತಮ ಜೀವನ ಸಾಗಿಸಲು ಪ್ರತಿಯೊಬ್ಬರಿಗೂ ನೆರವಾಗಲು ಬದ್ಧರಾಗಿದ್ದಾರೆ. ನಮ್ಮ ಉತ್ಪನ್ನಗಳನ್ನು ನಾವು ಹೇಗೆ ನಿರ್ಮಿಸುತ್ತೇವೆ ಎಂಬುದರಿಂದ ನಮ್ಮ ಕಾರ್ಯಪಡೆಯನ್ನು ಹೇಗೆ ರೂಪಿಸುತ್ತೇವೆ ಎಂಬುದರವರೆಗೆ—ನಮ್ಮ ನಿರ್ಧಾರಗಳ ಮೂಲದಲ್ಲಿ ವೈವಿಧ್ಯತೆ, ಸಮಾನತೆ ಮತ್ತು ಸಹಿಷ್ಣುತೆಯೆಡೆಗಿನ ನಮ್ಮ ಸಮರ್ಪಣೆಯಿದೆ.
ಆರೋಗ್ಯ ಪರಿಣಿತಿಯ ಬೆಂಬಲವಿದೆ
ಎಲ್ಲಾ Google Health ಉಪಕ್ರಮಗಳನ್ನು — ಹೊಸ ಉತ್ಪನ್ನಗಳಿಂದ ಹಿಡಿದು ಸಂಶೋಧನೆಯವರೆಗೆ — ಎಲ್ಲವನ್ನೂ ಅಯಾ ಕ್ಷೇತ್ರಗಳಲ್ಲಿ ಪರಿಣಿತರಾಗಿರುವ ಕ್ಲಿನಿಶಿಯನ್‌ಗಳ ಜೊತೆಗಿನ ನಿಕಟ ಸಹಯೋಗದೊಂದಿಗೆ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಲಾಗಿದೆ. ನಮ್ಮ ತಂಡದ ಅನುಭವ ಮತ್ತು ಪರಿಣಿತಿಯು ದಶಕಗಳ ವೈದ್ಯಕೀಯ ಅಭ್ಯಾಸ, ಸಾರ್ವಜನಿಕ ಆರೋಗ್ಯ, ಆರೋಗ್ಯ ಅರ್ಥಶಾಸ್ತ್ರದ ಸಂಶೋಧನೆ ಮತ್ತು ವೈದ್ಯಕೀಯದಲ್ಲಿ AI ಹಾಗೂ ಮಷಿನ್ ಲರ್ನಿಂಗ್‌ನ ಬಳಕೆಯನ್ನು ಒಳಗೊಂಡಿದೆ — ಆ ಮೂಲಕ Google Health ಉಪಕ್ರಮಗಳು ಸರ್ವೋಚ್ಛ ವೈದ್ಯಕೀಯ ಪ್ರಮಾಣಗಳನ್ನು ಪಾಲಿಸುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.
ಡಾ. ಕೆರೇನ್ ಡಿಸಾಲ್ವೊ
ಮುಖ್ಯ ಆರೋಗ್ಯ ಅಧಿಕಾರಿಗಳು
ಡಾ. ಕೆರೇನ್ ಡಿಸಾಲ್ವೊರವರು ವೈದ್ಯಕೀಯ, ಸಾರ್ವಜನಿಕ ಆರೋಗ್ಯ ಮತ್ತು ಮಾಹಿತಿ ತಂತ್ರಜ್ಞಾನದ ಛೇದಕದಲ್ಲಿ ಕೆಲಸ ಮಾಡುವ ವೈದ್ಯ ಕಾರ್ಯನಿರ್ವಾಹಕರಾಗಿದ್ದು, ಅವರ ವೃತ್ತಿಜೀವನವು ಆರೋಗ್ಯವನ್ನು ಸುಧಾರಿಸುವುದರ ಮೇಲೆ ಮತ್ತು ಅಸಮಾನತೆಗಳನ್ನು ತೆಗೆದುಹಾಕುವುದರ ಮೇಲೆ ಗಮನ ಕೇಂದ್ರೀಕರಿಸಿದೆ. ಅವರು Google ನಲ್ಲಿ ಆರೋಗ್ಯ ವೃತ್ತಿಪರರ ತಂಡವನ್ನು ಮುನ್ನಡೆಸುತ್ತಾರೆ, ಅವರು ಸೇರ್ಪಡೆಯ ಸಂಶೋಧನೆ, ಉತ್ಪನ್ನಗಳು ಮತ್ತು ಸೇವೆಗಳ ಅಭಿವೃದ್ಧಿಗೆ ಮಾರ್ಗದರ್ಶನ ನೀಡುತ್ತಾರೆ. ಅವರು Google COVID ಪ್ರತಿಕ್ರಿಯೆ ತಂಡದ ಭಾಗವಾಗಿದ್ದಾರೆ. Google ಗೆ ಸೇರುವ ಮೊದಲು, ಡಾ. ಡಿಸಾಲ್ವೊ ಅವರು ಆರೋಗ್ಯ ಮಾಹಿತಿ ತಂತ್ರಜ್ಞಾನದ ರಾಷ್ಟ್ರೀಯ ಸಂಯೋಜಕರಾಗಿದ್ದರು ಮತ್ತು ಒಬಾಮಾ ಆಡಳಿತದಲ್ಲಿ ಆರೋಗ್ಯ (ಕಾರ್ಯನಿರ್ವಹಿಸುವಿಕೆ) ಸಹಾಯಕ ಕಾರ್ಯದರ್ಶಿಯಾಗಿದ್ದರು. ಯುಎಸ್ ಆರೋಗ್ಯ ಮತ್ತು ಮಾನವ ಸೇವೆಗಳ ವಿಭಾಗದಲ್ಲಿ ಸೇವೆ ಸಲ್ಲಿಸುವ ಅವಧಿಯಲ್ಲಿ, ಡಾ. ಡಿಸಾಲ್ವೊ ಹೆಚ್ಚು ಗ್ರಾಹಕ-ಆಧಾರಿತ, ಪಾರದರ್ಶಕ ಮತ್ತು ಮೌಲ್ಯ-ಆಧಾರಿತ ಆರೋಗ್ಯ ವ್ಯವಸ್ಥೆಯನ್ನು ರಚಿಸುವತ್ತ ಗಮನಹರಿಸಿದ್ದಾರೆ. ಡಾ. ಡಿಸಾಲ್ವೊ ಕತ್ರಿನಾ ಚಂಡಮಾರುತದ ನಂತರ ನ್ಯೂ ಓರ್ಲಿಯನ್ಸ್ ಆರೋಗ್ಯ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಈ ಹಿಂದೆ ಟುಲೇನ್ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಸಮುದಾಯ ವ್ಯವಹಾರಗಳು ಮತ್ತು ಆರೋಗ್ಯ ನೀತಿಯ ವೈಸ್ ಡೀನ್ ಆಗಿದ್ದರು, ಅಲ್ಲಿ ಅವರು ಆಂತರಿಕ ಮೆಡಿಸಿನ್‌ನ ವೈದ್ಯರು, ಶಿಕ್ಷಣತಜ್ಞರು, ಸಂಶೋಧಕರು ಮತ್ತು ನಾಯಕರಾಗಿದ್ದರು. ಅವರು ನ್ಯಾಷನಲ್ ಅಕಾಡೆಮಿ ಆಫ್ ಮೆಡಿಸಿನ್ ಕೌನ್ಸಿಲ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇನ್ನಷ್ಟು ಓದಿ
ಡಾ. ಮೈಕೆಲ್ ಹೋವೆಲ್
ಮುಖ್ಯ ವೈದ್ಯಕೀಯ ಅಧಿಕಾರಿ ಮತ್ತು ಉಪ ಮುಖ್ಯ ಆರೋಗ್ಯ ಅಧಿಕಾರಿ
ಆರೋಗ್ಯವನ್ನು ಸುಧಾರಿಸಲು ತಂತ್ರಜ್ಞಾನವು ಯಾವ ರೀತಿ ಸಹಾಯ ಮಾಡಬಹುದೆಂಬ ವಿಷಯವೂ ಸೇರಿದ ಹಾಗೆ, ಆರೈಕೆಯ ಗುಣಮಟ್ಟ, ಸುರಕ್ಷತೆ ಹಾಗೂ ಅನುಭವವನ್ನು ಸುಧಾರಿಸುವುದರ ಕುರಿತಾಗಿ ಡಾ. ಮೈಕೆಲ್ ಹೋವೆಲ್ ಅವರ ವೃತ್ತಿಜೀವನವು ಗಮನ ಕೇಂದ್ರೀಕರಿಸುತ್ತದೆ. ಇವರು, ಆರೋಗ್ಯಸೇವೆ ವಿತರಣೆ ವಿಜ್ಞಾನದಲ್ಲಿ ರಾಷ್ಟ್ರೀಯವಾಗಿ ಗುರುತಿಸಿಕೊಂಡಿರುವ ತಜ್ಞರಾಗಿದ್ದಾರೆ, ಮಾತ್ರವಲ್ಲದೆ ರೋಗ ನಿಯಂತ್ರಣ ಕೇಂದ್ರಗಳು, ಮೆಡಿಕೇರ್ ಹಾಗೂ ನ್ಯಾಷನಲ್ ಅಕಾಡೆಮಿ ಆಫ್ ಮೆಡಿಸಿನ್‌ಗಳ ಸಲಹಾ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇತರ ಸಂಶೋಧನಕಾರರು 10,000 ಕ್ಕೂ ಹೆಚ್ಚು ಬಾರಿ ಉಲ್ಲೇಖಿಸಿರುವ ಇವರ ಬರಹಗಳು ಈ ಕ್ಷೇತ್ರದ ಮೇಲೆ ಪರಿಣಾಮ ಬೀರಿವೆ ಮತ್ತು ಅನೇಕ ರಾಷ್ಟ್ರೀಯ ಮಾರ್ಗಸೂಚಿಗಳಲ್ಲಿ ಇವುಗಳನ್ನು ಅಳವಡಿಸಿಕೊಳ್ಳಲಾಗಿದೆ. ಶ್ವಾಸಕೋಶ ಹಾಗೂ ತೀವ್ರ ನಿಗಾ ವೈದ್ಯರಾಗಿರುವ ಇವರು, ಹಾರ್ವರ್ಡ್ ಹಾಗೂ ಯುನಿವರ್ಸಿಟಿ ಆಫ್ ಶಿಕಾಗೋದಲ್ಲಿ ಚೀಫ್ ಕ್ವಾಲಿಟಿ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಾ ರೋಗಿಗಳ ಆರೈಕೆಯಲ್ಲಿ ಹಲವು ವರ್ಷಗಳನ್ನು ಕಳೆದಿದ್ದಾರೆ.
ಇನ್ನಷ್ಟು ಓದಿ
ಬಕುಲ್ ಪಟೇಲ್
ಹಿರಿಯ ನಿರ್ದೇಶಕರು, ಗ್ಲೋಬಲ್ ಡಿಜಿಟಲ್ ಆರೋಗ್ಯ ಕಾರ್ಯತಂತ್ರ ಮತ್ತು ನಿಯಂತ್ರಣ
ಬದಲಾಗುತ್ತಿರುವ ಜಾಗತಿಕ ನಿಯಂತ್ರಕ ಅಗತ್ಯಗಳನ್ನು ಪೂರೈಸುವ ಏಕೀಕೃತ ಡಿಜಿಟಲ್ ಆರೋಗ್ಯ ಕಾರ್ಯತಂತ್ರವನ್ನು ರೂಪಿಸುವತ್ತ ಬಕುಲ್ ಪಟೇಲ್ ಅವರು ಗಮನಹರಿಸಿದ್ದಾರೆ. ಶ್ರೀಯುತ ಪಟೇಲ್ ಅವರ ದೃಷ್ಟಿಕೋನವು, ತಂತ್ರಜ್ಞಾನದ ಸಾಮರ್ಥ್ಯದ ಕುರಿತು ಅರಿತುಕೊಳ್ಳಲು ಹಾಗೂ ಉತ್ತಮ ಗುಣಮಟ್ಟದ, ಸಮಾನ ಆರೋಗ್ಯ ರಕ್ಷಣೆಗೆ ಆ್ಯಕ್ಸೆಸ್ ಅನ್ನು ಎಲ್ಲರಿಗೂ ಒದಗಿಸುವ ನಿಟ್ಟಿನಲ್ಲಿ ಅದರ ಪಾತ್ರವನ್ನು ಅರ್ಥಮಾಡಿಸಲು ಸಹಾಯ ಮಾಡುವುದಾಗಿದೆ. ಶ್ರೀಯುತ ಪಟೇಲ್ ಅವರು Google ಗೆ ಸೇರುವ ಮೊದಲು, ಯುನೈಟೆಡ್ ಸ್ಟೇಟ್ಸ್ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್‌ನಲ್ಲಿ (FDA) ಜಾಗತಿಕ ಕಾರ್ಯತಂತ್ರ ಮತ್ತು ನಾವೀನ್ಯತೆಯ ಮುಖ್ಯ ಡಿಜಿಟಲ್ ಆರೋಗ್ಯ ಅಧಿಕಾರಿಯಾಗಿ ಹಾಗೂ ಡಿಜಿಟಲ್ ಹೆಲ್ತ್ ಸೆಂಟರ್ ಆಫ್ ಎಕ್ಸಲೆನ್ಸ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಈ ಪಾತ್ರಗಳಲ್ಲಿ, ಅವರು ಚಿಂತನೆಯ ನಾಯಕತ್ವ ಮತ್ತು ಪರಿಣತಿ ಅನುಭವವನ್ನು ಒದಗಿಸಿದರು. ಅಲ್ಲದೆ, ಡಿಜಿಟಲ್ ಆರೋಗ್ಯಕ್ಕಾಗಿ ಅಗತ್ಯ ನಿಯಮಗಳು ಮತ್ತು ನಿಬಂಧನೆಗಳನ್ನು ರೂಪಿಸಿದ್ದಾರೆ. ಶ್ರೀಯುತ ಪಟೇಲ್ ಅವರು, \"ಸಾಫ್ಟ್‌ವೇರ್ ಎಂಬುದು ವೈದ್ಯಕೀಯ ಸಾಧನ\" (SaMD) ಎಂಬ ಪದವನ್ನು ರಚಿಸಿದರು ಹಾಗೂ ಜಾಗತಿಕವಾಗಿ ವೈದ್ಯಕೀಯ ಸಾಧನ ನಿಯಂತ್ರಕರಿಗೆ ರಿಸ್ಕ್ ಫ್ರೇಮ್‌ವರ್ಕ್ ಅನ್ನು ರೂಪಿಸಿದರು. ಅವರು, ಸಾಫ್ಟ್‌ವೇರ್ ಪ್ರೀ-ಸರ್ಟಿಫಿಕೇಶನ್ ಪೈಲಟ್ ಪ್ರೋಗ್ರಾಂ ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್/ಮಷಿನ್ ಲರ್ನಿಂಗ್ (AI/ML) ಆಧಾರಿತ ಸಾಫ್ಟ್‌ವೇರ್ ಅನ್ನು ವಿನ್ಯಾಸಗೊಳಿಸಿದ್ದರು.
ಇನ್ನಷ್ಟು ಓದಿ
ಡಾ. ಇವಾರ್ ಬ್ರೆಡನ್ ಹಾರ್ನ್
ಹೆಲ್ತ್ ಇಕ್ವಿಟಿ ಮತ್ತು ಉತ್ಪನ್ನ ಸೇರ್ಪಡೆ ನಿರ್ದೇಶಕರು
ಡಾ. ಇವಾರ್ ಹಾರ್ನ್, MD, MPH, FAAP, ಇವರು ಹೆಲ್ತ್ ಇಕ್ವಿಟಿ, ಆರೋಗ್ಯ ಹಾಗೂ ಆರೋಗ್ಯಸೇವೆ ಆವಿಷ್ಕಾರದ ಸಾಮಾಜಿಕ ನಿರ್ಧಾರಕಗಳ ವಿಚಾರದಲ್ಲಿ ರಾಷ್ಟ್ರೀಯವಾಗಿ ಗುರುತಿಸಿಕೊಂಡಿರುವ ಮುಂದಾಳುವಾಗಿದ್ದಾರೆ. Google ನಲ್ಲಿ ಕಾರ್ಯನಿರ್ವಹಿಸುವುದಕ್ಕೆ ಮೊದಲು, ಡಾ. ಹಾರ್ನ್ ಅವರು ಅಕೊಲೇಡ್‌ನಲ್ಲಿ ಮುಖ್ಯ ವೈದ್ಯಕೀಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಕೊಲೇಡ್‌ಗಿಂತ ಮೊದಲು ಆಕೆ, ಸಿಯಾಟಲ್ ಚಿಲ್ಡ್ರೆನ್ಸ್ ಹಾಸ್ಪಿಟಲ್‌ನಲ್ಲಿ ಸೆಂಟರ್ ಫಾರ್ ಡೈವರ್ಸಿಟಿ ಆ್ಯಂಡ್ ಹೆಲ್ತ್ ಈಕ್ವಿಟಿಯ ವೈದ್ಯಕೀಯ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಯುನಿವರ್ಸಿಟಿ ಆಫ್ ವಾಷಿಂಗ್ಟನ್ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಪೀಡಿಯಾಟ್ರಿಕ್ಸ್‌ನ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ್ದಾರೆ. ಡಾ. ಹಾರ್ನ್ ಅವರು ರಾಷ್ಟ್ರೀಯವಾಗಿ ಗುರುತಿಸಿಕೊಂಡಿರುವ ಸಂಶೋಧಕಿಯಾಗಿದ್ದಾರೆ ಮತ್ತು ಕಡಿಮೆ ಪ್ರಾತಿನಿಧ್ಯವಿರುವ ಜನಸಂಖ್ಯೆಗಳಲ್ಲಿ ತಂತ್ರಜ್ಞಾನದ ಬಳಕೆಯ ಕುರಿತು ಸಂಶೋಧನೆ ಮಾಡಲು ಸರಕಾರ ಹಾಗೂ ಲಾಭರಹಿತ ಸಂಸ್ಥೆಗಳಿಂದ ಅನುದಾನವನ್ನು ಪಡೆದಿರುವ ಇತಿಹಾಸವನ್ನು ಸಹ ಹೊಂದಿದ್ದಾರೆ. ಆರೋಗ್ಯ ಸಂವಹನ ಹಾಗೂ ಹೆಲ್ತ್ ಇಕ್ವಿಟಿಯ ಕುರಿತು, ಪೀರ್-ರಿವ್ಯೂ ಮಾಡಲಾದ ಹಲವಾರು ಜರ್ನಲ್ ಪ್ರಕಟಣೆಗಳನ್ನು ಇವರು ಬರೆದಿದ್ದಾರೆ.
ಇನ್ನಷ್ಟು ಓದಿ
ಲಾರಾ ಗಾರ್ಸಿಯಾ
ಆರೋಗ್ಯ ಅನುಸರಣೆ ತಂತ್ರ ಮತ್ತು ವ್ಯಾಪಾರ ಪರಿಹಾರಗಳ ಮುಖ್ಯಸ್ಥರು
ಲಾರಾ ಅವರು ಆರೋಗ್ಯ ಅನುಸರಣೆಯ ಮುಂದಾಳುವಾಗಿದ್ದಾರೆ ಮತ್ತು ಆರೋಗ್ಯ ಹಾಗೂ ಅನುಸರಣೆಯ ಕ್ಷೇತ್ರದಲ್ಲಿ 15 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ. Google ನಲ್ಲಿ ಸೇರಿಕೊಳ್ಳುವ ಮೊದಲು, ಅವರು ಟಾಪ್ ಫಾರ್ಚೂನ್ 500 ಆರೋಗ್ಯ ಕಂಪನಿಗಳಲ್ಲಿ ಹಿರಿಯ ಅನುಸರಣೆ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ನವೀನ ಅನುಸರಣೆ ಕಾರ್ಯಕ್ರಮಗಳ ವಿನ್ಯಾಸ ಮತ್ತು ಕಾರ್ಯಗತಗೊಳಿಸುವ ಮೂಲಕ ವಿಶ್ವಾಸ ಮತ್ತು ಸಮಗ್ರತೆಯನ್ನು ಉತ್ತೇಜಿಸಲು ಮೀಸಲಾಗಿರುವ ಅಂತರರಾಷ್ಟ್ರೀಯ ತಂಡಗಳನ್ನು ಅವರು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಲಾರಾ ಅವರು ಸಿಲಿಕಾನ್ ವ್ಯಾಲಿಯಲ್ಲಿ ಎರಡು ಆರಂಭಿಕ ಹಂತದ ಹೆಲ್ತ್‌ಕೇರ್ ಸ್ಟಾರ್ಟ್‌ಅಪ್‌ಗಳಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಲಾರಾ ಅವರು ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪಬ್ಲಿಕ್ ಹೆಲ್ತ್ ಕುರಿತು ಸ್ನಾತಕೋತ್ತರ ಪದವಿ ಪಡೆದರು ಹಾಗೂ ಸ್ಯಾನ್ ಡಿಯಾಗೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಮೈಕ್ರೋಬಯಾಲಜಿ ಕುರಿತಾಗಿ ಬ್ಯಾಚುಲರ್ ಆಫ್ ಸೈನ್ಸ್ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು.
ಇನ್ನಷ್ಟು ಓದಿ
ಸಂಶೋಧನೆ, ಪ್ರಯೋಗ ಮತ್ತು ಅನ್ವೇಷಣೆಯ ಮೂಲಕ ವಿನೂತನ ಕಲ್ಪನೆ
ಪರಿವರ್ತನಾತ್ಮಕ ಆರೋಗ್ಯಸೇವಾ ತಂತ್ರಜ್ಞಾನಗಳು ಅತ್ಯದ್ಭುತವಾದ ಟ್ರಾನ್ಸ್‌ಲೇಶನಲ್ ಸಂಶೋಧನೆಯ ಮೇಲೆ ಅವಲಂಬಿತವಾಗಿದೆ. Google Health ನಲ್ಲಿ ನಾವು ಎಂಬೆಡ್ ಮಾಡಿದ ಸಂಶೋಧನೆ ಮತ್ತು ಅಭಿವೃದ್ಧಿಯ ಮಾದರಿಯನ್ನು ಸ್ವೀಕರಿಸಿದ್ದೇವೆ, ಅಲ್ಲಿ ವಿಜ್ಞಾನಿಗಳು ಉತ್ಪನ್ನ ಮತ್ತು ಇಂಜಿನಿಯರಿಂಗ್ ತಂಡಗಳ ಜೊತೆಗೆ ಸುಭದ್ರ ಏಕೀಕರಣದಲ್ಲಿ ಕೆಲಸ ಮಾಡುತ್ತಾರೆ. ನಮ್ಮ ಅಂತರ್ಯದಲ್ಲಿ ಸಹಯೋಗದ ಮತ್ತು ಬಹುಶಿಸ್ತೀಯ ವಿಧಾನವು ವೈವಿಧ್ಯಮಯ ಹಿನ್ನೆಲೆ ಮತ್ತು ಪರಿಣತಿಯಿರುವ ಸಂಶೋಧಕರಿಗೆ ಸ್ವಾಭಾವಿಕವಾಗಿ ಹೊಂದಾಣಿಕೆಯಾಗುತ್ತದೆ, ವೈದ್ಯಕೀಯ ವಿಜ್ಞಾನ, ಕೃತಕ ಬುದ್ಧಿಮತ್ತೆ, ಇನ್‌ಫಾರ್ಮ್ಯಾಟಿಕ್ಸ್ ಮತ್ತು ಬಳಕೆದಾರ ಕೇಂದ್ರಿತ ವಿನ್ಯಾಸದ ಗಡಿಗಳನ್ನು ದಾಟಲು ಸಾಧ್ಯವಾಗುತ್ತದೆ.
ಡಾ. ಮರಿಯಾ ನಟೆಸ್ಟ್ಯಾಡ್
ಸಾಫ್ಟ್‌ವೇರ್ ಇಂಜಿನಿಯರ್
Google Health ನಲ್ಲಿ ಜಿನೋಮಿಕ್ಸ್ ತಂಡದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಡಾ. ಮರಿಯಾ ನಟೆಸ್ಟ್ಯಾಡ್ ಅವರು, ಜಿನೋಮಿಕ್ ಸೀಕ್ವೆನ್ಸಿಂಗ್ ಡೇಟಾಕ್ಕಾಗಿ ಡೀಪ್ ಲರ್ನಿಂಗ್ ಆಧಾರಿತ ವೇರಿಯೆಂಟ್ ಕಾಲರ್ ಆಗಿರುವ DeepVariant ಗೆ ಸಂಬಂಧಿಸಿದ ಹಾಗೆ ಕೆಲಸ ಮಾಡುತ್ತಾರೆ. ಆರೋಗ್ಯಕ್ಕೆ ಸಂಬಂಧಪಟ್ಟಂತೆ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ಸಹಾಯ ಮಾಡುವುದಕ್ಕಾಗಿ ವಿಜ್ಞಾನಿಗಳು, ವೈದ್ಯರು ಮತ್ತು ರೋಗಿಗಳಿಗೆ ಅಧಿಕ ಗುಣಮಟ್ಟದ ವಂಶವಾಹಿ ಮಾಹಿತಿಯು ದೊರೆಯುವಂತೆ ಮಾಡಲು ಪರಿಕರಗಳನ್ನು ನಿರ್ಮಿಸುವುದರ ಮೇಲೆ ಆಕೆ ಗಮನ ಕೇಂದ್ರೀಕರಿಸುತ್ತಾರೆ. Google ನಲ್ಲಿ ಸೇರಿಕೊಳ್ಳುವ ಮೊದಲು ಆಕೆ ನ್ಯೂಯಾರ್ಕ್‌ನ ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಲ್ಯಾಬೋರೇಟರಿಯಲ್ಲಿ, ಕ್ಯಾನ್ಸರ್ ಸಂಶೋಧನೆಯಲ್ಲಿ ದೀರ್ಘ-ವ್ಯಾಪ್ತಿಯ ಜಿನೋಮಿಕ್ ಡೇಟಾವನ್ನು ಬಳಸುವುದಕ್ಕಾಗಿ ಆಲ್ಗರಿದಮ್‌ಗಳು ಹಾಗೂ ವಿಷುವಲೈಸೇಷನ್‌ಗೆ ಸಂಬಂಧಿಸಿದ ಕೆಲಸ ಮಾಡಿ ಪಿ.ಹೆಚ್.ಡಿಯನ್ನು ಪೂರೈಸಿದ್ದಾರೆ. ತನ್ನ ಪಿ.ಹೆಚ್.ಡಿ ಯ ಬಳಿಕ ಆಕೆ OMGenomics ಎಂಬ YouTube ಚಾನಲ್‌ನೊಂದಿಗೆ ಜಿನೋಮಿಕ್ ವಿಷುವಲೈಸೇಷನ್ ಸಾಫ್ಟ್‌ವೇರ್ ವ್ಯಾಪಾರವನ್ನು ನಿರ್ಮಿಸಿದ್ದಾರೆ ಮತ್ತು ಬಯೋಇನ್‌ಫಾರ್ಮ್ಯಾಟಿಕ್ಸ್ ಅಧ್ಯಯನದ ಕುರಿತಾಗಿ ಜಗತ್ತಿನಾದ್ಯಂತ ಜನರಿಗೆ ಸಲಹೆ ನೀಡುತ್ತಾರೆ.
ಇನ್ನಷ್ಟು ಓದಿ
ಡಾ. ಯುವಾನ್ ಲಿಯು
ಸಾಫ್ಟ್‌ವೇರ್ ಇಂಜಿನಿಯರ್
ಡಾ. ಯುವಾನ್ ಲಿಯು ಅವರು Google Health ನಲ್ಲಿ ಡರ್ಮಟಾಲಜಿ ತಂಡದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ. ಪ್ರಪಂಚದಾದ್ಯಂತ ಎಲ್ಲರಿಗೂ ನಿಖರವಾದ ಮಾಹಿತಿ ಹಾಗೂ ಆರೋಗ್ಯ ಸೇವೆಯ ಲಭ್ಯತೆಯನ್ನು ಉತ್ತಮಪಡಿಸಲು AI ಅಸಿಸ್ಟೆಂಟ್ ಪರಿಕರಗಳನ್ನು ನಿರ್ಮಿಸುವ ಗುರಿಯೊಂದಿಗೆ ಅವರು, ಡರ್ಮಟಾಲಜಿಗೆ ಸಂಬಂಧಿಸಿದ ವಿವಿಧ ಸಂಶೋಧನೆ ಹಾಗೂ ಅಭಿವೃದ್ಧಿ ಪ್ರಯತ್ನಗಳ ನೇತೃತ್ವ ವಹಿಸಿದ್ದಾರೆ. Google Maps ನಲ್ಲಿ ಬಳಕೆದಾರರು-ರಚಿಸಿದ ಬೃಹತ್ ಪ್ರಮಾಣದ ಕಂಟೆಂಟ್‌ಗೆ ಕಂಪ್ಯೂಟರ್ ವಿಷನ್ ತಂತ್ರಗಳನ್ನು ಅನ್ವಯಿಸುವ ನಿಟ್ಟಿನಲ್ಲೂ ಆಕೆ ಕಾರ್ಯನಿರ್ವಹಿಸಿದ್ದಾರೆ. Google ನಲ್ಲಿ ಸೇರಿಕೊಳ್ಳುವ ಮೊದಲು ಆಕೆ ವಾಂಡರ್‌ಬಿಲ್ಟ್ ಯುನಿವರ್ಸಿಟಿಯಲ್ಲಿ ಮೆಡಿಕಲ್ ಇಮೇಜ್ ಪ್ರೊಸೆಸಿಂಗ್‌ನಲ್ಲಿ ಪಿ.ಹೆಚ್.ಡಿ ಪಡೆದರು, ಇಲ್ಲಿ ಆಕೆ ಇಮೇಜ್-ಗೈಡೆಡ್ ನ್ಯೂರೋಸರ್ಜಿಕಲ್ ಕಾರ್ಯವಿಧಾನಗಳನ್ನು ಉತ್ತಮಪಡಿಸಲು ರೇಡಿಯಾಲಜಿ ಇಮೇಜ್‌ಗಳ (CT, MRI) ಬುದ್ಧಿವಂತ ವಿಶ್ಲೇಷಣೆ ನಡೆಸಿದರು. CVPR ನಲ್ಲಿ ಮುಂಬರುವ ISIC ಸ್ಕಿನ್ ಇಮೇಜ್ ಅನಾಲಿಸಿಸ್ ವರ್ಕ್‌ಶಾಪ್‌ನಲ್ಲಿ ಆಕೆ ಸಹ-ಅಧ್ಯಕ್ಷೆಯಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಸ್ಕಿನ್ ಇಮೇಜ್ ಅನಾಲಿಸಿಸ್ ಕುರಿತು ಮುಂಬರಲಿರುವ ವಿಶೇಷ ಸಂಚಿಕೆಗಳಲ್ಲಿ ಅತಿಥಿ ಸಂಪಾದಕಿಯಾಗಿದ್ದಾರೆ.
ಇನ್ನಷ್ಟು ಓದಿ
ಡಾ. ಎರಿಕ್ ಟೀಸ್ಲಿ
ತಾಂತ್ರಿಕ ಪ್ರೋಗ್ರಾಮ್ ಮ್ಯಾನೇಜರ್
ಡಾ. ಎರಿಕ್ ಟೀಸ್ಲಿ ಅವರು, Google Health ನಲ್ಲಿ ಮೊಬೈಲ್ ವೈಟಲ್ಸ್ ಹಾಗೂ ಹೆಲ್ತ್ ಇಕ್ವಿಟಿಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ತಾಂತ್ರಿಕ ಪ್ರೋಗ್ರಾಮ್ ಮ್ಯಾನೇಜರ್ ಆಗಿದ್ದಾರೆ. ಸಿಂಕ್ರೊನೈಸ್ ಮಾಡಲಾದ ವೀಡಿಯೊ ಮತ್ತು ವಾಸ್ತವಿಕ ವೈಟಲ್ ಸೈನ್ ಡೇಟಾವನ್ನು ಸಂಗ್ರಹಿಸುವುದಕ್ಕಾಗಿ ಮೊಬೈಲ್ ವೈಟಲ್ಸ್‌ನ ಮೊತ್ತಮೊದಲ ಪ್ಲ್ಯಾಟ್‌ಫಾರ್ಮ್ ಅನ್ನು ಎರಿಕ್ ಅವರು ಅಭಿವೃದ್ಧಿಪಡಿಸಿದರು ಮತ್ತು ಹೃದಯ ಬಡಿತದ ದರ ಹಾಗೂ ಉಸಿರಾಟದ ದರವನ್ನು Google Fit ಆ್ಯಪ್‌ನ ಫೀಚರ್‌ಗಳಾಗಿ ಸ್ಮಾರ್ಟ್‌ಫೋನ್ ಕ್ಯಾಮರಾದ ಮೂಲಕ ಮಾಪನ ಮಾಡಲು ತಂಡವು ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳ ಪ್ರಾಯೋಗಿಕ ಅಧ್ಯಯನವನ್ನು ನಡೆಸಿದರು. ವೈವಿಧ್ಯತೆಯ ದೃಷ್ಟಿಕೋನದೊಂದಿಗೆ ಈ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದನ್ನು ಖಚಿತಪಡಿಸುವ ನಿಟ್ಟಿನಲ್ಲಿ ಅವರ ಅನುಭವವು, Google Health ನಾದ್ಯಂತ ಸಂಶೋಧನೆಯಲ್ಲಿ ಈಕ್ವಿಟಿಯನ್ನು ಖಚಿತಪಡಿಸುವ ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟಿತು. Google ನಲ್ಲಿ ಸೇರಿಕೊಳ್ಳುವ ಮೊದಲು, ಎರಿಕ್ ಅವರು ಸ್ಟ್ಯಾನ್‌ಫೋರ್ಡ್‌ನಲ್ಲಿ ಬಯೋಎಂಜಿನಿಯರಿಂಗ್‌ನಲ್ಲಿ ಎಂ.ಡಿ ಮತ್ತು ಎಂ.ಎಸ್ ಪೂರ್ಣಗೊಳಿಸಿದರು; ಟಿಷ್ಯೂ ಎಂಜಿನಿಯರಿಂಗ್ ಅಪ್ಲಿಕೇಶನ್‌ಗಳಿಗಾಗಿ ಗ್ರೋಥ್ ಫ್ಯಾಕಟರ್ ಡೆಲಿವರಿಯ ಹೊಸ ವಿಧಾನಗಳನ್ನು ಸಕ್ರಿಯಗೊಳಿಸಲು ಅವರು ಮೈಕ್ರೋಫ್ಲುಯಿಡಿಕ್ಸ್ ಅನ್ನು ಬಳಸಿದರು ಮತ್ತು ಪ್ರತ್ಯೇಕ ಕೋಶಗಳನ್ನು ಸೆರೆಹಿಡಿಯಲು ಮತ್ತು ಗಮನಿಸಲು ಪರಿಕರಗಳನ್ನು ಅಭಿವೃದ್ಧಿಪಡಿಸಿದರು. ಇದಲ್ಲದೆ, ಅವರು ಸ್ಟ್ಯಾನ್‌ಫೋರ್ಡ್‌ನಿಂದ ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಎಸ್ ಪದವಿಯನ್ನು ಸಹ ಪಡೆದಿದ್ದಾರೆ.
ಇನ್ನಷ್ಟು ಓದಿ
ಡಾ. ಸನ್ನಿ ಜಾನ್ಸೆನ್
ತಾಂತ್ರಿಕ ಪ್ರೋಗ್ರಾಮ್ ಮ್ಯಾನೇಜರ್
ತಾಂತ್ರಿಕ ಪ್ರೋಗ್ರಾಮ್ ಮ್ಯಾನೇಜರ್ ಆಗಿರುವ ಡಾ. ಜಾನ್ಸೆನ್ ಅವರ ಕಾರ್ಯವು ಆಂಕಾಲಜಿ, ಮೆಡಿಕಲ್ ಇಮೇಜಿಂಗ್ ಹಾಗೂ ಮಷಿನ್ ಲರ್ನಿಂಗ್ ಮಾತ್ರವಲ್ಲದೆ Google ನ ಮೂಲಭೂತ ಸಂಶೋಧನೆಯನ್ನು ನೈಜ-ಜಗತ್ತಿನ ರೋಗಿಗಳ ಮೇಲೆ ಪ್ರಭಾವ ಬೀರುವ ಹಾಗೆ ಪರಿವರ್ತಿಸುವುದರ ಮೇಲೆ ಗಮನ ಕೇಂದ್ರೀಕರಿಸುತ್ತದೆ. Google ನಲ್ಲಿ ಸೇರಿಕೊಳ್ಳುವ ಮೊದಲು ಅವರು, ವೆರಿಲಿ ಲೈಫ್ ಸಯನ್ಸಸ್‌ನಲ್ಲಿ ನಿಯಂತ್ರಕ ಕಾರ್ಯತಂತ್ರದ ನೇತೃತ್ವ ಮಾತ್ರವಲ್ಲದೆ ವೈವಿಧ್ಯಮಯ ರೋಗ ಸೂಚಕಗಳನ್ನು ವ್ಯಾಪಿಸುವ ಮಷಿನ್ ಲರ್ನಿಂಗ್ ತಂತ್ರಜ್ಞಾನದ ಕ್ಲಿನಿಕಲ್ ಅಭಿವೃದ್ಧಿಯ ಮುಂದಾಳುತ್ವ ವಹಿಸಿದ್ದರು. ಅವರು ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್‌ನಲ್ಲಿ (FDA) ಸ್ತನ ಕ್ಯಾನ್ಸರ್ ಪತ್ತೆ ಮತ್ತು ಡಯಾಗ್ನಾಸಿಸ್ ತಂತ್ರಜ್ಞಾನಗಳ ಮುಖ್ಯ ಪರಿಶೀಲನಾ ವಿಜ್ಞಾನಿಯಾಗಿಯೂ ಕೆಲಸ ಮಾಡಿದ್ದಾರೆ ಮತ್ತು ನ್ಯಾಶನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನಲ್ಲಿ ಸ್ತನ ಕ್ಯಾನ್ಸರ್‌ನ ಜೆನೆಟಿಕ್ಸ್ ಕುರಿತು ಸಂಶೋಧನೆ ನಡೆಸಿದ್ದಾರೆ. ಡಾ. ಜಾನ್ಸೆನ್ ಅವರು ಯುನಿವರ್ಸಿಟಿ ಆಫ್ ಶಿಕಾಗೋದಿಂದ ಮೆಡಿಕಲ್ ಫಿಸಿಕ್ಸ್‌ನಲ್ಲಿ ಪಿ.ಹೆಚ್.ಡಿ ಪಡೆದಿದ್ದಾರೆ.
ಇನ್ನಷ್ಟು ಓದಿ
ಡಾ. ಕ್ರಿಸ್ ಕೆಲ್ಲಿ
ವೈದ್ಯಕೀಯ ವಿಜ್ಞಾನಿ
ಡಾ. ಕ್ರಿಸ್ಟೋಫರ್ ಕೆಲ್ಲಿ ಅವರು Google Health ನ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಇಮೇಜಿಂಗ್ ಹಾಗೂ ಡಯಾಗ್ನಾಸ್ಟಿಕ್ಸ್ ತಂಡದಲ್ಲಿ ವೈದ್ಯ-ವಿಜ್ಞಾನಿಯಾಗಿದ್ದಾರೆ. Google ನ ಅತ್ಯಾಧುನಿಕ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಸಂಶೋಧನೆಯನ್ನು ಸುರಕ್ಷಿತವಾಗಿ, ನೈಜ ವೈದ್ಯಕೀಯ ಪ್ರಭಾವವಾಗಿ ಪರಿವರ್ತಿಸುವುದರ ಮೇಲೆ ಅವರು ಗಮನ ಕೇಂದ್ರೀಕರಿಸಿದ್ದಾರೆ. Google ನಲ್ಲಿ ಸೇರಿಕೊಳ್ಳುವ ಮೊದಲು ಅವರು ಕಿಂಗ್ಸ್ ಕಾಲೇಜ್ ಲಂಡನ್‌ನಲ್ಲಿ ಮೆಡಿಕಲ್ ಇಮೇಜಿಂಗ್‌ನಲ್ಲಿ ಪಿ.ಹೆಚ್.ಡಿ ಪೂರ್ಣಗೊಳಿಸಿದ್ದಾರೆ. ಒಬ್ಬ ವೈದ್ಯರಾಗಿ, ನಿಯೋಮೇಟ್ ಎಂಬ ಪ್ರಶಸ್ತಿ-ವಿಜೇತ ಸ್ಮಾರ್ಟ್‌ಫೋನ್ ಅನ್ನು ಅವರು ಅಭಿವೃದ್ಧಿಪಡಿಸಿದ್ದಾರೆ; ನವಜಾತ ಶಿಶುಗಳ ಆರೈಕೆ ಮಾಡುವ ವೈದ್ಯರು ಹಾಗೂ ನರ್ಸ್‌ಗಳಿಗೆ ಬೆಂಬಲ ನೀಡಲು ಇದನ್ನು ವಿಶ್ವದಾದ್ಯಂತ ಬಳಸಲಾಗುತ್ತದೆ. ಲಂಡನ್‌ನ ಸೈಂಟ್ ಥಾಮಸ್ ಆಸ್ಪತ್ರೆಯಲ್ಲಿ ಅವರು ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಮಕ್ಕಳ ತಜ್ಞರಾಗಿ ಕೆಲಸ ಮುಂದುವರೆಸುತ್ತಿದ್ದಾರೆ. ಮೆಡಿಸಿನ್‌ನ ಜೊತೆಜೊತೆಗೆ ಕ್ರಿಸ್ ಅವರು ಈ ಹಿಂದೆ ಎರಡು ಇಂಟರ್ನೆಟ್ ಕಂಪನಿಗಳನ್ನು ಸ್ಥಾಪಿಸಿ ಮಾರಾಟ ಮಾಡಿದ್ದಾರೆ ಮತ್ತು ಟೆಕ್ನಾಲಜಿ ಸ್ಟಾರ್ಟಪ್‌ಗಳಲ್ಲಿ ಸಕ್ರಿಯ ಏಂಜೆಲ್ ಇನ್ವೆಸ್ಟರ್ ಆಗಿ ಕೆಲಸ ಮಾಡಿದ್ದಾರೆ.
ಇನ್ನಷ್ಟು ಓದಿ
Google Health ನಲ್ಲಿನ ವೃತ್ತಿಗಳು
Google Health ತಂಡವು ತಂತ್ರಜ್ಞಾನದ ಪರಿಣಿತಿ ಮತ್ತು ವೈದ್ಯಕೀಯ ಅತ್ಯುತ್ತಮ ಅಭ್ಯಾಸಗಳು ಹಾಗೂ ರೋಗಿಗೆ ಮೊದಲ ಆದ್ಯತೆ ನೀಡುವ ತತ್ವಗಳನ್ನು ಒಟ್ಟುಗೂಡಿಸುತ್ತದೆ — ಆ ಮೂಲಕ ಆರೋಗ್ಯಸೇವೆಯ ಕುರಿತು ಆಸಕ್ತಿಯಿರುವ ಮತ್ತು ಉತ್ಸುಕರಾಗಿರುವ ಎಲ್ಲರಿಗೂ ಅದ್ಭುತವಾದ ಅವಕಾಶವನ್ನು ಒದಗಿಸುತ್ತದೆ. ನಮ್ಮ ತಂಡವನ್ನು ಸೇರಿಕೊಳ್ಳಲು ಬಯಸುತ್ತೀರಾ?