ಕುರುಡುತನವನ್ನು ತಡೆಗಟ್ಟಲು AI ಅನ್ನು ಬಳಸುವುದು
ಆಟೋಮೇಟೆಡ್ ರೆಟಿನಲ್ ಡಿಸೀಸ್ ಅಸೆಸ್ಮೆಂಟ್ ಅಥವಾ ARDA, ಇತರ ರೋಗಗಳನ್ನು ಗುರುತಿಸಲು ಕ್ಲಿನಿಶಿಯನ್ಗಳಿಗೆ ಸಹಾಯ ಮಾಡಲು AI ಅಲ್ಗಾರಿದಮ್ಗಳ ಭವಿಷ್ಯದ ಸಾಧ್ಯತೆಗಳ ಜೊತೆಗೆ ಡಯಾಬೆಟಿಕ್ ರೆಟಿನೋಪತಿಯನ್ನು ಪತ್ತೆಹಚ್ಚುವುದಕ್ಕೆ ಆರೋಗ್ಯ ಕಾರ್ಯಕರ್ತರಿಗೆ ಸಹಾಯ ಮಾಡಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನ್ನು ಬಳಸುತ್ತದೆ.
ಡಯಾಬೆಟಿಕ್ ರೆಟಿನೋಪಥಿಯು ರೆಟಿನಾದ ಹಿಂಭಾಗದಲ್ಲಿ ಗಾಯಗಳನ್ನು ಉಂಟುಮಾಡುತ್ತದೆ ಮತ್ತು ಇದರಿಂದ ಸಂಪೂರ್ಣ ಕುರುಡುತನ ಉಂಟಾಗಬಹುದು. ಡಯಾಬೆಟಿಸ್ ರೋಗಪತ್ತೆಯಾಗಿರುವ ಜನರನ್ನು ಮುಂಚಿತವಾಗಿ ಸ್ಕ್ರೀನ್ ಮಾಡುವುದು ಬಹುಮುಖ್ಯವಾಗಿದೆ, ಆದರೆ ಜಾಗತಿಕವಾಗಿ 420 ಮಿಲಿಯನ್ ಜನರಿಗೆ ಡಯಾಬೆಟಿಸ್ ಇರುವ ಕಾರಣ, ಪ್ರತಿಯೊಬ್ಬ ರೋಗಿಯನ್ನು ಪರೀಕ್ಷಿಸುವುದು ಅಸಾಧ್ಯವಾದ ಸಂಗತಿಯಾಗಿದೆ. ರೋಗದ ಕುರಿತಾದ ಅರಿವಿನ ಕೊರತೆ ಮತ್ತು ಅದನ್ನು ಸ್ಕ್ರೀನ್ ಮಾಡಲು ಬೇಕಾಗುವ ಸಂಪನ್ಮೂಲಗಳ ಕೊರತೆ ದೊಡ್ಡ ಸಮಸ್ಯೆಗಳಾಗಿವೆ.
ಏಜ್ ಆಫ್ A.I ಸೀರೀಸ್, YouTube. ನೆಟ್ವರ್ಕ್ ಎಂಟರ್ಟೈನ್ಮೆಂಟ್ನಿಂದ ಕೃತಿಸ್ವಾಮ್ಯ
ಡಯಾಬೆಟಿಕ್ ರೆಟಿನೋಪತಿ ಸ್ಕ್ರೀನಿಂಗ್ ಪರಿಹಾರವನ್ನು ಅಭಿವೃದ್ಧಿಪಡಿಸುವುದು
JAMA ನಲ್ಲಿ ಪ್ರಕಟವಾಗಿರುವ ಸಂಶೋಧನೆಯಲ್ಲಿ , Google ನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಡಯಾಬೆಟಿಕ್ ರೆಟಿನೋಪಥಿಯನ್ನು ಪತ್ತೆಹಚ್ಚಲು ರೆಟಿನಲ್ ಸ್ಕ್ಯಾನ್ಗಳನ್ನು ನಿಖರವಾಗಿ ವ್ಯಾಖ್ಯಾನಿಸಿದೆ. ಇದನ್ನು ಸಾಧ್ಯವಾಗಿಸಲು, 100,000 ಕ್ಕೂ ಹೆಚ್ಚು ಗುರುತಿಸಲಾಗದ ರೆಟಿನಾದ ಸ್ಕ್ಯಾನ್ಗಳನ್ನು ಕೈಯಾರೆ ಪರಿಶೀಲಿಸುವ ಮೂಲಕ AI ಮಾದರಿಯನ್ನು ತರಬೇತಿ ನೀಡುವುದಕ್ಕೆ ನಮಗೆ ಸಹಾಯ ಮಾಡಿದ ನೇತ್ರಶಾಸ್ತ್ರಜ್ಞರ ದೊಡ್ಡ ತಂಡದ ಜೊತೆಗೆ Google ಕೆಲಸ ಮಾಡಿದೆ. ಇದು ಆಟೋಮೇಟೆಡ್ ರೆಟಿನಲ್ ಡಿಸೀಸ್ ಅಸೆಸ್ಮೆಂಟ್ ಎಂಬ AI ಆಧಾರಿತ ಅಪ್ಲಿಕೇಶನ್ನ ಅಭಿವೃದ್ಧಿಗೆ ಕಾರಣವಾಯಿತು. ಭಾರತ ಮತ್ತು ಥೈಲ್ಯಾಂಡ್ನಂತಹ ಸಾಕಷ್ಟು ಕಣ್ಣಿನ ತಜ್ಞರಿಲ್ಲದ ದೇಶಗಳಲ್ಲಿ ಉತ್ತಮ ಗುಣಮಟ್ಟದ ಡಯಾಬೆಟಿಕ್ ರೆಟಿನೋಪತಿ ಸ್ಕ್ರೀನಿಂಗ್ ಪ್ರೋಗ್ರಾಂಗಳನ್ನು ವಿಸ್ತರಿಸಲು ಈ ಅಪ್ಲಿಕೇಶನ್ ವೈದ್ಯರಿಗೆ ಸಹಾಯ ಮಾಡುತ್ತದೆ.
200k+ ಸ್ಕ್ರೀನಿಂಗ್ಗಳನ್ನು ಬೆಂಬಲಿಸಲಾಗುತ್ತಿದೆ ಹಾಗೂ ಈ ಸಂಖ್ಯೆ ಇನ್ನೂ ಏರುತ್ತಿದೆ
ಭಾರತ ಮತ್ತು ಯುರೋಪಿಯನ್ ಒಕ್ಕೂಟದಲ್ಲಿ ಡಯಾಬೆಟಿಕ್ ರೆಟಿನೋಪತಿಯನ್ನು ಪತ್ತೆಹಚ್ಚಲು ನಮ್ಮ ಪರಿಹಾರವನ್ನು ಬಳಸಲಾಗುತ್ತಿದೆ. ARDA ವಾರಕ್ಕೆ ಸುಮಾರು 3k ಹೊಸ ಸ್ಕ್ರೀನಿಂಗ್ಗಳನ್ನು ಬೆಂಬಲಿಸುತ್ತದೆ ಮತ್ತು ನಾವು ಡಯಾಬಿಟಿಕ್ ರೆಟಿನೋಪತಿಗಾಗಿ ಸ್ಕ್ರೀನಿಂಗ್ ಅನ್ನು ಬೃಹತ್ ಪ್ರಮಾಣದಲ್ಲಿ ವಿಸ್ತರಿಸುವುದನ್ನು ಮುಂದುವರಿಸುತ್ತೇವೆ. ಪ್ರಸ್ತುತ ಯುನೈಟೆಡ್ ಸ್ಟೇಟ್ಸ್ ಮತ್ತು ಥೈಲ್ಯಾಂಡ್ನಲ್ಲಿನ ಕ್ಲಿನಿಕಲ್ ಅಧ್ಯಯನಗಳಲ್ಲಿ ಪರಿಹಾರವನ್ನು ಮೌಲ್ಯಮಾಪನ ಮಾಡಲಾಗುತ್ತಿದೆ. ಪ್ರಪಂಚದಾದ್ಯಂತ ಈ ಪರಿಹಾರವು ಲಭ್ಯವಾಗುವಂತೆ ಮಾಡಲು ನಾವು ಅನೇಕ ಪಾಲುದಾರರೊಂದಿಗೆ, ವಿಶೇಷವಾಗಿ ತಜ್ಞರ ಆರೈಕೆಯು ಕಡಿಮೆ ಲಭ್ಯವಿರುವ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದೇವೆ.
ನಮ್ಮ ಕಲಿಕೆಯ ಹಾದಿಯನ್ನು ಹಂಚಿಕೊಳ್ಳುವುದು
ಔಷಧದಲ್ಲಿ AI ಯ ಅಪ್ಲಿಕೇಶನ್ಗಳು ಮುಂದುವರಿದಂತೆ, ನಾವು ನೇಚರ್ ಮೆಡಿಸಿನ್ನಲ್ಲಿ ಒಂದು ಪೇಪರ್ ಅನ್ನು ಪ್ರಕಟಿಸಿದ್ದು, ARDA ಅನ್ನು ವಿಸ್ತರಿಸುವುದರಿಂದ ಕಲಿತ ನಮ್ಮ ಕಲಿಕೆಯ ಅನುಭವಗಳನ್ನು ಹಂಚಿಕೊಳ್ಳಲಾಗಿದೆ. ಅಭಿವೃದ್ಧಿಯಿಂದ ವಿಸ್ತರಿಸುವ ಕಡೆಗೆ AI ಅನ್ನು ಕೊಂಡೊಯ್ಯುವ ಮೂಲಕ ನಾವು ಕಲಿತ ಪ್ರಮುಖ ಪಾಠಗಳನ್ನು ಹಂಚಿಕೊಳ್ಳುವುದರೊಂದಿಗೆ, ಇದು ಪ್ರತಿಯೊಬ್ಬರ ಆರೋಗ್ಯವನ್ನು ಸುಧಾರಿಸಲು ಸಹಾಯಕವಾಗುವ ವೈದ್ಯಕೀಯ AI ಟೂಲ್ಗಳನ್ನು ರಚಿಸಲು ಇತರರಿಗೆ ಸಹಾಯವಾಗುತ್ತದೆ ಎಂದು ನಾವು ಭಾವಿಸುತ್ತೇವೆ. ಪೋಸ್ಟ್ ಓದಿ.