ನಿಮ್ಮ ಚರ್ಮದ ಪರಿಸ್ಥಿತಿಗಳನ್ನು ಗುರುತಿಸಲು ಸಹಾಯ ಮಾಡುವ ಸಂಪೂರ್ಣ ಹೊಸ ವಿಧಾನ
ಕೆಲವು ಪ್ರಶ್ನೆಗಳು ಮತ್ತು ಮೂರು ತ್ವರಿತ ಫೋಟೋಗಳ ನಂತರ ನಿಮ್ಮ ಚರ್ಮದ ಕಾಳಜಿಯ ಕುರಿತು ವೈಯಕ್ತೀಕರಿಸಿದ ಮಾಹಿತಿಯನ್ನು ಹುಡುಕಲು ನಿಮಗೆ ಸಹಾಯ ಮಾಡುವ Google Health ನ ಮಾರ್ಗದರ್ಶಿ ಚರ್ಮದ ಹುಡುಕಾಟ ಆ್ಯಪ್ ಆಗಿರುವ DermAssist ಮೂಲಕ ನಿಮಿಷಗಳಲ್ಲಿ ಚರ್ಮದ ಪರಿಸ್ಥಿತಿಗಳ ಕುರಿತು ಇನ್ನಷ್ಟು ತಿಳಿಯಿರಿ.
DermAssist, CE-ಗುರುತಿಸಲ್ಪಟ್ಟ ಕ್ಲಾಸ್ 1 ವೈದ್ಯಕೀಯ ಸಾಧನವಾಗಿದೆ ಮತ್ತು ಪ್ರಸ್ತುತ ಸೀಮಿತ ಬಿಡುಗಡೆಯ ಮೂಲಕ ಮತ್ತಷ್ಟು ಮಾರುಕಟ್ಟೆ ಪರೀಕ್ಷೆಗೆ ಒಳಗಾಗುತ್ತಿದೆ. ನೀವು DermAssist ಅನ್ನು ಬಳಸಿ ನೋಡಲು ಆಸಕ್ತಿ ಹೊಂದಿದ್ದರೆ, ನಿಮ್ಮ ಪ್ರದೇಶದಲ್ಲಿ ಪರಿಕರವು ಲಭ್ಯವಿರುವಾಗ ಸೂಚನೆಯನ್ನು ಪಡೆಯಲು ಅಥವಾ ನಮ್ಮ ಸಂಶೋಧನೆಗೆ ಕೊಡುಗೆ ನೀಡಲು ಇಲ್ಲಿ ಸೈನ್ ಅಪ್ ಮಾಡಿ.
ಪ್ರಪಂಚದಾದ್ಯಂತ 2 ಬಿಲಿಯನ್ ಜನರಿಗೆ ಚರ್ಮ, ಕೂದಲು ಮತ್ತು ಉಗುರಿನ ಸಮಸ್ಯೆಗಳಿವೆ
Google ನಲ್ಲಿ ಪ್ರತಿವರ್ಷ ಚರ್ಮಕ್ಕೆ ಸಂಬಂಧಿಸಿದ ಬಿಲಿಯನ್ಗಟ್ಟಲೆ ಹುಡುಕಾಟಗಳನ್ನು ನಾವು ನೋಡುತ್ತೇವೆ. ಮಾಹಿತಿಯನ್ನು ವ್ಯವಸ್ಥಿತಗೊಳಿಸುವಲ್ಲಿನ ನಮ್ಮ ಪರಿಣಿತಿ, ಕೃತಕ ಬುದ್ಧಿಮತ್ತೆ ಮತ್ತು ಪಾಲುದಾರರ ಜೊತೆಗಿನ ಸಹಯೋಗದ ಮೂಲಕ, ಚರ್ಮದ ರೋಗದ ಕುರಿತಾದ ಮಾಹಿತಿಯ ಹುಡುಕಾಟದ ಪ್ರಯಾಣದಲ್ಲಿ ಮಾರ್ಗದರ್ಶನ ನೀಡಲು ನೆರವಾಗಲು ನಾವು DermAssist ಅನ್ನು ನಿರ್ಮಿಸುತ್ತಿದ್ದೇವೆ.
DermAssist ಪ್ರತಿಯೊಬ್ಬರಿಗೂ ಉಪಯುಕ್ತವಾಗುವಂತೆ ಮಾಡುವುದು ನಮ್ಮ ಬದ್ಧತೆಯಾಗಿದೆ. ಇದರಲ್ಲಿ ಎಲ್ಲಾ ಚರ್ಮದ ಎಲ್ಲಾ ವರ್ಣಗಳು, ಪ್ರಕಾರಗಳು ಮತ್ತು ಇತ್ಯಾದಿಗಳ ವಿಚಾರದಲ್ಲಿ DermAssist ನಿಖರವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದೂ ಸೇರಿದೆ.
DermAssist ಹೇಗೆ ಕೆಲಸ ಮಾಡುತ್ತದೆ
ನಿಮ್ಮ ಚರ್ಮದ ಕುರಿತು ಮಾಹಿತಿ ಸಲ್ಲಿಸಿ
ನಿಮ್ಮ ಚರ್ಮದ ಸಮಸ್ಯೆಯ 3 ಫೋಟೋಗಳನ್ನು, ನಿಮ್ಮ ಫೋನ್ ಅಥವಾ ಕಂಪ್ಯೂಟರ್ನಿಂದ ಅಪ್ಲೋಡ್ ಮಾಡಿ ಮತ್ತು ಕೆಲವು ಪ್ರಶ್ನೆಗಳಿಗೆ ಉತ್ತರಿಸಿ. DermAssist, ಲಕ್ಷಾಂತರ ಚರ್ಮ-ಸಂಬಂಧಿತ ಚಿತ್ರಗಳಿಂದ ತಾನು ಕಲಿತುಕೊಂಡಿರುವುದನ್ನು ಬಳಸಿಕೊಂಡು, ನೀವು ಸಲ್ಲಿಸಿದ ಫೋಟೋಗಳು ಹಾಗೂ ಮಾಹಿತಿಯಲ್ಲಿ ವಿವಿಧ ಚರ್ಮ-ಸಮಸ್ಯೆಗಳ ಚಿಹ್ನೆಗಳನ್ನು ಹುಡುಕುತ್ತದೆ.
ಒಂದೇ ನಿಮಿಷದಲ್ಲಿ ಫಲಿತಾಂಶ ಪಡೆಯಿರಿ
ಕೆಲವೇ ಸೆಕೆಂಡುಗಳಲ್ಲಿ, ಸಂಭಾವ್ಯವಾಗಿ ಹೊಂದಾಣಿಕೆಯಾಗುವ ಚರ್ಮದ ಸಮಸ್ಯೆಗಳ ಪಟ್ಟಿಯೊಂದನ್ನು DermAssist ನಿಮಗೆ ಒದಗಿಸುತ್ತದೆ, ಜೊತೆಗೆ ಪ್ರತಿಯೊಂದರ ಕುರಿತು ಉಪಯುಕ್ತ ಮಾಹಿತಿಯನ್ನು ಸಹ ನೀಡುತ್ತದೆ.
DermAssist ಅನ್ನು ಇವರು ಬಳಸುವುದಕ್ಕಾಗಿ ರೂಪಿಸಲಾಗಿದೆ…
- 16 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು
- ವೈದ್ಯಕೀಯ ರೋಗಪತ್ತೆಯನ್ನು ಬಯಸದ ಜನರು
ಚರ್ಮ, ಕೂದಲು ಮತ್ತು ಉಗುರಿಗೆ ಸಂಬಂಧಿಸಿದ 288 ಸಮಸ್ಯೆಗಳನ್ನು ಗುರುತಿಸುತ್ತದೆ
ಡರ್ಮಟಾಲಜಿಸ್ಟ್ಗಳೊಂದಿಗೆ ನಿರ್ಮಿಸಲಾಗಿದೆ
DermAssist ಹಲವಾರು ವರ್ಷಗಳ ಮಷಿನ್-ಲರ್ನಿಂಗ್ ಸಂಶೋಧನೆ, ಡರ್ಮಟಾಲಜಿಸ್ಟ್-ಪರಿಶೀಲಿಸಿದ ಕಂಟೆಂಟ್, ಬಳಕೆದಾರರ ಪರೀಕ್ಷಣೆ ಮತ್ತು ಉತ್ಪನ್ನ ಅಭಿವೃದ್ಧಿಯ ಫಲವಾಗಿದೆ. ನಮ್ಮ ಚಿತ್ರ ಹುಡುಕಾಟದ ತಂತ್ರಜ್ಞಾನವು ನಿರಂತರವಾಗಿ ಸುಧಾರಿಸುತ್ತಾ ಇದೆ ಮತ್ತು ನಮ್ಮ ಮೂಲಭೂತ ಸಂಶೋಧನಾ ವರದಿಯಿಂದ ನಾವೀಗ ಬಲುದೂರ ಕ್ರಮಿಸಿದ್ದೇವೆ.
ವ್ಯಾಪಕ ಬಳಕೆಗಾಗಿ ನಿರ್ಮಿಸಲಾಗಿದೆ
ಲಕ್ಷಾಂತರ ಚರ್ಮದ-ಚಿತ್ರಗಳಿಂದ ತರಬೇತಿ ಪಡೆದಿರುವ DermAssist, ಅತ್ಯಂತ ಸಾಮಾನ್ಯವಾಗಿ ಹುಡುಕುವ ಚರ್ಮದ ಸಮಸ್ಯೆಗಳಲ್ಲಿ ಶೇಕಡಾ 90 ಕ್ಕಿಂತಲೂ ಹೆಚ್ಚು ಸಮಸ್ಯೆಗಳನ್ನು ಗುರುತಿಸಬಲ್ಲದು ಮತ್ತು ಇದರಲ್ಲಿ ಅಡಕವಾಗಿರುವ ತಂತ್ರಜ್ಞಾನವು, ಎಲ್ಲಾ ಜನರಲ್ಲಿ ಚರ್ಮದ ಸಮಸ್ಯೆಗಳನ್ನು ಇನ್ನಷ್ಟು ಉತ್ತಮವಾಗಿ ಗುರುತಿಸಲು ವೈದ್ಯರಿಗೆ ಸಹಾಯ ಮಾಡಬಹುದು ಎಂದು ಸಂಶೋಧನೆಯು ತೋರಿಸಿಕೊಟ್ಟಿದೆ.
DermAssist ಅನ್ನು ಪರೀಕ್ಷಣೆಯ ಮೂಲಕ ಮಾನ್ಯಗೊಳಿಸಲಾಗಿದೆ
DermAssist, EU ನಲ್ಲಿ CE-ಗುರುತಿಸಿರುವ ಕ್ಲಾಸ್ 1 ವೈದ್ಯಕೀಯ ಸಾಧನವಾಗಿದೆ. ನಮ್ಮ ಸಂಶೋಧನೆ ಹಾಗೂ ಉತ್ಪನ್ನ ಅಭಿವೃದ್ಧಿಗೆ ಮಾರ್ಗಸೂಚಿಗಳನ್ನು ಒದಗಿಸಲು, ಸಂಗ್ರಹಿಸಿದ ಡೇಟಾವನ್ನು ಪರಿಶೀಲಿಸಲು, ಉತ್ಪನ್ನದ ಕಾರ್ಯಕ್ಷಮತೆಯನ್ನು ಮಾನ್ಯಗೊಳಿಸಲು ಮತ್ತು ನಿಯಂತ್ರಕ ಅವಶ್ಯಕತೆಗಳನ್ನು ಅನುಸರಿಸಲು, ವೈವಿಧ್ಯಮಯ ಪಾಲುದಾರರು ಹಾಗೂ ವೈದ್ಯರೊಂದಿಗೆ ನಾವು ಕೆಲಸ ಮಾಡುತ್ತೇವೆ.
ಆರೋಗ್ಯ ಸಮಾನತೆಗಾಗಿ ನಮ್ಮ ಬದ್ಧತೆ
ತಮ್ಮ ಚರ್ಮದ ಕುರಿತಾಗಿ ಉಪಯುಕ್ತವಾದ, ನಿಖರವಾದ ಮಾಹಿತಿಯನ್ನು ಪಡೆಯುವ ಹಕ್ಕು ಎಲ್ಲರದ್ದೂ ಆಗಿರುತ್ತದೆ. DermAssist ಅನ್ನು ಸರ್ವರಿಗೂ ಸಮಾನವಾದ ರೀತಿಯಲ್ಲಿ ಅಭಿವೃದ್ಧಿಪಡಿಸುವುದಕ್ಕಾಗಿ ವೈವಿಧ್ಯಮಯ ಹಿನ್ನೆಲೆಗಳನ್ನು ಹೊಂದಿರುವ ರೋಗಿಗಳಿಗೆ ಸೇವೆ ಒದಗಿಸುವಂತಹ ಸಂಸ್ಥೆಗಳು ಹಾಗೂ ವೈದ್ಯರೊಂದಿಗೆ ನಾವು ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ತಂತ್ರಜ್ಞಾನವು ವಿವಿಧ ಸ್ಕಿನ್ ಟೋನ್ಗಳು ಹಾಗೂ ವಿವಿಧ ರೀತಿಯ ಚರ್ಮವನ್ನು ಹೊಂದಿರುವ ಜನರನ್ನು ಪ್ರತಿನಿಧಿಸುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಆರೋಗ್ಯ ಸಮಾನತೆಯ ಮೇಲೆ DermAssist ನ ಪ್ರಭಾವದ ಕುರಿತು ಸಂಶೋಧಿಸುವುದು ಇದರಲ್ಲಿ ಒಳಗೊಂಡಿದೆ.
ಡೇಟಾ ಗೌಪ್ಯತೆ, ಬಳಕೆದಾರರ ನಿಯಂತ್ರಣ, ಮತ್ತು ಪಾರದರ್ಶಕತೆ ನಮ್ಮ ಆದ್ಯತೆಗಳಾಗಿವೆ
ಬಳಕೆದಾರರ ಡೇಟಾವನ್ನು ಹೇಗೆ ಹಂಚಿಕೊಳ್ಳಲಾಗುತ್ತದೆ ಅಥವಾ ಹಂಚಿಕೊಳ್ಳಲಾಗುವುದಿಲ್ಲ ಎಂಬುದರ ಮೇಲೆ ಅವರೇ ಯಾವಾಗಲೂ ನಿಯಂತ್ರಣ ಹೊಂದಿರುತ್ತಾರೆ.
DermAssist ನಿಮ್ಮ ಮಾಹಿತಿಯನ್ನು ಜಾಹೀರಾತಿನ ಉದ್ದೇಶಗಳಿಗಾಗಿ ಬಳಸುವುದಿಲ್ಲ.
ಎಲ್ಲಾ ಡೇಟಾವನ್ನು ಭದ್ರವಾಗಿ ಸಂಗ್ರಹಿಸಿಡಲಾಗುತ್ತದೆ ಮತ್ತು ನಿಮ್ಮ ಸುರಕ್ಷತೆಗಾಗಿ ಎನ್ಕ್ರಿಪ್ಟ್ ಮಾಡಲಾಗುತ್ತದೆ.
ಚರ್ಮದ ಸಮಸ್ಯೆಗಳನ್ನು ಗುರುತಿಸಲು DermAssist ಹೇಗೆ ಸಹಾಯ ಮಾಡುತ್ತದೆ ಎಂಬ ಕುರಿತು ಇನ್ನಷ್ಟು ತಿಳಿಯಿರಿ
Google ನ ಮುಖ್ಯ ಆರೋಗ್ಯ ಅಧಿಕಾರಿ ಡಾ. ಕೆರೇನ್ ಡಿಸಾಲ್ವೊ, ನಿಮ್ಮ ಚರ್ಮದ ಆರೋಗ್ಯಕ್ಕೆ ಸಂಬಂಧಿಸಿದ ಕಳವಳವನ್ನು ಅರ್ಥಮಾಡಿಕೊಳ್ಳುವುದಕ್ಕೆ ನಿಮಗೆ ಸಹಾಯ ಮಾಡಲು DermAssist ಹೇಗೆ ಕೃತಕ ಬುದ್ಧಿಮತ್ತೆಯನ್ನು ಬಳಸುತ್ತದೆ ಎಂಬುದನ್ನು ಹಂಚಿಕೊಳ್ಳುತ್ತಾರೆ.