Google Search ನಲ್ಲಿ ಸಂಬಂಧಿತ ಉತ್ಕೃಷ್ಟ ಗುಣಮಟ್ಟದ ಆರೋಗ್ಯ ಮಾಹಿತಿ ಮತ್ತು ಕಾಳಜಿಯನ್ನು ಆ್ಯಕ್ಸೆಸ್ ಮಾಡಿ

ಜ್ಞಾನವು ಸಬಲೀಕರಣವಾಗಿದೆ ಎಂದು ನಾವು ಯಾವಾಗಲೂ ನಂಬಿದ್ದೇವೆ ಮತ್ತು ಆರೋಗ್ಯದ ವಿಷಯದಲ್ಲಿ ಇದು ವಿಶೇಷವಾಗಿ ಸತ್ಯವಾಗಿದೆ. ತಮ್ಮನ್ನು ಮತ್ತು ತಮ್ಮ ಪ್ರೀತಿಪಾತ್ರರನ್ನು ಸುರಕ್ಷಿತವಾಗಿರಿಸಲು ಅಗತ್ಯವಿರುವ ಪ್ರಮುಖ ಮಾಹಿತಿಯನ್ನು ದೊಡ್ಡ ಮತ್ತು ಸಣ್ಣ ವಿಧಾನಗಳ ಮೂಲಕ ಎಲ್ಲರಿಗೂ ಒದಗಿಸಲು ನಾವು ಶ್ರಮಿಸುತ್ತಿದ್ದೇವೆ.

Google Search ನಲ್ಲಿ ಆರೋಗ್ಯ ಸೇವೆ ಒದಗಿಸುವವರ ಅಪಾಯಿಂಟ್‌ಮೆಂಟ್ ಲಭ್ಯತೆಯನ್ನು ತೋರಿಸುವ ಫೋನ್ ಚಿತ್ರ
ಜನರಿಗೆ ಸಹಾಯ ಮಾಡುವುದು

ಜನರು ನಂಬುವ ಮೂಲಗಳಿಂದ ಆರೋಗ್ಯ ಮಾಹಿತಿಯನ್ನು ಹುಡುಕಲು ಸಹಾಯ ಮಾಡುವುದು

ಪ್ರಪಂಚದಾದ್ಯಂತರ ಇರುವ ಜನರು Google Search ಅನ್ನು ಬಳಸಿಕೊಂಡು ಆರೋಗ್ಯ ಪರಿಸ್ಥಿತಿಗಳು, ರೋಗಲಕ್ಷಣಗಳು ಮತ್ತು ಚಿಕಿತ್ಸೆಗಳ ಕುರಿತು ವಿಶ್ವಾಸಾರ್ಹ ಮತ್ತು ಸಂಬಂಧಿತ ಮಾಹಿತಿಯನ್ನು ಹುಡುಕುತ್ತಾರೆ. ನಮ್ಮ ಮಾಹಿತಿ ಫಲಕಗಳು ಸಾಮಾನ್ಯ ಶೀತದಿಂದ ಹಿಡಿದು ಸ್ನಾಯು ಸೆಳೆತ, ತಲೆನೋವು, ಆತಂಕ ಇತ್ಯಾದಿ ಎಲ್ಲದರ ಬಗ್ಗೆ ಅಧಿಕೃತ ಮೂಲಗಳಿಂದ ಸಂಗ್ರಹಿಸಿದ ನೂರಾರು ಆರೋಗ್ಯ ಪರಿಸ್ಥಿತಿಗಳ ಕುರಿತ ಮಾಹಿತಿಯನ್ನು ಒಳಗೊಂಡಿದೆ. ನೀವು ರೋಗಲಕ್ಷಣಗಳು ಗಾಗಿ ಹುಡುಕಿದಾಗ, ನೀವು ಹೆಚ್ಚು ಕೂಲಂಕಷವಾಗಿ ಹುಡುಕಲು ಅಥವಾ ಆರೋಗ್ಯ ವೃತ್ತಿಪರರೊಂದಿಗೆ ಮಾತನಾಡಲು ನೀವು ಎಲ್ಲಿಗೆ ಹೋಗಬಹುದು ಎಂಬುದನ್ನು ತ್ವರಿತವಾಗಿ ನೋಡುವುದಕ್ಕೆ ನಿಮಗೆ ಸಹಾಯ ಮಾಡಲು ಸಂಬಂಧಿತ ಪರಿಸ್ಥಿತಿಗಳ ಪಟ್ಟಿಯನ್ನು ನಾವು ಪ್ರದರ್ಶಿಸುತ್ತೇವೆ.

Lens ಬಳಸಿಕೊಂಡು ಚರ್ಮದ ಸಮಸ್ಯೆಗಳನ್ನು ಹುಡುಕಿ

ನಿಮ್ಮ ಚರ್ಮದಲ್ಲಿನ ಯಾವುದೋ ಒಂದು ಕಲೆ ಅಥವಾ ದದ್ದಿನ ಕುರಿತು ವಿವರಿಸಲು ಪದಗಳನ್ನು ಮಾತ್ರವೇ ಬಳಸಲು ಕಷ್ಟವಾಗಬಹುದು. ನಿಮ್ಮ ಚರ್ಮದಲ್ಲಿರುವ ಸ್ಥಿತಿಗಳಿಗೆ ಸಮಾನವೆಂದು ತೋರುವಂತಹ ಸ್ಥಿತಿಗಳನ್ನು ಹುಡುಕಲು Lens ಇದೀಗ ನಿಮಗೆ ಸಹಾಯ ಮಾಡಬಹುದು. Google ಆ್ಯಪ್‌ನಲ್ಲಿ Lens ಮೂಲಕ ನಿಮ್ಮ ಚರ್ಮದ ಫೋಟೋ ತೆಗೆದುಕೊಳ್ಳಿ, ಮತ್ತು ನಿಮ್ಮ ಹುಡುಕಾಟಕ್ಕೆ ಸಂಬಂಧಿಸಿದಂತೆ ನೋಡಲು ಸಮಾನವಾದ ಹೊಂದಾಣಿಕೆಗಳು ನಿಮಗೆ ಕಾಣಿಸುತ್ತವೆ. ಆಯ್ದ ಮಾರ್ಕೆಟ್‌ಗಳಲ್ಲಿ ಲಭ್ಯವಿರುವ ಈ ಫೀಚರ್, ನಿಮ್ಮ ತುಟಿಯಲ್ಲಿರುವ ಒಂದು ಉಬ್ಬು ಅಥವಾ ತಲೆಕೂದಲು ಉದುರುವಿಕೆಯ ಹಾಗೆ, ನಿಮ್ಮ ಶರೀರದ ಬೇರೆ ಯಾವುದೋ ಸಮಸ್ಯೆಯನ್ನು ವಿವರಿಸಲು ನಿಮಗೆ ಸಾಧ್ಯವಾಗದಿದ್ದಾಗಲೂ ಸಹಾಯ ಮಾಡುತ್ತದೆ.

ಇದೊಂದು ಚಿತ್ರ ಹೋಲಿಕೆ ಫೀಚರ್ ಆಗಿದ್ದು, ವರ್ಲ್ಡ್ ವೈಡ್ ವೆಬ್‌ನಲ್ಲಿ ಸಾರ್ವಜನಿಕವಾಗಿ ಲಭ್ಯವಿರುವ ಚಿತ್ರಗಳೊಂದಿಗೆ ಹೊಂದಾಣಿಕೆ ಮಾಡುತ್ತದೆ. ಈ ಫೀಚರ್, ಚಿತ್ರದ ವೈದ್ಯಕೀಯ ವಿಶ್ಲೇಷಣೆಯನ್ನು ಒಳಗೊಂಡಿಲ್ಲ. ಹುಡುಕಾಟದ ಫಲಿತಾಂಶಗಳು ಮಾಹಿತಿಗಾಗಿ ಮಾತ್ರವೇ ಹೊರತು ಡಯಾಗ್ನೋಸಿಸ್‌ಗೆ ಅಲ್ಲ. ಸಲಹೆಗಾಗಿ ನಿಮ್ಮ ವೈದ್ಯಕೀಯ ಅಧಿಕಾರಿಯನ್ನು ಸಂಪರ್ಕಿಸಿ. ಈ ಫೀಚರ್ DermAssist ಟೂಲ್‌ಗೆ ಸಂಬಂಧಿಸಿಲ್ಲ ಮತ್ತು ಆ ಟೂಲ್ ಅನ್ನು ಈಗ ಅಭಿವೃದ್ಧಿಪಡಿಸಲಾಗುತ್ತಿಲ್ಲ.

ಪ್ರತಿದಿನ ಲಕ್ಷಾಂತರ ಆರೋಗ್ಯ ಸಂಬಂಧಿತ ಪ್ರಶ್ನೆಗಳಿಗೆ ಉತ್ತರಿಸಲಾಗುತ್ತಿದೆ

ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಮುಕ್ಕಾಲು ಭಾಗದಷ್ಟು ಜನರು ಆರೋಗ್ಯ ಮಾಹಿತಿಯನ್ನು ಹುಡುಕಲು ಮೊದಲು ಇಂಟರ್ನೆಟ್‌ಗೆ ಹೋಗುತ್ತಾರೆ. ಅರ್ಧ ಭಾಗಕ್ಕಿಂತ ಹೆಚ್ಚು ಜನರು ಆನ್‌ಲೈನ್‌ನಲ್ಲಿ ಆರೋಗ್ಯ ಮಾಹಿತಿಯನ್ನು ಹುಡುಕುತ್ತಾರೆ ಹಾಗೂ ಇದರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅದಕ್ಕಾಗಿಯೇ, ನೀವು Google ನಲ್ಲಿ ಏನನ್ನು ಹುಡುಕುತ್ತಿದ್ದೀರೋ ಅದನ್ನು ಲೆಕ್ಕಿಸದೆಯೇ, ಜನರು ಯಾವಾಗ ಮತ್ತು ಎಲ್ಲಿ ಬೇಕಾದರೂ ಸಂಬಂಧಿತ ಮತ್ತು ಅಧಿಕೃತ ಮಾಹಿತಿಯೊಂದಿಗೆ ಸಂಪರ್ಕ ಸಾಧಿಸುವಂತೆ ಮಾಡುವುದು ನಮ್ಮ ಗುರಿಯಾಗಿದೆ.

U.S. ನಲ್ಲಿ, ಆರೋಗ್ಯದ ಮಾಹಿತಿಯನ್ನು ಹುಡುಕುವಾಗ ಮುಕ್ಕಾಲು ಭಾಗದಷ್ಟು ಜನರು ಮೊದಲು ಇಂಟರ್ನೆಟ್‌ಗೆ ಹೋಗುತ್ತಾರೆ.

SAGE ಜರ್ನಲ್‌ಗಳು

ಯುರೋಪ್‌ನಲ್ಲಿನ ಅರ್ಧದಷ್ಟು ಜನರು ಆನ್‌ಲೈನ್ ಆರೋಗ್ಯ ಮಾಹಿತಿಯನ್ನು ಹುಡುಕುತ್ತಾರೆ


ಯುರೋಸ್ಟಾಟ್

ಆರೈಕೆ ಸೇವೆ ಒದಗಿಸುವವರಿಗೆ ಜನರನ್ನು ಸಂಪರ್ಕಿಸುವುದು

ಯು.ಎಸ್‌ನಲ್ಲಿ ಆರೈಕೆ ಸೇವೆಯನ್ನು ಹುಡುಕುವುದಕ್ಕೆ ಸಂಬಂಧಿಸಿದ ನಿರ್ಣಾಯಕ ಅಂಶಗಳನ್ನು ನ್ಯಾವಿಗೇಟ್ ಮಾಡುವುದನ್ನು ನಾವು ಜನರಿಗಾಗಿ ಸುಲಭಗೊಳಿಸುತ್ತಿದ್ದೇವೆ. ಬಳಕೆದಾರರು ತಮಗೆ ಸೂಕ್ತವಾದ ಆರೈಕೆ ಸೇವೆಯನ್ನು ಇನ್ನಷ್ಟು ಸುಲಭವಾಗಿ ಹುಡುಕಲು ಸಾಧ್ಯವಾಗುವ ಹಾಗೆ, ಆರೋಗ್ಯ ಸೇವೆ ಒದಗಿಸುವ ಸಾವಿರಾರು ಮೂಲಗಳ ಕುರಿತು ನಾವು ಮಾಹಿತಿಯನ್ನು ಸೇರಿಸಿದ್ದೇವೆ

ಹೆಚ್ಚು ಅಗತ್ಯವಿರುವವರಿಗೆ ಆ್ಯಕ್ಸೆಸ್ ಅನ್ನು ಸುಧಾರಿಸುವುದು

ಆರೋಗ್ಯ ಸೇವೆಗೆ ಹೆಚ್ಚು ಸಮಾನವಾದ ಆ್ಯಕ್ಸೆಸ್ ಅನ್ನು ಒದಗಿಸುವುದಕ್ಕೆ ಸಹಾಯ ಮಾಡಲು ನಾವು ಬದ್ಧರಾಗಿದ್ದೇವೆ ಹಾಗೂ ಯು.ಎಸ್‌ನಲ್ಲಿ ಸರಕಾರಿ ವಿಮಾ ಕಾರ್ಯಕ್ರಮಗಳ ಕುರಿತು ಹೆಚ್ಚು ವ್ಯವಸ್ಥಿತ ಮಾಹಿತಿಯನ್ನು ಸೇರಿಸಿದ್ದೇವೆ. ಸೀಮಿತ ಆದಾಯ ಹಾಗೂ ಮಾಹಿತಿಯ ಮೂಲಗಳನ್ನು ಹೊಂದಿರುವ ಜನರಿಗೆ ಸಹಾಯ ಮಾಡುವುದಕ್ಕಾಗಿ, ಇರಬೇಕಾದ ಅರ್ಹತೆಗಳು ಹಾಗೂ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಕುರಿತಾದ ಮಾಹಿತಿಯನ್ನು ಇದು ಒಳಗೊಂಡಿರುತ್ತದೆ.

ಮಾನಸಿಕ ಆರೋಗ್ಯ ಮಾಹಿತಿಯ ಮೂಲಗಳನ್ನು ಹೆಚ್ಚಿಸುವುದು

ಮಾನಸಿಕ ಆರೋಗ್ಯ ಮಾಹಿತಿಯ ಮೂಲಗಳನ್ನು ಹೆಚ್ಚಿಸುವುದು

ಹೆಚ್ಚು ಸಂಕಷ್ಟದ ಸಮಯದಲ್ಲಿ ಜನರು ಸಾಮಾನ್ಯವಾಗಿ ಸರ್ಚ್ ಎಂಜಿನ್‌ಗಳ ಮೊರೆ ಹೋಗುತ್ತಾರೆ. ವಿಶ್ವಾಸಾರ್ಹ ಮೂಲಗಳಿಂದ ಉಪಯುಕ್ತ ಮಾಹಿತಿಯನ್ನು ಮರಳಿಸುವುದೂ ಸೇರಿದ ಹಾಗೆ, ದುರ್ಬಲ ಜನರು ಆತ್ಮವಿಶ್ವಾಸದಿಂದ ಆ್ಯಕ್ಸೆಸ್ ಮಾಡಲು ಸಾಧ್ಯವಾಗುವ ತ್ವರಿತ ಮತ್ತು ನಂಬಿಕಸ್ಥ ಮಾಹಿತಿ ಮೂಲಗಳನ್ನು ನಾವು ಹೈಲೈಟ್ ಮಾಡುತ್ತೇವೆ. ಆತ್ಮಹತ್ಯೆ ಮತ್ತು ಕೌಟುಂಬಿಕ ಹಿಂಸಾಚಾರದಂತಹ ವಿಷಯಗಳಿಗಾಗಿ [ಬಿಕ್ಕಟ್ಟಿನ ಹಾಟ್‌ಲೈನ್ ಮಾಹಿತಿ] (https://blog.google/products/search/suicide-prevention-resources-on-google-search/) ಅನ್ನು ತೋರಿಸಲು ನಾವು ಜಾಗತಿಕವಾಗಿ ಸಂಸ್ಥೆಗಳು ಜೊತೆಗೆ ಪಾಲುದಾರಿಕೆ ಹೊಂದಿದ್ದೇವೆ. ಮಾನಸಿಕ ಆರೋಗ್ಯ ಸ್ಥಿತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಬಳಕೆದಾರರು ಹುಡುಕಿದಾಗ ಕಾಣಿಸಿಕೊಳ್ಳುವ, ಪ್ರಾಯೋಗಿಕವಾಗಿ ದೃಢೀಕರಿಸಲಾದ ಸ್ವಯಂ-ಪರೀಕ್ಷಾ ಪರಿಕರಗಳನ್ನು ಸಹ ನಾವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪ್ರಾರಂಭಿಸಿದ್ದೇವೆ.

ಮಾಹಿತಿಯನ್ನು ಮೌಲ್ಯೀಕರಿಸಲು ನಿಮಗೆ ಸಹಾಯ ಮಾಡುವ ಪರಿಕರಗಳು

ನೀವು ವೆಬ್‌ಸೈಟ್‌ಗೆ ಭೇಟಿ ನೀಡುವ ಮೊದಲು, ಅದರ ವಿವರಣೆ, ಅದನ್ನು ಮೊದಲು ಯಾವಾಗ ಇಂಡೆಕ್ಸ್ ಮಾಡಲಾಯಿತು, ಮತ್ತು ಮೂಲ ಮತ್ತು ವಿಷಯದ ಬಗ್ಗೆ ಇತರರು ಏನು ಹೇಳಿದ್ದಾರೆ ಎನ್ನುವುದನ್ನು ಒಳಗೊಂಡ ವೆಬ್‌ಸೈಟ್‌ನ ವಿವರವಾದ ಮಾಹಿತಿಯನ್ನು ಈ ಫಲಿತಾಂಶಗಳ ಕುರಿತು ಎನ್ನುವ ಫೀಚರ್‌ನಲ್ಲಿ ಒದಗಿಸಲಾಗುತ್ತದೆ. ವೆಬ್‌ನಲ್ಲಿ ಯಾವುದೇ ಉಪಯುಕ್ತ ಅಥವಾ ಸಂಬಂಧಿತ ಮಾಹಿತಿ ಲಭ್ಯವಿಲ್ಲದಿದ್ದಾಗ, ಉದಾಹರಣೆಗೆ ವೇಗವಾಗಿ ವಿಕಸನಗೊಳ್ಳುತ್ತಿರುವ ಈವೆಂಟ್‌ಗಳಲ್ಲಿ, ವಿಷಯದ ಕುರಿತ ಆಸಕ್ತಿಯು ಸತ್ಯಗಳಿಗಿಂತ ವೇಗವಾಗಿ ಹರಡುತ್ತದೆ – ಇಲ್ಲವೇ ನಿಮ್ಮ ಹುಡುಕಾಟಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ದೊರೆಯದಿದ್ದಾಗ, ನಾವು ನಿಮಗೆ ನೋಟಿಫಿಕೇಶನ್ ಮೂಲಕ ಎಚ್ಚರಿಕೆ ನೀಡುತ್ತೇವೆ ಹಾಗೂ ನಂತರ ಪುನಃ ಪರಿಶೀಲಿಸಲು ಅಥವಾ ಇನ್ನೊಂದು ಹುಡುಕಾಟ ಮಾಡುವಂತೆ ಶಿಫಾರಸು ಮಾಡುತ್ತೇವೆ.

ಗೌಪ್ಯತೆಯನ್ನು ರಕ್ಷಿಸುವುದು ಮತ್ತು ಡೇಟಾವನ್ನು ಸುರಕ್ಷಿತಗೊಳಿಸುವುದು

ವಿಶ್ವಾಸಾರ್ಹ ಮಾಹಿತಿಯನ್ನು ಒದಗಿಸುವ ಮೂಲಕ ಮತ್ತು ಅಂತರ್ನಿರ್ಮಿತ ಭದ್ರತಾ ತಂತ್ರಜ್ಞಾನದೊಂದಿಗೆ ನಿಮ್ಮ ಗೌಪ್ಯತೆಯನ್ನು ರಕ್ಷಿಸುವ ಮೂಲಕ ನಿಮ್ಮ ವಿಶ್ವಾಸವನ್ನು ಗಳಿಸಲು ನಾವು ಪ್ರತಿದಿನ ಶ್ರಮಿಸುತ್ತೇವೆ. ಔದ್ಯಮಿಕ-ದರ್ಜೆಯ ತಂತ್ರಜ್ಞಾನದ ಮೂಲಕ ಹಾಗೂ ಪ್ರತಿ ಹುಡುಕಾಟವನ್ನು ಎನ್‌ಕ್ರಿಪ್ಟ್ ಮಾಡುವ ಮೂಲಕ ನಿಮ್ಮ ಡೇಟಾವನ್ನು ನಾವು ಸುರಕ್ಷಿತವಾಗಿರಿಸುತ್ತೇವೆ. ನಾವು ನಿಯಂತ್ರಣಗಳನ್ನು ರಚಿಸುತ್ತೇವೆ, ಆದ್ದರಿಂದ ನಿಮಗೆ ಸೂಕ್ತವಾದ ಗೌಪ್ಯತೆ ಸೆಟ್ಟಿಂಗ್‌ಗಳನ್ನು ನೀವು ಆಯ್ಕೆ ಮಾಡಬಹುದು. ಹಾಗೂ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಎಂದಿಗೂ ಮಾರಾಟ ಮಾಡುವುದಿಲ್ಲ.