ಬಿಲಿಯನ್‌ಗಟ್ಟಲೆ ಜನರಿಗೆ ಆರೋಗ್ಯವಂತರಾಗಿರಲು ಸಹಾಯ ಮಾಡುವುದು

Google Health ಆರೋಗ್ಯ ಮಾಹಿತಿಯನ್ನು ಒಟ್ಟುಗೂಡಿಸುವ ಮತ್ತು ಅರ್ಥಪೂರ್ಣವಾಗಿಸುವ ಉತ್ಪನ್ನಗಳು ಮತ್ತು ಸೇವೆಗಳ ಮೂಲಕ ಎಲ್ಲೆಡೆಯೂ, ಪ್ರತಿಯೊಬ್ಬರಿಗೂ ಹೆಚ್ಚು ಆರೋಗ್ಯವಂತರಾಗಿರಲು ಸಹಾಯ ಮಾಡಲು ಬದ್ಧವಾಗಿದೆ. ಆರೋಗ್ಯದ ವಿಚಾರದಲ್ಲಿ ಕ್ರಮ ಕೈಗೊಳ್ಳಲು ಅಗತ್ಯವಿರುವ ಮಾಹಿತಿಯನ್ನು ಜನರಿಗೆ ನೀಡಿ ಅವರನ್ನು ಸಶಕ್ತರನ್ನಾಗಿಸುವ ಉತ್ಪನ್ನಗಳನ್ನು ನಾವು ತಯಾರಿಸುತ್ತಿದ್ದೇವೆ. ಹೆಚ್ಚು ಸಂಯೋಜಿತ ಆರೈಕೆಯನ್ನು ಒದಗಿಸಲು ಆರೈಕೆ ತಂಡಗಳನ್ನು ಸಜ್ಜುಗೊಳಿಸುವ ಸಲುವಾಗಿ ನಾವು ತಂತ್ರಜ್ಞಾನದ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಮತ್ತು ನಾವು ಕ್ಯಾನ್ಸರ್ ರೋಗಪತ್ತೆ, ಕುರುಡುತನ ತಡೆಗಟ್ಟುವಿಕೆ ಮತ್ತು ಇನ್ನೂ ಬಹಳಷ್ಟು ಕ್ಷೇತ್ರಗಳಲ್ಲಿ ಸಹಾಯಕ್ಕಾಗಿ ಕೃತಕ ಬುದ್ಧಿಮತ್ತೆಯ ಬಳಕೆಯನ್ನು ಪರಿಶೋಧಿಸುತಿದ್ದೇವೆ.

ಉಪಯುಕ್ತ ಆರೋಗ್ಯ ಸಂಪನ್ಮೂಲಗಳಿಗೆ ಪ್ರತಿಯೊಬ್ಬರೂ ಪ್ರವೇಶ ಹೊಂದಿರಬೇಕು.

ಆರೋಗ್ಯ ಕ್ಷೇತ್ರದ ಪ್ರಯಾಣದಾದ್ಯಂತದ ಅರ್ಥಪೂರ್ಣ ಪ್ರಗತಿಯನ್ನು ಬೆಂಬಲಿಸುವ ಸಲುವಾಗಿ, ಉತ್ತಮ ಆರೋಗ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಎಲ್ಲರಿಗೂ ಸಹಾಯ ಮಾಡಲು ನಾವು ಪರಿಕರಗಳು ಮತ್ತು ಸಂಪನ್ಮೂಲಗಳನ್ನು ರಚಿಸುತ್ತಿದ್ದೇವೆ.

ಗ್ರಾಹಕರಿಗಾಗಿ

ಗ್ರಾಹಕರಿಗಾಗಿ

ಆರೈಕೆದಾರರಿಗಾಗಿ

ಆರೈಕೆದಾರರಿಗಾಗಿ

ಸಮುದಾಯಗಳಿಗಾಗಿ

ಆರೋಗ್ಯವಂತ ಸಮುದಾಯಗಳಿಗಾಗಿ

ಸಂಶೋಧಕರಿಗಾಗಿ

ಸಂಶೋಧಕರಿಗಾಗಿ

ಮಹಿಳೆಯರು+ ಗಾಗಿ ಯಶಸ್ವಿ ಆರೈಕೆ

Google Health ನಲ್ಲಿ, ನಮ್ಮ ಸಂಶೋಧನೆ, ಉತ್ಪನ್ನದ ಅಭಿವೃದ್ಧಿ ಮತ್ತು ಪಾಲುದಾರಿಕೆಗಳ ಮೂಲಕ ಮಹಿಳೆಯರು+ ಸ್ವೀಕರಿಸಿದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಮತ್ತು ರೋಗಿಗಳ ಆರೈಕೆಯನ್ನು ಸುಧಾರಿಸಲು ನಾವು ಮುಡುಪಾಗಿಟ್ಟಿದ್ದೇವೆ.

ಮಹಿಳೆಯರಿಗಾಗಿ ಕೆಲಸ ಮಾಡುವ ಆರೈಕೆ
ಆರೋಗ್ಯ ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸಿ

ಆರೋಗ್ಯ ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸಲು Google ಇಲ್ಲಿದೆ

ನಿಮ್ಮಂತಹ ಆರೋಗ್ಯ ಕುರಿತ ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸಲು Google ಬದ್ಧವಾಗಿದೆ. ನಮ್ಮ ಗೈಡ್ ನಿಮ್ಮ ಸ್ಟಾರ್ಟ್ಅಪ್ ಬೆಳೆಯಲು ಮತ್ತು ಅದರ ಪ್ರಭಾವವನ್ನು ವಿಸ್ತರಿಸುವುದಕ್ಕಾಗಿ ಸಹಾಯ ಮಾಡಲು ವಿನ್ಯಾಸಗೊಳಿಸಲಾದ Google ಪ್ರೋಗ್ರಾಂಗಳು ಮತ್ತು ತಂತ್ರಜ್ಞಾನಗಳ ಕುರಿತು ಮಾಹಿತಿಯನ್ನು ಒದಗಿಸುತ್ತವೆ. ಒಟ್ಟಾಗಿ ಸೇರಿ ಆರೋಗ್ಯಕರ ಭವಿಷ್ಯವನ್ನು ನಿರ್ಮಿಸೋಣ.

ಉತ್ತಮ ಆರೋಗ್ಯವು ತನ್ನಷ್ಟಕ್ಕೆ ತಾನೇ ಸಂಭವಿಸುವುದಿಲ್ಲ

ಉದಯೋನ್ಮುಖ ತಂತ್ರಜ್ಞಾನಗಳನ್ನು ದೈನಂದಿನ ಅಭ್ಯಾಸದಲ್ಲಿ ಬಳಕೆಗೆ ತರುವ ಸಾಮೂಹಿಕ ಗುರಿಯೊಂದಿಗೆ ವಿಶ್ವದರ್ಜೆಯ ವೈದ್ಯಕೀಯ, ಸಾರ್ವಜನಿಕ ಆರೋಗ್ಯ ಮತ್ತು ಶೈಕ್ಷಣಿಕ ಸಂಸ್ಥೆಗಳ ಜೊತೆ ಪಾಲುದಾರರಾಗಿ, ಕೆಲಸ ಮಾಡುವುದು ನಮಗೆ ಹೆಮ್ಮೆಯ ವಿಚಾರವಾಗಿದೆ. ನಮ್ಮ ಪಾಲುದಾರರ ಜ್ಞಾನ ಮತ್ತು ಅನುಭವ, Google ನ ತಂತ್ರಜ್ಞಾನ ಪರಿಣಿತಿ ಮತ್ತು ರೋಗಿಗಳ ಒಳನೋಟಗಳನ್ನು ಸಂಯೋಜಿಸುವ ಮೂಲಕ, ಸಂಶೋಧನೆಯನ್ನು ಕೈಗೊಳ್ಳಲು ಮತ್ತು ವ್ಯಕ್ತಿಗಳು, ಆರೈಕೆದಾರರು ಮತ್ತು ಆರೋಗ್ಯ ವೃತ್ತಿಪರರಿಗಾಗಿ ಆಧುನಿಕ ಆರೋಗ್ಯಸೇವಾ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲು ನಮಗೆ ಸಾಧ್ಯವಾಗುತ್ತಿದೆ.

ಆರೋಗ್ಯ ಕ್ಷೇತ್ರದಲ್ಲಿನ Google ನ ಇತ್ತೀಚಿನ ಕಾರ್ಯವನ್ನು ನೋಡಿರಿ

Google ನ ಅಧಿಕೃತ ಬ್ಲಾಗ್ ಆದ ಕೀವರ್ಡ್‌ನಲ್ಲಿ ನಮ್ಮ ಇತ್ತೀಚಿನ ಬಿಡುಗಡೆಗಳು ಮತ್ತು ಪ್ರಕಟಣೆಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ.

ಗೌಪ್ಯತೆ ಬಹು ಮುಖ್ಯವಾದದ್ದು

ನೀವು Google ನ ಉತ್ಪನ್ನಗಳು ಮತ್ತು ಸೇವೆಗಳನ್ನು ಬಳಸುವಾಗ, ನಿಮ್ಮ ಡೇಟಾದ ವಿಚಾರದಲ್ಲಿ ನಮ್ಮನ್ನು ನಂಬುತ್ತೀರಿ. ನಿಮ್ಮ ಡೇಟಾವನ್ನು ಗೌಪ್ಯ ಮತ್ತು ಸುರಕ್ಷಿತವಾಗಿಡುವುದು ನಮ್ಮ ಜವಾಬ್ದಾರಿ. ಮತ್ತು Google Health ನಲ್ಲಿ, ನಾವು ಹೊಸ ಉತ್ಪನ್ನ ಮತ್ತು ಸೇವೆಗಳ ರಚನೆಯಲ್ಲಿ ತೊಡಗುವಾಗ ಮೂಲಭೂತ ಗೌಪ್ಯತೆ ಮತ್ತು ಸುರಕ್ಷತೆಯ ತತ್ವಗಳಿಂದ ಮಾರ್ಗದರ್ಶನ ಪಡೆಯುತ್ತೇವೆ.

*ವೈಶಿಷ್ಟ್ಯಗಳು ನಿಮ್ಮ ಅನುಮತಿಗಳು ಮತ್ತು ಸೆಟ್ಟಿಂಗ್‌ಗಳಿಗೆ ಒಳಪಟ್ಟಿರುತ್ತವೆ. ಅವುಗಳು ಕಾರ್ಯನಿರ್ವಹಿಸಲು ಚಲನೆ, ಧ್ವನಿ, ಮತ್ತು ಇತರ ಸಾಧನ ಮತ್ತು ಸೆನ್ಸರ್ ಡೇಟಾವನ್ನು ಬಳಸುತ್ತವೆ ಮತ್ತು ಸಾಧನವನ್ನು ಮಂಚದ ಸಮೀಪ ಇರಿಸಬೇಕಾಗುತ್ತದೆ ಹಾಗೂ ಸಾಧನವನ್ನು ನೀವು ನಿದ್ರಿಸುವ ಸ್ಥಿತಿಗೆ ಕ್ಯಾಲಿಬ್ರೇಟ್ ಮಾಡುವ ಅಗತ್ಯವಿರುತ್ತದೆ. ಪೂರ್ಣ ಕಾರ್ಯಚಟುವಟಿಕೆಗೆ Google Assistant, Google Fit ಆ್ಯಪ್ ಮತ್ತು ಇತರ Google ಆ್ಯಪ್‌ಗಳು ಬೇಕಾಗಬಹುದು. ಸಾಧನದ ಸ್ಥಾನ ನಿಯೋಜನೆ ಮತ್ತು ಸಮೀಪದಲ್ಲಿರುವ ಜನರು, ಸಾಕು ಪ್ರಾಣಿಗಳು ಅಥವಾ ಗದ್ದಲಗಳಿಂದ ನಿಖರವಲ್ಲದ ರೀಡಿಂಗ್‌ಗಳು ದೊರೆಯಬಹುದು. g.co/sleepsensing/preview ನಲ್ಲಿ ಇನ್ನಷ್ಟು ತಿಳಿದುಕೊಳ್ಳಿ.