ಸ್ಮಾರ್ಟ್ಫೋನ್ ಸೆನ್ಸರ್ಗಳನ್ನು ಆರೋಗ್ಯದ ಕುರಿತ ಒಳನೋಟಗಳ ಪ್ರಬಲ ಮೂಲಗಳಾಗಿ ಪರಿವರ್ತಿಸುವುದು
ಪ್ರಪಂಚದಾದ್ಯಂತ ಸ್ಮಾರ್ಟ್ಫೋನ್ಗಳಲ್ಲಿ ಕಾರ್ಯನಿರ್ವಹಿಸಬಹುದಾದ ಪ್ರಮುಖ ಆರೋಗ್ಯ ಮಾಹಿತಿಯನ್ನು ಪತ್ತೆಹಚ್ಚಲು ನಾವು ಸೆನ್ಸಿಂಗ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಜನರ ಬಳಿ ಈಗಾಗಲೇ ಇರುವ ಸಾಧನಗಳಲ್ಲಿ ಆರೋಗ್ಯದ ಕುರಿತ ತಿಳುವಳಿಕೆಯನ್ನು ಪ್ರವೇಶಿಸಲು ಅನುಮತಿ ನೀಡುವ ಮೂಲಕ, ಪ್ರಪಂಚದಾದ್ಯಂತ ಆರೈಕೆಗೆ ಪ್ರವೇಶ ನೀಡಲು ನಾವು ಸಹಾಯ ಮಾಡಬಹುದು
ಕೆಲವು ಆರೋಗ್ಯದ ಕುರಿತ ಒಳನೋಟಗಳನ್ನು ಪ್ರವೇಶಿಸಲು ಇನ್ನೂ ವಿಶೇಷವಾದ ಉಪಕರಣಗಳ ಅಗತ್ಯವಿದೆ
ಜನರು ತಮ್ಮ ಆರೋಗ್ಯದ ಕುರಿತಾದ ಕೆಲವು ಒಳನೋಟಗಳನ್ನು ನೋಡಲು, ಅವರು ಸಾಮಾನ್ಯವಾಗಿ ವಿಶೇಷ ಸಾಧನಗಳಿರುವ ಆಸ್ಪತ್ರೆ ಅಥವಾ ಕ್ಲಿನಿಕ್ಗೆ ಹೋಗಬೇಕಾಗುತ್ತದೆ, ಅಥವಾ ಅವರು ಧರಿಸುವಂತಹ ಅಥವಾ ಮನೆಯಲ್ಲಿ ಬಳಸುವ ಆರೋಗ್ಯ ಸಂಬಂಧಿ ಟೂಲ್ಗಳಂತಹ ಸಾಧನಗಳನ್ನು ಖರೀದಿಸಿರಬೇಕಾಗುತ್ತದೆ. ಈ ಹೊರೆಯ ಕಾರಣದಿಂದಾಗಿ, ಪ್ರಪಂಚದಾದ್ಯಂತದ ಅನೇಕ ಜನರು ದೇಹದಲ್ಲಿನ ಆರೋಗ್ಯ-ಸಂಬಂಧಿತ ಬದಲಾವಣೆಗಳನ್ನು ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ. ದುರ್ಬಲ ಆರ್ಥಿಕ ಸ್ಥಿತಿಯಲ್ಲಿರುವ ಜನರಲ್ಲಿ ಇದು ಹೆಚ್ಚು ಕಂಡುಬರುತ್ತದೆ.
ಪ್ರಮುಖ ಆರೋಗ್ಯ ಸಂಕೇತಗಳನ್ನು ಸಂಗ್ರಹಿಸುವ ಮತ್ತು ವಿಶ್ಲೇಷಿಸುವ ಸ್ಮಾರ್ಟ್ಫೋನ್ ಸೆನ್ಸರ್ಗಳು
ಸುಧಾರಿತ ಹಾರ್ಡ್ವೇರ್ ಕುರಿತ ನಮ್ಮ ಆಳವಾದ ತಿಳುವಳಿಕೆ ಮತ್ತು ಮಷಿನ್ ಲರ್ನಿಂಗ್ನಲ್ಲಿ ವಿಶ್ವ-ಪ್ರಸಿದ್ಧ ತಜ್ಞರ ಸಹಾಯವು ನಮ್ಮ ಸಂಶೋಧಕರು, ಎಂಜಿನಿಯರ್ಗಳು ಮತ್ತು ವೈದ್ಯರ ತಂಡವು AI ಸೆನ್ಸರ್ಗಳನ್ನು ನಿರ್ಮಿಸಲು ಅನುವು ಮಾಡಿಕೊಡುತ್ತದೆ. ಇವುಗಳು, ಆರೋಗ್ಯದ ಬಗ್ಗೆ ಗಮನ ಹರಿಸಲು ಅಗತ್ಯವಾದ ಮಾಹಿತಿ ಮತ್ತು ಒಳನೋಟಗಳನ್ನು ಜನರಿಗೆ ಒದಗಿಸುತ್ತವೆ. ಈ ಮಾಪನಗಳನ್ನು ಪ್ರಾಯೋಗಿಕವಾಗಿ ಮೌಲ್ಯೀಕರಿಸಲಾಗಿದೆ, ಆದರೆ ವೈದ್ಯಕೀಯ ರೋಗಪತ್ತೆಗಾಗಿ ಅಥವಾ ವೈದ್ಯಕೀಯ ಪರಿಸ್ಥಿತಿಗಳ ಮೌಲ್ಯಮಾಪನಕ್ಕಾಗಿ ಉದ್ದೇಶಿಸಲಾಗಿಲ್ಲ.
Pixel ಸಾಧನಗಳಲ್ಲಿ ಕೆಮ್ಮು ಮತ್ತು ಗೊರಕೆಯ ಪತ್ತೆ ಹಚ್ಚುವಿಕೆ
ರಾತ್ರಿಯ ಸಮಯದಲ್ಲಿ ಕೆಮ್ಮು ಮತ್ತು ಗೊರಕೆಯ ಚಟುವಟಿಕೆಯಂತಹ ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುವ ಅಂಶಗಳ ಕುರಿತು ಅರ್ಥಮಾಡಿಕೊಳ್ಳಲು Pixel ನಿಮಗೆ ಸಹಾಯ ಮಾಡುತ್ತದೆ. ಈ ಫೀಚರ್ Pixel ನ ಮೈಕ್ರೋಫೋನ್ ಅನ್ನು ಬಳಸುತ್ತದೆ ಹಾಗೂ ಇದು ಯಾರೊಂದಿಗೂ ಡೇಟಾವನ್ನು ಹಂಚಿಕೊಳ್ಳುವುದಿಲ್ಲ ಅಥವಾ ಅದನ್ನು ರೆಕಾರ್ಡ್ ಮಾಡುವುದಿಲ್ಲ. ಮಲಗುವ ಸಮಯದ ಸಾರಾಂಶ ಸ್ಕ್ರೀನ್ನಲ್ಲಿ, Pixel ನೀವು ಎಷ್ಟು ಕಾಲ ಗೊರಕೆ ಹೊಡೆಯುತ್ತೀರಿ ಮತ್ತು ಎಷ್ಟು ಬಾರಿ ಕೆಮ್ಮುತ್ತೀರಿ ಎಂಬುದನ್ನು ತೋರಿಸುತ್ತದೆ.
ಹೃದಯ ಮತ್ತು ಉಸಿರಾಟದ ದರ
ಹೃದಯ ಬಡಿತ ಮತ್ತು ಉಸಿರಾಟದ ದರವು ನಿಮ್ಮ ಆರೋಗ್ಯ ಮತ್ತು ಯೋಗಕ್ಷೇಮವನ್ನು ನಿರ್ಣಯಿಸಲು ಸಾಮಾನ್ಯವಾಗಿ ಬಳಸುವ ಎರಡು ಪ್ರಮುಖ ಚಿಹ್ನೆಗಳಾಗಿವೆ. Android ಮತ್ತು iOS ನಲ್ಲಿ Google Fit ಆ್ಯಪ್ ಅನ್ನು ಬಳಸಿಕೊಂಡು, ನಿಮ್ಮ ಫೋನ್ನ ಕ್ಯಾಮರಾವನ್ನು ಬಳಸಿಕೊಂಡು ನಿಮ್ಮ ಹೃದಯ ಬಡಿತ ಮತ್ತು ಉಸಿರಾಟದ ದರವನ್ನು ನೀವು ಮಾಪನ ಮಾಡಬಹುದು.
ನಾವು ಎರಡೂ ಫೀಚರ್ಗಳನ್ನು ದೈನಂದಿನ ಜೀವನದ ವಿವಿಧ ಸಂದರ್ಭಗಳಲ್ಲಿ ಬಳಸಬಹುದಾದ ರೀತಿಯಲ್ಲಿ ಮತ್ತು ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡುವ ರೀತಿಯಲ್ಲಿ ಅಭಿವೃದ್ಧಿಪಡಿಸಿದ್ದೇವೆ. ಹೆಚ್ಚುವರಿಯಾಗಿ, ಅವುಗಳ ಕಾರ್ಯವನ್ನು ಮೌಲ್ಯೀಕರಿಸಲು ನಾವು ವೈದ್ಯಕೀಯ ಅಧ್ಯಯನಗಳು ಅನ್ನು ಸಹ ನಡೆಸಿದ್ದೇವೆ. ಉದಾಹರಣೆಗೆ, ನಮ್ಮ ಹೃದಯ ಬಡಿತದ ಅಲ್ಗಾರಿದಮ್ ಬೆರಳ ತುದಿಯಲ್ಲಿನ ಬಣ್ಣ ಬದಲಾವಣೆಗಳಿಂದ ರಕ್ತದ ಹರಿವನ್ನು ಅಂದಾಜು ಮಾಡುವುದರ ಮೇಲೆ ಅವಲಂಬಿತವಾಗಿದೆ, ಪ್ರತಿಯೊಬ್ಬರಿಗೂ ಕೆಲಸ ಮಾಡಲು ಇದು ಲೈಟಿಂಗ್, ಚರ್ಮದ ಟೋನ್, ವಯಸ್ಸು ಮತ್ತು ಇನ್ನಷ್ಟು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.
Nest Hub ನಲ್ಲಿ ಸ್ಲೀಪ್ ಸೆನ್ಸಿಂಗ್
ಸ್ಲೀಪ್ ಸೆನ್ಸಿಂಗ್, ವ್ಯಕ್ತಿಯ ಚಲನೆ ಮತ್ತು ಉಸಿರಾಟದ ಆಧಾರದ ಮೇಲೆ ಡಿಸ್ಪ್ಲೇಗೆ ಹತ್ತಿರವಿರುವ ಆ ವ್ಯಕ್ತಿಯು ಹೇಗೆ ನಿದ್ರಿಸುತ್ತಿದ್ದಾರೆ ಎಂಬುದನ್ನು ವಿಶ್ಲೇಷಿಸಲು Motion Sense ಅನ್ನು ಬಳಸುತ್ತದೆ. ಸ್ಲೀಪ್ ಸೆನ್ಸಿಂಗ್ ಸಹಾಯದಿಂದ, ನಿದ್ರೆಗೆ ಅಡ್ಡಿಪಡಿಸುವ ಅಂಶಗಳನ್ನು ಸಹ ಪತ್ತೆಹಚ್ಚಬಹುದು, ಉದಾಹರಣೆಗೆ ಕೆಮ್ಮು, ಗೊರಕೆ, ಕೋಣೆಯ ಬೆಳಕು ಮತ್ತು ಉಷ್ಣಾಂಶ. ನಿಮ್ಮ ನಿದ್ರೆಯ ಮೇಲೆ ಯಾವ ಚಟುವಟಿಕೆಗಳು ಪರಿಣಾಮ ಬೀರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ.
ನಿಮ್ಮ ಗೌಪ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸ್ಲೀಪ್ ಸೆನ್ಸಿಂಗ್ ಅನ್ನು ನಿರ್ಮಿಸಲಾಗಿದೆ. Motion Sense ಚಲನೆಯನ್ನು ಮಾತ್ರ ಪತ್ತೆ ಮಾಡುತ್ತದೆ, ನಿರ್ದಿಷ್ಟ ಮುಖಗಳು ಅಥವಾ ದೇಹಗಳನ್ನು ಪತ್ತೆಮಾಡುವುದಿಲ್ಲ. ಹಾಗೂ, ನಿಮ್ಮ ಕೆಮ್ಮು ಅಥವಾ ಗೊರಕೆಯ ಆಡಿಯೊ ಡೇಟಾವನ್ನು ಮಾತ್ರ ಸಾಧನದಲ್ಲಿ ಪ್ರಕ್ರಿಯೆಗೊಳಿಸುತ್ತದೆ. ಮೈಕ್ರೊಫೋನ್ ಅನ್ನು ಭೌತಿಕವಾಗಿ ನಿಷ್ಕ್ರಿಯಗೊಳಿಸುವ ಹಾರ್ಡ್ವೇರ್ ಸ್ವಿಚ್ ಸೇರಿದಂತೆ ಸ್ಲೀಪ್ ಸೆನ್ಸಿಂಗ್ ಫೀಚರ್ಗಳನ್ನು ನಿಷ್ಕ್ರಿಯಗೊಳಿಸುವ ಹಲವಾರು ನಿಯಂತ್ರಣಗಳನ್ನು ನೀವು ಹೊಂದಿರುತ್ತೀರಿ. ನೀವು ಯಾವುದೇ ಸಮಯದಲ್ಲಿ ನಿದ್ರೆಯ ಡೇಟಾವನ್ನು ಪರಿಶೀಲಿಸಬಹುದು ಅಥವಾ ಅಳಿಸಬಹುದು ಹಾಗೂ ನಮ್ಮ ಗೌಪ್ಯತೆ ಬದ್ಧತೆಗಳಿಗೆ ಅನುಗುಣವಾಗಿ, ಅದನ್ನು ವೈಯಕ್ತೀಕರಿಸಿದ ಜಾಹೀರಾತುಗಳಿಗಾಗಿ ಬಳಸಲಾಗುವುದಿಲ್ಲ.
ಗೌಪ್ಯತೆ-ಸಂರಕ್ಷಿಸುವಿಕೆ ಸೆನ್ಸರ್ಗಳ ಸಹಾಯದಿಂದ ಹೊಸ ಒಳನೋಟಗಳನ್ನು ಪಡೆಯಲು ಹೊಸ ಸಂಶೋಧನೆ
ಹಣಕಾಸು ಕೊರತೆಯ ಪರಿಸ್ಥಿತಿಗಳಿಂದಾಗಿ ಅನೇಕ ಜನರು ಚಿಕ್ಕ ವಯಸ್ಸಿನಲ್ಲೇ ಹೃದಯ ಸಂಬಂಧಿ ಕಾಯಿಲೆಗಳಿಗೆ ಬಲಿಯಾಗುತ್ತಾರೆ. ಪ್ರಾರಂಭದಲ್ಲೇ ರೋಗವನ್ನು ಪತ್ತೆಹಚ್ಚುವುದು ಮತ್ತು ಚಿಕಿತ್ಸೆ ನೀಡುವುದು ಮುಖ್ಯ. ಹೆಚ್ಚಾಗಿ, ಅಪಾಯದ ಗಣನೆಯನ್ನು ನಿರ್ಣಯಿಸಲು ದೈಹಿಕ ಪರೀಕ್ಷೆ ಅಥವಾ ಪ್ರಯೋಗಾಲಯ ಪರೀಕ್ಷೆಯ ಅಗತ್ಯವಿರುತ್ತದೆ. ಆರೋಗ್ಯ ಸೇವೆಗಳು ಮತ್ತು ಸೌಲಭ್ಯಗಳ ಸೀಮಿತ ಲಭ್ಯತೆಯಿಂದಾಗಿ, ಇದು ಸವಾಲಾಗಬಹುದು. PPG ಸೆನ್ಸಿಂಗ್ ತಂತ್ರಜ್ಞಾನದ ಬಳಕೆಯ ಸಾಮರ್ಥ್ಯವನ್ನು ಪರಿಶೋಧಿಸಲು ನಾವು ಡೀಪ್ ಲರ್ನಿಂಗ್ PPG-ಆಧಾರಿತ ರಿಸ್ಕ್ ಸ್ಕೋರ್ ಎಂಬುದನ್ನು ಅಭಿವೃದ್ಧಿಪಡಿಸಿದ್ದೇವೆ. ನಮ್ಮ ಹಿಂದಿನ ಸಂಶೋಧನೆಯ ಸಹಾಯದಿಂದ, ಈ ತಂತ್ರಜ್ಞಾನವು ಹೆಚ್ಚಿನ ಸ್ಮಾರ್ಟ್ಫೋನ್ಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿದ್ದು ಹಾಗೂ ಕಡಿಮೆ ವೆಚ್ಚದಲ್ಲಿ ಹಲವಾರು ವಿಭಿನ್ನ ರೋಗಗಳ ಸ್ಕ್ರೀನಿಂಗ್ಗಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಈ ಸಂಶೋಧನೆಯು ಸೀಮಿತ-ಹಣಕಾಸಿನ ಪ್ರದೇಶಗಳಲ್ಲಿ ಸ್ಮಾರ್ಟ್ಫೋನ್-ಆಧಾರಿತ ಹೃದ್ರೋಗದ ಅಪಾಯದ ಮೌಲ್ಯಮಾಪನಗಳ ಸೌಲಭ್ಯದ ಮುಂದಿನ ವೈದ್ಯಕೀಯ ಮೌಲ್ಯಮಾಪನವನ್ನು ನಡೆಸಲು ತಂತ್ರಜ್ಞಾನದ ಅಡಿಪಾಯವನ್ನು ಹಾಕುತ್ತದೆ.