Google Health ನ ಆರೋಗ್ಯ ಸೇವಾ ತಂತ್ರಜ್ಞಾನ ಸುಧಾರಣೆಗಳ ಹಿಂದಿರುವ ತಜ್ಞರನ್ನು ಭೇಟಿ ಮಾಡಿ

ವೈಜ್ಞಾನಿಕ ಉತ್ಕೃಷ್ಟತೆ, ಮಾನವ-ಕೇಂದ್ರಿತ ತಂತ್ರಜ್ಞಾನಗಳು ಮತ್ತು ವಿಶ್ವಾಸಾರ್ಹ ಮೂಲ ಸೌಕರ್ಯದ ಮೂಲಕ ಆರೋಗ್ಯದ ಭವಿಷ್ಯವನ್ನು ಪರಿವರ್ತಿಸಲು ನಮ್ಮ ತಜ್ಞರ ತಂಡ ಬದ್ಧವಾಗಿದೆ. ನಮ್ಮ ತಂಡದಲ್ಲಿ ಇಂಜಿನಿಯರ್‌ಗಳು, ವೈದ್ಯರು, ಡಿಸೈನರ್‌ಗಳು, ಸಂಶೋಧಕರು ಮತ್ತು ಎಲ್ಲಾ ಪ್ರಕಾರಗಳ ತಜ್ಞರಿದ್ದಾರೆ ಹಾಗೂ ಅವರು ಉತ್ತಮ ಜೀವನ ಸಾಗಿಸಲು ಪ್ರತಿಯೊಬ್ಬರಿಗೂ ನೆರವಾಗಲು ಬದ್ಧರಾಗಿದ್ದಾರೆ. ನಮ್ಮ ಉತ್ಪನ್ನಗಳನ್ನು ನಾವು ಹೇಗೆ ನಿರ್ಮಿಸುತ್ತೇವೆ ಎಂಬುದರಿಂದ ನಮ್ಮ ಕಾರ್ಯಪಡೆಯನ್ನು ಹೇಗೆ ರೂಪಿಸುತ್ತೇವೆ ಎಂಬುದರವರೆಗೆ—ನಮ್ಮ ನಿರ್ಧಾರಗಳ ಮೂಲದಲ್ಲಿ ವೈವಿಧ್ಯತೆ, ಸಮಾನತೆ ಮತ್ತು ಸಹಿಷ್ಣುತೆಯೆಡೆಗಿನ ನಮ್ಮ ಸಮರ್ಪಣೆಯಿದೆ.

ವಿಶ್ವ ಭೂಪಟದ ಚುಕ್ಕೆ ಚಿತ್ರಣ

ಆರೋಗ್ಯ ಪರಿಣಿತಿಯ ಬೆಂಬಲವಿದೆ

ಎಲ್ಲಾ Google Health ಉಪಕ್ರಮಗಳನ್ನು — ಹೊಸ ಉತ್ಪನ್ನಗಳಿಂದ ಹಿಡಿದು ಸಂಶೋಧನೆಯವರೆಗೆ — ಎಲ್ಲವನ್ನೂ ಅಯಾ ಕ್ಷೇತ್ರಗಳಲ್ಲಿ ಪರಿಣಿತರಾಗಿರುವ ಕ್ಲಿನಿಶಿಯನ್‌ಗಳ ಜೊತೆಗಿನ ನಿಕಟ ಸಹಯೋಗದೊಂದಿಗೆ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಲಾಗಿದೆ. ನಮ್ಮ ತಂಡದ ಅನುಭವ ಮತ್ತು ಪರಿಣಿತಿಯು ದಶಕಗಳ ವೈದ್ಯಕೀಯ ಅಭ್ಯಾಸ, ಸಾರ್ವಜನಿಕ ಆರೋಗ್ಯ, ಆರೋಗ್ಯ ಅರ್ಥಶಾಸ್ತ್ರದ ಸಂಶೋಧನೆ ಮತ್ತು ವೈದ್ಯಕೀಯದಲ್ಲಿ AI ಹಾಗೂ ಮಷಿನ್ ಲರ್ನಿಂಗ್‌ನ ಬಳಕೆಯನ್ನು ಒಳಗೊಂಡಿದೆ — ಆ ಮೂಲಕ Google Health ಉಪಕ್ರಮಗಳು ಸರ್ವೋಚ್ಛ ವೈದ್ಯಕೀಯ ಪ್ರಮಾಣಗಳನ್ನು ಪಾಲಿಸುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.

ಡಾ. ಕೆರೇನ್ ಡಿಸಾಲ್ವೊರವರ ಫೋಟೋ
ಡಾ. ಕೆರೇನ್ ಡಿಸಾಲ್ವೊರವರ ಫೋಟೋ

ಡಾ. ಕೆರೇನ್ ಡಿಸಾಲ್ವೊ

ಮುಖ್ಯ ಆರೋಗ್ಯ ಅಧಿಕಾರಿಗಳು

ಡಾ. ಕೆರೇನ್ ಡಿಸಾಲ್ವೊರವರು ವೈದ್ಯಕೀಯ, ಸಾರ್ವಜನಿಕ ಆರೋಗ್ಯ ಮತ್ತು ಮಾಹಿತಿ ತಂತ್ರಜ್ಞಾನದ ಛೇದಕದಲ್ಲಿ ಕೆಲಸ ಮಾಡುವ ವೈದ್ಯ ಕಾರ್ಯನಿರ್ವಾಹಕರಾಗಿದ್ದು, ಅವರ ವೃತ್ತಿಜೀವನವು ಆರೋಗ್ಯವನ್ನು ಸುಧಾರಿಸುವುದರ ಮೇಲೆ ಮತ್ತು ಅಸಮಾನತೆಗಳನ್ನು ತೆಗೆದುಹಾಕುವುದರ ಮೇಲೆ ಗಮನ ಕೇಂದ್ರೀಕರಿಸಿದೆ. ಅವರು Google ನಲ್ಲಿ ಆರೋಗ್ಯ ವೃತ್ತಿಪರರ ತಂಡವನ್ನು ಮುನ್ನಡೆಸುತ್ತಾರೆ, ಅವರು ಸೇರ್ಪಡೆಯ ಸಂಶೋಧನೆ, ಉತ್ಪನ್ನಗಳು ಮತ್ತು ಸೇವೆಗಳ ಅಭಿವೃದ್ಧಿಗೆ ಮಾರ್ಗದರ್ಶನ ನೀಡುತ್ತಾರೆ. ಅವರು Google COVID ಪ್ರತಿಕ್ರಿಯೆ ತಂಡದ ಭಾಗವಾಗಿದ್ದಾರೆ. Google ಗೆ ಸೇರುವ ಮೊದಲು, ಡಾ. ಡಿಸಾಲ್ವೊ ಅವರು ಆರೋಗ್ಯ ಮಾಹಿತಿ ತಂತ್ರಜ್ಞಾನದ ರಾಷ್ಟ್ರೀಯ ಸಂಯೋಜಕರಾಗಿದ್ದರು ಮತ್ತು ಒಬಾಮಾ ಆಡಳಿತದಲ್ಲಿ ಆರೋಗ್ಯ (ಕಾರ್ಯನಿರ್ವಹಿಸುವಿಕೆ) ಸಹಾಯಕ ಕಾರ್ಯದರ್ಶಿಯಾಗಿದ್ದರು. ಯುಎಸ್ ಆರೋಗ್ಯ ಮತ್ತು ಮಾನವ ಸೇವೆಗಳ ವಿಭಾಗದಲ್ಲಿ ಸೇವೆ ಸಲ್ಲಿಸುವ ಅವಧಿಯಲ್ಲಿ, ಡಾ. ಡಿಸಾಲ್ವೊ ಹೆಚ್ಚು ಗ್ರಾಹಕ-ಆಧಾರಿತ, ಪಾರದರ್ಶಕ ಮತ್ತು ಮೌಲ್ಯ-ಆಧಾರಿತ ಆರೋಗ್ಯ ವ್ಯವಸ್ಥೆಯನ್ನು ರಚಿಸುವತ್ತ ಗಮನಹರಿಸಿದ್ದಾರೆ. ಡಾ. ಡಿಸಾಲ್ವೊ ಕತ್ರಿನಾ ಚಂಡಮಾರುತದ ನಂತರ ನ್ಯೂ ಓರ್ಲಿಯನ್ಸ್ ಆರೋಗ್ಯ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಈ ಹಿಂದೆ ಟುಲೇನ್ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಸಮುದಾಯ ವ್ಯವಹಾರಗಳು ಮತ್ತು ಆರೋಗ್ಯ ನೀತಿಯ ವೈಸ್ ಡೀನ್ ಆಗಿದ್ದರು, ಅಲ್ಲಿ ಅವರು ಆಂತರಿಕ ಮೆಡಿಸಿನ್‌ನ ವೈದ್ಯರು, ಶಿಕ್ಷಣತಜ್ಞರು, ಸಂಶೋಧಕರು ಮತ್ತು ನಾಯಕರಾಗಿದ್ದರು. ಅವರು ನ್ಯಾಷನಲ್ ಅಕಾಡೆಮಿ ಆಫ್ ಮೆಡಿಸಿನ್ ಕೌನ್ಸಿಲ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಡಾ. ಮೈಕೆಲ್ ಹೋವೆಲ್

ಡಾ. ಮೈಕೆಲ್ ಹೋವೆಲ್

ಮುಖ್ಯ ವೈದ್ಯಕೀಯ ಅಧಿಕಾರಿ ಮತ್ತು ಉಪ ಮುಖ್ಯ ಆರೋಗ್ಯ ಅಧಿಕಾರಿ

ಆರೋಗ್ಯವನ್ನು ಸುಧಾರಿಸಲು ತಂತ್ರಜ್ಞಾನವು ಯಾವ ರೀತಿ ಸಹಾಯ ಮಾಡಬಹುದೆಂಬ ವಿಷಯವೂ ಸೇರಿದ ಹಾಗೆ, ಆರೈಕೆಯ ಗುಣಮಟ್ಟ, ಸುರಕ್ಷತೆ ಹಾಗೂ ಅನುಭವವನ್ನು ಸುಧಾರಿಸುವುದರ ಕುರಿತಾಗಿ ಡಾ. ಮೈಕೆಲ್ ಹೋವೆಲ್ ಅವರ ವೃತ್ತಿಜೀವನವು ಗಮನ ಕೇಂದ್ರೀಕರಿಸುತ್ತದೆ. ಇವರು, ಆರೋಗ್ಯಸೇವೆ ವಿತರಣೆ ವಿಜ್ಞಾನದಲ್ಲಿ ರಾಷ್ಟ್ರೀಯವಾಗಿ ಗುರುತಿಸಿಕೊಂಡಿರುವ ತಜ್ಞರಾಗಿದ್ದಾರೆ, ಮಾತ್ರವಲ್ಲದೆ ರೋಗ ನಿಯಂತ್ರಣ ಕೇಂದ್ರಗಳು, ಮೆಡಿಕೇರ್ ಹಾಗೂ ನ್ಯಾಷನಲ್ ಅಕಾಡೆಮಿ ಆಫ್ ಮೆಡಿಸಿನ್‌ಗಳ ಸಲಹಾ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇತರ ಸಂಶೋಧನಕಾರರು 10,000 ಕ್ಕೂ ಹೆಚ್ಚು ಬಾರಿ ಉಲ್ಲೇಖಿಸಿರುವ ಇವರ ಬರಹಗಳು ಈ ಕ್ಷೇತ್ರದ ಮೇಲೆ ಪರಿಣಾಮ ಬೀರಿವೆ ಮತ್ತು ಅನೇಕ ರಾಷ್ಟ್ರೀಯ ಮಾರ್ಗಸೂಚಿಗಳಲ್ಲಿ ಇವುಗಳನ್ನು ಅಳವಡಿಸಿಕೊಳ್ಳಲಾಗಿದೆ. ಶ್ವಾಸಕೋಶ ಹಾಗೂ ತೀವ್ರ ನಿಗಾ ವೈದ್ಯರಾಗಿರುವ ಇವರು, ಹಾರ್ವರ್ಡ್ ಹಾಗೂ ಯುನಿವರ್ಸಿಟಿ ಆಫ್ ಶಿಕಾಗೋದಲ್ಲಿ ಚೀಫ್ ಕ್ವಾಲಿಟಿ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಾ ರೋಗಿಗಳ ಆರೈಕೆಯಲ್ಲಿ ಹಲವು ವರ್ಷಗಳನ್ನು ಕಳೆದಿದ್ದಾರೆ.

ಬಕುಲ್ ಪಟೇಲ್

ಬಕುಲ್ ಪಟೇಲ್

ಹಿರಿಯ ನಿರ್ದೇಶಕರು, ಗ್ಲೋಬಲ್ ಡಿಜಿಟಲ್ ಆರೋಗ್ಯ ಕಾರ್ಯತಂತ್ರ ಮತ್ತು ನಿಯಂತ್ರಣ

ಬದಲಾಗುತ್ತಿರುವ ಜಾಗತಿಕ ನಿಯಂತ್ರಕ ಅಗತ್ಯಗಳನ್ನು ಪೂರೈಸುವ ಏಕೀಕೃತ ಡಿಜಿಟಲ್ ಆರೋಗ್ಯ ಕಾರ್ಯತಂತ್ರವನ್ನು ರೂಪಿಸುವತ್ತ ಬಕುಲ್ ಪಟೇಲ್ ಅವರು ಗಮನಹರಿಸಿದ್ದಾರೆ. ಶ್ರೀಯುತ ಪಟೇಲ್ ಅವರ ದೃಷ್ಟಿಕೋನವು, ತಂತ್ರಜ್ಞಾನದ ಸಾಮರ್ಥ್ಯದ ಕುರಿತು ಅರಿತುಕೊಳ್ಳಲು ಹಾಗೂ ಉತ್ತಮ ಗುಣಮಟ್ಟದ, ಸಮಾನ ಆರೋಗ್ಯ ರಕ್ಷಣೆಗೆ ಆ್ಯಕ್ಸೆಸ್ ಅನ್ನು ಎಲ್ಲರಿಗೂ ಒದಗಿಸುವ ನಿಟ್ಟಿನಲ್ಲಿ ಅದರ ಪಾತ್ರವನ್ನು ಅರ್ಥಮಾಡಿಸಲು ಸಹಾಯ ಮಾಡುವುದಾಗಿದೆ. ಶ್ರೀಯುತ ಪಟೇಲ್ ಅವರು Google ಗೆ ಸೇರುವ ಮೊದಲು, ಯುನೈಟೆಡ್ ಸ್ಟೇಟ್ಸ್ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್‌ನಲ್ಲಿ (FDA) ಜಾಗತಿಕ ಕಾರ್ಯತಂತ್ರ ಮತ್ತು ನಾವೀನ್ಯತೆಯ ಮುಖ್ಯ ಡಿಜಿಟಲ್ ಆರೋಗ್ಯ ಅಧಿಕಾರಿಯಾಗಿ ಹಾಗೂ ಡಿಜಿಟಲ್ ಹೆಲ್ತ್ ಸೆಂಟರ್ ಆಫ್ ಎಕ್ಸಲೆನ್ಸ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಈ ಪಾತ್ರಗಳಲ್ಲಿ, ಅವರು ಚಿಂತನೆಯ ನಾಯಕತ್ವ ಮತ್ತು ಪರಿಣತಿ ಅನುಭವವನ್ನು ಒದಗಿಸಿದರು. ಅಲ್ಲದೆ, ಡಿಜಿಟಲ್ ಆರೋಗ್ಯಕ್ಕಾಗಿ ಅಗತ್ಯ ನಿಯಮಗಳು ಮತ್ತು ನಿಬಂಧನೆಗಳನ್ನು ರೂಪಿಸಿದ್ದಾರೆ. ಶ್ರೀಯುತ ಪಟೇಲ್ ಅವರು, \"ಸಾಫ್ಟ್‌ವೇರ್ ಎಂಬುದು ವೈದ್ಯಕೀಯ ಸಾಧನ\" (SaMD) ಎಂಬ ಪದವನ್ನು ರಚಿಸಿದರು ಹಾಗೂ ಜಾಗತಿಕವಾಗಿ ವೈದ್ಯಕೀಯ ಸಾಧನ ನಿಯಂತ್ರಕರಿಗೆ ರಿಸ್ಕ್ ಫ್ರೇಮ್‌ವರ್ಕ್ ಅನ್ನು ರೂಪಿಸಿದರು. ಅವರು, ಸಾಫ್ಟ್‌ವೇರ್ ಪ್ರೀ-ಸರ್ಟಿಫಿಕೇಶನ್ ಪೈಲಟ್ ಪ್ರೋಗ್ರಾಂ ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್/ಮಷಿನ್ ಲರ್ನಿಂಗ್ (AI/ML) ಆಧಾರಿತ ಸಾಫ್ಟ್‌ವೇರ್‌ ಅನ್ನು ವಿನ್ಯಾಸಗೊಳಿಸಿದ್ದರು.

ಲಾರಾ ಗಾರ್ಸಿಯಾ

ಲಾರಾ ಗಾರ್ಸಿಯಾ

ಆರೋಗ್ಯ ಅನುಸರಣೆ ತಂತ್ರ ಮತ್ತು ವ್ಯಾಪಾರ ಪರಿಹಾರಗಳ ಮುಖ್ಯಸ್ಥರು

ಲಾರಾ ಅವರು ಆರೋಗ್ಯ ಅನುಸರಣೆಯ ಮುಂದಾಳುವಾಗಿದ್ದಾರೆ ಮತ್ತು ಆರೋಗ್ಯ ಹಾಗೂ ಅನುಸರಣೆಯ ಕ್ಷೇತ್ರದಲ್ಲಿ 15 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ. Google ನಲ್ಲಿ ಸೇರಿಕೊಳ್ಳುವ ಮೊದಲು, ಅವರು ಟಾಪ್ ಫಾರ್ಚೂನ್ 500 ಆರೋಗ್ಯ ಕಂಪನಿಗಳಲ್ಲಿ ಹಿರಿಯ ಅನುಸರಣೆ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ನವೀನ ಅನುಸರಣೆ ಕಾರ್ಯಕ್ರಮಗಳ ವಿನ್ಯಾಸ ಮತ್ತು ಕಾರ್ಯಗತಗೊಳಿಸುವ ಮೂಲಕ ವಿಶ್ವಾಸ ಮತ್ತು ಸಮಗ್ರತೆಯನ್ನು ಉತ್ತೇಜಿಸಲು ಮೀಸಲಾಗಿರುವ ಅಂತರರಾಷ್ಟ್ರೀಯ ತಂಡಗಳನ್ನು ಅವರು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಲಾರಾ ಅವರು ಸಿಲಿಕಾನ್ ವ್ಯಾಲಿಯಲ್ಲಿ ಎರಡು ಆರಂಭಿಕ ಹಂತದ ಹೆಲ್ತ್‌ಕೇರ್ ಸ್ಟಾರ್ಟ್‌ಅಪ್‌ಗಳಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಲಾರಾ ಅವರು ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪಬ್ಲಿಕ್ ಹೆಲ್ತ್ ಕುರಿತು ಸ್ನಾತಕೋತ್ತರ ಪದವಿ ಪಡೆದರು ಹಾಗೂ ಸ್ಯಾನ್ ಡಿಯಾಗೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಮೈಕ್ರೋಬಯಾಲಜಿ ಕುರಿತಾಗಿ ಬ್ಯಾಚುಲರ್ ಆಫ್ ಸೈನ್ಸ್ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು.

ಡಾ. ಸೋಹಿನಿ ಸ್ಟೋನ್

ಮುಖ್ಯ ವೈದ್ಯಕೀಯ ಅಧಿಕಾರಿ, ಗ್ಲೋಬಲ್ ಎಂಪ್ಲಾಯೀ ಹೆಲ್ತ್

ಡಾ. ಸೋಹಿನಿ ಸ್ಟೋನ್, MD, MBA, Google ನಲ್ಲಿ ಗ್ಲೋಬಲ್ ಎಂಪ್ಲಾಯೀ ಹೆಲ್ತ್ ತಂಡವನ್ನು ಮುನ್ನಡೆಸುತ್ತಿದ್ದಾರೆ, Google ನ ಉದ್ಯೋಗಿಗಳ, ಅವರ ಕುಟುಂಬ ಸದಸ್ಯರ ಮತ್ತು ಅವರ ಸುತ್ತಲಿನ ಸಮುದಾಯ, ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆರೋಗ್ಯದ ಕ್ಷೇತ್ರಗಳಲ್ಲಿ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ಸಮಾನ, ಸಾಕ್ಷ್ಯ ಆಧಾರಿತ ಪ್ರೋಗ್ರಾಂಗಳು ಮತ್ತು ಸೇವೆಗಳ ಸಮಗ್ರ ಪೋರ್ಟ್‌ಫೋಲಿಯೊವನ್ನು ಒದಗಿಸಲು ಕ್ರಾಸ್-ಕಂಪನಿ ಸ್ಟ್ರ್ಯಾಟಜಿಯ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ಡಾ. ಸ್ಟೋನ್ ಅವರು ಗುಣಮಟ್ಟ, ರೋಗಿಗಳ ಸುರಕ್ಷತೆ ಮತ್ತು ಪ್ರಕ್ರಿಯೆ ಸುಧಾರಣೆಯ ಕುರಿತು ಉತ್ತಮ ಹಿನ್ನೆಲೆಯನ್ನು ಹೊಂದಿದ್ದಾರೆ. Google ಗೆ ಸೇರಿಕೊಳ್ಳುವ ಮೊದಲು, ಅವರು ಸಿಲಿಕಾನ್ ವ್ಯಾಲಿ ಹೆಲ್ತ್ ಸ್ಟಾರ್ಟ್-ಅಪ್‌ನ ಕೊನೆಯ ಹಂತದಲ್ಲಿ ಕ್ಲಿನಿಕಲ್, ಗುಣಮಟ್ಟ ಮತ್ತು ವ್ಯಾಪಾರ ವಿಶ್ಲೇಷಣೆಗಳ ತಂಡಗಳನ್ನು ಮುನ್ನಡೆಸಿದ್ದರು. ಡಾ. ಸ್ಟೋನ್ ಅವರು ಬೋಸ್ಟನ್ ವಿಶ್ವವಿದ್ಯಾನಿಲಯದಿಂದ ತಮ್ಮ ವೈದ್ಯಕೀಯ ಪದವಿ ಮತ್ತು ವ್ಯಾಪಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ, ಡಾರ್ಟ್‌ಮೌತ್ ವೈದ್ಯಕೀಯ ಶಾಲೆಯಲ್ಲಿ ಪೀಡಿಯಾಟ್ರಿಕ್ಸ್ ರೆಸಿಡೆನ್ಸಿಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ಸ್ಟ್ಯಾನ್‌ಫೋರ್ಡ್/ಲುಸಿಲ್ ಪ್ಯಾಕರ್ಡ್ ಮಕ್ಕಳ ಆಸ್ಪತ್ರೆಯಲ್ಲಿ ನಿಯೋನಾಟಲ್-ಪೆರಿನಾಟಲ್ ಮೆಡಿಸಿನ್ ಫೆಲೋಶಿಪ್ ಪಡೆದಿದ್ದಾರೆ.

ಆ್ಯಮಿ ಮೆಕ್‌ಡೊನಹ್

ಮ್ಯಾನೇಜಿಂಗ್ ಡೈರೆಕ್ಟರ್, ಸ್ಟ್ರ್ಯಾಟೆಜಿಕ್ ಹೆಲ್ತ್ ಸಲ್ಯೂಷನ್ಸ್‌

ಆ್ಯಮಿ ಅವರು ನಾವೀನ್ಯತೆಯನ್ನು ವೇಗಗೊಳಿಸುವ ಮತ್ತು ಬೃಹತ್ ಪ್ರಮಾಣದಲ್ಲಿ ಆರೋಗ್ಯದ ಪ್ರಭಾವವನ್ನು ಹೆಚ್ಚಿಸುವ ಪರಿಹಾರಗಳನ್ನು ಸಹಯೋಗದಲ್ಲಿ-ರಚಿಸುವುದಕ್ಕೆ ಸಂಬಂಧಿಸಿದ ಪಾಲುದಾರಿಕೆಗಳ ಶಕ್ತಿಯ ಬಗ್ಗೆ ಉತ್ಸುಕರಾಗಿದ್ದಾರೆ. ಸ್ಟ್ರ್ಯಾಟೆಜಿಕ್ ಹೆಲ್ತ್ ಸಲ್ಯೂಷನ್ಸ್‌ ತಂಡವು ನಮ್ಮ ಪ್ರಾಡಕ್ಟ್ ರೋಡ್‌ಮ್ಯಾಪ್‌ಗಳಿಗೆ ಉದ್ಯಮದ ಒಳನೋಟ ಮತ್ತು ಬುದ್ದಿವಂತಿಕೆಯನ್ನು ಜೊತೆಗೂಡಿಸಿದ್ದು, ವಿಶ್ವದಾದ್ಯಂತದ ಕೋಟ್ಯಾಂತರ ಜನರ ಅರೋಗ್ಯವನ್ನು ಸುಧಾರಿಸಲು Google ನ ತಂತ್ರಜ್ಞಾನ ಮತ್ತು ಟೂಲ್‌ಗಳ ಅತ್ಯುನ್ನತ ಮತ್ತು ಅತ್ಯುತ್ತಮ ಬಳಕೆಯನ್ನು ಖಚಿತಪಡಿಸುತ್ತದೆ. ಫಿಟ್‌ಬಿಟ್ ಹೆಲ್ತ್ ಸಲ್ಯೂಷನ್ಸ್‌ ತಂಡವು ಆ್ಯಮಿ ರಚಿಸಿದ ಬಲವಾದ ಅಡಿಪಾಯದ ಮೇಲೆ SHS ಪರಿಹಾರಗಳನ್ನು ನಿರ್ಮಿಸುತ್ತಿದ್ದು, ಅದು ಆರೈಕೆ ಮತ್ತು ಪರಿಣಾಮದ ಫಲಿತಾಂಶಗಳನ್ನು ಸುಧಾರಿಸಲು ಆರೋಗ್ಯ ಪರಿಸರ ವ್ಯವಸ್ಥೆಯೊಂದಿಗೆ ಪಾಲುದಾರಿಕೆ ಹೊಂದಿದೆ. Fitbit ಗೂ ಮೊದಲು ಆ್ಯಮಿ ಅವರು, ಕಾರ್ಯತಂತ್ರ ಪಾಲುದಾರಿಕೆಗಳು ಹಾಗೂ ಪ್ರೇಕ್ಷಕರು ಮತ್ತು ಕಂಟೆಂಟ್ ಅಭಿವೃದ್ಧಿಯ ಕುರಿತು ಗಮನ ಕೇಂದ್ರೀಕರಿಸುವ CNET Networks ನಲ್ಲಿ ಕಾರ್ಯತಂತ್ರ ರೂಪಿಸುವ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಆ್ಯಮಿ ಅವರು, ಮಸಾಚುಸೆಟ್ಸ್‌ನ ನಾರ್ಥ್ ಆಂಡೋವರ್‌ನ ಮೆರಿಮ್ಯಾಕ್ ಕಾಲೀಜಿನಿಂದ ಪದವಿ ಪಡೆದಿದ್ದಾರೆ. ಜೊತೆಗೆ, UC ಬಾರ್ಕ್ಲೆ ಇಂದ ಇಂಟೆಗ್ರೇಟೆಡ್ ಮಾರ್ಕೆಟಿಂಗ್ ಕಮ್ಯುನಿಕೇಷನ್ಸ್ ವಿಷಯದಲ್ಲಿ ಪ್ರೊಫೆಶನಲ್ ಸರ್ಟಿಫಿಕೇಟ್ ಪಡೆದಿದ್ದಾರೆ.

ಡಾ. ಹೆದರ್ ಕೋಲ್-ಲೂಯಿಸ್

ಹೆಲ್ತ್ ಈಕ್ವಿಟಿಯ ಗ್ಲೋಬಲ್ ಹೆಡ್

ಹೆದರ್ ಕೋಲ್-ಲೂಯಿಸ್, PhD, MPH, MA ಅವರು 2022 ರಿಂದ Google ನಲ್ಲಿ ಹೆಲ್ತ್ ಈಕ್ವಿಟಿಯ ಲೀಡರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಕೋಲ್-ಲೂಯಿಸ್ ಅವರು ಡಿಜಿಟಲ್ ಹೆಲ್ತ್ ಮತ್ತು ಜವಾಬ್ದಾರಿಯುತ AI ಕ್ಷೇತ್ರದಲ್ಲಿ ಪರಿಣಿತರಾಗಿದ್ದಾರೆ, ಜನರು ಹಾಗೂ ಅವರ ಸ್ಥಿತಿಗತಿಗಳ ಕುರಿತು ಆಳವಾಗಿ ತಿಳಿದುಕೊಳ್ಳುವ ಮೂಲಕ ಜೀವನವನ್ನು ಸುಧಾರಿಸುವ ನಿಟ್ಟಿನಲ್ಲಿ ಬದ್ಧತೆಯನ್ನು ಹೊಂದಿದ್ದಾರೆ. ಪ್ರಾಯೋಗಿಕ ಸಂಶೋಧನೆ ಮತ್ತು ಉತ್ಪನ್ನ ಅಭಿವೃದ್ಧಿಯಲ್ಲಿನ ತಮ್ಮ ಪರಿಣತಿಯೊಂದಿಗೆ, ಹೊಸ ಆವಿಷ್ಕಾರಗಳನ್ನು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಅವರು ಸಾಮಾಜಿಕ ವಿಜ್ಞಾನ, ಮಾನವ-ಕಂಪ್ಯೂಟರ್ ನಡುವಿನ ಸಂವಹನ ಮತ್ತು ಡೇಟಾ ಸೈನ್ಸ್‌ನ ಕಾರ್ಯವಿಧಾನಗಳನ್ನು ಸಂಯೋಜಿಸುತ್ತಾರೆ. ಅವರು ಟೆಕ್, ಫಾರ್ಮಾ, ಹೆಚ್ಚು ಬಳಕೆ ಮಾಡುವ ಗ್ರಾಹಕ ಸಂಬಂಧಿ ಸರಕುಗಳು, ಸ್ಟಾರ್ಟ್‌ಅಪ್‌ಗಳು, ಸಾರ್ವಜನಿಕ ವಲಯದ ಸಮಾಲೋಚನೆ ಮತ್ತು ಗ್ಲೋಬಲ್ ಹೆಲ್ತ್ ಡೆವಲಪ್‌ಮೆಂಟ್ ಸೇರಿದಂತೆ ಹಲವು ವಲಯಗಳಲ್ಲಿ ಆರೋಗ್ಯಸೇವಾ ತಂತ್ರಜ್ಞಾನ ಮತ್ತು AI ಉಪಕ್ರಮಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. Google ನಲ್ಲಿ ವೃತ್ತಿ ಪ್ರಾರಂಭಿಸುವ ಮುನ್ನ, ಡಾ. ಕೋಲ್-ಲೂಯಿಸ್ ಅವರು Johnson & Johnson ಸಂಸ್ಥೆಯಲ್ಲಿ ಬಿಹೇವಿಯರ್ ಸೈನ್ಸ್ ವಿಭಾಗದ ನಿರ್ದೇಶಕರು ಮತ್ತು ಹೆಲ್ತ್ ಈಕ್ವಿಟಿ ಹೂಡಿಕೆಗಳ ವಿಭಾಗದ ಗ್ಲೋಬಲ್ ಲೀಡ್ ಆಗಿ ಸೇವೆ ಸಲ್ಲಿಸಿದ್ದಾರೆ. ಅವರು ಯಾಲೆ ಯುನಿವರ್ಸಿಟಿಯಿಂದ ಕ್ರಾನಿಕ್ ಡಿಸೀಸ್ ಎಪಿಡೆಮಿಯಾಲಜಿಯಲ್ಲಿ PhD, ಎಮೋರಿ ಯುನಿವರ್ಸಿಟಿಯಿಂದ ಬಿಹೇವಿಯರ್ ಸೈನ್ಸ್‌ನಲ್ಲಿ MPH ಮತ್ತು ಕೊಲಂಬಿಯಾ ಯುನಿವರ್ಸಿಟಿಯಿಂದ ಬಯೋಮೆಡಿಕಲ್ ಇನ್‌ಫರ್ಮ್ಯಾಟಿಕ್ಸ್‌ನಲ್ಲಿ MA ಪದವಿಗಳನ್ನು ಪಡೆದುಕೊಂಡಿದ್ದಾರೆ.

ಸಂಶೋಧನೆ, ಪ್ರಯೋಗ ಮತ್ತು ಅನ್ವೇಷಣೆಯ ಮೂಲಕ ವಿನೂತನ ಕಲ್ಪನೆ

ಪರಿವರ್ತನಾತ್ಮಕ ಆರೋಗ್ಯಸೇವಾ ತಂತ್ರಜ್ಞಾನಗಳು ಅತ್ಯದ್ಭುತವಾದ ಟ್ರಾನ್ಸ್‌ಲೇಶನಲ್ ಸಂಶೋಧನೆಯ ಮೇಲೆ ಅವಲಂಬಿತವಾಗಿದೆ. Google Health ನಲ್ಲಿ ನಾವು ಎಂಬೆಡ್ ಮಾಡಿದ ಸಂಶೋಧನೆ ಮತ್ತು ಅಭಿವೃದ್ಧಿಯ ಮಾದರಿಯನ್ನು ಸ್ವೀಕರಿಸಿದ್ದೇವೆ, ಅಲ್ಲಿ ವಿಜ್ಞಾನಿಗಳು ಉತ್ಪನ್ನ ಮತ್ತು ಇಂಜಿನಿಯರಿಂಗ್ ತಂಡಗಳ ಜೊತೆಗೆ ಸುಭದ್ರ ಏಕೀಕರಣದಲ್ಲಿ ಕೆಲಸ ಮಾಡುತ್ತಾರೆ. ನಮ್ಮ ಅಂತರ್ಯದಲ್ಲಿ ಸಹಯೋಗದ ಮತ್ತು ಬಹುಶಿಸ್ತೀಯ ವಿಧಾನವು ವೈವಿಧ್ಯಮಯ ಹಿನ್ನೆಲೆ ಮತ್ತು ಪರಿಣತಿಯಿರುವ ಸಂಶೋಧಕರಿಗೆ ಸ್ವಾಭಾವಿಕವಾಗಿ ಹೊಂದಾಣಿಕೆಯಾಗುತ್ತದೆ, ವೈದ್ಯಕೀಯ ವಿಜ್ಞಾನ, ಕೃತಕ ಬುದ್ಧಿಮತ್ತೆ, ಇನ್‌ಫಾರ್ಮ್ಯಾಟಿಕ್ಸ್ ಮತ್ತು ಬಳಕೆದಾರ ಕೇಂದ್ರಿತ ವಿನ್ಯಾಸದ ಗಡಿಗಳನ್ನು ದಾಟಲು ಸಾಧ್ಯವಾಗುತ್ತದೆ.

ಡಾ. ಜೋ ಲೆಡ್‌ಸ್ಯಾಮ್ ಅವರ ಫೋಟೋ

ಡಾ. ಜೋ ಲೆಡ್‌ಸಮ್

ಕ್ಲಿನಿಕಲ್ ಲೀಡ್, ಜಪಾನ್

ಜಪಾನ್‌ನಲ್ಲಿ Google Health ಅನ್ನು ಮುನ್ನಡೆಸುತ್ತಿರುವ ಡಾ. ಜೋ ಲೆಡ್‌ಸ್ಯಾಮ್ ಅವರು, Google ಉತ್ಪನ್ನಗಳಲ್ಲಿ AI ಸಂಶೋಧನೆ, ಡಿಜಿಟಲ್ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದ್ದಾರೆ. ನೇಚರ್, ನೇಚರ್ ಮೆಡಿಸಿನ್ ಮತ್ತು ನೇಚರ್ ಮೆಥಡ್ಸ್ ಇತ್ಯಾದಿ ಜರ್ನಲ್‌ಗಳಲ್ಲಿ ಪ್ರಕಟವಾದ ವೈದ್ಯಕೀಯ AI, ಜೀನೋಮಿಕ್ಸ್ ಮತ್ತು ಔಷಧ ಅನ್ವೇಷಣೆ ವಿಭಾಗದಲ್ಲಿನ ಸಂಶೋಧನೆಯನ್ನು ಅವರು ಮುನ್ನಡೆಸಿದ್ದಾರೆ. ಜಪಾನ್‌ಗೆ ಬರುವ ಮೊದಲು, ಅವರು DeepMind ಹೆಲ್ತ್ ರಿಸರ್ಚ್ ತಂಡವನ್ನು ಕಟ್ಟುವಲ್ಲಿ ತೊಡಗಿಸಿಕೊಂಡಿದ್ದರು ಮತ್ತು Google DeepMind ನಲ್ಲಿ ಜಿನೋಮಿಕ್ಸ್ ತಂಡವನ್ನು ರಚಿಸಿ, ಮುನ್ನಡೆಸಿದ್ದಾರೆ. ಅವರು UK ಯ ಲೀಡ್ಸ್ ವಿಶ್ವವಿದ್ಯಾಲಯದಿಂದ ತಮ್ಮ ವೈದ್ಯಕೀಯ ಪದವಿಯನ್ನು ಪಡೆದಿದ್ದು, ಈ ವೇಳೆ ಜಪಾನ್‌ನ ಹಲವು ಆಸ್ಪತ್ರೆಗಳ ಜೊತೆಗೆ ಸಂಶೋಧನಾ ಸಹಭಾಗಿತ್ವವನ್ನು ಸಾಧಿಸಿದ್ದಾರೆ. ಅಷ್ಟೇ ಅಲ್ಲ, ವೈದ್ಯಕೀಯ ತರಬೇತಿಯ ಸಮಯದಲ್ಲಿ, ಯೂನಿವರ್ಸಿಟಿ ಕಾಲೇಜ್ ಲಂಡನ್‌ನಲ್ಲಿ ಸಂಶೋಧನಾ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದರು.

ಡಾ. ಯುವನ್ ಲಿಯುರವರ ಫೋಟೋ

ಡಾ. ಯುವಾನ್ ಲಿಯು

ಸಾಫ್ಟ್‌ವೇರ್ ಇಂಜಿನಿಯರ್

ಡಾ. ಯುವಾನ್ ಲಿಯು ಅವರು Google Health ನಲ್ಲಿ ಡರ್ಮಟಾಲಜಿ ತಂಡದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ. ಪ್ರಪಂಚದಾದ್ಯಂತ ಎಲ್ಲರಿಗೂ ನಿಖರವಾದ ಮಾಹಿತಿ ಹಾಗೂ ಆರೋಗ್ಯ ಸೇವೆಯ ಲಭ್ಯತೆಯನ್ನು ಉತ್ತಮಪಡಿಸಲು AI ಅಸಿಸ್ಟೆಂಟ್ ಪರಿಕರಗಳನ್ನು ನಿರ್ಮಿಸುವ ಗುರಿಯೊಂದಿಗೆ ಅವರು, ಡರ್ಮಟಾಲಜಿಗೆ ಸಂಬಂಧಿಸಿದ ವಿವಿಧ ಸಂಶೋಧನೆ ಹಾಗೂ ಅಭಿವೃದ್ಧಿ ಪ್ರಯತ್ನಗಳ ನೇತೃತ್ವ ವಹಿಸಿದ್ದಾರೆ. Google Maps ನಲ್ಲಿ ಬಳಕೆದಾರರು-ರಚಿಸಿದ ಬೃಹತ್ ಪ್ರಮಾಣದ ಕಂಟೆಂಟ್‌ಗೆ ಕಂಪ್ಯೂಟರ್ ವಿಷನ್ ತಂತ್ರಗಳನ್ನು ಅನ್ವಯಿಸುವ ನಿಟ್ಟಿನಲ್ಲೂ ಆಕೆ ಕಾರ್ಯನಿರ್ವಹಿಸಿದ್ದಾರೆ. Google ನಲ್ಲಿ ಸೇರಿಕೊಳ್ಳುವ ಮೊದಲು ಆಕೆ ವಾಂಡರ್‌ಬಿಲ್ಟ್ ಯುನಿವರ್ಸಿಟಿಯಲ್ಲಿ ಮೆಡಿಕಲ್ ಇಮೇಜ್ ಪ್ರೊಸೆಸಿಂಗ್‌ನಲ್ಲಿ ಪಿ.ಹೆಚ್.ಡಿ ಪಡೆದರು, ಇಲ್ಲಿ ಆಕೆ ಇಮೇಜ್-ಗೈಡೆಡ್ ನ್ಯೂರೋಸರ್ಜಿಕಲ್ ಕಾರ್ಯವಿಧಾನಗಳನ್ನು ಉತ್ತಮಪಡಿಸಲು ರೇಡಿಯಾಲಜಿ ಇಮೇಜ್‌ಗಳ (CT, MRI) ಬುದ್ಧಿವಂತ ವಿಶ್ಲೇಷಣೆ ನಡೆಸಿದರು. CVPR ನಲ್ಲಿ ಮುಂಬರುವ ISIC ಸ್ಕಿನ್ ಇಮೇಜ್ ಅನಾಲಿಸಿಸ್ ವರ್ಕ್‌ಶಾಪ್‌ನಲ್ಲಿ ಆಕೆ ಸಹ-ಅಧ್ಯಕ್ಷೆಯಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಸ್ಕಿನ್ ಇಮೇಜ್ ಅನಾಲಿಸಿಸ್ ಕುರಿತು ಮುಂಬರಲಿರುವ ವಿಶೇಷ ಸಂಚಿಕೆಗಳಲ್ಲಿ ಅತಿಥಿ ಸಂಪಾದಕಿಯಾಗಿದ್ದಾರೆ.

ಡಾ. ಎರಿಕ್ ಟೀಸ್ಲಿರವರ ಫೋಟೋ

ಡಾ. ಎರಿಕ್ ಟೀಸ್ಲಿ

ತಾಂತ್ರಿಕ ಪ್ರೋಗ್ರಾಮ್ ಮ್ಯಾನೇಜರ್

ಡಾ. ಎರಿಕ್ ಟೀಸ್ಲಿ ಅವರು, Google Health ನಲ್ಲಿ ಮೊಬೈಲ್ ವೈಟಲ್ಸ್ ಹಾಗೂ ಹೆಲ್ತ್ ಇಕ್ವಿಟಿಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ತಾಂತ್ರಿಕ ಪ್ರೋಗ್ರಾಮ್ ಮ್ಯಾನೇಜರ್ ಆಗಿದ್ದಾರೆ. ಸಿಂಕ್ರೊನೈಸ್ ಮಾಡಲಾದ ವೀಡಿಯೊ ಮತ್ತು ವಾಸ್ತವಿಕ ವೈಟಲ್ ಸೈನ್ ಡೇಟಾವನ್ನು ಸಂಗ್ರಹಿಸುವುದಕ್ಕಾಗಿ ಮೊಬೈಲ್ ವೈಟಲ್ಸ್‌ನ ಮೊತ್ತಮೊದಲ ಪ್ಲ್ಯಾಟ್‌ಫಾರ್ಮ್ ಅನ್ನು ಎರಿಕ್ ಅವರು ಅಭಿವೃದ್ಧಿಪಡಿಸಿದರು ಮತ್ತು ಹೃದಯ ಬಡಿತದ ದರ ಹಾಗೂ ಉಸಿರಾಟದ ದರವನ್ನು Google Fit ಆ್ಯಪ್‌ನ ಫೀಚರ್‌ಗಳಾಗಿ ಸ್ಮಾರ್ಟ್‌ಫೋನ್ ಕ್ಯಾಮರಾದ ಮೂಲಕ ಮಾಪನ ಮಾಡಲು ತಂಡವು ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳ ಪ್ರಾಯೋಗಿಕ ಅಧ್ಯಯನವನ್ನು ನಡೆಸಿದರು. ವೈವಿಧ್ಯತೆಯ ದೃಷ್ಟಿಕೋನದೊಂದಿಗೆ ಈ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದನ್ನು ಖಚಿತಪಡಿಸುವ ನಿಟ್ಟಿನಲ್ಲಿ ಅವರ ಅನುಭವವು, Google Health ನಾದ್ಯಂತ ಸಂಶೋಧನೆಯಲ್ಲಿ ಈಕ್ವಿಟಿಯನ್ನು ಖಚಿತಪಡಿಸುವ ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟಿತು. Google ನಲ್ಲಿ ಸೇರಿಕೊಳ್ಳುವ ಮೊದಲು, ಎರಿಕ್ ಅವರು ಸ್ಟ್ಯಾನ್‌ಫೋರ್ಡ್‌ನಲ್ಲಿ ಬಯೋಎಂಜಿನಿಯರಿಂಗ್‌ನಲ್ಲಿ ಎಂ.ಡಿ ಮತ್ತು ಎಂ.ಎಸ್ ಪೂರ್ಣಗೊಳಿಸಿದರು; ಟಿಷ್ಯೂ ಎಂಜಿನಿಯರಿಂಗ್ ಅಪ್ಲಿಕೇಶನ್‌ಗಳಿಗಾಗಿ ಗ್ರೋಥ್ ಫ್ಯಾಕಟರ್ ಡೆಲಿವರಿಯ ಹೊಸ ವಿಧಾನಗಳನ್ನು ಸಕ್ರಿಯಗೊಳಿಸಲು ಅವರು ಮೈಕ್ರೋಫ್ಲುಯಿಡಿಕ್ಸ್ ಅನ್ನು ಬಳಸಿದರು ಮತ್ತು ಪ್ರತ್ಯೇಕ ಕೋಶಗಳನ್ನು ಸೆರೆಹಿಡಿಯಲು ಮತ್ತು ಗಮನಿಸಲು ಪರಿಕರಗಳನ್ನು ಅಭಿವೃದ್ಧಿಪಡಿಸಿದರು. ಇದಲ್ಲದೆ, ಅವರು ಸ್ಟ್ಯಾನ್‌ಫೋರ್ಡ್‌ನಿಂದ ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಎಸ್ ಪದವಿಯನ್ನು ಸಹ ಪಡೆದಿದ್ದಾರೆ.

ಡಾ. ಸನ್ನಿ ಜಾನ್ಸೆನ್‌ರವರ ಫೋಟೋ

ಡಾ. ಸನ್ನಿ ಜಾನ್ಸೆನ್

ತಾಂತ್ರಿಕ ಪ್ರೋಗ್ರಾಮ್ ಮ್ಯಾನೇಜರ್

ತಾಂತ್ರಿಕ ಪ್ರೋಗ್ರಾಮ್ ಮ್ಯಾನೇಜರ್ ಆಗಿರುವ ಡಾ. ಜಾನ್ಸೆನ್ ಅವರ ಕಾರ್ಯವು ಆಂಕಾಲಜಿ, ಮೆಡಿಕಲ್ ಇಮೇಜಿಂಗ್ ಹಾಗೂ ಮಷಿನ್ ಲರ್ನಿಂಗ್ ಮಾತ್ರವಲ್ಲದೆ Google ನ ಮೂಲಭೂತ ಸಂಶೋಧನೆಯನ್ನು ನೈಜ-ಜಗತ್ತಿನ ರೋಗಿಗಳ ಮೇಲೆ ಪ್ರಭಾವ ಬೀರುವ ಹಾಗೆ ಪರಿವರ್ತಿಸುವುದರ ಮೇಲೆ ಗಮನ ಕೇಂದ್ರೀಕರಿಸುತ್ತದೆ. Google ನಲ್ಲಿ ಸೇರಿಕೊಳ್ಳುವ ಮೊದಲು ಅವರು, ವೆರಿಲಿ ಲೈಫ್ ಸಯನ್ಸಸ್‌ನಲ್ಲಿ ನಿಯಂತ್ರಕ ಕಾರ್ಯತಂತ್ರದ ನೇತೃತ್ವ ಮಾತ್ರವಲ್ಲದೆ ವೈವಿಧ್ಯಮಯ ರೋಗ ಸೂಚಕಗಳನ್ನು ವ್ಯಾಪಿಸುವ ಮಷಿನ್ ಲರ್ನಿಂಗ್ ತಂತ್ರಜ್ಞಾನದ ಕ್ಲಿನಿಕಲ್ ಅಭಿವೃದ್ಧಿಯ ಮುಂದಾಳುತ್ವ ವಹಿಸಿದ್ದರು. ಅವರು ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್‌ನಲ್ಲಿ (FDA) ಸ್ತನ ಕ್ಯಾನ್ಸರ್ ಪತ್ತೆ ಮತ್ತು ಡಯಾಗ್ನಾಸಿಸ್ ತಂತ್ರಜ್ಞಾನಗಳ ಮುಖ್ಯ ಪರಿಶೀಲನಾ ವಿಜ್ಞಾನಿಯಾಗಿಯೂ ಕೆಲಸ ಮಾಡಿದ್ದಾರೆ ಮತ್ತು ನ್ಯಾಶನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನಲ್ಲಿ ಸ್ತನ ಕ್ಯಾನ್ಸರ್‌ನ ಜೆನೆಟಿಕ್ಸ್ ಕುರಿತು ಸಂಶೋಧನೆ ನಡೆಸಿದ್ದಾರೆ. ಡಾ. ಜಾನ್ಸೆನ್ ಅವರು ಯುನಿವರ್ಸಿಟಿ ಆಫ್ ಶಿಕಾಗೋದಿಂದ ಮೆಡಿಕಲ್ ಫಿಸಿಕ್ಸ್‌ನಲ್ಲಿ ಪಿ.ಹೆಚ್.ಡಿ ಪಡೆದಿದ್ದಾರೆ.

ಡಾ. ಕ್ರಿಸ್ ಕೆಲ್ಲಿರವರ ಫೋಟೋ

ಡಾ. ಕ್ರಿಸ್ ಕೆಲ್ಲಿ

ವೈದ್ಯಕೀಯ ವಿಜ್ಞಾನಿ

ಡಾ. ಕ್ರಿಸ್ಟೋಫರ್ ಕೆಲ್ಲಿ ಅವರು Google Health ನ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಇಮೇಜಿಂಗ್ ಹಾಗೂ ಡಯಾಗ್ನಾಸ್ಟಿಕ್ಸ್ ತಂಡದಲ್ಲಿ ವೈದ್ಯ-ವಿಜ್ಞಾನಿಯಾಗಿದ್ದಾರೆ. Google ನ ಅತ್ಯಾಧುನಿಕ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಸಂಶೋಧನೆಯನ್ನು ಸುರಕ್ಷಿತವಾಗಿ, ನೈಜ ವೈದ್ಯಕೀಯ ಪ್ರಭಾವವಾಗಿ ಪರಿವರ್ತಿಸುವುದರ ಮೇಲೆ ಅವರು ಗಮನ ಕೇಂದ್ರೀಕರಿಸಿದ್ದಾರೆ. Google ನಲ್ಲಿ ಸೇರಿಕೊಳ್ಳುವ ಮೊದಲು ಅವರು ಕಿಂಗ್ಸ್ ಕಾಲೇಜ್ ಲಂಡನ್‌ನಲ್ಲಿ ಮೆಡಿಕಲ್ ಇಮೇಜಿಂಗ್‌ನಲ್ಲಿ ಪಿ.ಹೆಚ್.ಡಿ ಪೂರ್ಣಗೊಳಿಸಿದ್ದಾರೆ. ಒಬ್ಬ ವೈದ್ಯರಾಗಿ, ನಿಯೋಮೇಟ್ ಎಂಬ ಪ್ರಶಸ್ತಿ-ವಿಜೇತ ಸ್ಮಾರ್ಟ್‌ಫೋನ್ ಅನ್ನು ಅವರು ಅಭಿವೃದ್ಧಿಪಡಿಸಿದ್ದಾರೆ; ನವಜಾತ ಶಿಶುಗಳ ಆರೈಕೆ ಮಾಡುವ ವೈದ್ಯರು ಹಾಗೂ ನರ್ಸ್‌ಗಳಿಗೆ ಬೆಂಬಲ ನೀಡಲು ಇದನ್ನು ವಿಶ್ವದಾದ್ಯಂತ ಬಳಸಲಾಗುತ್ತದೆ. ಲಂಡನ್‌ನ ಸೈಂಟ್ ಥಾಮಸ್ ಆಸ್ಪತ್ರೆಯಲ್ಲಿ ಅವರು ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಮಕ್ಕಳ ತಜ್ಞರಾಗಿ ಕೆಲಸ ಮುಂದುವರೆಸುತ್ತಿದ್ದಾರೆ. ಮೆಡಿಸಿನ್‌ನ ಜೊತೆಜೊತೆಗೆ ಕ್ರಿಸ್ ಅವರು ಈ ಹಿಂದೆ ಎರಡು ಇಂಟರ್ನೆಟ್ ಕಂಪನಿಗಳನ್ನು ಸ್ಥಾಪಿಸಿ ಮಾರಾಟ ಮಾಡಿದ್ದಾರೆ ಮತ್ತು ಟೆಕ್ನಾಲಜಿ ಸ್ಟಾರ್ಟಪ್‌ಗಳಲ್ಲಿ ಸಕ್ರಿಯ ಏಂಜೆಲ್ ಇನ್ವೆಸ್ಟರ್ ಆಗಿ ಕೆಲಸ ಮಾಡಿದ್ದಾರೆ.

Google Health ನಲ್ಲಿನ ವೃತ್ತಿಗಳು

Google Health ತಂಡವು ತಂತ್ರಜ್ಞಾನದ ಪರಿಣಿತಿ ಮತ್ತು ವೈದ್ಯಕೀಯ ಅತ್ಯುತ್ತಮ ಅಭ್ಯಾಸಗಳು ಹಾಗೂ ರೋಗಿಗೆ ಮೊದಲ ಆದ್ಯತೆ ನೀಡುವ ತತ್ವಗಳನ್ನು ಒಟ್ಟುಗೂಡಿಸುತ್ತದೆ — ಆ ಮೂಲಕ ಆರೋಗ್ಯಸೇವೆಯ ಕುರಿತು ಆಸಕ್ತಿಯಿರುವ ಮತ್ತು ಉತ್ಸುಕರಾಗಿರುವ ಎಲ್ಲರಿಗೂ ಅದ್ಭುತವಾದ ಅವಕಾಶವನ್ನು ಒದಗಿಸುತ್ತದೆ. ನಮ್ಮ ತಂಡವನ್ನು ಸೇರಿಕೊಳ್ಳಲು ಬಯಸುತ್ತೀರಾ?