ನಿಮ್ಮ ಮೆಚ್ಚಿನ ಆ್ಯಪ್ಗಳು ಮತ್ತು ಸಾಧನಗಳ ನಡುವೆ ಡೇಟಾವನ್ನು ಹಂಚಿಕೊಳ್ಳಿ
ನಿಮ್ಮ ಮೆಚ್ಚಿನ ಆ್ಯಪ್ಗಳಿಂದ ಅದ್ಭುತ ಅನುಭವಗಳು ಹಾಗೂ ಇನ್ನಷ್ಟು ಒಳನೋಟಗಳನ್ನು ಪಡೆಯಿರಿ. ಚಟುವಟಿಕೆ ಅಥವಾ ನಿದ್ರೆ, ಪೌಷ್ಟಿಕತೆ ಅಥವಾ ಆರೋಗ್ಯ ಮಾಪನಗಳ ಮೇಲೆ ನೀವು ಗಮನ ಕೇಂದ್ರೀಕರಿಸುತ್ತಿದ್ದರೆ, ನಿಮ್ಮ ಆ್ಯಪ್ಗಳ ನಡುವೆ ಡೇಟಾವನ್ನು ಹಂಚಿಕೊಳ್ಳುವುದರಿಂದ ನಿಮ್ಮ ಆರೋಗ್ಯ ಹಾಗೂ ಫಿಟ್ನೆಸ್ ಕುರಿತು ಸಮಗ್ರ ನೋಟವನ್ನು ಪಡೆಯಲು ಮತ್ತು ನಿಮ್ಮ ಜೀವನಶೈಲಿಯ ಕ್ರಿಯೆಗಳು ಅದರ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಆರೋಗ್ಯ ಮತ್ತು ಫಿಟ್ನೆಸ್ ಡೇಟಾವನ್ನು ನಿರ್ವಹಿಸಲು ಕೇಂದ್ರೀಯ ಸಮೂಹ ನಿಯಂತ್ರಣಗಳು
ನಿಮ್ಮ ಮೊಬೈಲ್ ಫೋನ್ ಸೆಟ್ಟಿಂಗ್ಗಳಲ್ಲಿನ ಸೆಂಟ್ರಲ್ ಡ್ಯಾಶ್ಬೋರ್ಡ್ ನಿಮ್ಮ ಡೇಟಾವನ್ನು ನೀವು ಯಾರ ಜೊತೆಗೆ ಹಂಚಿಕೊಳ್ಳುತ್ತಿದ್ದೀರಿ ಮತ್ತು ನೀವು ಯಾವ ಡೇಟಾವನ್ನು ಹಂಚಿಕೊಳ್ಳುತ್ತಿದ್ದೀರಿ ಎಂಬುದನ್ನು ತೋರಿಸುತ್ತದೆ. ಯಾವುದೇ ಸಮಯದಲ್ಲಿ ನಿಮ್ಮ ಸಾಧನದಲ್ಲಿ ನಿಮಗೆ ಬೇಡವಾದ ಡೇಟಾಗೆ ನೀವು ಪ್ರವೇಶವನ್ನು ಸ್ಥಗಿತಗೊಳಿಸಬಹುದು ಅಥವಾ ಅಳಿಸಬಹುದು. ಹಲವು ಆ್ಯಪ್ಗಳನ್ನು ಬಳಸುವಾಗ ಒಂದು ಡೇಟಾ ಮೂಲಕ್ಕೆ, ಮತ್ತೊಂದಕ್ಕಿಂತ ಹೆಚ್ಚಿನ ಆದ್ಯತೆ ನೀಡುವ ಆಯ್ಕೆಯನ್ನು ಸಹ ನೀವು ಹೊಂದಿದ್ದೀರಿ.
ಗೌಪ್ಯತೆ ಮತ್ತು ಭದ್ರತೆ - Health Connect ಹೃದಯಭಾಗದಲ್ಲಿ
ನಿಮ್ಮ ಆರೋಗ್ಯ ಹಾಗೂ ಫಿಟ್ನೆಸ್ ಆ್ಯಪ್ಗಳ ನಡುವೆ ಗೌಪ್ಯತೆಗೆ ಧಕ್ಕೆಯಾಗದಂತೆ ಡೇಟಾವನ್ನು ಸಂಗ್ರಹಿಸಲು ಮತ್ತು ಕನೆಕ್ಟ್ ಮಾಡಲು Health Connect ನಿಮಗೆ ಸರಳವಾದ ಮಾರ್ಗವನ್ನು ನೀಡುತ್ತದೆ. ನಿಮ್ಮ ಡೇಟಾವನ್ನು ನೀವು ಯಾರೊಂದಿಗೆ ಹಂಚಿಕೊಳ್ಳಲು ಬಯಸುತ್ತೀರಿ ಮತ್ತು ಯಾವ ರೀತಿಯ ಡೇಟಾವನ್ನು ಹಂಚಿಕೊಳ್ಳಲು ಬಯಸುತ್ತೀರಿ ಎಂಬುದನ್ನು ನೀವು ನಿರ್ಧರಿಸುತ್ತೀರಿ.
Android ಬಳಕೆದಾರರಿಗೆ ಅತ್ಯದ್ಭುತ ಅನುಭವಗಳನ್ನು ಒದಗಿಸಲು ಡೆವಲಪರ್ಗಳನ್ನು ಸಕ್ರಿಯಗೊಳಿಸುವುದು
ಬಳಕೆದಾರರ ಅನುಮತಿಯೊಂದಿಗೆ, ಡೆವಲಪರ್ಗಳು API ಗಳ ಸೆಟ್ ಮತ್ತು ಪ್ರಮಾಣಿತ ಡೇಟಾ ಸ್ಕೀಮಾಗಳನ್ನು ಬಳಸಿಕೊಂಡು Health Connect ಮೂಲಕ ಹಲವಾರು ಆ್ಯಪ್ಗಳು ಮತ್ತು ಸಾಧನಗಳ ವ್ಯಾಪ್ತಿಯೊಳಗೆ ಡೇಟಾವನ್ನು ಸುರಕ್ಷಿತವಾಗಿ ಆ್ಯಕ್ಸೆಸ್ ಮಾಡಬಹುದು.
ಡೆವಲಪರ್ಗಳು ಇಂದೇ Health Connect ಅನ್ನು ಸಂಯೋಜಿಸಬಹುದು.
Health Connect ಜೊತೆಗೆ ಸಂಯೋಜಿತವಾಗುವ ಆ್ಯಪ್ಗಳು
ಪ್ರಮುಖ ಆರೋಗ್ಯ ಮತ್ತು ಫಿಟ್ನೆಸ್ ಆ್ಯಪ್ಗಳು Health Connect ಅನ್ನು ಅಳವಡಿಸಿಕೊಂಡಿವೆ, ಇದರಿಂದ ನೀವು ಅವುಗಳ ನಡುವೆ ನಿಮ್ಮ ಡೇಟಾವನ್ನು ಹಂಚಿಕೊಳ್ಳಬಹುದು. ಆ್ಯಪ್ಗಳನ್ನು ವೈಶಿಷ್ಟ್ಯಗೊಳಿಸಿದ ಪಟ್ಟಿಯನ್ನು ಪರಿಶೀಲಿಸಿ.