ಆರೋಗ್ಯಕರ ಭವಿಷ್ಯಕ್ಕಾಗಿ ಪಾಲುದಾರಿಕೆ

ಪರಿವರ್ತನಾತ್ಮಕ ಆರೋಗ್ಯಸೇವಾ ಪರಿಕರಗಳು ಮತ್ತು ಸೇವೆಗಳಿಗಾಗಿ ಪರಿಹಾರಗಳನ್ನು ನಿಯೋಜಿಸುವ ಸಲುವಾಗಿ Google Health ಜಾಗತಿಕ ದರ್ಜೆಯ ವೈದ್ಯಕೀಯ, ಸಾರ್ವಜನಿಕ ಆರೋಗ್ಯ ಮತ್ತು ಶೈಕ್ಷಣಿಕ ಸಂಸ್ಥೆಗಳ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ನಮ್ಮ ಪಾಲುದಾರರ ಜ್ಞಾನ ಮತ್ತು ಅನುಭವ, Google ನ ತಂತ್ರಜ್ಞಾನ ಪರಿಣಿತಿ ಮತ್ತು ರೋಗಿಗಳ ಒಳನೋಟಗಳನ್ನು ಸಂಯೋಜಿಸುವ ಮೂಲಕ, ನಿರ್ಣಾಯಕ ಸಂಶೋಧನೆಯನ್ನು ಕೈಗೊಳ್ಳಲು ಮತ್ತು ವ್ಯಕ್ತಿಗಳು, ಆರೈಕೆದಾರರು ಮತ್ತು ಆರೋಗ್ಯ ವೃತ್ತಿಪರರಿಗಾಗಿ ಆಧುನಿಕ ಆರೋಗ್ಯಸೇವಾ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲು ನಮಗೆ ಸಾಧ್ಯವಾಗುತ್ತಿದೆ. ನಮ್ಮ ಸಹಯೋಗದ ಪ್ರಯತ್ನಗಳ ಮೂಲಕ, ಎಲ್ಲಾ ಜನರ ಜೀವನವನ್ನು ಸುಧಾರಿಸುವ Google Health ನ ಧ್ಯೇಯವನ್ನು ಸಾಧಿಸುವ ಸಲುವಾಗಿ ಉದಯೋನ್ಮುಖ ತಂತ್ರಜ್ಞಾನಗಳನ್ನು ದೈನಂದಿನ ಅಭ್ಯಾಸದಲ್ಲಿ ಅಳವಡಿಸುವುದು ನಮ್ಮ ಗುರಿಯಾಗಿದೆ.

ಮೊಮ್ಮಗಳಿಗೆ ಉಪ್ಪಿನ ಮೂಟೆ ಸವಾರಿ ಮಾಡಿಸುತ್ತಿರುವ ಅಜ್ಜ
ಅಪೋಲೋ ಹಾಸ್ಪಿಟಲ್ಸ್‌ನ ಲೋಗೋ

ಡಯಾಗ್ನಾಸ್ಟಿಕ್ ಸೇವೆಗಳ ನಿಖರತೆ ಮತ್ತು ಲಭ್ಯತೆಯನ್ನು ಸುಧಾರಿಸಲು ಡೀಪ್ ಲರ್ನಿಂಗ್ ಮಾಡೆಲ್‌ಗಳನ್ನು ವೈದ್ಯಕೀಯ ವರ್ಕ್‌ಫ್ಲೋಗಳ ಜೊತೆ ದೊಡ್ಡ ಮಟ್ಟದಲ್ಲಿ ಹೇಗೆ ಸಂಯೋಜಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಎಕ್ಸ್-ರೇಗಳಂತಹ ಲಭ್ಯವಿರುವ ಮತ್ತು ಕೈಗೆಟುಕುವ ಬೆಲೆಯ ಡಯಾಗ್ನಾಸ್ಟಿಕ್ ಪರಿಕರಗಳ ಬಳಕೆಯ ಅಧ್ಯಯನ ಮಾಡಲು ನಾವು ಅಪೋಲೋ ಹಾಸ್ಪಿಟಲ್ಸ್ ಜೊತೆಗೂಡಿ ಕೆಲಸ ಮಾಡುತ್ತಿದ್ದೇವೆ.

ಅರವಿಂದ್ ಐ ಕೇರ್ ಸಿಸ್ಟಂನ ಲೋಗೋ

ಅನಾವಶ್ಯಕ ಕುರುಡುತನದ ನಿರ್ಮೂಲನೆಯಲ್ಲಿ ನೆರವಾಗುವ ಸಲುವಾಗಿ, ಡಯಾಬೆಟಿಕ್ ರೆಟಿನೋಪತಿಯ ರೋಗನಿರ್ಣಯವನ್ನು ಗಮನದಲ್ಲಿಟ್ಟುಕೊಂಡು, ರೆಟಿನಲ್ ಇಮೇಜಿಂಗ್‌ಗಾಗಿ ಮಷಿನ್ ಲರ್ನಿಂಗ್ ಮತ್ತು ಕೃತಕ ಬುದ್ಧಿಮತ್ತೆಯ ಸಮಾರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಮತ್ತು ನಿಯೋಜಿಸುವ ಉದ್ದೇಶದಿಂದ ನಾವು ಭಾರತದಲ್ಲಿ ಅರವಿಂದ್ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ಕಾರ್ಯಪ್ರವೃತ್ತರಾಗಿದ್ದೇವೆ.

CIDRZ ನ ಲೋಗೋ

Google ಸಂಚಾಲಿತ AI ಮೂಲಕ ವೃದ್ಧಿಸಲ್ಪಟ್ಟಿರುವ ಪರಿಕರಗಳು ರೋಗನಿರ್ಣಯ ಮತ್ತು ಮೌಲ್ಯಮಾಪನದಲ್ಲಿ ಹೇಗೆ ಸಹಾಯ ಮಾಡಬಲ್ಲವು ಎಂಬುದನ್ನು ಮತ್ತು TB ಗಾಗಿ ಪರೀಕ್ಷೆಗೆ ಒಳಪಟ್ಟಿರುವ ವೈದ್ಯರಿಗಾಗಿ ಅತ್ಯುತ್ತಮ ಮುಂದಿನ ಹಂತಗಳನ್ನು ಗುರುತಿಸಲು ಈ ಮಾಡೆಲ್‌ಗಳು ಹೇಗೆ ನೆರವಾಗಬಲ್ಲವು ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಜಾಂಬಿಯಾದಲ್ಲಿನ ಸಾಂಕ್ರಾಮಿಕ ರೋಗ ಸಂಶೋಧನಾ ಕೇಂದ್ರದ (CIDRZ) ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ.

cvs

ಹೆಲ್ತ್ AI ನ ಸುರಕ್ಷಿತ, ನೈತಿಕ ಬಳಕೆ, ಡೇಟಾ ಗೌಪ್ಯತೆಯ ರಕ್ಷಣೆಗೆ ಆದ್ಯತೆ ನೀಡುವುದು, ಜವಾಬ್ದಾರಿಯುತ AI ಅನುಷ್ಠಾನವನ್ನು ಎತ್ತಿಹಿಡಿಯವುದು ಮತ್ತು ಸಮಾನತೆಯನ್ನೇ ಮುಖ್ಯವಾಗಿಸಿಕೊಂಡು AI ಸಿಸ್ಟಂಗಳನ್ನು ರೂಪಿಸುವ ವಿಷಯದಲ್ಲಿ ನಾವು CVS ಹೆಲ್ತ್‌ ಧ್ಯೇಯಕ್ಕೆ ಬದ್ಧವಾಗಿದ್ದೇವೆ.

Digital Medicine

ಡಿಜಿಟಲ್ ಮೆಡಿಸಿನ್ ಸೊಸೈಟಿ (DiMe) ಸಹಭಾಗಿತ್ವದಲ್ಲಿ, ನಾವು ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ವೈದ್ಯಕೀಯ ಪ್ರಾಕ್ಟೀಸ್ ಅನ್ನು ವರ್ಧಿಸಲು ಡಿಜಿಟಲ್ ವಿಧಾನಗಳ ಅಳವಡಿಕೆಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ನಿದ್ರೆ ಮತ್ತು ದೈಹಿಕ ಚಟುವಟಿಕೆಗಾಗಿ ಪ್ರಮುಖ ಕ್ಲಿನಿಕಲ್ ಮೆಟ್ರಿಕ್‌ಗಳನ್ನು ಸ್ಥಾಪಿಸುವುದು ಹಾಗೂ ರೋಗಿಯ ಫಲಿತಾಂಶಗಳನ್ನು ಸುಧಾರಿಸುವ ಉದ್ದೇಶಕ್ಕೆ ಚಿಕಿತ್ಸೆಗಳ ಅಭಿವೃದ್ಧಿಯನ್ನು ವೇಗಗೊಳಿಸುವ ಗುರಿಯನ್ನು ನಮ್ಮ ಈ ಸಹಭಾಗಿತ್ವದ ಪ್ರಯತ್ನಗಳು ಹೊಂದಿವೆ.

HCA

ವರ್ಕ್‌ಫ್ಲೋಗಳನ್ನು ಸುಗಮಗೊಳಿಸುವುದು ಮತ್ತು ವೈದ್ಯರು ಮತ್ತು ರೋಗಿಗಳ ಸಂಭಾಷಣೆಗಳನ್ನು ಸ್ವಯಂಚಾಲಿತವಾಗಿ ನಿಖರವಾದ ವೈದ್ಯಕೀಯ ಟಿಪ್ಪಣಿಗಳಾಗಿ ಪರಿವರ್ತಿಸಲು ನಾವು HCA ಹೆಲ್ತ್‌ಕೇರ್‌ ಜೊತೆಗೆ ಕೆಲಸ ಮಾಡುತ್ತಿದ್ದೇವೆ. ಈ ಟಿಪ್ಪಣಿಗಳನ್ನು ವೈದ್ಯರು ನಂತರದಲ್ಲಿ ಪರಿಶೀಲಿಸಬಹುದು ಮತ್ತು ಅನುಮೋದಿಸಬಹುದಾಗಿದೆ. ಅಲ್ಲದೆ, ನಂತರದಲ್ಲಿ Google Cloud ನ ಜನರೇಟಿವ್ AI ಅನ್ನು ಬಳಸಿಕೊಂಡು ಆಸ್ಪತ್ರೆಯ ಎಲೆಕ್ಟ್ರಾನಿಕ್ ಆರೋಗ್ಯ ದಾಖಲೆಗೆ (EHR) ಅದನ್ನು ಅವರು ಸಂಯೋಜಿಸಬಹುದಾಗಿದೆ.

Humana

ತಂತ್ರಜ್ಞಾನ ಪರಿಹಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ಕಡಿಮೆ ವೆಚ್ಚದಲ್ಲಿ ಸಹಾಯ ಮಾಡಲು ಮತ್ತು ಗ್ರಾಹಕರ ಅನುಭವಗಳನ್ನು ಸುಧಾರಿಸಲು ಡೇಟಾ, ಅನಾಲಿಟಿಕ್ಸ್ ಮತ್ತು AI ಅನ್ನು ಬಳಸಿಕೊಳ್ಳುವ ಮೂಲಕ ಹೆಲ್ತ್‌ಕೇರ್‌ನಲ್ಲಿ ನಾವೀನ್ಯತೆಯನ್ನು ವೇಗಗೊಳಿಸಲು ನಾವು Humana ಜೊತೆಗೆ ಪಾಲುದಾರರಾಗಿದ್ದೇವೆ.

ಮೇಯೋ ಕ್ಲಿನಿಕ್‌ನ ಲೋಗೋ

ಮೇಯೊ ಕ್ಲಿನಿಕ್‌ನ ವಿಶ್ವದರ್ಜೆಯ ವೈದ್ಯಕೀಯ ಪರಿಣತಿ ಮತ್ತು Google ನ ಆಧುನಿಕ ಕ್ಲೌಡ್ ಕಂಪ್ಯೂಟಿಂಗ್, ಡೇಟಾ ಅನಾಲಿಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆಯನ್ನು ಒಟ್ಟುಗೂಡಿಸುವ ಮೂಲಕ, ರೋಗಿಗಳ ಆರೈಕೆ ಮಾಡಲು ಮತ್ತು ಜಾಗತಿಕ ಮಟ್ಟದಲ್ಲಿ ನಮ್ಮ ಸೇವೆ ಪಡೆಯುತ್ತಿರುವ ಜನರ ಆರೋಗ್ಯ ಹಾಗೂ ಯೋಗಕ್ಷೇಮವನ್ನು ಸುಧಾರಿಸಲು ಆರೋಗ್ಯಸೇವಾ ಪೂರೈಕೆದಾರರಿಗೆ ಅತ್ಯುತ್ತಮ ಪರಿಕರಗಳನ್ನು ಒದಗಿಸುವಂತಹ ಪರಿವರ್ತನಾತ್ಮಕ ಪರಿಹಾರಗಳನ್ನು ಸಂಶೋಧಿಸಲು ಮತ್ತು ನಿರ್ಮಿಸಲು ನಾವು ಕಾರ್ಯಪ್ರವೃತ್ತರಾಗಿದ್ದೇವೆ.

ನಾರ್ತ್‌ವೆಸ್ಟರ್ನ್ ಮೆಡಿಸಿನ್‌ನ ಲೋಗೋ

ಶೀಘ್ರ ಚಿಕಿತ್ಸೆ ದೊರೆಯುವಲ್ಲಿ ನೆರವಾಗಲು, ಶ್ವಾಸಕೋಶ ಮತ್ತು ಸ್ತನ ಕ್ಯಾನ್ಸರ್‌ನ ಶೀಘ್ರ ಪತ್ತೆಗಾಗಿ ಸ್ಕ್ರೀನಿಂಗ್ ಪ್ರಕ್ರಿಯೆಯ ನಿಖರತೆಯನ್ನು ಆಪ್ಟಿಮೈಸ್ ಮಾಡಲು ಮತ್ತು ಹೆಚ್ಚಿಸಲು ನಡೆಸುತ್ತಿರುವ ವೈದ್ಯಕೀಯ ಸಂಶೋಧನೆಯಲ್ಲಿ Google ನಾರ್ತ್‌ವೆಸ್ಟರ್ನ್ ಮೆಡಿಸಿನ್‌ನ ಸಹಯೋಗದೊಂದಿಗೆ ಕಾರ್ಯಪ್ರವೃತ್ತವಾಗಿದೆ.

ರಾಜವಿತಿ ಆಸ್ಪತ್ರೆಯ ಲೋಗೋ

ತಡೆಗಟ್ಟಬಹುದಾದ ಕುರುಡುತನದ ನಿರ್ಮೂಲನದಲ್ಲಿ ನೆರವಾಗುವ ಸಲುವಾಗಿ, ಡಯಾಬೆಟಿಕ್ ರೆಟಿನೋಪತಿಯ ರೋಗನಿರ್ಣಯವನ್ನು ಗಮನದಲ್ಲಿಟ್ಟುಕೊಂಡು, ರೆಟಿನಲ್ ಇಮೇಜಿಂಗ್‌ಗಾಗಿ ಮಷಿನ್ ಲರ್ನಿಂಗ್ ಮತ್ತು ಕೃತಕ ಬುದ್ಧಿಮತ್ತೆ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಮತ್ತು ನಿಯೋಜಿಸುವ ನಿಟ್ಟಿನಲ್ಲಿ ನಾವು ರಾಜವಿತಿ ಆಸ್ಪತ್ರೆಯ (ಥೈಲ್ಯಾಂಡ್‌ನ ಸಾರ್ವಜನಿಕ ಆರೋಗ್ಯ ಸಚಿವಾಲಯದ ಜೊತೆಗೆ ಸಂಯೋಜಿತವಾಗಿದೆ) ಸಹಯೋಗದೊಂದಿಗೆ ಕಾರ್ಯಪ್ರವೃತ್ತರಾಗಿದ್ದೇವೆ.

ಶಂಕರ ನೇತ್ರಾಲಯದ ಲೋಗೋ

ಡಯಾಬೆಟಿಕ್ ರೆಟಿನೋಪತಿಯ ಶೀಘ್ರ ರೋಗನಿರ್ಣಯಕ್ಕಾಗಿ ರೆಟಿನಲ್ ಇಮೇಜಿಂಗ್ ಅನ್ನು ಸುಧಾರಿಸುವ ಸಲುವಾಗಿ ನಮ್ಮ ಕೃತಕ ಬುದ್ಧಿಮತ್ತೆ ಮತ್ತು ಮಷಿನ್ ಲರ್ನಿಂಗ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಗುಣಪಡಿಸಬಹುದಾದ ಕುರುಡುತನವನ್ನು ನಿರ್ಮೂಲನೆ ಮಾಡುವ ಧ್ಯೇಯವನ್ನು ಹೊಂದಿರುವ ಶಂಕರ ನೇತ್ರಾಲಯದ ಜೊತೆಗೆ ನಾವು ಭಾರತದಲ್ಲಿ ಪಾಲುದಾರಿಕೆ ಮಾಡಿಕೊಂಡಿದ್ದೇವೆ.

ಸ್ಟ್ಯಾನ್‌ಫರ್ಡ್ ಮೆಡಿಸಿನ್‌ನ ಲೋಗೋ

ಆರೋಗ್ಯಸೇವಾ ಪೂರೈಕೆದಾರರು ತಮ್ಮ ರೋಗಿಗಳಿಗೆ ನೀಡುವ ಚಿಕಿತ್ಸೆಗಳನ್ನು ವೈಯಕ್ತಿಕಗೊಳಿಸಲು ಡೇಟಾವನ್ನು ಬಳಸುವ ಕ್ರಮವನ್ನು ಪರಿವರ್ತಿಸಲು ನಾವು ಸ್ಟ್ಯಾನ್‌ಫರ್ಡ್ ಮೆಡಿಸಿನ್ ಸಂಸ್ಥೆಯ ಸಹಯೋಗದೊಂದಿಗೆ ಕಾರ್ಯಪ್ರವೃತ್ತರಾಗಿದ್ದೇವೆ. Google ನ ಡೇಟಾ ವಿಜ್ಞಾನ, ಮಷಿನ್ ಲರ್ನಿಂಗ್ ಮತ್ತು ಕೃತಕ ಬುದ್ಧಿಮತ್ತೆಯ ಸಾಮರ್ಥ್ಯ ಮತ್ತು ವೈದ್ಯಕೀಯ ಸಂಶೋಧನೆ ಮತ್ತು ವೈದ್ಯಕೀಯ ಆರೈಕೆಯಲ್ಲಿ ಸ್ಟ್ಯಾನ್‌ಫರ್ಡ್ ಮೆಡಿಸಿನ್‌ನ ಪರಿಣತಿಯನ್ನು ಒಟ್ಟುಗೂಡಿಸುವ ಮೂಲಕ, ಹೆಚ್ಚಿನ ಜನರಿಗೆ ನಿಖರವಾದ ಆರೋಗ್ಯಸೇವೆಯನ್ನು ಒದಗಿಸುವುದು ನಮ್ಮ ಗುರಿಯಾಗಿದೆ.

ತೈವಾನ್‌ನಲ್ಲಿ ಟೈಪ್ 2 ಡಯಾಬಿಟಿಸ್‌ನೊಂದಿಗೆ ಬಳಲುತ್ತಿರುವ ರೋಗಿಗಳಿಗೆ Google Cloud ನ AI ಮತ್ತು ಡೇಟಾ ಅನಾಲಿಟಿಕ್ಸ್ ಸಾಮರ್ಥ್ಯಗಳನ್ನು ಬಳಸಿಕೊಂಡು ಅಪಾಯದ ಮುನ್ಸೂಚನೆ ಮತ್ತು ನಿರ್ವಹಣೆಗಾಗಿ ತೈವಾನ್‌ನ ನ್ಯಾಷನಲ್ ಹೆಲ್ತ್ ಇನ್ಶೂರೆನ್ಸ್ ಅಡ್ಮಿನಿಸ್ಟ್ರೇಷನ್ (NHIA), Google Cloud & Google Health ಸಹಭಾಗಿತ್ವ ಸಾಧಿಸಿವೆ.

Ubie

Google ನ AI-ಚಾಲಿತ ಕ್ಲಿನಿಕಲ್ ಟೂಲ್‌ಗಳನ್ನು ಆರೋಗ್ಯ ಸೇವೆ ವೃತ್ತಿಪರರಿಗೆ Ubie ಒದಗಿಸುತ್ತದೆ. ಇದನ್ನು ವರ್ಕ್‌ಫ್ಲೋಗಳನ್ನು ಸುಗಮಗೊಳಿಸಲು ಮತ್ತು ಆರೋಗ್ಯ ಸಂಬಂಧಿತವಾದ ಉತ್ತಮ ಫಲಿತಾಂಶಗಳನ್ನು ಪಡೆಯಲು ವಿನ್ಯಾಸಗೊಳಿಸಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ

ಉತ್ತಮ ಗುಣಮಟ್ಟದ, ಅಧಿಕೃತ ಸಾರ್ವಜನಿಕ ಹೆಲ್ತ್ ಕಂಟೆಂಟ್ ಕುರಿತು ಜಾಗೃತಿ ಮೂಡಿಸುವ ಅವಕಾಶಗಳನ್ನು Google Health ಮತ್ತು ವಿಶ್ವ ಆರೋಗ್ಯ ಸಂಸ್ಥೆಯು ಅನ್ವೇಷಿಸುತ್ತಿದೆ. ಪ್ರಸ್ತುತ, ಉಲ್ಬಣಗೊಳ್ಳುತ್ತಿರುವ ಅಥವಾ ಭವಿಷ್ಯದಲ್ಲಿ ಉದ್ಭವಿಸುವ ಸಾರ್ವಜನಿಕ ಆರೋಗ್ಯದ ಅಪಾಯಗಳನ್ನು ಹೋಗಲಾಡಿಸಲು ಸಮುದಾಯವನ್ನು ಸಿದ್ಧಗೊಳಿಸುವುದು ಮತ್ತು ಕಡಿಮೆ ಸಂಪನ್ಮೂಲ ಹೊಂದಿರುವ ಆರೋಗ್ಯ ಸೇವೆ ವ್ಯವಸ್ಥೆಗಳಲ್ಲಿ ಡಿಜಿಟಲ್ ಪರಿವರ್ತನೆಗೆ ಬೆಂಬಲ ನೀಡುವುದು ಇದರ ಗುರಿಯಾಗಿದೆ.