Google ನಲ್ಲಿ ಮಾನಸಿಕ ಆರೋಗ್ಯ ಸಂಪನ್ಮೂಲಗಳು
ಮಾನಸಿಕ ಆರೋಗ್ಯವು ಅತ್ಯಂತ ವೈಯಕ್ತಿಕ ಮತ್ತು ಸವಾಲಿನ ಪಯಣ. ಜಗತ್ತಿನಲ್ಲಿ ಅಂದಾಜು 1 ಬಿಲಿಯನ್ ಜನರು ಮಾನಸಿಕ ಆರೋಗ್ಯ ಸಮಸ್ಯೆಯನ್ನು ಹೊಂದಿದ್ದಾರೆ. ನೀವು ಏಕಾಂಗಿಯಲ್ಲ ಎಂಬ ವಿಶ್ವಾಸವನ್ನು ನಾವು ನೀಡುತ್ತೇವೆ. ನಿಮ್ಮ ಮಾನಸಿಕ ಯೋಗಕ್ಷೇಮವನ್ನು ಸುಧಾರಿಸುವ ಪಯಣದಲ್ಲಿ ನಿಮಗೆ ಸಹಾಯ ಮಾಡಲು ಮಾಹಿತಿ, ಸಂಪನ್ಮೂಲಗಳು ಮತ್ತು ಟೂಲ್‌ಗಳನ್ನು ಒದಗಿಸುತ್ತೇವೆ. ಈ ಮೂಲಕ ನಿಮ್ಮ ಈ ಪಯಣದಲ್ಲಿ ಹಾದಿಯ ಪ್ರತಿ ಹೆಜ್ಜೆಯಲ್ಲೂ ನಿಮ್ಮನ್ನು ಬೆಂಬಲಿಸಲು Google ಬದ್ಧವಾಗಿದೆ.
ಮಾಹಿತಿ ಮತ್ತು ಬೆಂಬಲ ನೀಡಿ ನಿಮ್ಮನ್ನು ಸಬಲಗೊಳಿಸುವುದು
ಮಾನಸಿಕ ಯೋಗಕ್ಷೇಮವನ್ನು ಸುಧಾರಿಸುವ ಉದ್ದೇಶಕ್ಕೆ ಟೂಲ್‌ಗಳು ಹಾಗೂ ಫೀಚರ್‌ಗಳನ್ನು Google ತಂಡಗಳು ಅಭಿವೃದ್ಧಿಪಡಿಸಿವೆ. ಒತ್ತಡವಾದಾಗ ಸಹಾಯ ಮಾಡುವ ಟೂಲ್‌ಗಳಿಂದ ಆರಂಭಿಸಿ, ಆಪತ್ಕಾಲದ ಸಮಯದಲ್ಲಿ ಬೆಂಬಲ ಪಡೆಯಲು ನಿಮಗೆ ನೆರವಾಗುವ ಫೀಚರ್‌ಗಳವರೆಗೆ, ಸಾಧ್ಯವಾದಷ್ಟು ಜನರ ಮಾನಸಿಕ ಆರೋಗ್ಯದ ಪಯಣವನ್ನು ಬೆಂಬಲಿಸಲು ನಾವು ಹೊಸ ವಿಧಾನಗಳನ್ನು ಹುಡುಕುವುದನ್ನು ಮುಂದುವರಿಸಿದ್ದೇವೆ.
Google Search
ಆಪತ್ಕಾಲದಲ್ಲಿ, ನಿಖರವಾದ ಮಾಹಿತಿ ಪಡೆದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. Google Search ನಿಂದ ಉನ್ನತ-ಗುಣಮಟ್ಟದ ಅಪಾರ ಪ್ರಮಾಣದ ಮಾಹಿತಿ ಮೂಲವು ಎಲ್ಲರಿಗೂ ಲಭ್ಯವಾಗುತ್ತದೆ.
ಆಪತ್ಕಾಲದ ಹಾಟ್‌ಲೈನ್‌ಗಳು
ಯಾರಾದರೂ ಆತ್ಮಹತ್ಯೆ, ಕೌಟುಂಬಿಕ ಹಿಂಸೆ ಅಥವಾ ಲೈಂಗಿಕ ಹಲ್ಲೆಗೆ ಸಂಬಂಧಿಸಿದ ಪದಗಳನ್ನು ಹುಡುಕಿದರೆ, ಅನೇಕ ದೇಶಗಳಲ್ಲಿ ಮತ್ತು ಭಾಷೆಗಳಲ್ಲಿ ಆಪತ್ಕಾಲದ ಹಾಟ್‌ಲೈನ್ ಪೂರೈಕೆದಾರರ ಪ್ರಮುಖ ಲಿಂಕ್‍ಗಳು ಅವರಿಗೆ ಗೋಚರಿಸುತ್ತವೆ. ThroughLine ಮತ್ತು 988 ಸೂಸೈಡ್ ಆ್ಯಂಡ್ ಕ್ರೈಸಿಸ್ ಲೈಫ್‌ಲೈನ್‌ನಂತಹ ಸಂಸ್ಥೆಗಳ ಜೊತೆಗಿನ ಪಾಲುದಾರಿಕೆಗಳ ಮೂಲಕ ನಾವು ಇದನ್ನು ಮಾಡಿದ್ದೇವೆ.
ಸ್ವಯಂ ವಿಶ್ಲೇಷಣೆಗಳು
ನಿರ್ದಿಷ್ಟ ದೇಶಗಳಲ್ಲಿ ಖಿನ್ನತೆ, ಆತಂಕ ಮತ್ತು ಇತರ ಮಾನಸಿಕ ಆರೋಗ್ಯ ಸ್ಥಿತಿಗಳ ಬಗ್ಗೆ ಹುಡುಕುತ್ತಿರುವವರಿಗೆ, ಹೆಚ್ಚುವರಿ ಮಾಹಿತಿಯ ಮೂಲಗಳಿಗೆ ಅವರನ್ನು ಕಳುಹಿಸುವ ಲಿಂಕ್‌ಗಳು ಹಾಗೂ ರೋಗಲಕ್ಷಣಗಳ ಹಂತವನ್ನು ಮೌಲ್ಯಮಾಪನ ಮಾಡುವುದಕ್ಕಾಗಿ ವೈದ್ಯಕೀಯವಾಗಿ-ಮಾನ್ಯವಾದ ಸ್ವಯಂ ವಿಶ್ಲೇಷಣೆಗಳನ್ನು ಒದಗಿಸಲಾಗುತ್ತದೆ. ಜನರಿಗೆ ಆರೋಗ್ಯ ಸೇವೆ ಒದಗಿಸುವವರಿಂದ ಹೆಚ್ಚುವರಿ ಮಾರ್ಗದರ್ಶನ ಪಡೆಯಬೇಕೆಂದು ಯಾವಾಗಲೂ ನಿರ್ದೇಶಿಸಲಾಗುತ್ತದೆ.
YouTube
ವೀಡಿಯೊ ಹಂಚಿಕೆ ಮತ್ತು ಶಿಕ್ಷಣಕ್ಕಾಗಿ ಇರುವ ಒಂದು ಪ್ಲ್ಯಾಟ್‌ಫಾರ್ಮ್ ಆಗಿರುವ ಕಾರಣ, ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಬೆಂಬಲಿಸುವ ವೈಶಿಷ್ಟ್ಯಗಳು YouTube ನಲ್ಲಿ ಅತ್ಯಂತ ಮುಖ್ಯವಾಗಿವೆ. YouTube Health ತಂಡವು ಎಲ್ಲರಿಗೂ ಉನ್ನತ ಗುಣಮಟ್ಟದ ಆರೋಗ್ಯ ಮಾಹಿತಿಯನ್ನು ಲಭ್ಯಗೊಳಿಸಲು ಬದ್ಧವಾಗಿದೆ.
ಹೆಲ್ತ್ ಕಂಟೆಂಟ್ ಶೆಲ್ಫ್‌ಗಳು
ನಿರ್ದಿಷ್ಟ ದೈಹಿಕ ಅಥವಾ ಮಾನಸಿಕ ಆರೋಗ್ಯ ಸ್ಥಿತಿಗೆ ಸಂಬಂಧಿಸಿದ ವಿಷಯವನ್ನು ನೀವು YouTube ನಲ್ಲಿ ಹುಡುಕಿದರೆ, ನಿಮ್ಮ ಹುಡುಕಾಟ ಫಲಿತಾಂಶಗಳಲ್ಲಿ ಹೆಲ್ತ್ ಕಂಟೆಂಟ್ ಇರುವ ಶೆಲ್ಫ್ ಅನ್ನು ನೀವು ಗಮನಿಸಬಹುದು. ಹೆಲ್ತ್ ಕಂಟೆಂಟ್ ಶೆಲ್ಫ್, ನೀವು ಹುಡುಕಿದ ಆರೋಗ್ಯ ವಿಷಯಕ್ಕೆ ಸಂಬಂಧಿಸಿದ ವೀಡಿಯೊಗಳನ್ನು ಹೊಂದಿರುತ್ತದೆ ಮತ್ತು ನಿಮ್ಮ ಹುಡುಕಾಟದ ಭಾಷೆಗೆ ಹೊಂದಿಕೆಯಾಗುವ ಇತರ ದೇಶಗಳು/ಪ್ರದೇಶಗಳಿಂದ ಕಂಟೆಂಟ್ ಅನ್ನು ಒಳಗೊಂಡಿರಬಹುದು. ಶೆಲ್ಫ್‌ಗೆ ಯಾವ ಚಾನಲ್‌ಗಳು ಅರ್ಹವಾಗಿವೆ ಎಂಬುದನ್ನು ಸ್ಥಾಪಿಸಲು, ನ್ಯಾಶನಲ್ ಅಕಾಡೆಮಿ ಆಫ್ ಮೆಡಿಸಿನ್, ವಿಶ್ವ ಆರೋಗ್ಯ ಸಂಸ್ಥೆ ಮತ್ತು ಕೌನ್ಸಿಲ್ ಆಫ್ ಮೆಡಿಕಲ್ ಸ್ಪೆಷಾಲಿಟಿ ಸೊಸೈಟೀಸ್ ಒಟ್ಟುಗೂಡಿಸಿದ ತಜ್ಞರು ಅಭಿವೃದ್ಧಿಪಡಿಸಿದ ಸಿದ್ಧಾಂತಗಳನ್ನು ಬಳಸುತ್ತೇವೆ.
ಮಾಹಿತಿ ಪ್ಯಾನೆಲ್‌ಗಳು
ಮಾನಸಿಕ ಆರೋಗ್ಯ ಸೇರಿದಂತೆ ಆರೋಗ್ಯ-ಸಂಬಂಧಿತ ವಿಷಯದ ಕುರಿತು ನೀವು YouTube ವೀಡಿಯೊವನ್ನು ವೀಕ್ಷಿಸಿದಾಗ, ವೀಡಿಯೊದ ಅಡಿಯಲ್ಲಿ ಮೂಲದ ಕುರಿತು ಸಾಂದರ್ಭಿಕ ಮಾಹಿತಿಯನ್ನು ಒದಗಿಸುವ ಮಾಹಿತಿ ಪ್ಯಾನೆಲ್ ಅನ್ನು ನೀವು ಗಮನಿಸಬಹುದು. YouTube ನಲ್ಲಿ ನೀವು ಹುಡುಕುವ ಮತ್ತು ವೀಕ್ಷಿಸುವ ಹೆಲ್ತ್ ಕಂಟೆಂಟ್‌ನ ಮೂಲಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವುದಕ್ಕೆ ನಿಮಗೆ ಸಹಾಯ ಮಾಡಲು ಈ ಪ್ಯಾನೆಲ್ ನಿಮಗೆ ಹೆಚ್ಚಿನ ಮಾಹಿತಿಯನ್ನು ನೀಡುವ ಉದ್ದೇಶ ಹೊಂದಿದೆ.
ಬಿಕ್ಕಟ್ಟು ನಿರ್ವಹಣೆ ಸಂಪನ್ಮೂಲಗಳ ಪ್ಯಾನೆಲ್‌ಗಳು
ಆತ್ಮಹತ್ಯೆ, ಸ್ವಯಂ-ಹಾನಿ, ತಿನ್ನುವುದಕ್ಕೆ ಸಂಬಂಧಿಸಿದ ಡಿಸಾರ್ಡರ್‌ಗಳು, ಲೈಂಗಿಕ ಹಲ್ಲೆ ಮತ್ತು ಕೌಟುಂಬಿಕ ಹಿಂಸೆಯಂತಹ ಕೆಲವು ಸೂಕ್ಷ್ಮ ವಿಷಯಗಳನ್ನು ನೀವು ಹುಡುಕಿದರೆ ಅಥವಾ ಅವುಗಳ ಕುರಿತಾದ ವೀಡಿಯೊಗಳನ್ನು ವೀಕ್ಷಿಸಿದರೆ, ಬಿಕ್ಕಟ್ಟು ಸೇವಾ ಪಾಲುದಾರರಿಂದ ಬೆಂಬಲದೊಂದಿಗೆ ಕನೆಕ್ಟ್ ಆಗಲು ಪ್ರಮುಖ ಪ್ಯಾನೆಲ್‌ಗಳನ್ನು YouTube ವೀಕ್ಷಕರಿಗೆ ಒದಗಿಸಬಹುದು. ನೀವು ಇನ್ನಷ್ಟು ತಿಳಿಯಲು ಬಯಸಿದರೆ, ಬಿಕ್ಕಟ್ಟು ನಿರ್ವಹಣೆ ಸಂಪನ್ಮೂಲಗಳ ಪ್ಯಾನೆಲ್ ನಿಮ್ಮನ್ನು ಪಾಲುದಾರರ ವೆಬ್‌ಸೈಟ್‌ಗೆ ಲಿಂಕ್ ಮಾಡುತ್ತದೆ.
ಆತ್ಮಹತ್ಯೆ, ಸ್ವಯಂ-ಹಾನಿ ಮತ್ತು ತಿನ್ನುವುದಕ್ಕೆ ಸಂಬಂಧಿಸಿದ ಡಿಸಾರ್ಡರ್‌ಗಳ ಕುರಿತಾದ ನೀತಿ
ಆತ್ಮಹತ್ಯೆ, ಸ್ವಯಂ-ಹಾನಿ ಮತ್ತು ತಿನ್ನುವುದಕ್ಕೆ ಸಂಬಂಧಿಸಿದ ಡಿಸಾರ್ಡರ್‌ಗಳು ಸೇರಿದಂತೆ ಮಾನಸಿಕ ಆರೋಗ್ಯ ವಿಷಯಗಳ ಕುರಿತು YouTube ನಿರ್ದಿಷ್ಟ ಮಾರ್ಗಸೂಚಿಗಳು ಮತ್ತು ನೀತಿಗಳನ್ನು ಹೊಂದಿದೆ. YouTube ನ ವಯಸ್ಸಿನ ನಿರ್ಬಂಧಗಳು ಮತ್ತು ಕಂಟೆಂಟ್ ತೆಗೆದುಹಾಕುವಿಕೆ ನೀತಿಗಳ ಕುರಿತು ಇನ್ನಷ್ಟು ಓದಿ.
ವೈಯಕ್ತಿಕ ಸ್ಟೋರಿಗಳ ಶೆಲ್ಫ್
ಸಹಾನುಭೂತಿಯನ್ನು ಪೋಷಿಸಲು ಮತ್ತು ಕಳಂಕದ ಮನೋಭಾವವನ್ನು ಕಡಿಮೆ ಮಾಡಲು, ವೈಯಕ್ತಿಕ ಸ್ಟೋರಿಗಳ ಶೆಲ್ಫ್, ನಿರ್ದಿಷ್ಟ ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ತಮ್ಮ ವೈಯಕ್ತಿಕ ಮತ್ತು ಪ್ರಾಮಾಣಿಕ ಅನುಭವವನ್ನು ಹಂಚಿಕೊಳ್ಳುವ ರಚನೆಕಾರರ ಕಂಟೆಂಟ್‌ನೊಂದಿಗೆ ಕನೆಕ್ಟ್ ಆಗಲು ನಿಮಗೆ ಅವಕಾಶ ನೀಡುತ್ತದೆ.
ನಿಮ್ಮ ವೀಕ್ಷಣಾ ಅವಧಿಯನ್ನು ನಿರ್ವಹಿಸುವುದು
ಬೆಡ್‌ಟೈಮ್ ಮತ್ತು ವಿರಾಮದ ರಿಮೈಂಡರ್‌ಗಳು ಹಾಗೂ ಪೋಷಕರು ಮತ್ತು ಹದಿಹರೆಯದವರಿಗಾಗಿ ಹೆಚ್ಚುವರಿ ಸಲಹೆಗಳು ಮತ್ತು ಸಂಪನ್ಮೂಲಗಳು ಸೇರಿದ ಹಾಗೆ YouTube ನಲ್ಲಿ ನೀವು ವ್ಯಯಿಸುವ ಸಮಯವನ್ನು ನಿರ್ವಹಿಸಲು ಸಹಾಯ ಮಾಡುವುದಕ್ಕಾಗಿ YouTube ನಲ್ಲಿ ಅನೇಕ ಫೀಚರ್‌ಗಳಿವೆ.
ಮೇಲ್ವಿಚಾರಣೆ ಮಾಡಿದ ಅನುಭವಗಳು
ಮಕ್ಕಳು, ಹದಿ ಹರೆಯ ಪೂರ್ವ ಮಕ್ಕಳು ಮತ್ತು ಹದಿಹರೆಯದವರು YouTube ಅನ್ನು ಎಕ್ಸ್‌ಪ್ಲೋರ್ ಮಾಡಲು ನಾವು ವಯಸ್ಸಿಗೆ ಸೂಕ್ತವಾದ ಮಾರ್ಗಗಳನ್ನು ನೀಡುತ್ತೇವೆ. ಮಾಧ್ಯಮ ಮತ್ತು ತಂತ್ರಜ್ಞಾನದೊಂದಿಗೆ ಪ್ರತಿ ಕುಟುಂಬದ ಸಂಬಂಧವು ವಿಭಿನ್ನವಾಗಿರುತ್ತದೆ, ಆದ್ದರಿಂದ ನಿಮಗೆ ಯಾವುದು ಸೂಕ್ತ ಎಂಬುದನ್ನು ನೀವು ನಿರ್ಧರಿಸಲು ಸಾಧ್ಯವಾಗುವಂತೆ ನಾವು ಆಯ್ಕೆಗಳನ್ನು ಒದಗಿಸುತ್ತೇವೆ.
ಹದಿಹರೆಯದವರ ಕಂಟೆಂಟ್ ಶಿಫಾರಸುಗಳಿಗಾಗಿ ರಕ್ಷಣಾ ಕ್ರಮಗಳು
YouTube ನ ಯುವ ಮತ್ತು ಕುಟುಂಬಗಳ ಸಲಹಾ ಸಮಿತಿಯೊಂದಿಗೆ ಕೆಲಸ ಮಾಡುವಾಗ, ಹದಿಹರೆಯದವರಿಗೆ ಕಂಟೆಂಟ್ ಶಿಫಾರಸುಗಳಿಗಾಗಿ ಹೆಚ್ಚುವರಿ ರಕ್ಷಣಾ ಕ್ರಮಗಳನ್ನು ನಾವು ಗುರುತಿಸಿದ್ದೇವೆ, ಆದರೂ ಅವರು ಇಷ್ಟಪಡುವ ವಿಷಯಗಳನ್ನು ಎಕ್ಸ್‌ಪ್ಲೋರ್ ಮಾಡಲು ಅವಕಾಶ ನೀಡುತ್ತೇವೆ. ಸಲಹಾ ಸಮಿತಿಯೊಂದಿಗೆ ಕೆಲಸ ಮಾಡುವಾಗ, ಒಂದೇ ವೀಡಿಯೊದಲ್ಲಿ ನಿರುಪದ್ರವಿಯಾಗಿರಬಹುದಾದ ಆದರೆ ಕೆಲವು ಯುವ ವೀಕ್ಷಕರಿಗೆ ಪುನರಾವರ್ತಿತವಾಗಿ ನೋಡಿದರೆ ಸಮಸ್ಯೆಯಾಗಬಹುದಾದ ಕಂಟೆಂಟ್‌ನ ವರ್ಗಗಳನ್ನು ನಾವು ಗುರುತಿಸಿದ್ದೇವೆ. ವರ್ಗಗಳ ಕುರಿತು ಇಲ್ಲಿ ಇನ್ನಷ್ಟು ತಿಳಿಯಿರಿ.
Fitbit ಮತ್ತು Pixel ಧರಿಸುವಂತಹವುಗಳು
WHO ಪ್ರಕಾರ, ಆರೋಗ್ಯ ಎಂದರೆ "ಸಂಪೂರ್ಣ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮದ ಸ್ಥಿತಿಯಾಗಿದೆಯೇ ಹೊರತು ಕೇವಲ ಕಾಯಿಲೆ ಅಥವಾ ದುರ್ಬಲತೆಯ ಅನುಪಸ್ಥಿತಿಯಷ್ಟೇ ಅಲ್ಲ". ಮಾನಸಿಕ ಯೋಗಕ್ಷೇಮವನ್ನು ವರ್ಧಿಸುವುದರಲ್ಲಿ ಒತ್ತಡವನ್ನು ನಿಭಾಯಿಸುವುದು, ಜಾಗರೂಕತೆಯನ್ನು ಅಭ್ಯಾಸ ಮಾಡುವುದು, ಆರೋಗ್ಯಪೂರ್ಣ ನಿದ್ರೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವುದು ಸೇರಿವೆ. ಆರೋಗ್ಯ ಎನ್ನುವುದು ಒಂದು ಸಮಗ್ರ ಪರಿಕಲ್ಪನೆಯಾಗಿದೆ ಮತ್ತು Google ನ ಸಾಧನಗಳು, ಕ್ರಮ ಕೈಗೊಳ್ಳಬಹುದಾದಂತಹ ಒಳನೋಟಗಳನ್ನು ಒದಗಿಸುತ್ತಾ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಬೆಂಬಲಿಸುವ ದಿನಚರಿಗಳನ್ನು ಪ್ರೋತ್ಸಾಹಿಸುವ ಮೂಲಕ ನಿಮ್ಮ ಆರೋಗ್ಯವನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡಬಲ್ಲವು.
ಒತ್ತಡ ಟ್ರ್ಯಾಕಿಂಗ್
ಕೆಲವು Fitbit ಮತ್ತು Pixel Watch ಗಳಲ್ಲಿ ಇರುವ cEDA (ಎಲೆಕ್ಟ್ರೋಡರ್ಮಲ್ ಚಟುವಟಿಕೆ) ಸೆನ್ಸರ್, Fitbit ನ ದೇಹ ಪ್ರತಿಕ್ರಿಯೆ ಫೀಚರ್‌ಗೆ ಚಾಲನೆ ನೀಡುತ್ತದೆ. ಒತ್ತಡ ಚಟುವಟಿಕೆಯ ಸಕಾರಾತ್ಮಕ ಅಥವಾ ನಕಾರಾತ್ಮಕ ಚಿಹ್ನೆಗಳು ಕಂಡುಬಂದಾಗ ಈ ಸೆನ್ಸರ್ ಸಂಭಾವ್ಯ ಒತ್ತಡ ಪ್ರತಿಕ್ರಿಯೆಗಳನ್ನು ಸೂಚಿಸಬಹುದು ಮತ್ತು ನಿಮಗೆ ಒಂದು ನೋಟಿಫಿಕೇಶನ್ ಕಳುಹಿಸುತ್ತದೆ. ನಂತರ, ಆ ಕ್ಷಣದಲ್ಲಿ ನಿಮಗೆ ಹೇಗೆ ಅನಿಸುತ್ತದೆ ಎಂಬ ಕುರಿತು ನೀವು ವಿಚಾರ ಮಾಡಬಹುದು ಮತ್ತು ನಿಮ್ಮ ಒತ್ತಡವನ್ನು ಕಡಿಮೆ ಮಾಡಲು, ಮಾರ್ಗದರ್ಶನ-ಸಹಿತ ಉಸಿರಾಟ ಅಥವಾ ಜಾಗರೂಕತೆ ಸೆಶನ್‌ನಂತಹ ಕ್ರಮಗಳನ್ನು ಕೈಗೊಳ್ಳಬಹುದು.
ಜಾಗರೂಕತೆ ಟೂಲ್‌ಗಳು
Fitbit ಆ್ಯಪ್‌ನಲ್ಲಿ, ಮಾರ್ಗದರ್ಶನ-ಸಹಿತ ಉಸಿರಾಟದ ವ್ಯಾಯಾಮಗಳು, ಜಾಗರೂಕತೆ ಕುರಿತಾದ ಕಂಟೆಂಟ್ ಮತ್ತು ಮೂಡ್ ಲಾಗಿಂಗ್ ಮೂಲಕ ಒತ್ತಡದ ಮಟ್ಟಗಳನ್ನು ನೈಜ ಸಮಯದಲ್ಲಿ ಟ್ರ್ಯಾಕ್ ಮಾಡಲು ಮತ್ತು ನಿರ್ವಹಿಸಲು ನಿಮಗೆ ಸಾಧ್ಯವಾಗುತ್ತದೆ.
ನಿದ್ರೆಯ ಒಳನೋಟಗಳು
Fitbit ನ ಸುಧಾರಿತ ನಿದ್ರೆಯ ಟ್ರ್ಯಾಕಿಂಗ್ ಫೀಚರ್‌ಗಳು ನಿಮ್ಮ ನಿದ್ರೆಯ ಗುಣಮಟ್ಟದ ಕುರಿತು ಆಳವಾದ ಒಳನೋಟಗಳನ್ನು ಒದಗಿಸಬಲ್ಲವು ಮತ್ತು ಅದನ್ನು ಸುಧಾರಿಸಲು ಶಿಫಾರಸುಗಳನ್ನು ನೀಡಬಲ್ಲವು. ನಿದ್ರೆಯ ಗುಣಮಟ್ಟವನ್ನು ಸುಧಾರಿಸುವುದು ಮಾನಸಿಕ ಆರೋಗ್ಯಕ್ಕೆ ನಿರ್ಣಾಯಕವಾಗಿದೆ.
Fitbit ಆ್ಯಪ್‌ನಲ್ಲಿ ಫಿಟ್‌ನೆಸ್ ಟ್ರ್ಯಾಕಿಂಗ್
ಸುಧಾರಿತ ಫಿಟ್‌ನೆಸ್ ಫೀಚರ್‌ಗಳು ಪ್ರೇರಣೆಯನ್ನು ಕಂಡುಕೊಳ್ಳಲು, ನಿಮ್ಮ ಗುರಿಗಳತ್ತ ನಿಮ್ಮ ಪ್ರಗತಿಯನ್ನು ಟ್ರ್ಯಾಕ್ ಮಾಡಲು ಮತ್ತು ಮುಂದುವರಿಯಲು ನಿಮಗೆ ಸಹಾಯ ಮಾಡುತ್ತವೆ ಮತ್ತು ನೀವು ಯಾವಾಗ ಚೇತರಿಕೆಗೆ ಆದ್ಯತೆ ನೀಡಬೇಕು ಎಂಬುದನ್ನು ತಿಳಿಸುತ್ತವೆ.
ನಮ್ಮ ಸಮುದಾಯಗಳ ಒಳಗೆ ಸಂಸ್ಥೆಗಳನ್ನು ಬೆಂಬಲಿಸುವುದು
ಜನರಿಗೆ ನಂಬಿಕೆಯಿರುವ ವ್ಯಕ್ತಿಗಳ ಮೂಲಕ ಸರಿಯಾದ ಸಮಯದಲ್ಲಿ ಅವರನ್ನು ತಲುಪುವುದಕ್ಕಾಗಿ, ಸ್ಥಳೀಯ ಸಂಸ್ಥೆಗಳೊಂದಿಗೆ ಸಹಯೋಗದಲ್ಲಿ ಕೆಲಸ ಮಾಡುವುದು ಮುಖ್ಯವಾಗಿದೆ. ಪ್ರಭಾವ ಬೀರಲು, ನಾವು ಕೆಲಸ ಮಾಡಿರುವ ಕೆಲವು ಸಂಸ್ಥೆಗಳು ಹೀಗಿವೆ.
ಮಾನಸಿಕ ಆರೋಗ್ಯ ಮತ್ತು ಕಲಿಕಾ ಸಮಸ್ಯೆಗಳನ್ನು ಎದುರಿಸುತ್ತಿರುವ ಮಕ್ಕಳ ಮತ್ತು ಕುಟುಂಬಗಳ ಜೀವನವನ್ನು ಬದಲಾಯಿಸಲು ದೊಡ್ಡ ಮೊತ್ತದ ಹಣಕಾಸು ಮತ್ತು ತಾಂತ್ರಿಕ ಸಹಾಯವನ್ನು Child Mind Institute ಗೆ Google.org ನೀಡಿದೆ. ಒಂದು ಮಿಲಿಯನ್ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ತರಬೇತಿ ಮತ್ತು ಸಂಪನ್ಮೂಲವನ್ನು Google.org ಒದಗಿಸಿದೆ ಮತ್ತು ಪ್ರಮುಖ ಮಾನಸಿಕ ಆರೋಗ್ಯ ವಿಷಯುದಲ್ಲಿ ಕಂಟೆಂಟ್ ಕ್ರಿಯೇಶನ್ ಮಾಡುವುದಕ್ಕೆ ಚೈಲ್ಡ್ ಮೈಂಡ್ ಇನ್‌ಸ್ಟಿಟ್ಯೂಟ್ ಜೊತೆಗೆ Youtube ಪಾಲುದಾರಿಕೆ ವಹಿಸಿದೆ. ಇತ್ತೀಚೆಗೆ, YouTube ಮತ್ತು Anchor Media ಸಹಯೋಗದಲ್ಲಿ ಸ್ವಯಂ ತಾದಾತ್ಮ್ಯ ಮತ್ತು ಗ್ರೌಂಡಿಂಗ್ ಎಕ್ಸರ್‌ಸೈಝ್‌ಗಳ ಕುರಿತ ವಿಡಿಯೋ ಸರಣಿಗೆ Anthem Award ಲಭ್ಯವಾಗಿದೆ.
ಇನ್ನಷ್ಟು ತಿಳಿಯಿರಿGoogle.org ಆ್ಯಕ್ಸಿಲಿರೇಟರ್: ಜನರೇಟಿವ್ AI ನ ವ್ಯಸನ ಕೊನೆಗೊಳಿಸಲು ಸಹಭಾಗಿತ್ವವು ಮೊದಲ ಜನರ ತಂಡದ ಭಾಗವಾಗಿ, ತರಬೇತಿ ಸಿಮ್ಯುಲೇಟರ್ ಮತ್ತು ಗುಣಮಟ್ಟದ ಖಾತ್ರಿ ಟೂಲ್‌ಗಳನ್ನು ನಿರ್ಮಿಸುವುದಕ್ಕಾಗಿ AI ಅನ್ನು ಬಳಸುವ ಮೂಲಕ ಕುಟುಂಬಗಳಿಗಾಗಿ ತನ್ನ ವ್ಯಸನಮುಕ್ತಗೊಳಿಸುವಿಕೆ ಬೆಂಬಲ ಸೇವೆಗಳ ವ್ಯಾಪ್ತಿ ಮತ್ತು ಗುಣಮಟ್ಟವನ್ನು ವರ್ಧಿಸಲು ಕೆಲಸ ಮಾಡುತ್ತಿದೆ.
ಇದೀಗ ವೀಕ್ಷಿಸಿಹಿರಿಯ ನಾಗರಿಕರು ಎದುರಿಸುವ ಅನನ್ಯ ಮಾನಸಿಕ ಆರೋಗ್ಯ ಸವಾಲುಗಳನ್ನು ಗುರುತಿಸುತ್ತಾ, ReflexAI ನ HomeTeam ಅಭಿವೃದ್ಧಿಪಡಿಸುವಿಕೆಯನ್ನು ಅನುದಾನ ಮತ್ತು Google.org Fellowship ನ ಜೊತೆಗೆ Google.org ಬೆಂಬಲಿಸುತ್ತಿದೆ. ಈ AI-ಚಾಲಿತ ಟೂಲ್, ಹಿರಿಯ ನಾಗರಿಕರು ಪರಸ್ಪರರನ್ನು ಬೆಂಬಲಿಸಲು ಬೇಕಾದ ಕೌಶಲ್ಯಗಳನ್ನು ಒದಗಿಸುತ್ತದೆ ಮತ್ತು ಅಗತ್ಯವಿರುವವರು ವೃತ್ತಿಪರ ಸಹಾಯವನ್ನು ಕೋರಲು ಪ್ರೋತ್ಸಾಹಿಸುತ್ತದೆ.
ಇನ್ನಷ್ಟು ತಿಳಿಯಿರಿGoogle ಸಾರ್ವಜನಿಕ ವಲಯವು, ಮಕ್ಕಳಿಗಾಗಿ ಮಾನಸಿಕ ಆರೋಗ್ಯ ಸಂಪನ್ಮೂಲಗಳಿಗೆ ಆ್ಯಕ್ಸೆಸ್ ಅನ್ನು ಸುಧಾರಿಸಲು ಇಲಿನಾಯ್‌ನ ಗವರ್ನರ್ ಕಚೇರಿ ಮತ್ತು ನಡವಳಿಕೆ ಆರೋಗ್ಯಕ್ಕಾಗಿ ಇರುವ ಸ್ಟೇಟ್ ಏಜೆನ್ಸಿಗಳೊಂದಿಗೆ ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿದೆ. ಈ ಪಾಲುದಾರಿಕೆಯು ಏಜೆನ್ಸಿ ಸಿಬ್ಬಂದಿ ಮತ್ತು ಆರೈಕೆದಾರರಿಗೆ ಸಾಮಾನ್ಯ ಎಂಟ್ರಿ ಪಾಯಿಂಟ್ ಆಗಿ ಕೆಲಸ ಮಾಡುವ BEACON ಪೋರ್ಟಲ್‌ನ ರಚನೆಗೆ ಕಾರಣವಾಯಿತು.
ಇನ್ನಷ್ಟು ತಿಳಿಯಿರಿGoogle.org ಆ್ಯಡ್ ನಿಧಿಸಹಾಯಗಳ ಪ್ರೋಗ್ರಾಂ ಮೂಲಕ, ಉನ್ನತ ಗುಣಮಟ್ಟದ, ಅಧಿಕೃತ ಮಾನಸಿಕ ಆರೋಗ್ಯ ಮಾಹಿತಿಯ ಮೂಲಗಳನ್ನು ಹೆಚ್ಚು ಜನರಿಗೆ ತಲುಪಿಸಲು ಸಂಸ್ಥೆಗಳಿಗೆ ಸಾಧ್ಯವಾಗುತ್ತದೆ. ಮತ್ತು WHO, ಪ್ರಪಂಚದಾದ್ಯಂತದ ಸಮುದಾಯಗಳಿಗಾಗಿ 25 ಕ್ಕೂ ಹೆಚ್ಚು ಭಾಷೆಗಳಲ್ಲಿ ಮಾನಸಿಕ ಆರೋಗ್ಯ ಗೈಡ್‌ಗಳನ್ನು ಹೊರತರುತ್ತಿದೆ ಮತ್ತು ದೇಣಿಗೆ ನೀಡಲಾದ Google Search ಆ್ಯಡ್‌ಗಳ ಮೂಲಕ 14 ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ತಲುಪುತ್ತಿದೆ ಮತ್ತು ಇನ್ನಷ್ಟು ತಿಳಿಯುವುದಕ್ಕಾಗಿ ಅವರ ವೆಬ್‌ಸೈಟ್‌ಗಳಿಗೆ 1 ಮಿಲಿಯನ್ ಭೇಟಿಗಳಿಗೆ ಕಾರಣವಾಗಿದೆ.
ಇನ್ನಷ್ಟು ತಿಳಿಯಿರಿLGBTQ+ ಯುವಜನರಿಗಾಗಿ ಇರುವ, ವಿಶ್ವದ ಅತಿ ದೊಡ್ಡ ಆತ್ಮಹತ್ಯೆ ತಡೆ ಮತ್ತು ಮಾನಸಿಕ ಆರೋಗ್ಯ ಸಂಸ್ಥೆಯಾದ ದಿ ಟ್ರೆವೋರ್ ಪ್ರಾಜೆಕ್ಟ್‌ಗೆ Google.org, Google.org Fellowship ನ ಮೂಲಕ ಗಣನೀಯ ನಿಧಿಸಹಾಯ ಮತ್ತು ತಾಂತ್ರಿಕ ಬೆಂಬಲವನ್ನು ಒದಗಿಸಿದೆ. ಆಪತ್ಕಾಲದ ಸೇವೆಗಳನ್ನು ವರ್ಧಿಸಲು, ಆಪತ್ಕಾಲದ ಸಮಾಲೋಚಕರಿಗೆ ತರಬೇತಿ ನೀಡಲು ಮತ್ತು ಜಗತ್ತಿನಾದ್ಯಂತ ಕಷ್ಟಪಡುತ್ತಿರುವ ಮಿಲಿಯನ್‌ಗಟ್ಟಲೆ ಎಳೆಯರನ್ನು ತಲುಪಲು ಈ ಕೊಲಬೊರೇಶನ್ AI ಅನ್ನು ಬಳಸುತ್ತದೆ.
ಇನ್ನಷ್ಟು ತಿಳಿಯಿರಿಎಳೆಯರಿಗಾಗಿ ಮಾನಸಿಕ ಆರೋಗ್ಯ ಸಂಪನ್ಮೂಲಗಳು
ತಮ್ಮ ಮಕ್ಕಳು ನೋಡುವ ಕಂಟೆಂಟ್ ಮತ್ತು ಅವರು ಆನ್‌ಲೈನ್‌ನಲ್ಲಿ ವ್ಯಯಿಸುವ ಸಮಯವನ್ನು ನಿಯಂತ್ರಿಸಲು ಪೋಷಕರಿಗೆ ಬೇಕಾದ ಟೂಲ್‌ಗಳನ್ನು ನಾವು ಒದಗಿಸುತ್ತೇವೆ. ಮಕ್ಕಳು ಆನ್‌ಲೈನ್‌ನಲ್ಲಿ ಕಲಿಯುವಾಗ ಮತ್ತು ಎಕ್ಸ್‌ಪ್ಲೋರ್ ಮಾಡುವಾಗ ಅವರಿಗೆ ಮಾರ್ಗದರ್ಶನ ನೀಡಲು ಸಹಾಯ ಮಾಡುವುದಕ್ಕಾಗಿ ಡಿಜಿಟಲ್ ಗ್ರೌಂಡ್ ನಿಯಮಗಳನ್ನು ಸೆಟ್ ಮಾಡಲು Family Link ಆ್ಯಪ್ ಅವಕಾಶ ನೀಡುತ್ತದೆ. ಮಕ್ಕಳಿಗೆ ಸೂಕ್ತವಾದ ಕಂಟೆಂಟ್‌ಗಾಗಿ ನೀವು Google TV ಯಲ್ಲಿ ಯಾವುದೇ ವಯೋಮಾನಕ್ಕಾಗಿ ಕಿಡ್ಸ್ ಪ್ರೊಫೈಲ್‌ಗಳನ್ನು ಸಹ ಸೆಟ್ ಮಾಡಬಹುದು ಅಥವಾ ಮುಖ್ಯ YouTube ಅನುಭವದಲ್ಲಿ, ಪೋಷಕರು ಆಯ್ಕೆ ಮಾಡುವುದಕ್ಕಾಗಿ ಇರುವ ಮೂರು ಸೂಕ್ತ ಕಂಟೆಂಟ್ ಸೆಟ್ಟಿಂಗ್‌ಗಳು, ಡಿಜಿಟಲ್ ಯೋಗಕ್ಷೇಮ ಮತ್ತು ಗೌಪ್ಯತೆ ರಕ್ಷಣೆಗಳು, ಪೋಷಕರ ನಿಯಂತ್ರಣಗಳು ಮತ್ತು ಸೀಮಿತ ಫೀಚರ್‌ಗಳಿರುವ ಮೇಲ್ವಿಚಾರಣೆ ಮಾಡಿದ ಖಾತೆಯನ್ನು ರಚಿಸಬಹುದು.
ತಂತ್ರಜ್ಞಾನದೊಂದಿಗೆ ಆರೋಗ್ಯಪೂರ್ಣ ಸಂಬಂಧಗಳನ್ನು ಬೆಳೆಸಿಕೊಳ್ಳಲು, ಪ್ರಮುಖ ಶೈಕ್ಷಣಿಕ ಸಂಸ್ಥೆಗಳೊಂದಿಗಿನ ಪ್ರಾಜೆಕ್ಟ್‌ಗಳನ್ನು ಬೆಂಬಲಿಸಲು Google.org $15M ಅನ್ನು ಸಹ ಮೀಸಲಿಟ್ಟಿದೆ. ನಮ್ಮ Be Internet Awesome ಪಠ್ಯಕ್ರಮವನ್ನು ಆಧರಿಸಿ, ಮೋಜು ಮತ್ತು ಆಸಕ್ತಿದಾಯಕ ಚಟುವಟಿಕೆಗಳಿಂದ ತುಂಬಿರುವ ವಿಶೇಷ ಸಂಚಿಕೆಯನ್ನು ರಚಿಸುವುದಕ್ಕಾಗಿ ನಾವು ಹೈಲೈಟ್ಸ್ ಮ್ಯಾಗಜಿನ್ ಜೊತೆಗೆ ಪಾಲುದಾರಿಕೆಯನ್ನು ಹೊಂದಿದ್ದೇವೆ. ಕ್ವಿಜ್‌ಗಳು, ಪಜಲ್‌ಗಳು ಮತ್ತು ಕೆಲವೊಂದು ಕ್ರಾಫ್ಟ್ ಪ್ರಾಜೆಕ್ಟ್‌ಗಳಿಂದಲೂ ಮಕ್ಕಳು ಸ್ಮಾರ್ಟ್ ಆಗಿರಲು, ಆತ್ಮವಿಶ್ವಾಸದಿಂದಿರಲು ಮತ್ತು ಆನ್‍ಲೈನ್‌ನಲ್ಲಿ ಜವಾಬ್ದಾರಿಯುತ ಎಕ್ಸ್‌ಪ್ಲೋರರ್‌ಗಳಾಗಿರುವುದು ಹೇಗೆ ಎಂಬುದನ್ನು ಕಲಿಯುತ್ತಾರೆ. ಶಿಕ್ಷಕರು ಮತ್ತು ಪೋಷಕರಿಗಾಗಿಯೂ ಉಚಿತ, ಸೂಕ್ತ ಸಂಪನ್ಮೂಲಗಳಿವೆ.
ಈ ಬದ್ಧತೆಯ ಭಾಗವಾಗಿ, ನಾವು ಯುವಜನರ ಮಾನಸಿಕ ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಇರುವ ಈ ಪ್ರಮುಖ ಶೈಕ್ಷಣಿಕ ಲಾಭರಹಿತ ಸಂಸ್ಥೆಗಳಿಗಾಗಿ ಹೊಸ ನಿಧಿಸಹಾಯದ ರೂಪದಲ್ಲಿ $10 ಮಿಲಿಯನ್ ಅನ್ನು ಸಹ ಘೋಷಿಸಿದ್ದೇವೆ: ದಿ ರೇರ್ ಇಂಪ್ಯಾಕ್ಟ್ ಫಂಡ್, ಡೋನರ್ಸ್ ಚೂಸ್, ದಿ JED ಫೌಂಡೇಶನ್, ಚೈಲ್ಡ್ ಮೈಂಡ್ ಇನ್‌ಸ್ಟಿಟ್ಯೂಟ್ ಮತ್ತು ದಿ ಸ್ಟೀವ್ ಫಂಡ್ — ಮತ್ತು ಈ ಮೂಲಕ ಯುವಜನರ ಡಿಜಿಟಲ್ ಯೋಗಕ್ಷೇಮ ಮತ್ತು ಆನ್‌ಲೈನ್ ಸುರಕ್ಷತೆಗಾಗಿ ನಮ್ಮ ಸಮಗ್ರ ಬದ್ಧತೆಯನ್ನು $25 ಮಿಲಿಯನ್‌ಗೆ ಹೆಚ್ಚಿಸಿದ್ದೇವೆ. ಈ ನಿಧಿಸಹಾಯದ ಮೂಲಕ ಮಾನಸಿಕ ಆರೋಗ್ಯ ತರಬೇತಿ ಮತ್ತು ಸಂಪನ್ಮೂಲಗಳನ್ನು ಒಂದು ಮಿಲಿಯನ್ ಶಾಲಾ ಮಕ್ಕಳು ಮತ್ತು ಹತ್ತು ಸಾವಿರ ಶಿಕ್ಷಕರಿಗೆ ನಾವು ಬಿಡುಗಡೆ ಮಾಡಿದ್ದೇವೆ.
ಗೂಗ್ಲರ್‌ಗಳು ಮತ್ತು ಅವರ ಕುಟುಂಬಗಳಿಗಾಗಿ ಮಾನಸಿಕ ಆರೋಗ್ಯವನ್ನು ನಾವು ಬೆಂಬಲಿಸುತ್ತೇವೆ
ನಮ್ಮ ಮೆಡಿಕಲ್ ಪ್ಲಾನ್‌ಗಳನ್ನು, ಮಾನಸಿಕ ಆರೋಗ್ಯ ಸೇವೆಗಳನ್ನು ಕವರ್ ಮಾಡುವ ಹಾಗೆ ವಿನ್ಯಾಸಗೊಳಿಸಲಾಗಿದೆ. ನಮ್ಮ ಉದ್ಯೋಗಿ ಸಹಾಯ ಪ್ರೋಗ್ರಾಂ, ಅಗತ್ಯ ಸಮಯದಲ್ಲಿ ಸಮಾಲೋಚನೆಯನ್ನು ಒದಗಿಸುತ್ತದೆ ಮತ್ತು ತಮ್ಮ ಮಾನಸಿಕ ಆರೋಗ್ಯದ ವಿಚಾರದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ಉದ್ಯೋಗಿಗಳಿಗೆ ಇನ್ನೂ ಉತ್ತಮವಾಗಿ ಬೆಂಬಲ ನೀಡಲು ನಾವು ಮ್ಯಾನೇಜರ್‌ಗಳಿಗೆ ತರಬೇತಿಯನ್ನು ಒದಗಿಸುತ್ತೇವೆ. ಯು.ಎಸ್‌ನಲ್ಲಿ, ನಮ್ಮ Google Health ಆ್ಯಂಡ್ ವೆಲ್‌ನೆಸ್ ಸೆಂಟರ್ ಪ್ರೋಗ್ರಾಂ, ಪರವಾನಗಿಯಿರುವ ಆನ್-ಸೈಟ್ ಸಮಾಲೋಚಕರಿಗೆ ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳಿಗೆ ಆ್ಯಕ್ಸೆಸ್ ಅನ್ನು ವಿಸ್ತರಿಸುತ್ತಿದೆ.