ಸಹಯೋಗದ ಮೂಲಕ ಆರೋಗ್ಯದ ಪ್ರಭಾವವನ್ನು ವೇಗಗೊಳಿಸುವುದು

ಸಂಕೀರ್ಣ ಆರೋಗ್ಯ ಸವಾಲುಗಳನ್ನು ನಿಭಾಯಿಸಲು ಸ್ಟ್ರ್ಯಾಟೆಜಿಕ್ ಹೆಲ್ತ್ ಸಲ್ಯೂಷನ್ಸ್ (SHS) ತಂಡವು ಉತ್ಸುಕವಾಗಿದೆ. ನೈಜ-ಜಗತ್ತಿನ ಬಳಕೆಯ ಸಂದರ್ಭಗಳು ಮತ್ತು ಪಾಲುದಾರರ ಫೀಡ್‌ಬ್ಯಾಕ್ ಅನ್ನು ಆಧರಿಸಿ ನಾವು ಪುನರಾವರ್ತಿತ ವಿಧಾನವನ್ನು ಒಳಗೊಳ್ಳುತ್ತೇವೆ, ನಿರಂತರವಾಗಿ ಕಲಿಯುತ್ತೇವೆ ಮತ್ತು ನಮ್ಮ ಪರಿಹಾರಗಳನ್ನು ಅಳವಡಿಸಿಕೊಳ್ಳುತ್ತೇವೆ. ನಮ್ಮ ಕೆಲಸವು - ಅಗತ್ಯವನ್ನು ಗುರುತಿಸುವುದರಿಂದ ಆರಂಭಿಸಿ, ಪರಿಹಾರವನ್ನು ರೂಪಿಸುವುದು ಮತ್ತು ವಿಶಾಲ ಜನಸಂಖ್ಯೆಯಾದ್ಯಂತ ಪರಿಹಾರದ ಅಳವಡಿಕೆಯನ್ನು ವೇಗಗೊಳಿಸಲು ವಿಸ್ತೃತ ಬೆಂಬಲವನ್ನು ಒದಗಿಸುವವರೆಗೂ ಸಂಪೂರ್ಣ ಪರಿಹಾರದ ಜೀವನಚಕ್ರವನ್ನು ವ್ಯಾಪಿಸಿದೆ. ಇದನ್ನು ಮಾಡಲು, ನಾವು ನಿರ್ಮಿಸುವ ಉತ್ಪನ್ನಗಳು ಮತ್ತು ಸೇವೆಗಳ ಮೂಲಕ ಗ್ರಾಹಕರು, ಆರೈಕೆದಾರರು ಮತ್ತು ಅವರು ಸೇವೆ ಒದಗಿಸುತ್ತಿರುವ ಸಮುದಾಯಗಳ ಅಗತ್ಯತೆಗಳನ್ನು ಖಚಿತಪಡಿಸಿಕೊಳ್ಳಲು ನಮ್ಮ ಪಾಲುದಾರರ ಸಹಯೋಗದಲ್ಲಿ ನಾವು ಕಾರ್ಯನಿರ್ವಹಿಸುತ್ತೇವೆ.

ವ್ಯಕ್ತಿಯೊಬ್ಬರು ತಮ್ಮ ಮಗಳಿಗೆ ಕೂಸುಮರಿ ಮಾಡುತ್ತಿರುವುದು

ನಮ್ಮ ಧ್ಯೇಯ

Google ಮತ್ತು ಆರೋಗ್ಯ ಪರಿಸರ ವ್ಯವಸ್ಥೆಯಾದ್ಯಂತ ಉತ್ಪನ್ನಗಳೊಂದಿಗಿನ ಸಂಪರ್ಕಗಳ ಮೂಲಕ ಜಾಗತಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಉತ್ಪನ್ನಗಳು ಮತ್ತು ಸೇವೆಗಳ ಅಳವಡಿಕೆಯನ್ನು ರಚಿಸುವುದು, ಪ್ರೊಟೊಟೈಪ್ ಮಾಡುವುದು ಮತ್ತು ವೇಗಗೊಳಿಸುವುದು ಸ್ಟ್ರ್ಯಾಟೆಜಿಕ್ ಹೆಲ್ತ್ ಸಲ್ಯೂಷನ್ಸ್‌ನ ಉದ್ದೇಶವಾಗಿದೆ.

ನಮ್ಮ ಸಹ-ರಚನೆ ಫ್ರೇಮ್‌ವರ್ಕ್
ನಮ್ಮ SHS ಪರಿಣಿತ, ಕ್ರಾಸ್-ಫಂಕ್ಷನಲ್ ತಂಡವು ಕ್ಷಿಪ್ರ ಉತ್ಪನ್ನದ ಪ್ರೊಟೊಟೈಪ್ ಮಾಡುವುದು, ಇನ್-ಮಾರ್ಕೆಟ್ ಮೌಲ್ಯೀಕರಣ ಮತ್ತು ಸ್ಕೇಲ್ ಮಾಡಲಾದ ಅಭಿವೃದ್ಧಿಯೊಂದಿಗೆ ಪರಿಕಲ್ಪನೆಯಿಂದ ವಾಸ್ತವಕ್ಕೆ ಐಡಿಯಾಗಳನ್ನು ತೆಗೆದುಕೊಳ್ಳುತ್ತದೆ. Google ಮತ್ತು ವಿಶಾಲವಾದ ಆರೋಗ್ಯ ಪರಿಸರ ವ್ಯವಸ್ಥೆಯಾದ್ಯಂತ ಉತ್ಪನ್ನಗಳ ಒಟ್ಟುಗೂಡಿಸಿದ ಜ್ಞಾನ ಮತ್ತು ಪರಿಣಿತಿಯನ್ನು ಬಳಸಿಕೊಳ್ಳುವ ಮೂಲಕ, ನಾವು ಪರಿಹಾರಗಳನ್ನು ನಿರ್ಮಿಸುತ್ತಿದ್ದು, ಅವು:
ಪರಿಣಾಮಕಾರಿಯಾಗಿವೆ
ಪೂರೈಸದ ಅಗತ್ಯಗಳು ಮತ್ತು ನೈಜ-ಜಗತ್ತಿನ ಅರೋಗ್ಯ ಸವಾಲುಗಳನ್ನು ಪರಿಹರಿಸುವುದರ ಮೇಲೆ ಗಮನ ಕೇಂದ್ರೀಕರಿಸಿದೆ.
ಬಳಕೆದಾರ-ಕೇಂದ್ರಿತವಾಗಿವೆ
ಗ್ರಾಹಕರು, ಆರೈಕೆದಾರರು ಮತ್ತು ಸಮುದಾಯದ ಅಗತ್ಯಗಳು ಮತ್ತು ಆದ್ಯತೆಗಳನ್ನು ಗಮನದಲ್ಲಿರಿಸಿಕೊಂಡು ವಿನ್ಯಾಸಗೊಳಿಸಲಾಗಿದೆ.
ಸಮಾನವಾಗಿವೆ
ಪ್ರತಿಯೊಬ್ಬರೂ ತಮ್ಮ ಸಂಪೂರ್ಣ ಆರೋಗ್ಯ ಸಾಮರ್ಥ್ಯವನ್ನು ಸಾಧಿಸಲು ಸಹಾಯ ಮಾಡುವುದಕ್ಕೆ ಆರೋಗ್ಯ ಸಮಾನತೆಯನ್ನು ಮುನ್ನಡೆಸುವ ಗುರಿಯನ್ನು ಹೊಂದಿದೆ.
ಖಾಸಗಿಯಾಗಿವೆ
ಜವಾಬ್ದಾರಿಯುತ ಡೇಟಾ ನಿರ್ವಹಣಾ ಅಭ್ಯಾಸಗಳು ಮತ್ತು ಪ್ರಮುಖ ಗೌಪ್ಯತೆ ಹಾಗೂ ಭದ್ರತೆ ತತ್ವಗಳಿಂದ ಸುರಕ್ಷಿತವಾಗಿದೆ.
ಸಮರ್ಥಿಸಬಹುದಾದವುಗಳಾಗಿವೆ
ಹೆಚ್ಚಿನ ಸಂಖ್ಯೆಯ ಜನರನ್ನು ತಲುಪಲು ಮತ್ತು ಜಾಗತಿಕ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರಲು ಸಾಧ್ಯವಾಗುತ್ತದೆ.
ಅವಕಾಶದ ಆಯ್ಕೆ
1

ಅವಕಾಶದ ಆಯ್ಕೆ

ಒಟ್ಟಾರೆ ಕಾರ್ಯತಂತ್ರದಾದ್ಯಂತ ಅಗತ್ಯತೆ, ಸಹಯೋಗಿಗಳನ್ನು ಗುರುತಿಸುವುದು ಮತ್ತು ಒಟ್ಟುಗೂಡಿಸುವುದನ್ನು ನಿರ್ಣಯಿಸುವ ಮೂಲಕ ಸಹ-ರಚನೆ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ.

ಪರಿಹಾರ ಸಹ-ರಚನೆ
2

ಪರಿಹಾರ ಸಹ-ರಚನೆ

ಬಳಕೆದಾರರ ಅನುಭವ ಮತ್ತು ಡಿಸೈನ್ ಸಂಶೋಧನೆಯೊಂದಿಗೆ ಮೌಲ್ಯ, ಉತ್ಪನ್ನದ ಅವಶ್ಯಕತೆಗಳು ಮತ್ತು ಪರಿಹಾರ-ಮಾರುಕಟ್ಟೆಗೆ ಸೂಕ್ತವಾಗುವುದನ್ನು ವ್ಯಾಖ್ಯಾನಿಸಲು ಒಟ್ಟಾಗಿ ಕಾರ್ಯನಿರ್ವಹಿಸುವುದು.

ಪ್ರೊಟೊಟೈಪ್ ಮತ್ತು ಪರೀಕ್ಷೆ
3

ಪ್ರೊಟೊಟೈಪ್ ಮತ್ತು ಪರೀಕ್ಷೆ

ಪರಿಹಾರವು ಬಳಕೆದಾರರಿಗೆ ನಿರ್ದಿಷ್ಟ ಗುಣಮಟ್ಟವನ್ನು ನೀಡುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಮೌಲ್ಯೀಕರಣ ಮತ್ತು ಫೀಡ್‌ಬ್ಯಾಕ್ ಸಂಗ್ರಹಣೆಗಾಗಿ ಪುನರಾವರ್ತಿತ ಪರೀಕ್ಷೆ.

ಬೃಹತ್ ಪ್ರಮಾಣದಲ್ಲಿ ಬಿಡುಗಡೆ
4

ಬೃಹತ್ ಪ್ರಮಾಣದಲ್ಲಿ ಬಿಡುಗಡೆ

ವೈವಿಧ್ಯಮಯ ಜನಸಮೂಹಗಳ ಆರೋಗ್ಯದ ಮೇಲೆ ಉಂಟಾಗುವ ಪರಿಹಾರದ ಪರಿಣಾಮವನ್ನು ಬೆಂಬಲಿಸಲು ಉತ್ಪನ್ನಗಳಾದ್ಯಂತ ಸಮಗ್ರ ಬಿಡುಗಡೆ.

ಜೊತೆಯಾಗಿ ಜಾಗತಿಕ ಆರೋಗ್ಯ ಸವಾಲುಗಳನ್ನು ಪರಿಹರಿಸುವುದು

ಜಾಗತಿಕ ಆರೋಗ್ಯ ಸವಾಲುಗಳನ್ನು ಪರಿಹರಿಸುವ ನವೀನ ಪರಿಹಾರಗಳ ಅನ್ವೇಷಣೆಯಲ್ಲಿ ಅವಕಾಶ ಒದಗಿಸಲು SHS ಕಾರ್ಯನಿರ್ವಹಿಸುತ್ತದೆ. ಯಶಸ್ಸಿಗೆ ಸಹಯೋಗವೇ ಪ್ರಮುಖ ಅಂಶ ಎಂದು ನಾವು ಭಾವಿಸಿದ್ದು, ಆ ಪ್ರಕಾರವಾಗಿ ವೈವಿಧ್ಯಮಯ ಪರಿಣಿತಿ ಮತ್ತು ಸಂಪನ್ಮೂಲಗಳನ್ನು ಬಳಸಿಕೊಳ್ಳಲು Google ಸಬ್ಜೆಕ್ಟ್ ಮತ್ತು ಉತ್ಪನ್ನ ಪರಿಣಿತರು, ಪ್ರಮುಖ ಆರೋಗ್ಯ ಸಂಸ್ಥೆಗಳು, ಆರೋಗ್ಯ ಸಚಿವಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದ್ದೇವೆ. ನಮ್ಮ ಕೆಲಸದ ಉದಾಹರಣೆಗಳು ಇವುಗಳನ್ನು ಒಳಗೊಂಡಿವೆ:

Bristol-Myers Squibb-Pfizer Alliance ಮೂಲಕ ಏಟ್ರಿಯಲ್ ಫೈಬ್ರಿಲೇಶನ್ ಅನ್ನು ಪತ್ತೆ ಮಾಡುವಿಕೆಯಲ್ಲಿ ಇರುವ ಕೊರತೆಯನ್ನು ಹೋಗಲಾಡಿಸುವುದು

  • Bristol-Myers Squibb-Pfizer Alliance ಜೊತೆಗಿನ ನಮ್ಮ ಸಹಯೋಗವು, ಪಾರ್ಶ್ವವಾಯುವಿಗೆ ಪ್ರಮುಖ ಅಪಾಯದ ಅಂಶವಾಗಿರುವ ಏಟ್ರಿಯಲ್ ಫೈಬ್ರಿಲೇಶನ್‌ನ (AFib) ಆರಂಭಿಕ ಡಯಾಗ್ನಾಸಿಸ್ ಅನ್ನು ಸುಧಾರಿಸುವ ಗುರಿ ಹೊಂದಿದೆ. ಜೊತೆಯಾಗಿ, ಅಪಾಯದಲ್ಲಿರುವ ಜನರಿಗೆ ನಾವು ಮಾರ್ಗದರ್ಶನವನ್ನು ಅಭಿವೃದ್ಧಿಪಡಿಸಿದ್ದೇವೆ, ನಮ್ಮ FDA-ಅನುಮೋದಿತ ಅಲ್ಗಾರಿದಮ್‌ನೊಂದಿಗೆ ಬಳಕೆದಾರರಿಗೆ Afib ನ ಡಯಾಗ್ನಾಸಿಸ್‌ಗಳ ಒಳನೋಟವನ್ನು ಒದಗಿಸುತ್ತೇವೆ. ಇನ್ನಷ್ಟು ತಿಳಿಯಿರಿ

ಹೃದಯ ರಕ್ತನಾಳದ ಕಾಯಿಲೆಯ ಡಯಾಗ್ನಸಿಸ್ ಮಾಡಲು AI ಅನ್ನು ಬಳಸಿಕೊಳ್ಳುವುದು

  • ಹೃದಯರಕ್ತನಾಳದ ಕಾಯಿಲೆಯ ಡಯಾಗ್ನಸಿಸ್ ಮತ್ತು ಚಿಕಿತ್ಸೆಯನ್ನು ಸುಧಾರಿಸಲು ಸಹಾಯ ಮಾಡುವ ಪ್ರವರ್ತಕ ಯೋಜನೆ. ಈ ಯೋಜನೆಯು ECG ಗಳನ್ನು ವಿಶ್ಲೇಷಿಸಲು ಮತ್ತು ಧರಿಸುವಂತಹವುಗಳ ಮೂಲಕ ದೂರದಿಂದಲೇ ರೋಗಿಗಳ ಮೇಲೆ ನಿಗಾವಹಿಸಲು AI ಅನ್ನು ಬಳಸುತ್ತದೆ. ಇದು ಆರಂಭಿಕ ಡಯಾಗ್ನಸಿಸ್ ಮತ್ತು ವೈಯಕ್ತೀಕರಿಸಿದ ಚಿಕಿತ್ಸಾ ಯೋಜನೆಗಳಿಗೆ ಅವಕಾಶ ನೀಡುತ್ತದೆ, ಆ ಮೂಲಕ ಆರೋಗ್ಯ ರಕ್ಷಣೆಗಾಗಿ AI ನ ಬಳಕೆಯಲ್ಲಿ ಮುನ್ನಡೆಯಲು ಪ್ರಮುಖ ಗುರುತು ಮೂಡಿಸುತ್ತದೆ.

ಹಗಾ ಟೀಚಿಂಗ್ ಹಾಸ್ಪಿಟಲ್‌ಗಾಗಿ ಆರೋಗ್ಯದ ಅತ್ಯುತ್ತಮ ನೋಟವನ್ನು ರೂಪಿಸುವುದು

  • ಹೇಗ್‌ನ ಹಗಾ ಟೀಚಿಂಗ್ ಹಾಸ್ಪಿಟಲ್ ಸಹಯೋಗದೊಂದಿಗೆ, ನಾವು ME-TIME ಎಂಬ ಹೆಸರಿನ ಪ್ರಾಯೋಗಿಕ ಅಧ್ಯಯನದೊಂದಿಗೆ ಆರೋಗ್ಯ ಸೇವೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತಿದ್ದೇವೆ, ಇದರಲ್ಲಿ ಹೃದ್ರೋಗದ ಅಪಾಯದಲ್ಲಿರುವ 100 ವ್ಯಕ್ತಿಗಳು ಮಣಿಕಟ್ಟಿನಲ್ಲಿ ಧರಿಸುವ ಧರಿಸಬಹುದಾಗಿರುವುದರ ಮೂಲಕ ಮನೆಯಲ್ಲಿ ಆರೋಗ್ಯ ಮೆಟ್ರಿಕ್‌ಗಳ ಮೇಲೆ ನಿಗಾವಹಿಸುತ್ತಾರೆ. ಎನ್‌ಕ್ರಿಪ್ಟ್ ಮಾಡಲಾದ ಡೇಟಾವು ವೈದ್ಯರಿಗೆ ನೈಜ-ಸಮಯದಲ್ಲಿ ಅದನ್ನು ವಿಶ್ಲೇಷಿಸಲು ಅನುಕೂಲ ಮಾಡಿಕೊಡುತ್ತದೆ, ಆರಂಭಿಕ ಪತ್ತೆ ಮತ್ತು ಮಾರಣಾಂತಿಕ ಆರೋಗ್ಯ ಪರಿಸ್ಥಿತಿಗಳ ತಡೆಗಟ್ಟುವಿಕೆಯನ್ನು ಸಮರ್ಥವಾಗಿ ಸಕ್ರಿಯಗೊಳಿಸುತ್ತದೆ. ಇನ್ನಷ್ಟು ತಿಳಿಯಿರಿ

ವಯೋವೃದ್ಧರನ್ನು ಆರೋಗ್ಯಯುತವಾದ ಭವಿಷ್ಯಕ್ಕೆ ಸಂಪರ್ಕಿಸಲು ವಿಮಾದಾರರೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವುದು

  • ಸರ್ಕಾರಿ ಪ್ರಾಯೋಜಿತ ಮತ್ತು ಖಾಸಗಿ ಆರೋಗ್ಯ ವಿಮಾದಾರರೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವ ಮೂಲಕ ವಯೋವೃದ್ಧರಿಗೆ ವೈಯಕ್ತೀಕರಿಸಿದ ಯೋಗಕ್ಷೇಮ ಬೆಂಬಲವನ್ನು ಸುಲಭವಾಗಿ ಇನ್ನಷ್ಟು ದೊರೆಯುವಂತೆ ಮಾಡಲು ಇರುವ ಪ್ರೋಗ್ರಾಮಿಂಗ್. ಆರೈಕೆಯನ್ನು ಸುಧಾರಿಸಲು ಮತ್ತು ವೈಯಕ್ತೀಕರಿಸಲು ಬಳಸಬಹುದಾದ ಡೇಟಾವನ್ನು ಒದಗಿಸುವ ಮೂಲಕ ದೀರ್ಘಕಾಲಿಕ ಆರೋಗ್ಯಸಂಬಂಧಿ ಪರಿಸ್ಥಿತಿಗಳಿರುವ ಜನರಿಗೆ ತಮ್ಮ ವೈದ್ಯರೊಂದಿಗೆ ಇರುವ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುವುದು ಗುರಿಯಾಗಿದೆ.