Google Health Studies ಮೂಲಕ ಸಂಶೋಧನೆಯಲ್ಲಿ ಭಾಗವಹಿಸಿ

ಪ್ರಮುಖ ಸಂಸ್ಥೆಗಳಲ್ಲಿ ನಡೆಯುತ್ತಿರುವ ಬಹುಮುಖ್ಯ ಆರೋಗ್ಯ ಸಂಶೋಧನೆಗೆ ನಿಮ್ಮ ಫೋನ್‌ನಿಂದಲೇ ಸರಳವಾಗಿ ಮತ್ತು ಸುರಕ್ಷಿತವಾಗಿ ಕೊಡುಗೆ ನೀಡಲು ನಿಮ್ಮನ್ನು ಸಶಕ್ತಗೊಳಿಸುವ ಆ್ಯಪ್.

Google ಸಹಾಯದಿಂದ ವಿಜ್ಞಾನಿಗಳ ನೇತೃತ್ವದಲ್ಲಿ ಆರೋಗ್ಯದ ಕುರಿತು ಸಂಶೋಧನೆ

ವೈದ್ಯರು, ನರ್ಸ್‌ಗಳು ಮತ್ತು ಆರೋಗ್ಯ ಸಂಶೋಧಕರ ಸಹಭಾಗಿತ್ವದಲ್ಲಿ, Google Health ಸುರಕ್ಷಿತ ತಂತ್ರಜ್ಞಾನವನ್ನು ಒದಗಿಸುತ್ತಿದೆ, ಅದು ಆರೋಗ್ಯದ ಕುರಿತು ನಮ್ಮ ತಿಳುವಳಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನಮ್ಮ ಪಾಲುದಾರಿಕೆಗಳು ಯಾವಾಗಲೂ ಯೋಗಕ್ಷೇಮವನ್ನು ಸುಧಾರಿಸಲು ಮುಖ್ಯವಾಗಿರುವ ಪ್ರಶ್ನೆಗಳ ಮೇಲೆ ಗಮನ ಕೇಂದ್ರೀಕರಿಸುವ ಆರೋಗ್ಯ ತಜ್ಞರಿಂದ ಮಾರ್ಗದರ್ಶನ ಪಡೆಯುತ್ತವೆ.

ಪಝಲ್ ತುಣುಕುಗಳನ್ನು ಹಿಡಿದಿರುವ ಜನರ ಚಿತ್ರಣ

ನಿಮ್ಮ ಸಮುದಾಯದ ಆರೋಗ್ಯವನ್ನು ಸುಧಾರಿಸುವುದು

ವ್ಯಕ್ತಿಗಳು ನಿರ್ದಿಷ್ಟ ಆರೋಗ್ಯ ಅಗತ್ಯತೆಗಳನ್ನು ಹೊಂದಿರುವಂತೆ, ವೈಯಕ್ತಿಕ ಸಮುದಾಯಗಳೂ ಸಹ ಹೊಂದಿರುತ್ತವೆ. Google Health Studies ಸಂಶೋಧನೆಯಲ್ಲಿ ಭಾಗವಹಿಸುವ ಮೂಲಕ, ನಿಮ್ಮ ಸಮುದಾಯದ ನಿರ್ದಿಷ್ಟ ಆರೋಗ್ಯ ಸಮಸ್ಯೆಗಳು ಮತ್ತು ಅಗತ್ಯತೆಗಳ ಬಗ್ಗೆ ಉತ್ತಮ ತಿಳುವಳಿಕೆಯನ್ನು ಅಭಿವೃದ್ಧಿಪಡಿಸಲು ಪ್ರಮುಖ ಸಂಸ್ಥೆಗಳು ಮತ್ತು ಸಂಶೋಧಕರಿಗೆ ನೀವು ಸಹಾಯ ಮಾಡಬಹುದು. ನಿಮ್ಮ ಅಧ್ಯಯನದ ಭಾಗವಹಿಸುವಿಕೆಯು ನಿಮ್ಮ ಪ್ರದೇಶದ ಆರೋಗ್ಯದ ಮೇಲೆ ಮತ್ತು ಎಲ್ಲರಿಗೂ ಸಂಬಂಧಿಸಿದಂತೆ ಭವಿಷ್ಯದ ಆರೋಗ್ಯಸೇವೆಯ ಮೇಲೆ ಸಹ ಪರಿಣಾಮ ಬೀರಬಹುದು.

ಡಿಜಿಟಲ್ ಯೋಗಕ್ಷೇಮದ ಕುರಿತ ಅಧ್ಯಯನ

ಉಸಿರಾಟ ಆರೋಗ್ಯದ ಕುರಿತ ಅಧ್ಯಯನ

ಡಿಜಿಟಲ್ ಯೋಗಕ್ಷೇಮದ ಕುರಿತ ಅಧ್ಯಯನ

ಡಿಜಿಟಲ್ ಯೋಗಕ್ಷೇಮದ ತಿಳುವಳಿಕೆಗೆ ಕೊಡುಗೆ ನೀಡಿ

ಲಭ್ಯವಿರುವ ಎರಡನೇ ಅಧ್ಯಯನವು ಒರೆಗಾನ್ ವಿಶ್ವವಿದ್ಯಾಲಯದ ಡಿಜಿಟಲ್ ಮೆಂಟಲ್ ಹೆಲ್ತ್ ಸೆಂಟರ್ ನಡೆಸಿದ ಡಿಜಿಟಲ್ ಯೋಗಕ್ಷೇಮದ ಅಧ್ಯಯನವಾಗಿದೆ. ನೀವು ಈ ಅಧ್ಯಯನದಲ್ಲಿ ಭಾಗವಹಿಸಿದರೆ, ಮಾನಸಿಕ ಮತ್ತು ದೈಹಿಕ ಯೋಗಕ್ಷೇಮದ ಜೊತೆಗೆ ಸ್ಮಾರ್ಟ್‌ಫೋನ್ ಬಳಕೆಯ ಪ್ಯಾಟರ್ನ್‌ಗಳು ಹೇಗೆ ಸಂಬಂಧಿಸಿವೆ ಎಂಬುದನ್ನು ಸಂಶೋಧಕರಿಗೆ ಅರ್ಥಮಾಡಿಕೊಳ್ಳುವುದಕ್ಕೆ ಸಹಾಯ ಮಾಡಲು ನೀವು ಡೇಟಾವನ್ನು ಒದಗಿಸುತ್ತೀರಿ.

ಡಾ. ನಿಕ್ ಆಲೆನ್‌ರವರ ಫೋಟೋ

ಡಾ. ನಿಕೋಲಸ್ ಅಲೆನ್, ಆನ್ ಸ್ವಿಂಡೆಲ್ಸ್ ಕ್ಲಿನಿಕಲ್ ಸೈಕಾಲಜಿ ಪ್ರೊಫೆಸರ್ ಮತ್ತು ಒರೆಗಾನ್ ವಿಶ್ವವಿದ್ಯಾಲಯದಲ್ಲಿ ಡಿಜಿಟಲ್ ಮೆಂಟಲ್ ಹೆಲ್ತ್ ಕೇಂದ್ರದ ನಿರ್ದೇಶಕರು.

ಡಿಜಿಟಲ್ ತಂತ್ರಜ್ಞಾನಗಳು ಆಧುನಿಕ ಜೀವನದ ಪ್ರತಿಯೊಂದು ಅಂಶವನ್ನು ಪರಿವರ್ತಿಸುತ್ತಿವೆ, ಆದರೆ ಅವುಗಳು ಮಾನವ ಯೋಗಕ್ಷೇಮದ ಜೊತೆಗೆ ಹೇಗೆ ಸಂವಹನ ನಡೆಸುತ್ತವೆ ಎಂಬುದರ ಕುರಿತು ನಾವು ಇನ್ನಷ್ಟು ತಿಳಿದುಕೊಳ್ಳಬೇಕು. ಈ ವಿನೂತನ ಅಧ್ಯಯನವು ಈ ಪ್ರಶ್ನೆಯ ಕುರಿತು ಹೊಸ ಬೆಳಕನ್ನು ಚೆಲ್ಲುತ್ತದೆ.

ಒರೆಗಾನ್ ವಿಶ್ವವಿದ್ಯಾಲಯ

ಉಸಿರಾಟ ಆರೋಗ್ಯದ ಕುರಿತ ಅಧ್ಯಯನ

ಉಸಿರಾಟದ ಕಾಯಿಲೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಂಶೋಧಕರಿಗೆ ಸಹಾಯ ಮಾಡಿ

ಬಾಸ್ಟನ್ ಮಕ್ಕಳ ಆಸ್ಪತ್ರೆ ಮತ್ತು ಹಾರ್ವರ್ಡ್ ಮೆಡಿಕಲ್ ಸ್ಕೂಲ್ ನಡೆಸಿರುವ ಉಸಿರಾದ ಆರೋಗ್ಯದ ಅಧ್ಯಯನವೇ ಮೊಟ್ಟಮೊದಲ ಲಭ್ಯವಿರುವ ಅಧ್ಯಯನವಾಗಿದೆ. ನೀವು ಈ ಅಧ್ಯಯನದಲ್ಲಿ ಭಾಗವಹಿಸಿದರೆ, ಜನಸಂಖ್ಯೆ, ಆರೋಗ್ಯದ ಇತಿಹಾಸ, ವರ್ತನೆ ಮತ್ತು ಸಂಚಾರದ ವಿನ್ಯಾಸಗಳು ಉಸಿರಾಟದ ರೋಗಗಳ ಹರಡುವಿಕೆಗೆ ಹೇಗೆ ಕೊಡುಗೆ ನೀಡುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಂಶೋಧಕರಿಗೆ ಸಹಾಯ ಮಾಡಲು ನೀವು ಡೇಟಾವನ್ನು ಒದಗಿಸುತ್ತೀರಿ.

ಡಾ. ಜಾನ್ ಬ್ರೌನ್‌ಸ್ಟೈನ್‌ರವರ ಫೋಟೋ

ಡಾ. ಜಾನ್ ಬ್ರೌನ್‌ಸ್ಟೈನ್, ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನ ಪ್ರಾಧ್ಯಾಪಕರು ಮತ್ತು ಬಾಸ್ಟನ್ ಮಕ್ಕಳ ಆಸ್ಪತ್ರೆಯಲ್ಲಿ ಪ್ರಧಾನ ಆವಿಷ್ಕಾರ ಅಧಿಕಾರಿ.

Google Health Studies ವೈದ್ಯಕೀಯ ಸಂಶೋಧನೆಯಲ್ಲಿ ಭಾಗವಹಿಸುವ ಸುರಕ್ಷಿತ ಮತ್ತು ಸುಲಭ ವಿಧಾನವನ್ನು ಜನರಿಗೆ ಒದಗಿಸುತ್ತದೆ, ಅದೇ ವೇಳೆ ಉಸಿರಾಟದ ರೋಗಗಳಿಗೆ ಸಂಬಂಧಿಸಿದಂತೆ ಹೊಸಬಗೆಯ ರೋಗಶಾಸ್ತ್ರೀಯ ಒಳನೋಟಗಳನ್ನು ಅನ್ವೇಷಿಸಲು ಸಂಶೋಧಕರಿಗೆ ಅನುವು ಮಾಡಿಕೊಡುತ್ತದೆ.

ಬಾಸ್ಟನ್ ಮಕ್ಕಳ ಆಸ್ಪತ್ರೆ

ಖಾಸಗಿಯಾಗಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ

ಉಸಿರಾಟದ ಆರೋಗ್ಯ ಅಧ್ಯಯನದಲ್ಲಿರುವ ನಿಮ್ಮ ಮಾಹಿತಿಯನ್ನು ರಕ್ಷಿಸುವುದು.

ವ್ಯಕ್ತಿಯೊಬ್ಬ ಫೋನ್ ನೋಡುತ್ತಿರುವುದರ ಚಿತ್ರಣ

ನಿಮ್ಮ ಅಧ್ಯಯನದ ಡೇಟಾ ನಿಮ್ಮ ಸಾಧನದಲ್ಲಿ ಉಳಿಯುತ್ತದೆ

ಆರೋಗ್ಯ ಅಧ್ಯಯನದಲ್ಲಿ ಸೇರಿಕೊಂಡ ನಂತರ, ನೀವು ಸಾಪ್ತಾಹಿಕ ಸಮೀಕ್ಷೆಗಳನ್ನು ಪೂರ್ಣಗೊಳಿಸಲು ಪ್ರಾರಂಭಿಸುತ್ತೀರಿ. ಎಲ್ಲಾ ಸಮಯದಲ್ಲೂ, ನಿಮ್ಮ ವೈಯಕ್ತಿಕ ಸಮೀಕ್ಷೆಯ ಪ್ರತಿಕ್ರಿಯೆಗಳು, ಸ್ಥಳ ಇತಿಹಾಸ ಮತ್ತು ಇತರ ವೈಯಕ್ತಿಕವಾಗಿ ಗುರುತಿಸಬಹುದಾದ ಡೇಟಾ ನಿಮ್ಮ ಸಾಧನದಲ್ಲಿ ಉಳಿಯುತ್ತದೆ.

ಭದ್ರತಾ ಲಾಕ್ ಹೊಂದಿರುವ ಫೋನ್‌ನ ಚಿತ್ರಣ

ನಿಮ್ಮ ಅಧ್ಯಯನದ ಡೇಟಾವನ್ನು ಆಧರಿಸಿ ನಿಮ್ಮ ಸಾಧನವು ಅಂಕಿಅಂಶಗಳನ್ನು ಲೆಕ್ಕಾಚಾರ ಮಾಡುತ್ತದೆ

ಅಧ್ಯಯನದ ಸಮಯದಲ್ಲಿ, ನಿಮ್ಮ ಸಾಧನವು ವಿಭಿನ್ನ ಪ್ರಶ್ನೆಗಳನ್ನು ಸ್ವೀಕರಿಸುತ್ತದೆ, ನಿಮ್ಮ ವೈಯಕ್ತಿಕ ಅಧ್ಯಯನದ ಡೇಟಾವನ್ನು ಆಧರಿಸಿ ಫಲಿತಾಂಶಗಳನ್ನು ಲೆಕ್ಕಾಚಾರ ಮಾಡುತ್ತದೆ ಹಾಗೂ ಸಾರಾಂಶಗೊಳಿಸುತ್ತದೆ ಮತ್ತು ಫೆಡರೇಟೆಡ್ ಅನಾಲಿಟಿಕ್ಸ್ ಮೂಲಕ ನಂತರದ ಒಟ್ಟುಗೂಡಿಸುವಿಕೆಗಾಗಿ ಈ ಫಲಿತಾಂಶಗಳನ್ನು ಎನ್‌ಕ್ರಿಪ್ಟ್ ಮಾಡುತ್ತದೆ.

ಸುರಕ್ಷಿತ ಡೇಟಾವನ್ನು ಚಿತ್ರಿಸುವ ಚಿತ್ರಣ

ಭಾಗವಹಿಸುವವರ ಡೇಟಾವನ್ನು ಒಟ್ಟುಗೂಡಿಸಲಾಗುತ್ತದೆ

ಫೆಡರೇಟೆಡ್ ಅನಾಲಿಟಿಕ್ಸ್ ತಂತ್ರಜ್ಞಾನವನ್ನು ಬಳಸಿಕೊಂಡು ಅನೇಕ ಸಾಧನಗಳಿಂದ ಎನ್‌ಕ್ರಿಪ್ಟ್ ಮಾಡಿದ ಸಾರಾಂಶಗಳನ್ನು ಒಟ್ಟಿಗೆ ಸಂಯೋಜಿಸಲಾಗಿದೆ. Google ಮತ್ತು ಅಧ್ಯಯನ ಪಾಲುದಾರರು ನಿಮ್ಮ ಕುರಿತಾದ ಯಾವುದೇ ವೈಯಕ್ತಿಕ ಅಧ್ಯಯನ ಡೇಟಾವನ್ನು ಸ್ವೀಕರಿಸುವುದಿಲ್ಲ.

ಗ್ರಾಫ್‌ಗಳು ಮತ್ತು ಚಾರ್ಟ್‌ಗಳನ್ನು ವಿಶ್ಲೇಷಿಸುತ್ತಿರುವ ವಿಜ್ಞಾನಿಯ ಗ್ರಾಫಿಕ್

ನಿಮ್ಮ ಗೌಪ್ಯತೆಯನ್ನು ಗೌರವಿಸುವ ಸಂಶೋಧನೆ

ಸಂಯೋಜಿತ ಒಳನೋಟಗಳನ್ನು ಅಧ್ಯಯನ ನಡೆಸುತ್ತಿರುವ ಸಂಶೋಧಕರಿಗೆ ಸುರಕ್ಷಿತವಾಗಿ ಕಳುಹಿಸಲಾಗುತ್ತದೆ. ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸಬಹುದಾದ ಅಧ್ಯಯನ ಡೇಟಾವು Google ಅಥವಾ ಥರ್ಡ್ ಪಾರ್ಟಿಗಳಿಗೆ ಎಂದಿಗೂ ಲಭ್ಯವಾಗುವುದಿಲ್ಲ ಎಂದು ತಿಳಿದುಕೊಂಡು ನೀವು ಆರೋಗ್ಯ ಸಂಶೋಧನೆಗೆ ಸುರಕ್ಷಿತವಾಗಿ ಕೊಡುಗೆ ನೀಡಬಹುದು.

ನಿಮ್ಮ ಆರೋಗ್ಯ ಮಾಹಿತಿಯನ್ನು ರಕ್ಷಿಸಿ

ವೈಯಕ್ತಿಕ ಆರೋಗ್ಯ ಮಾಹಿತಿಯು ಅತ್ಯಂತ ಸೂಕ್ಷ್ಮವಾಗಿದೆ, ಹಾಗಾಗಿ Google Health Studies ನಿಮ್ಮ ಡೇಟಾವನ್ನು ಗೌಪ್ಯ ಮತ್ತು ಸುರಕ್ಷಿತವಾಗಿಡಲು ಗೌಪ್ಯತೆ-ಸಂರಕ್ಷಕ ವಿಧಾನಗಳನ್ನು ಬಳಸುತ್ತದೆ. ನೀವು Google Health Studies ಜೊತೆಗೆ ಸಂಶೋಧನೆಯಲ್ಲಿ ಭಾಗವಹಿಸಲು ನಿರ್ಧರಿಸಿದರೆ, Google ನಿಮ್ಮ ಅಧ್ಯಯನದ ಡೇಟಾವನ್ನು ಮಾರಾಟ ಮಾಡುವುದಿಲ್ಲ ಮತ್ತು ನಿಮಗೆ ಜಾಹೀರಾತುಗಳನ್ನು ತೋರಿಸಲು ಅದನ್ನು ಬಳಸುವುದಿಲ್ಲ. ಅದನ್ನು ಯಾವ ಉದ್ದೇಶಗಳಿಗಾಗಿ ಬಳಸಲಾಗುತ್ತದೆ ಎಂಬುದಕ್ಕೆ ನೀವು ಸ್ಪಷ್ಟವಾಗಿ ಒಪ್ಪಿಗೆ ಸೂಚಿಸಬೇಕು. ನೀವು ಅಧ್ಯಯನಗಳಿಂದ ಯಾವಾಗ ಬೇಕಾದರೂ ಸುಲಭವಾಗಿ ಹೊರಹೋಗಬಹುದು. ನೀವು ಆ್ಯಪ್ ಅನ್ನು ಅಳಿಸುವ ಆಯ್ಕೆಯನ್ನು ಮಾಡಿದರೆ, ನಿಮ್ಮ ಫೋನ್‌ನಲ್ಲಿರುವ ಅಧ್ಯಯನದ ಎಲ್ಲಾ ಡೇಟಾ ಅಳಿಸಿಹೋಗುತ್ತದೆ ಮತ್ತು ಯಾವುದೇ ರೀತಿಯ ಹೊಸ ಮಾಹಿತಿಯನ್ನು ಹಂಚಿಕೊಳ್ಳಲಾಗುವುದಿಲ್ಲ.

ಪ್ರಾತಿನಿಧಿಕ ಆರೋಗ್ಯ ಸಂಶೋಧನೆಯ ಕಡೆಗೆ ಒಂದು ಹೆಜ್ಜೆ

Google Health Studies ತಂತ್ರಜ್ಞಾನದ ಮೂಲಸೌಕರ್ಯಗಳ ಕುರಿತು ಕಾಳಜಿವಹಿಸುವ ಮೂಲಕ ಅಧ್ಯಯನದಲ್ಲಿ ಭಾಗವಹಿಸುವವರ ಜೊತೆ ತ್ವರಿತ ಮತ್ತು ಸುಲಭವಾಗಿ ಸಂಪರ್ಕ ಸಾಧಿಸಲು ಮುಂಚೂಣಿಯ ಸಂಶೋಧನಾ ಸಂಸ್ಥೆಗಳಿಗೆ ಅನುವುಮಾಡಿಕೊಡುತ್ತದೆ. ಪ್ಲ್ಯಾಟ್‌ಫಾರ್ಮ್‌ಗೆ ನಿಮ್ಮ ಅಧ್ಯಯನವನ್ನು ಸೇರಿಸಲು ನಿಮಗೆ ಆಸಕ್ತಿಯಿದ್ದರೆ, ಆ್ಯಪ್ ಇನ್ನಷ್ಟು ಅಧ್ಯಯನಗಳಿಗೆ ಲಭ್ಯವಾದಾಗ ಸೂಚನೆ ಪಡೆಯಿರಿ.

ಯುಎಸ್ ಜನಸಂಖ್ಯೆಯಲ್ಲಿನ 10% ಗಿಂತ ಕಡಿಮೆ ಜನರು ಕ್ಲಿನಿಕಲ್ ಸಂಶೋಧನೆಯಲ್ಲಿ ಭಾಗವಹಿಸುತ್ತಾರೆ

ಗ್ರಾಫಿಕ್, 10 ಜನರಲ್ಲಿ 1 ಅನ್ನು ಪ್ರತಿನಿಧಿಸುತ್ತದೆ

ಭೌಗೋಳಿಕ ಸ್ಥಳಗಳಿಂದ ಜನಾಂಗೀಯ ಭಾಗವಹಿಸುವಿಕೆಯು ಹೇಗೆ ಭಿನ್ನವಾಗಿದೆ?

ಯುನೈಟೆಡ್ ಸ್ಟೇಟ್ಸ್ ಅಥವಾ ಪ್ರಪಂಚದ ಉಳಿದ ಭಾಗಗಳಲ್ಲಿ ಕ್ಲಿನಿಕಲ್ ಟ್ರಯಲ್‌ನಲ್ಲಿ ಭಾಗವಹಿಸುವವರು ಹೆಚ್ಚಾಗಿ ಬಿಳಿಯ ಜನಾಂಗದವರಾಗಿದ್ದಾರೆ. ಏಷ್ಯನ್ ಟ್ರಯಲ್‌ನಲ್ಲಿ ಭಾಗವಹಿಸುವವರಲ್ಲಿ ಹೆಚ್ಚಿನವರು ಯುಎಸ್ ಅಲ್ಲದ ಸೈಟ್‌ಗಳಲ್ಲಿದ್ದಾರೆ. ಯುಎಸ್ ಸೈಟ್‌ಗಳಲ್ಲಿ ಕಪ್ಪು ಜನಾಂಗದವರು ಅಥವಾ ಆಫ್ರಿಕನ್ ಅಮೇರಿಕನ್ ಜನಾಂಗದ ಭಾಗವಹಿಸುವವರ ಪ್ರಾತಿನಿಧ್ಯವು ಯುಎಸ್ ಸಾಮಾನ್ಯ ಜನಸಂಖ್ಯೆಯನ್ನು ಹೋಲುತ್ತದೆ, ಇದು 13% ಕಪ್ಪು ಜನಾಂಗ ಅಥವಾ ಆಫ್ರಿಕನ್ ಅಮೇರಿಕನ್ ಜನಾಂಗದವರಾಗಿದ್ದಾರೆ (2011 - 2015 ಜನಗಣತಿ)

ರೇಸ್ ಚಾರ್ಟ್ ಕೀ ಗ್ರಾಫಿಕ್
ಜಾಗತಿಕವಾಗಿ ಒಟ್ಟು ಭಾಗವಹಿಸುವವರು 131,749 ಗ್ರಾಫಿಕ್‌ಗೆ ಸಮನಾಗಿದೆ
ಪ್ರಪಂಚದ ಉಳಿದ ಜಗತ್ತಿನ ಒಟ್ಟು ಭಾಗವಹಿಸುವವರು 90,914 ಗ್ರಾಫಿಕ್‌ಗೆ ಸಮನಾಗಿದೆ
ಯುನೈಟೆಡ್ ಸ್ಟೇಟ್ಸ್‌ನ ಒಟ್ಟು ಭಾಗವಹಿಸುವವರು 40,835 ಗ್ರಾಫಿಕ್‌ಗೆ ಸಮನಾಗಿದೆ
ಆರೋಗ್ಯ ಅಧ್ಯಯನದಲ್ಲಿ ಭಾಗವಹಿಸುತ್ತಿರುವ ಪುರುಷ ಮತ್ತು ಮಹಿಳೆ

Google Health ಅಧ್ಯಯನದಲ್ಲಿ ಇಂದು ಭಾಗವಹಿಸಿ

ಪ್ರಮುಖ ಸಂಶೋಧನಾ ಸಂಸ್ಥೆಗಳ ನೇತೃತ್ವದ ಮತ್ತು ಅಭಿವೃದ್ಧಿಪಡಿಸಿದ ಆರೋಗ್ಯ ಸಂಶೋಧನೆಯಲ್ಲಿ ಭಾಗವಹಿಸಲು ವಾರಕ್ಕೆ ಒಂದು ನಿಮಿಷ ತೆಗೆದುಕೊಳ್ಳಿ.