Google ನ ಹೆಲ್ತ್ ಇಕ್ವಿಟಿ ಸಂಶೋಧನಾ ಉಪಕ್ರಮ
Google Health, Google Cloud Platform Fitbit ಮತ್ತು Fitabase ಹೆಲ್ತ್ ಇಕ್ವಿಟಿಯನ್ನು ಹೆಚ್ಚಿಸಲು ಹಾಗೂ ಆರೋಗ್ಯ ಅಸಮಾನತೆಗಳನ್ನು ತಗ್ಗಿಸಲು ಪಾಲುದಾರಿಕೆಯನ್ನು ಹೊಂದುತ್ತಿವೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಶೈಕ್ಷಣಿಕ ಸಂಸ್ಥೆಗಳು ಮತ್ತು ಲಾಭರಹಿತ ಸಂಶೋಧನಾ ಸಂಸ್ಥೆಗಳಲ್ಲಿರುವ ಸಂಶೋಧಕರು ತಮ್ಮ ಹೆಲ್ತ್ ಇಕ್ವಿಟಿ ಸಂಶೋಧನಾ ಪ್ರಸ್ತಾವನೆಗಳನ್ನು Google ನ ಹೆಲ್ತ್ ಇಕ್ವಿಟಿ ಸಂಶೋಧನಾ ಉಪಕ್ರಮಕ್ಕೆ ಸಲ್ಲಿಸಲು ಆಹ್ವಾನಿಸಲಾಗಿದೆ, ಇದರಲ್ಲಿ ಫಂಡಿಂಗ್‌ಗಾಗಿ, Google ಮತ್ತು Fitbit ಧರಿಸಬಹುದಾದ ಸಾಧನಗಳು, Fitabase ಸೇವೆಗಳು ಮತ್ತು/ಅಥವಾ Google Cloud Platform ಕ್ರೆಡಿಟ್‌ಗಳಿಗಾಗಿ ಪ್ರಶಸ್ತಿಗಳನ್ನು ಸ್ವೀಕರಿಸಲು ಅವಕಾಶ ಪಡೆಯುತ್ತಾರೆ. ಈ ಉಪಕ್ರಮದ ಉದ್ದೇಶ, ಹೆಲ್ತ್ ಇಕ್ವಿಟಿ ಸಂಶೋಧನೆಯನ್ನು ಮುನ್ನಡೆಸುವುದು ಮತ್ತು ಆರೋಗ್ಯದ ಅಸಮಾನತೆಗಳು ಮತ್ತು/ಅಥವಾ ಆರೋಗ್ಯಕ್ಕೆ ಸಂಬಂಧಿಸಿದಂತೆ ಋಣಾತ್ಮಕ ಸಾಮಾಜಿಕ ಹಾಗೂ ರಚನಾತ್ಮಕ ನಿರ್ಣಾಯಕಗಳಿಂದ ಅಸಮಾನವಾಗಿ ಪ್ರಭಾವಿತವಾಗಿರುವ ಗುಂಪುಗಳಿಗೆ ಆರೋಗ್ಯ ಫಲಿತಾಂಶಗಳನ್ನು ಸುಧಾರಿಸುವುದು. 2023ರ ಪ್ರಶಸ್ತಿ ವಿಜೇತರನ್ನು ಇಲ್ಲಿ ನೋಡಿ.