ಮ್ಯಾಮೊಗ್ರಫಿಯಲ್ಲಿ AI

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಸ್ತನ ಕ್ಯಾನ್ಸರ್‌ನ ಸ್ಕ್ರೀನಿಂಗ್ ಅನ್ನು ಸುಧಾರಿಸುವುದು

ರೇಡಿಯಾಲಜಿಸ್ಟ್‌ಗಳು ಸ್ತನ ಕ್ಯಾನ್ಸರ್ ಅನ್ನು ಹೆಚ್ಚು ನಿಖರವಾಗಿ, ತ್ವರಿತವಾಗಿ ಮತ್ತು ಸಮಂಜಸವಾಗಿ ಪತ್ತೆಹಚ್ಚಲು ನೆರವಾಗಬಹುದಾದ, ಮ್ಯಾಮೊಗ್ರಫಿಗಾಗಿ AI ಸಿಸ್ಟಂ ಅನ್ನು ನಿರ್ಮಿಸಲು ನಾವು ವೈದ್ಯರು, ರೋಗಿಗಳು ಮತ್ತು ಪಾಲುದಾರರೊಂದಿಗೆ ಕೆಲಸ ಮಾಡುತ್ತಿದ್ದೇವೆ.

ಪ್ರತಿ ವರ್ಷ 2 ಮಿಲಿಯನ್ ಜನರಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾಗುತ್ತದೆ.

ಪ್ರತಿ ವರ್ಷ, 2 ಮಿಲಿಯನ್‌ಗೂ ಹೆಚ್ಚು ಜನರಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾಗುತ್ತದೆ

ಜಾಗತಿಕವಾಗಿ, ಸ್ತನ ಕ್ಯಾನ್ಸರ್ ಅತ್ಯಂತ ಸಾಮಾನ್ಯ ರೀತಿಯ ಕ್ಯಾನ್ಸರ್ ಆಗಿದೆ ಮತ್ತು ಸ್ತನ ಕ್ಯಾನ್ಸರ್ ಸ್ಕ್ರೀನಿಂಗ್‌ನ ಮೂಲಕ ಅದನ್ನು ಆರಂಭದಲ್ಲೇ ಪತ್ತೆಹಚ್ಚಿದರೆ, ಬದುಕುಳಿಯುವ ಸಾಧ್ಯತೆಗಳು ಹೆಚ್ಚಾಗಬಹುದು. ಫಲಿತಾಂಶಗಳನ್ನು ಸುಧಾರಿಸಲು ಸ್ಕ್ರೀನಿಂಗ್ ನಿರ್ಣಾಯಕವಾಗಿದ್ದರೂ ಸಹ, ಪ್ರಪಂಚದಾದ್ಯಂತ ವಿಶೇಷ ತಜ್ಞರ ಕೊರತೆಯಿಂದಾಗಿ ಸ್ಕ್ರೀನಿಂಗ್ ವ್ಯವಸ್ಥೆಗಳ ಮೇಲಿನ ಹೊರೆ ಆಗಾಗ ಹೆಚ್ಚಾಗುತ್ತದೆ ಮತ್ತು ಫಲಿತಾಂಶಗಳಿಗಾಗಿ ಕಾಯುತ್ತಿರುವ ಜನರು ಸುದೀರ್ಘ ಕಾಲ, ಆತಂಕದಿಂದ ನಿರೀಕ್ಷಿಸಬೇಕಾಗುತ್ತದೆ.

AI, ರೇಡಿಯಾಲಜಿಸ್ಟ್‌ನಷ್ಟೇ ನಿಖರವಾಗಿ ಸ್ತನ ಕ್ಯಾನ್ಸರ್ ಅನ್ನು ಪತ್ತೆಹಚ್ಚಬಲ್ಲದು ಎಂಬುದನ್ನು ನಮ್ಮ ಸಂಶೋಧನೆಯು ತೋರಿಸಿಕೊಟ್ಟಿದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್-ಚಾಲಿತ ಸಿಸ್ಟಂ, ಸ್ತನ ಕ್ಯಾನ್ಸರ್ ಸ್ಕ್ರೀನಿಂಗ್ ವರ್ಕ್‌ಫ್ಲೋನಲ್ಲಿ ಏಕೀಕರಿಸಿಕೊಂಡು, ರೇಡಿಯಾಲಜಿಸ್ಟ್‌ಗಳು ಸ್ತನ ಕ್ಯಾನ್ಸರ್ ಅನ್ನು ಶೀಘ್ರವಾಗಿ ಮತ್ತು ಹೆಚ್ಚು ಸಮಂಜಸವಾಗಿ ಗುರುತಿಸಲು ಸಹಾಯ ಮಾಡುತ್ತದೆ. ಪ್ರಕಟಿಸಲಾಗಿರುವ ನಮ್ಮ ಸಂಶೋಧನೆಯ ಪ್ರಕಾರ, ನಮ್ಮ ತಂತ್ರಜ್ಞಾನವು, ತರಬೇತಿ ಪಡೆದ ರೇಡಿಯಾಲಜಿಸ್ಟ್‌ಗಳಷ್ಟೇ ಚೆನ್ನಾಗಿ ಸ್ತನ ಕ್ಯಾನ್ಸರ್‌ನ ಚಿಹ್ನೆಗಳನ್ನು ಗುರುತಿಸಬಲ್ಲದು.

AI-ಸಿಸ್ಟಂ, ಗುರುತಿಸಲಾಗದಂತಹ ಸಾವಿರಾರು ಮ್ಯಾಮೊಗ್ರಾಮ್‌ಗಳ ಮೂಲಕ ತರಬೇತಿ ಪಡೆದಿದೆ.

ಮ್ಯಾಮೊಗ್ರಾಮ್‌ಗಳಲ್ಲಿ ಕ್ಯಾನ್ಸರ್‌ನ ಚಿಹ್ನೆಗಳನ್ನು ಪ್ರತಿನಿಧಿಸುವ ಸಾಧ್ಯತೆಯಿರುವ ಸಂಕೀರ್ಣ ಫೀಚರ್‌ಗಳ ಕುರಿತು ತಿಳಿದುಕೊಳ್ಳಲು, ಈ ಮಾದರಿಯು Google ನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಬಳಸುತ್ತದೆ. ಇದರ ಫಲಿತಾಂಶವಾಗಿ, ಕೆಲವು ವಿಶೇಷ ತಜ್ಞರಿಗೆ ಗಮನಿಸಲು ಸಾಧ್ಯವಾಗದಂತಹ, ಕ್ಯಾನ್ಸರ್‌ನ ಕೆಲವೊಂದು ಚಿಹ್ನೆಗಳನ್ನು ಈ ಸಿಸ್ಟಂ ಪತ್ತೆಹಚ್ಚಬಲ್ಲದು. ಮಾನವ ಮತ್ತು AI ಸಾಮರ್ಥ್ಯಗಳನ್ನು ಸಂಯೋಜಿಸುವ ಮೂಲಕ, ಭವಿಷ್ಯದಲ್ಲಿ ಕ್ಯಾನ್ಸರ್ ಪತ್ತೆಹಚ್ಚುವಿಕೆಯನ್ನು ಸುಧಾರಿಸಲು ನಮಗೆ ಸಾಧ್ಯವಾಗಬಹುದು ಎಂದು ನಾವು ಆಶಿಸುತ್ತೇವೆ.

ರೋಗಿಗಳು, ವೈದ್ಯರು ಮತ್ತು ಆರೋಗ್ಯ ವೃತ್ತಿಪರರು ನಮ್ಮ ಕೆಲಸಕ್ಕೆ ಮಾರ್ಗದರ್ಶನ ನೀಡುತ್ತಾರೆ

ಮ್ಯಾಮೊಗ್ರಫಿಗಾಗಿ AI ಅನ್ನು ಹೇಗೆ ವಿನ್ಯಾಸಗೊಳಿಸುತ್ತೇವೆ, ಪರೀಕ್ಷಿಸುತ್ತೇವೆ ಮತ್ತು ಕಾರ್ಯಗತಗೊಳಿಸುತ್ತೇವೆ ಎಂಬುದನ್ನು ತಿಳಿಸುವ ಮತ್ತು ಇವುಗಳ ಕುರಿತು ಸಲಹೆ ನೀಡುವ ನಮ್ಮ ಸಾರ್ವಜನಿಕ ತೊಡಗಿಸಿಕೊಳ್ಳುವಿಕೆ ಫೋರಮ್‌ನೊಂದಿಗೆ ಡೆಲ್ಲಾ ಓಗುನ್‌ಲೆಯ್ ಅವರ ತೊಡಗಿಸಿಕೊಳ್ಳುವಿಕೆಯ ಕುರಿತು ಇನ್ನಷ್ಟು ತಿಳಿಯಿರಿ.

ಈ ತಂತ್ರಜ್ಞಾನವನ್ನು ನಿಜವಾದ ರೋಗಿಗಳು ಮತ್ತು ವೈದ್ಯರೊಂದಿಗೆ ಪರೀಕ್ಷಿಸಲು ನಾವು ಪಾಲುದಾರರೊಂದಿಗೆ ಕೆಲಸ ಮಾಡುತ್ತಿದ್ದೇವೆ

ನೀಲಿ ಗ್ರಾಫಿಕ್, 5 ರಲ್ಲಿ 1 ವ್ಯಕ್ತಿಯನ್ನು ಪ್ರತಿನಿಧಿಸುತ್ತದೆ=e30

ಅಧಿಕ ಅಪಾಯದ ಪ್ರಕರಣಗಳಿಗೆ ಆದ್ಯತೆ ನೀಡಲು ಮತ್ತು ಸ್ಕ್ರೀನ್ ಮಾಡಲಾದ ವ್ಯಕ್ತಿಗಳಿಗೆ ಡಯಾಗ್ನಾಸಿಸ್‌ನ ಸಮಯವನ್ನು ಕಡಿಮೆ ಮಾಡಲು ಸಂಶೋಧನಾ ಮಾದರಿಯು ಹೇಗೆ ಸಹಾಯ ಮಾಡಬಲ್ಲದು ಎಂಬುದನ್ನು ಸಂಶೋಧಿಸಲು, ನಾವು ನಾರ್ಥ್‌ವೆಸ್ಟರ್ನ್ ಮೆಡಿಸಿನ್ ಜೊತೆಗೆ ಕೆಲಸ ಮಾಡುತ್ತಿದ್ದೇವೆ.

ಹಸಿರು ಗ್ರಾಫಿಕ್ 6 ರಲ್ಲಿ 1 ವ್ಯಕ್ತಿಯನ್ನು ಪ್ರತಿನಿಧಿಸುತ್ತದೆ=e30

ಸಂಶೋಧನಾ ಮಾದರಿಯು ಯು.ಕೆ ಡಬಲ್ ಸ್ಕ್ರೀನಿಂಗ್ ಸಿಸ್ಟಂಗಳಲ್ಲಿ “ಎರಡನೇ ಸ್ವತಂತ್ರ ರೀಡರ್” ಆಗಿ ಕೆಲಸ ಮಾಡಬಲ್ಲದೇ ಮತ್ತು ರೇಡಿಯಾಲಜಿಸ್ಟ್‌ಗಳು ಅಧಿಕ ಆದ್ಯತೆಯ ಪ್ರಕರಣಗಳ ಮೇಲೆ ಗಮನ ಕೇಂದ್ರೀಕರಿಸಲು ಅವಕಾಶ ನೀಡುತ್ತಾ, ಸ್ಕ್ರೀನಿಂಗ್‌ನ ಸಮಂಜಸತೆ ಮತ್ತು ಗುಣಮಟ್ಟವನ್ನು ಸುಧಾರಿಸಬಲ್ಲದೇ ಎಂಬುದನ್ನು ಅರ್ಥಮಾಡಿಕೊಳ್ಳಲು NHS AI ಪ್ರಶಸ್ತಿಯ ಮೂಲಕ, ನಾವು ಇಂಪೀರಿಯಲ್ ಕಾಲೇಜು ಲಂಡನ್ ಮತ್ತು ಮೂರು NHS ಟ್ರಸ್ಟ್‌ಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ.

ಹೆಚ್ಚು ಅಗತ್ಯವಿರುವವರಿಗೆ ಆ್ಯಕ್ಸೆಸ್ ಅನ್ನು ಸುಧಾರಿಸುವುದು

ಪಾಲುದಾರಿಕೆಯ ಮೂಲಕ ಸಂಶೋಧನೆಯನ್ನು ಕಾರ್ಯರೂಪಕ್ಕೆ ತರುವುದು

ನಮ್ಮ ಮ್ಯಾಮೊಗ್ರಫಿ AI ತಂತ್ರಜ್ಞಾನದ ಕ್ಲಿನಿಕಲ್ ಅಳವಡಿಕೆಯ ವೇಗವರ್ಧಿಸುವುದಕ್ಕಾಗಿ iCAD ನಂತಹ ಪ್ರಮುಖ ಪಾಲುದಾರರ ಜೊತೆ ನಾವು ಕೆಲಸ ಮಾಡುತ್ತಿದ್ದೇವೆ. ನಮ್ಮ ತಂತ್ರಜ್ಞಾನವನ್ನು iCAD ದೃಢೀಕರಿಸುತ್ತದೆ ಮತ್ತು ತನ್ನ ProFound Breast Health Suite ನಲ್ಲಿ ಅಳವಡಿಸಿಕೊಂಡು, ಪ್ರಪಂಚದಾದ್ಯಂತರ ರೋಗಿಗಳಿಗೆ ಅದನ್ನು ಲಭ್ಯಗೊಳಿಸುತ್ತದೆ.

ಕ್ಯಾನ್ಸರ್‌ಗಳ ಪ್ರಕಾರಗಳು ಮತ್ತು ಫಲಿತಾಂಶಗಳು, ಜನಸಂಖ್ಯೆಯನ್ನು ಆಧರಿಸಿ ಬದಲಾಗುತ್ತವೆ

ಸ್ತನದ ಸಾಂದ್ರತೆಯು ಜನಾಂಗ ಮತ್ತು ಜನಾಂಗೀಯತೆಯನ್ನು ಆಧರಿಸಿ ವ್ಯತ್ಯಾಸವಾಗುತ್ತದೆ, ಆದ್ದರಿಂದ ಜನಾಂಗ ಅಥವಾ ಜನಾಂಗೀಯತೆಯನ್ನು ಮೀರಿ, ಎಲ್ಲರಿಗೂ ಪರಿಣಾಮಕಾರಿಯಾದ ಮತ್ತು ಎಲ್ಲರಿಗೂ ಅನ್ವಯಿಸುವ ಟೂಲ್ ಅನ್ನು ರಚಿಸಲು ನಮ್ಮ ಡೇಟಾಸೆಟ್‌ಗಳು ವಿವಿಧ ಜನಸಂಖ್ಯೆಗಳನ್ನು ಪ್ರತಿನಿಧಿಸುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ.

ನಮ್ಮ ಮಾದರಿಗಳ ಅನ್ವಯಿಸುವಿಕೆಯನ್ನು ಸುಧಾರಿಸುವುದಕ್ಕಾಗಿ ನಾವು ಅರಿಯಾಕೆ ಹಾಸ್ಪಿಟಲ್‌ನಲ್ಲಿ ಜಪಾನೀಸ್ ಫೌಂಡೇಶನ್ ಫಾರ್ ಕ್ಯಾನ್ಸರ್ ರಿಸರ್ಚ್ (JFCR) ಜೊತೆ ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿದ್ದೇವೆ ಮತ್ತು ನಮ್ಮ ಉತ್ಪನ್ನಗಳ ಪ್ರತಿನಿಧಿತ್ವವನ್ನು ಹೆಚ್ಚಿಸುವುದು ಹೇಗೆ ಎಂಬುದನ್ನು ಅನ್ವೇಷಿಸುವುದನ್ನು ಮುಂದುವರಿಸುತ್ತಿದ್ದೇವೆ.

ಡಾ. ಆ್ಯಂಬರ್ ವಾಟ್ಟರ್ಸ್ ಅವರ ಫೋಟೋ
ಪ್ರೊ. ಯೂಸುಕೆ ನಕಮುರಾ

ಸ್ಟ್ರ್ಯಾಟಜಿಕ್ ಇನ್ನೋವೇಶನ್ ಪ್ರೊಮೋಷನ್ ಪ್ರೋಗ್ರಾಮ್ “AI ಹಾಸ್ಪಿಟಲ್” ಉಪಕ್ರಮದ ನಿರ್ದೇಶಕರು, ಜಪಾನೀಸ್ ಕ್ಯಾಬಿನೆಟ್ ಆಫೀಸ್ ಮತ್ತು ದಿ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ಆಫ್ JFCR ನ ಸಲಹೆಗಾರರು

ಸ್ತನ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಿದರೆ, ಅದು ಗುಣವಾಗುವ ಸಾಧ್ಯತೆ ಬಹಳ ಅಧಿಕವಾಗಿರುತ್ತದೆ. ಕ್ಯಾನ್ಸರ್ ಸ್ಕ್ರೀನಿಂಗ್‌ಗಾಗಿ AI ತಂತ್ರಜ್ಞಾನವನ್ನು ಬಳಸುವ ಮೂಲಕ ಹೆಚ್ಚು ಜನರು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಂಡರೂ ನಾವು ಡಯಾಗ್ನಾಸಿಸ್‌ನ ನಿಖರತೆಯನ್ನು ಕಾಯ್ದುಕೊಳ್ಳಬಹುದು ಮತ್ತು ರೇಡಿಯಾಲಜಿಸ್ಟ್‌ಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಬಹುದು.