ಆರೋಗ್ಯಕರ ಭವಿಷ್ಯಕ್ಕಾಗಿ ಪಾಲುದಾರಿಕೆ
ಪರಿವರ್ತನಾತ್ಮಕ ಆರೋಗ್ಯಸೇವಾ ಪರಿಕರಗಳು ಮತ್ತು ಸೇವೆಗಳಿಗಾಗಿ ಪರಿಹಾರಗಳನ್ನು ನಿಯೋಜಿಸುವ ಸಲುವಾಗಿ Google Health ಜಾಗತಿಕ ದರ್ಜೆಯ ವೈದ್ಯಕೀಯ, ಸಾರ್ವಜನಿಕ ಆರೋಗ್ಯ ಮತ್ತು ಶೈಕ್ಷಣಿಕ ಸಂಸ್ಥೆಗಳ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ನಮ್ಮ ಪಾಲುದಾರರ ಜ್ಞಾನ ಮತ್ತು ಅನುಭವ, Google ನ ತಂತ್ರಜ್ಞಾನ ಪರಿಣಿತಿ ಮತ್ತು ರೋಗಿಗಳ ಒಳನೋಟಗಳನ್ನು ಸಂಯೋಜಿಸುವ ಮೂಲಕ, ನಿರ್ಣಾಯಕ ಸಂಶೋಧನೆಯನ್ನು ಕೈಗೊಳ್ಳಲು ಮತ್ತು ವ್ಯಕ್ತಿಗಳು, ಆರೈಕೆದಾರರು ಮತ್ತು ಆರೋಗ್ಯ ವೃತ್ತಿಪರರಿಗಾಗಿ ಆಧುನಿಕ ಆರೋಗ್ಯಸೇವಾ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲು ನಮಗೆ ಸಾಧ್ಯವಾಗುತ್ತಿದೆ. ನಮ್ಮ ಸಹಯೋಗದ ಪ್ರಯತ್ನಗಳ ಮೂಲಕ, ಎಲ್ಲಾ ಜನರ ಜೀವನವನ್ನು ಸುಧಾರಿಸುವ Google Health ನ ಧ್ಯೇಯವನ್ನು ಸಾಧಿಸುವ ಸಲುವಾಗಿ ಉದಯೋನ್ಮುಖ ತಂತ್ರಜ್ಞಾನಗಳನ್ನು ದೈನಂದಿನ ಅಭ್ಯಾಸದಲ್ಲಿ ಅಳವಡಿಸುವುದು ನಮ್ಮ ಗುರಿಯಾಗಿದೆ.
ಡಯಾಗ್ನಾಸ್ಟಿಕ್ ಸೇವೆಗಳ ನಿಖರತೆ ಮತ್ತು ಲಭ್ಯತೆಯನ್ನು ಸುಧಾರಿಸಲು ಡೀಪ್ ಲರ್ನಿಂಗ್ ಮಾಡೆಲ್‌ಗಳನ್ನು ವೈದ್ಯಕೀಯ ವರ್ಕ್‌ಫ್ಲೋಗಳ ಜೊತೆ ದೊಡ್ಡ ಮಟ್ಟದಲ್ಲಿ ಹೇಗೆ ಸಂಯೋಜಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಎಕ್ಸ್-ರೇಗಳಂತಹ ಲಭ್ಯವಿರುವ ಮತ್ತು ಕೈಗೆಟುಕುವ ಬೆಲೆಯ ಡಯಾಗ್ನಾಸ್ಟಿಕ್ ಪರಿಕರಗಳ ಬಳಕೆಯ ಅಧ್ಯಯನ ಮಾಡಲು ನಾವು ಅಪೋಲೋ ಹಾಸ್ಪಿಟಲ್ಸ್ ಜೊತೆಗೂಡಿ ಕೆಲಸ ಮಾಡುತ್ತಿದ್ದೇವೆ.
ಅನಾವಶ್ಯಕ ಕುರುಡುತನದ ನಿರ್ಮೂಲನೆಯಲ್ಲಿ ನೆರವಾಗುವ ಸಲುವಾಗಿ, ಡಯಾಬೆಟಿಕ್ ರೆಟಿನೋಪತಿಯ ರೋಗನಿರ್ಣಯವನ್ನು ಗಮನದಲ್ಲಿಟ್ಟುಕೊಂಡು, ರೆಟಿನಲ್ ಇಮೇಜಿಂಗ್‌ಗಾಗಿ ಮಷಿನ್ ಲರ್ನಿಂಗ್ ಮತ್ತು ಕೃತಕ ಬುದ್ಧಿಮತ್ತೆಯ ಸಮಾರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಮತ್ತು ನಿಯೋಜಿಸುವ ಉದ್ದೇಶದಿಂದ ನಾವು ಭಾರತದಲ್ಲಿ ಅರವಿಂದ್ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ಕಾರ್ಯಪ್ರವೃತ್ತರಾಗಿದ್ದೇವೆ.
ವೈದ್ಯರ ಅನುಭವವನ್ನು ಪರಿವರ್ತಿಸುವ ಮತ್ತು ರೋಗಿಗಳ ಆರೈಕೆಯನ್ನು ಸುಧಾರಿಸುವ ಕೇಂದ್ರೀಕೃತ ಪರಿಹಾರವನ್ನು ನಿಯೋಜಿಸುವ ನಿಟ್ಟಿನಲ್ಲಿ, 2,700 ಆರೈಕೆಯ ಸೈಟ್‌ಗಳನ್ನು ಹೊಂದಿರುವ ಯು.ಎಸ್. ನ ಪ್ರಮುಖ ಆರೋಗ್ಯ ವ್ಯವಸ್ಥೆಯಾದ ಅಸೆನ್ಶನ್ ಜೊತೆಗೂಡಿ ನಾವು ಕೆಲಸ ಮಾಡುತ್ತಿದ್ದೇವೆ.
Google ಸಂಚಾಲಿತ AI ಮೂಲಕ ವೃದ್ಧಿಸಲ್ಪಟ್ಟಿರುವ ಪರಿಕರಗಳು ರೋಗನಿರ್ಣಯ ಮತ್ತು ಮೌಲ್ಯಮಾಪನದಲ್ಲಿ ಹೇಗೆ ಸಹಾಯ ಮಾಡಬಲ್ಲವು ಎಂಬುದನ್ನು ಮತ್ತು TB ಗಾಗಿ ಪರೀಕ್ಷೆಗೆ ಒಳಪಟ್ಟಿರುವ ವೈದ್ಯರಿಗಾಗಿ ಅತ್ಯುತ್ತಮ ಮುಂದಿನ ಹಂತಗಳನ್ನು ಗುರುತಿಸಲು ಈ ಮಾಡೆಲ್‌ಗಳು ಹೇಗೆ ನೆರವಾಗಬಲ್ಲವು ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಜಾಂಬಿಯಾದಲ್ಲಿನ ಸಾಂಕ್ರಾಮಿಕ ರೋಗ ಸಂಶೋಧನಾ ಕೇಂದ್ರದ (CIDRZ) ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ.
ಮೇಯೊ ಕ್ಲಿನಿಕ್‌ನ ವಿಶ್ವದರ್ಜೆಯ ವೈದ್ಯಕೀಯ ಪರಿಣತಿ ಮತ್ತು Google ನ ಆಧುನಿಕ ಕ್ಲೌಡ್ ಕಂಪ್ಯೂಟಿಂಗ್, ಡೇಟಾ ಅನಾಲಿಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆಯನ್ನು ಒಟ್ಟುಗೂಡಿಸುವ ಮೂಲಕ, ರೋಗಿಗಳ ಆರೈಕೆ ಮಾಡಲು ಮತ್ತು ಜಾಗತಿಕ ಮಟ್ಟದಲ್ಲಿ ನಮ್ಮ ಸೇವೆ ಪಡೆಯುತ್ತಿರುವ ಜನರ ಆರೋಗ್ಯ ಹಾಗೂ ಯೋಗಕ್ಷೇಮವನ್ನು ಸುಧಾರಿಸಲು ಆರೋಗ್ಯಸೇವಾ ಪೂರೈಕೆದಾರರಿಗೆ ಅತ್ಯುತ್ತಮ ಪರಿಕರಗಳನ್ನು ಒದಗಿಸುವಂತಹ ಪರಿವರ್ತನಾತ್ಮಕ ಪರಿಹಾರಗಳನ್ನು ಸಂಶೋಧಿಸಲು ಮತ್ತು ನಿರ್ಮಿಸಲು ನಾವು ಕಾರ್ಯಪ್ರವೃತ್ತರಾಗಿದ್ದೇವೆ.
ಶೀಘ್ರ ಚಿಕಿತ್ಸೆ ದೊರೆಯುವಲ್ಲಿ ನೆರವಾಗಲು, ಶ್ವಾಸಕೋಶ ಮತ್ತು ಸ್ತನ ಕ್ಯಾನ್ಸರ್‌ನ ಶೀಘ್ರ ಪತ್ತೆಗಾಗಿ ಸ್ಕ್ರೀನಿಂಗ್ ಪ್ರಕ್ರಿಯೆಯ ನಿಖರತೆಯನ್ನು ಆಪ್ಟಿಮೈಸ್ ಮಾಡಲು ಮತ್ತು ಹೆಚ್ಚಿಸಲು ನಡೆಸುತ್ತಿರುವ ವೈದ್ಯಕೀಯ ಸಂಶೋಧನೆಯಲ್ಲಿ Google ನಾರ್ತ್‌ವೆಸ್ಟರ್ನ್ ಮೆಡಿಸಿನ್‌ನ ಸಹಯೋಗದೊಂದಿಗೆ ಕಾರ್ಯಪ್ರವೃತ್ತವಾಗಿದೆ.
ತಡೆಗಟ್ಟಬಹುದಾದ ಕುರುಡುತನದ ನಿರ್ಮೂಲನದಲ್ಲಿ ನೆರವಾಗುವ ಸಲುವಾಗಿ, ಡಯಾಬೆಟಿಕ್ ರೆಟಿನೋಪತಿಯ ರೋಗನಿರ್ಣಯವನ್ನು ಗಮನದಲ್ಲಿಟ್ಟುಕೊಂಡು, ರೆಟಿನಲ್ ಇಮೇಜಿಂಗ್‌ಗಾಗಿ ಮಷಿನ್ ಲರ್ನಿಂಗ್ ಮತ್ತು ಕೃತಕ ಬುದ್ಧಿಮತ್ತೆ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಮತ್ತು ನಿಯೋಜಿಸುವ ನಿಟ್ಟಿನಲ್ಲಿ ನಾವು ರಾಜವಿತಿ ಆಸ್ಪತ್ರೆಯ (ಥೈಲ್ಯಾಂಡ್‌ನ ಸಾರ್ವಜನಿಕ ಆರೋಗ್ಯ ಸಚಿವಾಲಯದ ಜೊತೆಗೆ ಸಂಯೋಜಿತವಾಗಿದೆ) ಸಹಯೋಗದೊಂದಿಗೆ ಕಾರ್ಯಪ್ರವೃತ್ತರಾಗಿದ್ದೇವೆ.
ಡಯಾಬೆಟಿಕ್ ರೆಟಿನೋಪತಿಯ ಶೀಘ್ರ ರೋಗನಿರ್ಣಯಕ್ಕಾಗಿ ರೆಟಿನಲ್ ಇಮೇಜಿಂಗ್ ಅನ್ನು ಸುಧಾರಿಸುವ ಸಲುವಾಗಿ ನಮ್ಮ ಕೃತಕ ಬುದ್ಧಿಮತ್ತೆ ಮತ್ತು ಮಷಿನ್ ಲರ್ನಿಂಗ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಗುಣಪಡಿಸಬಹುದಾದ ಕುರುಡುತನವನ್ನು ನಿರ್ಮೂಲನೆ ಮಾಡುವ ಧ್ಯೇಯವನ್ನು ಹೊಂದಿರುವ ಶಂಕರ ನೇತ್ರಾಲಯದ ಜೊತೆಗೆ ನಾವು ಭಾರತದಲ್ಲಿ ಪಾಲುದಾರಿಕೆ ಮಾಡಿಕೊಂಡಿದ್ದೇವೆ.
ಆರೋಗ್ಯಸೇವಾ ಪೂರೈಕೆದಾರರು ತಮ್ಮ ರೋಗಿಗಳಿಗೆ ನೀಡುವ ಚಿಕಿತ್ಸೆಗಳನ್ನು ವೈಯಕ್ತಿಕಗೊಳಿಸಲು ಡೇಟಾವನ್ನು ಬಳಸುವ ಕ್ರಮವನ್ನು ಪರಿವರ್ತಿಸಲು ನಾವು ಸ್ಟ್ಯಾನ್‌ಫರ್ಡ್ ಮೆಡಿಸಿನ್ ಸಂಸ್ಥೆಯ ಸಹಯೋಗದೊಂದಿಗೆ ಕಾರ್ಯಪ್ರವೃತ್ತರಾಗಿದ್ದೇವೆ. Google ನ ಡೇಟಾ ವಿಜ್ಞಾನ, ಮಷಿನ್ ಲರ್ನಿಂಗ್ ಮತ್ತು ಕೃತಕ ಬುದ್ಧಿಮತ್ತೆಯ ಸಾಮರ್ಥ್ಯ ಮತ್ತು ವೈದ್ಯಕೀಯ ಸಂಶೋಧನೆ ಮತ್ತು ವೈದ್ಯಕೀಯ ಆರೈಕೆಯಲ್ಲಿ ಸ್ಟ್ಯಾನ್‌ಫರ್ಡ್ ಮೆಡಿಸಿನ್‌ನ ಪರಿಣತಿಯನ್ನು ಒಟ್ಟುಗೂಡಿಸುವ ಮೂಲಕ, ಹೆಚ್ಚಿನ ಜನರಿಗೆ ನಿಖರವಾದ ಆರೋಗ್ಯಸೇವೆಯನ್ನು ಒದಗಿಸುವುದು ನಮ್ಮ ಗುರಿಯಾಗಿದೆ.