ಜಾಗತಿಕ ಸಮುದಾಯಗಳನ್ನು ಸುರಕ್ಷಿತ ಮತ್ತು ಆರೋಗ್ಯಕರವಾಗಿಸಲು ನೆರವಾಗುವುದು

ಅರೋಗ್ಯ ಸಮಾನತೆ ಮತ್ತು ಲಭ್ಯತೆಗೆ ಪ್ರಚಾರ ಒದಗಿಸುವುದು ಸಾರ್ವಜನಿಕ ಆರೋಗ್ಯದ ಗುರಿಯಾಗಿದ್ದು, ಅ ಮೂಲಕ ಒಂದು ನೆರೆಹೊರೆಯಷ್ಟು ಚಿಕ್ಕ ಮಟ್ಟದ ಹಾಗೂ ಒಂದು ದೇಶದಷ್ಟು ದೊಡ್ಡ ಮಟ್ಟದ ಜನಸಂಖ್ಯೆಗಳತ್ತ ಗಮನಹರಿಸಲು ವೃತ್ತಿನಿರತರಿಗೆ ಅನುವು ಮಾಡಿಕೊಡುವ ಉದ್ದೇಶ ಹೊಂದಿದೆ.

ಇಂದು ಜಗತ್ತನ್ನು ಬಾಧಿಸುತ್ತಿರುವ ಕೆಲ ದೊಡ್ಡ ಸವಾಲುಗಳನ್ನು ಎದುರಿಸುವ ಸಲುವಾಗಿ ಸಂಶೋಧನೆ ಮತ್ತು ಪರಿಕರಗಳನ್ನು ಒದಗಿಸುವ ಮೂಲಕ Google ಸಾರ್ವಜನಿಕ ಆರೋಗ್ಯವನ್ನು ವೃದ್ಧಿಸುತ್ತಿದೆ.

ಜನರನ್ನು ಪ್ರತಿನಿಧಿಸಿರುವ ವಿಶ್ವ ಭೂಪಟದ ಗ್ರಾಫಿಕ್
ನಗುತ್ತಿರುವ ಕಿರಿಯ ವಯಸ್ಸಿನ ವ್ಯಕ್ತಿಗೆ ಮಾಸ್ಕ್ ಹಾಕುತ್ತಿರುವ ವಯಸ್ಕರು

ಹೊಸ ಡೇಟಾ, ಪರಿಕರಗಳು ಮತ್ತು ಒಳನೋಟಗಳ ಮೂಲಕ ಸಾರ್ವಜನಿಕ ಆರೋಗ್ಯ ಸಂಸ್ಥೆಗಳನ್ನು ಸಬಲಗೊಳಿಸುವುದು

ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ತಮ್ಮ ಸಮುದಾಯಗಳನ್ನು ಬೆಂಬಲಿಸುವುದಕ್ಕೆ ಸಹಾಯ ಮಾಡಲು ಡೇಟಾ ಚಾಲಿತ ಒಳನೋಟಗಳನ್ನು ಒದಗಿಸುವ ಪರಿಕರಗಳನ್ನು ನಾವು ಅಭಿವೃದ್ಧಿಪಡಿಸುತ್ತೇವೆ.

COVID-19 ಸಮುದಾಯ ಸಂಚಾರ ವರದಿಗಳು

ಸಾಮಾಜಿಕ ಅಂತರ ಮತ್ತು ಮನೆಯಲ್ಲೇ ಉಳಿದುಕೊಳ್ಳುವ ಕ್ರಮಗಳ ಪರಿಣಾಮಕಾರಿತ್ವವನ್ನು ವಿಶ್ಲೇಷಿಸಲು ನೀತಿ-ನಿರೂಪಕರಿಗೆ ನೆರವಾಗುವ ಒಟ್ಟುಗೂಡಿಸಿದ, ಅನಾಮಧೇಯ ಚಲನವಲನ ಪ್ರವೃತ್ತಿಗಳು.

ಗಾಳಿಯ ಗುಣಮಟ್ಟದ ಮಾಪನಗಳು

ನಗರಗಳು ಇನ್ನಷ್ಟು ಆರೋಗ್ಯಪೂರ್ಣವಾದ, ಸುಸ್ಥಿರ ಸ್ಥಳಗಳಾಗಿ ಪರಿವರ್ತನೆ ಹೊಂದುವ ತಮ್ಮ ಗುರಿಸಾಧನೆಯ ನಿಟ್ಟಿನಲ್ಲಿ ಹೆಚ್ಚು ಮಾಹಿತಿಯುತವಾದ ನಿರ್ಧಾರಗಳನ್ನು ಕೈಗೊಳ್ಳಲು ಮತ್ತು ಪ್ರಯತ್ನಗಳ ವೇಗವರ್ಧಿಸಲು Street View ವಾಹನಗಳು ಗಾಳಿಯ ಗುಣಮಟ್ಟದ ವಿವರಗಳನ್ನು ಒದಗಿಸುತ್ತವೆ.

ಪ್ರವಾಹ ಮುನ್ಸೂಚನೆ ಮಾಡೆಲ್‌ಗಳು

ಪ್ರವಾಹಗಳು ಯಾವಾಗ ಮತ್ತು ಎಲ್ಲಿ ಉಂಟಾಗುತ್ತವೆ ಎಂಬುದನ್ನು ಮುಂಗಾಣಲು AI ಬಳಕೆ ಮಾಡುವ ಸುಧಾರಿತ ಮುನ್ಸೂಚನೆ ಮಾದರಿಗಳ ಲಭ್ಯತೆ ಮತ್ತು ಆ ಮಾಹಿತಿಯನ್ನು Google Public Alerts ನಲ್ಲಿ ಅಳವಡಿಸಿ ಜನರು ಮತ್ತು ಅಧಿಕಾರಿಗಳು ಹೆಚ್ಚು ಸನ್ನದ್ಧರಾಗಿರಲು ಸಹಾಯ ಮಾಡುವುದು.

COVID-19 ವ್ಯಾಕ್ಸಿನೇಷನ್ ಲಭ್ಯತೆಯ ಡೇಟಾಸೆಟ್

ಜನರು ವ್ಯಾಕ್ಸಿನ್‌ಗಳಿಗೆ ಸೀಮಿತ ಲಭ್ಯತೆ ಹೊಂದಿರುವ ಅಥವಾ ಅನುಕೂಲಕರವಾದ ಲಭ್ಯತೆ ಹೊಂದಿರದ "ವ್ಯಾಕ್ಸಿನ್ ಮರುಭೂಮಿ" ಪ್ರದೇಶಗಳನ್ನು ಗುರುತಿಸಲು ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸಾರ್ವಜನಿಕ ಆರೋಗ್ಯ ಅಧಿಕಾರಿಗಳಿಗೆ ಸಹಾಯ ಮಾಡುವುದಕ್ಕಾಗಿ ವ್ಯಾಕ್ಸಿನ್ ಈಕ್ವಿಟಿ ಪ್ಲಾನರ್ ಪರಿಕರವು ಬಳಸುವ ಪ್ರಯಾಣ ಸಮಯದ ಡೇಟಾ.

COVID-19 ವ್ಯಾಕ್ಸಿನ್ ಹುಡುಕಾಟದ ಒಳನೋಟಗಳು

COVID-19 ವ್ಯಾಕ್ಸಿನೇಷನ್‌ಗಳಿಗೆ ಸಂಬಂಧಿಸಿದ ಹಾಗೆ ತಮ್ಮ ಸಮುದಾಯಗಳ ಮಾಹಿತಿ ಅವಶ್ಯಕತೆಗಳು ಹಾಗೂ ಆತಂಕಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪ್ರತಿಕ್ರಿಯಿಸಲು ಸಾರ್ವಜನಿಕ ಆರೋಗ್ಯ ಸಂಸ್ಥೆಗಳನ್ನು ಸಕ್ರಿಯಗೊಳಿಸುವಂತಹ, ಒಟ್ಟುಗೂಡಿಸಿದ ಹಾಗೂ ಅನಾಮಧೇಯ ಹುಡುಕಾಟ ಪ್ರವೃತ್ತಿಗಳು.

ಸಾಮಾಜಿಕ ಮೂಲಸೌಕರ್ಯದ ಯೋಜನೆ

ಉದ್ಯೋಗಗಳು ಮತ್ತು ನೆರೆಹೊರೆಯ ಸೇವೆಗಳ ಜೊತೆಜೊತೆಗೆ ವಸತಿಯೂ ಇರುವ ಮಿಶ್ರ-ಬಳಕೆಯ ಗಮ್ಯಸ್ಥಾನವಾಗುವ ನಿಟ್ಟಿನಲ್ಲಿ ಸ್ಯಾನ್ ಒಸೆ ನಗರದ ಗುರಿಯನ್ನು ಸಾಧಿಸುವುದಕ್ಕಾಗಿ ನಮ್ಮ ಡೌನ್‌ಟೌನ್ ವೆಸ್ಟ್ ಪ್ಲಾನ್. ಆರೋಗ್ಯದ ಮೇಲೆ ಪ್ರಭಾವ ಬೀರುವ ವಿವಿಧ ಶ್ರೇಣಿಯ ಸಾಮಾಜಿಕ ನಿರ್ಧಾರಕಗಳಿಗಾಗಿ ಉದ್ದೇಶಿಸಲಾದ, ನಗರದಾದ್ಯಂತ ಸಮುದಾಯ ಸ್ಥಿರತೆ ಹಾಗೂ ಅವಕಾಶ-ಮಾರ್ಗಗಳ ನಿಧಿಗಾಗಿ $150 ಮಿಲಿಯನ್‌ಗೂ ಹೆಚ್ಚು ಮೊತ್ತವನ್ನು ಮೀಸಲಿಟ್ಟಿರುವ, $200 ಮಿಲಿಯನ್ ಸಮುದಾಯ ಪ್ರಯೋಜನಗಳ ಪ್ಯಾಕೇಜ್ ಅನ್ನು ಈ ಪ್ಲಾನ್ ಒಳಗೊಂಡಿದೆ.

ಬುದ್ಧಿವಂತ ವ್ಯಾಕ್ಸಿನ್ ಪರಿಣಾಮದ ಪರಿಹಾರ

ಕಾಯಿಲೆ ಮುನ್ಸೂಚನೆ, ಸಾರ್ವಜನಿಕ ಆರೋಗ್ಯ ಸಂದೇಶ ಕಳುಹಿಸುವಿಕೆ ವಿಶ್ಲೇಷಣೆಗಳು ಮತ್ತು ವ್ಯಾಕ್ಸಿನ್ ಲಾಜಿಸ್ಟಿಕ್ಸ್ ನಿರ್ವಹಣೆಯ ಮೂಲಕ ಸಮುದಾಯಗಳಿಗೆ ವ್ಯಾಕ್ಸಿನ್‌ಗಳನ್ನು ವಿತರಿಸಲು ನಮ್ಮ ಕ್ಲೌಡ್ ತಂಡಗಳು ಸ್ಥಳೀಯ, ರಾಜ್ಯ, ಪ್ರಾಂತೀಯ ಮತ್ತು ರಾಷ್ಟ್ರೀಯ ಸರಕಾರಗಳ ಜೊತೆಗೂಡಿ ಕೆಲಸ ಮಾಡಿವೆ.

Open Health Stack

ಸಮಯವನ್ನು ಉಳಿಸುವ ಮತ್ತು ಆಧುನಿಕ ಆರೋಗ್ಯ ಸೇವೆಯ ಮಾನದಂಡಗಳನ್ನು ಅಳವಡಿಸಿಕೊಳ್ಳುವುದನ್ನು ಸುಲಭಗೊಳಿಸುವ ಓಪನ್ ಸೋರ್ಸ್ ಕಾಂಪೊನೆಂಟ್‌ಗಳ ಸ್ಯೂಟ್ ಅನ್ನು ಡೆವಲಪರ್‌ಗಳಿಗೆ ಒದಗಿಸುವುದರಿಂದ, ಆರೋಗ್ಯ ಕಾರ್ಯಕರ್ತರಿಗಾಗಿ ಸುರಕ್ಷಿತ, ಆಫ್‌ಲೈನ್-ಸಾಮರ್ಥ್ಯ ಹೊಂದಿರುವ, ಡೇಟಾ-ಚಾಲಿತ ಪರಿಹಾರಗಳನ್ನು ಒದಗಿಸಲು ನೆರವಾಗುತ್ತದೆ.

ಲ್ಯಾಪ್‌ಟಾಪ್‌ನಲ್ಲಿ ಚಾರ್ಟ್‌ಗಳೊಂದಿಗೆ ಕೆಲಸ ಮಾಡುತ್ತಿರುವ ವ್ಯಕ್ತಿ

ಸಾರ್ವಜನಿಕ ಆರೋಗ್ಯದ ವಿಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ಸಂಶೋಧಕರು ಮತ್ತು ವಿಜ್ಞಾನಿಗಳಿಗೆ ಸಹಾಯ ಮಾಡುವುದು

ಸಾರ್ವಜನಿಕ ಆರೋಗ್ಯವನ್ನು ಬೆಂಬಲಿಸುವ ಹೊಸ ಒಳನೋಟಗಳನ್ನು ಅನ್ವೇಷಿಸಲು ನಾವು ಸಂಶೋಧಕರಿಗೆ ಡೇಟಾಸೆಟ್‌ಗಳು ಮತ್ತು ಪರಿಕರಗಳನ್ನು ಒದಗಿಸುತ್ತೇವೆ.

ಆರೋಗ್ಯ ಸೇವೆಯ ನಕ್ಷೆಗೆ ಜಾಗತಿಕ ಆ್ಯಕ್ಸೆಸ್

ಸಾರಿಗೆಯಿಲ್ಲದ ಕಾರಣ ಆ್ಯಕ್ಸೆಸ್‌ನ ಕೊರತೆಯಿರುವ ಸೂಕ್ಷ್ಮ ಸಮುದಾಯಗಳನ್ನು ಗುರುತಿಸಲು ಜಾಗತಿಕ ಆರೋಗ್ಯಸೇವಾ ಸೌಲಭ್ಯಗಳಿಗಾಗಿ ಪ್ರಯಾಣ ಸಮಯದ ನಕ್ಷೆಗಳ ರಚನೆಗೆ ಬೆಂಬಲ ಒದಗಿಸುವಿಕೆ.

COVID-19 ಹುಡುಕಾಟ ಟ್ರೆಂಡ್‌ಗಳ ರೋಗ ಲಕ್ಷಣಗಳ ಡೇಟಾಸೆಟ್

ಪಿಡುಗಿನ ಪ್ರಭಾವವನ್ನು ಇನ್ನಷ್ಟು ಉತ್ತಮವಾಗಿ ಅರ್ಥಮಾಡಿಕೊಳ್ಳುವುದಕ್ಕಾಗಿ, ರೋಗಲಕ್ಷಣ ಸಂಬಂಧಿತ ಹುಡುಕಾಟಗಳು ಮತ್ತು COVID-19 ಹರಡುವಿಕೆಯ ನಡುವಿನ ಸಂಬಂಧವನ್ನು ಅಧ್ಯಯನ ಮಾಡಲು ಸಂಶೋಧಕರಿಗೆ ಅವಕಾಶ ನೀಡುವಂತಹ, 420 ಕ್ಕೂ ಹೆಚ್ಚು ರೋಗಲಕ್ಷಣಗಳು ಹಾಗೂ ಪರಿಸ್ಥಿತಿಗಳ ಹುಡುಕಾಟ ಟ್ರೆಂಡ್‌ಗಳು.

COVID-19 ಓಪನ್ ಡೇಟಾ ರೆಪಾಸಿಟರಿ

ವೈರಸ್ ಅನ್ನು ವಿಶ್ಲೇಷಿಸಲು, ಅರ್ಥಮಾಡಿಕೊಳ್ಳಲು ಮತ್ತು ನಿರ್ವಹಿಸಲು ಸಾರ್ವಜನಿಕ ಆರೋಗ್ಯ ವೃತ್ತಿಪರರು, ಸಂಶೋಧಕರು, ನೀತಿ ನಿರೂಪಕರು ಮತ್ತು ಇತರರಿಗೆ ಸಹಾಯ ಮಾಡುವ, COVID-19 ಸಂಬಂಧಿತ ಅಪ್-ಟು-ಡೇಟ್ ಮಾಹಿತಿಯ ವಿಸ್ತೃತ ಸಂಗ್ರಹ.

ಮಾಸ್ಕ್ ಧರಿಸಿರುವ ಮಹಿಳೆಯು ಫೋನ್ ಅನ್ನು ನೋಡುತ್ತಿದ್ದಾರೆ

ನಿರ್ಣಾಯಕ ಮಾಹಿತಿಯನ್ನು ಪಡೆಯಲು ಸಮುದಾಯಗಳಿಗೆ ಸಹಾಯ ಮಾಡುವುದು

ಸಮುದಾಯಗಳು ಸರಿಯಾದ ಸಮಯದಲ್ಲಿ ಉನ್ನತ ಗುಣಮಟ್ಟದ ಮಾಹಿತಿಯನ್ನು ಪಡೆಯಲು ನಾವು ಸಹಾಯ ಮಾಡುತ್ತೇವೆ, ಇದರಿಂದ ಅವರು ಸುರಕ್ಷತೆ ಮತ್ತು ಸಾರ್ವಜನಿಕರ ಆರೋಗ್ಯವನ್ನು ಸುಧಾರಿಸಬಹುದು.

ಸಾರ್ವಜನಿಕ ಸೇವೆಯ ಜಾಹೀರಾತುಗಳು

ಸಾರ್ವಜನಿಕ ಆರೋಗ್ಯ ಜಾಹೀರಾತು ಅಭಿಯಾನಗಳ ಮೂಲಕ ಜನರಿಗೆ ನಿರ್ಣಾಯಕ ಮಾಹಿತಿಯನ್ನು ತಲುಪಿಸಲು Google Ads, ಆರೋಗ್ಯ ಸಂಸ್ಥೆಗಳಿಗೆ ಸಹಾಯ ಮಾಡುತ್ತದೆ.

YouTube ನಲ್ಲಿ ಅಧಿಕೃತ ಆರೋಗ್ಯ ಮಾಹಿತಿ

ಆರೋಗ್ಯದ ಕುರಿತು ಜನರ ಪ್ರಶ್ನೆಗಳಿಗೆ ಉತ್ತರಿಸಲು ನೆರವಾಗುವುದಕ್ಕಾಗಿ ವಿಶ್ವಾಸಾರ್ಹ ಮಾಹಿತಿಯ ಹುಡುಕಾಟವನ್ನು ಸುಲಭಗೊಳಿಸಲು YouTube ಆರೋಗ್ಯ ತಜ್ಞರೊಂದಿಗೆ ಕೆಲಸ ಮಾಡುತ್ತದೆ.

COVID-19 ಸಂಪರ್ಕಕ್ಕೆ ಬಂದಿರುವಿಕೆಯ ಅಧಿಸೂಚನೆಗಳು

COVID-19 ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿರಬಹುದಾದ ಜನರು ಸೋಂಕನ್ನು ಹರಡದಂತೆ ತಡೆಗಟ್ಟಲು ಜನರಿಗೆ ಸೂಚನೆ ನೀಡುವುದಕ್ಕಾಗಿ ಎಕ್ಸ್‌ಪೋಷರ್ ಅಧಿಸೂಚನೆಗಳು ಸಾರ್ವಜನಿಕ ಆರೋಗ್ಯ ಅಧಿಕಾರಿಗಳಿಗೆ ಸಹಾಯ ಮಾಡುತ್ತವೆ.

ಸಾರ್ವಜನಿಕ ಆರೋಗ್ಯದಲ್ಲಿ ನಮ್ಮ ಎಲ್ಲಾ ಕೆಲಸಗಳಲ್ಲಿ ಗೌಪ್ಯತೆಯು ಕೇಂದ್ರವಾಗಿದೆ

ಡಿಫರೆನ್ಶಿಯಲ್ ಪ್ರೈವೆಸಿಯಂತಹ ತಂತ್ರಜ್ಞಾನಗಳ ಮೂಲಕ ಡೇಟಾ ನಿರ್ವಹಣೆಯ ಉದ್ಯಮದ ಗುಣಮಟ್ಟವನ್ನು ನಾವು ಸುಧಾರಿಸುತ್ತಿದ್ದೇವೆ. ಡೇಟಾವನ್ನು ಉಪಯುಕ್ತವಾಗಿಸುವಲ್ಲಿ ಗೌಪ್ಯತೆಗೆ ಮೊದಲ ಆದ್ಯತೆ ನೀಡುವ ನಮ್ಮ ವಿಧಾನಕ್ಕಾಗಿ Future of Privacy Forum ನಂತಹ ನ್ಯಾಯವಾದಿಗಳು ನಮ್ಮ ಕೆಲಸವನ್ನು ಗುರುತಿಸಿದ್ದಾರೆ.

ಕೇಂದ್ರೀಕೃತ ವಲಯಗಳಲ್ಲಿ ವ್ಯಕ್ತಿ ಐಕಾನ್‌ನ ಗ್ರಾಫಿಕ್
ಜನರ ವೈವಿಧ್ಯಮಯ ಪ್ರಾತಿನಿಧ್ಯಗಳ ಉದಾಹರಣೆ

ಹೆಲ್ತ್ ಇಕ್ವಿಟಿ ನಮ್ಮ ಸಾರ್ವಜನಿಕ ಆರೋಗ್ಯ ಪ್ರಯತ್ನಗಳ ಮೂಲಭೂತ ಗುರಿಯಾಗಿದೆ

ನಮ್ಮ ಗುರಿಯು ಪ್ರತಿಯೊಬ್ಬರಿಗೂ, ಎಲ್ಲಾ ಸ್ಥಳದಲ್ಲಿ, ಅವರು ಯಾವುದೇ ಸ್ಥಳದಲ್ಲಿ ಜನಿಸಿದ್ದರೂ, ವಾಸಿಸುತ್ತಿದ್ದರೂ, ಕೆಲಸ ಮಾಡುತ್ತಿದ್ದರೂ, ಕಲಿಯುತ್ತಿದ್ದರೂ, ಆಟವಾಡುತ್ತಿದ್ದರೂ ಅಥವಾ ಎಷ್ಟೇ ವಯಸ್ಸಾಗಿದ್ದರೂ, ಅವರಿಗೆ ಆರೋಗ್ಯಕರ ಜೀವನವನ್ನು ನಡೆಸಲು ಸಹಾಯ ಮಾಡುವುದು. ಈ ಗುರಿಯನ್ನು ಸಾಧಿಸಲು, ನಾವು ಹೆಲ್ತ್ ಇಕ್ವಿಟಿಯನ್ನು ಉತ್ತೇಜಿಸಲು ಮತ್ತು ಆರೋಗ್ಯ ಅಸಮಾನತೆಗಳ ಚಾಲಕರು ಮತ್ತು ಆರೋಗ್ಯದ ರಚನಾತ್ಮಕ ಮತ್ತು ಸಾಮಾಜಿಕ ನಿರ್ಣಾಯಕಗಳ ಮೇಲೆ ಪರಿಣಾಮ ಬೀರಲು ಕೆಲಸ ಮಾಡುತ್ತಿದ್ದೇವೆ. ಇನ್ನಷ್ಟು ತಿಳಿಯಿರಿ