ಅಲ್ಟ್ರಾಸೌಂಡ್‌ನಲ್ಲಿ AI

AI ಮೂಲಕ ಅಲ್ಟ್ರಾಸೌಂಡ್‌ನ ಲಭ್ಯತೆಯನ್ನು ವಿಸ್ತರಿಸುವುದು

ಅಲ್ಟ್ರಾಸೌಂಡ್ ಒಂದು ಬಹುಮುಖಿ ಮತ್ತು ಕ್ರಮೇಣ ಹೆಚ್ಚೆಚ್ಚು ಜನರಿಗೆ ಲಭ್ಯವಾಗುತ್ತಿರುವ ಮುಂಚಿತವಾಗಿ ರೋಗ ಪತ್ತೆಹಚ್ಚುವ ಟೂಲ್ ಆಗಿದ್ದು, ಇದು ಪ್ರಮುಖ ಅಂಗಾಂಗ ವ್ಯವಸ್ಥೆಗಳ ನೈಜ-ಸಮಯದ ಡೈನಾಮಿಕ್ ದೃಶ್ಯಗಳನ್ನು ಒದಗಿಸುತ್ತದೆ. ಅಲ್ಟ್ರಾಸೌಂಡ್ ಚಿತ್ರಗಳಿಂದ ಪ್ರಮುಖ ಆರೋಗ್ಯ ಮಾಹಿತಿಯನ್ನು ಅರ್ಥೈಸಿಕೊಳ್ಳುವುದನ್ನು ಸುಲಭವಾಗಿಸಲು ನಾವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮಾಡೆಲ್‌ಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ತರಬೇತಿ ಪಡೆದ ಸೋನೋಗ್ರಾಫರ್‌ಗಳ ಲಭ್ಯತೆ ಸೀಮಿತವಾಗಿರುವ ಕ್ಷೇತ್ರಗಳಲ್ಲಿ ಆರೈಕೆಯ ಲಭ್ಯತೆಯನ್ನು ವಿಸ್ತರಿಸುವುದು ನಮ್ಮ ಗುರಿಯಾಗಿದೆ.

ಅಲ್ಟ್ರಾಸೌಂಡ್ ವೆಚ್ಚಗಳು ಕಡಿಮೆಯಾಗಿವೆ, ಆದರೆ ಲಭ್ಯತೆಗೆ ಸಂಬಂಧಿಸಿದ ಸವಾಲುಗಳು ಹಾಗೇ ಉಳಿದುಕೊಂಡಿವೆ

ಅಲ್ಟ್ರಾಸೌಂಡ್ ವೆಚ್ಚಗಳು ಕಡಿಮೆಯಾಗಿವೆ, ಆದರೆ ಲಭ್ಯತೆಗೆ ಸಂಬಂಧಿಸಿದ ಸವಾಲುಗಳು ಹಾಗೇ ಉಳಿದುಕೊಂಡಿವೆ

ಸೆನ್ಸರ್ ತಂತ್ರಜ್ಞಾನದಲ್ಲಿನ ಪ್ರಗತಿಯಿಂದಾಗಿ ಅಲ್ಟ್ರಾಸೌಂಡ್ ಸಾಧನಗಳು ಹೆಚ್ಚಿನ ಜನರ ಕೈಗೆಟುಕುವಂತಾಗಿವೆ ಮತ್ತು ಅವುಗಳನ್ನು ಸುಲಭವಾಗಿ ಸಾಗಿಸಬಹುದಾಗಿದೆ ಮತ್ತು ಈಗ ಅವುಗಳನ್ನು ನೇರವಾಗಿ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಸಂಯೋಜಿಸಬಹುದಾಗಿದೆ.ಇದರಿಂದ ಕಡಿಮೆ ಸಂಪನ್ಮೂಲಗಳಿರುವ ಪ್ರದೇಶಗಳ ಜನರಿಗೆ ಅಲ್ಟ್ರಾಸೌಂಡ್ ಸೌಕರ್ಯ ಹೆಚ್ಚು ಲಭ್ಯವಾಗುವಂತಾಗಿ, ಆ ಮೂಲಕ ಆರೋಗ್ಯಸೇವಾ ಕ್ಷೇತ್ರದಲ್ಲಿ ಕ್ರಾಂತಿಯುಂಟಾಗಬಹುದು.

ಆದರೆ, ಅಲ್ಟ್ರಾಸೌಂಡ್ ಅನ್ನು ಕ್ಯಾಪ್ಚರ್ ಮಾಡುವುದು ಮತ್ತು ವ್ಯಾಖ್ಯಾನಿಸುವುದು ಸಂಕೀರ್ಣವಾದ ವೈದ್ಯಕೀಯ ಇಮೇಜಿಂಗ್ ತಂತ್ರವಾಗಿದ್ದು, ಇದಕ್ಕೆ ಅನೇಕ ವರ್ಷಗಳ ತರಬೇತಿ ಮತ್ತು ಅನುಭವದ ಅಗತ್ಯವಿರುತ್ತದೆ ಹಾಗೂ ಈ ಪ್ರದೇಶಗಳಲ್ಲಿ ತರಬೇತಿ ಪಡೆದ ಅಲ್ಟ್ರಾಸೋನೋಗ್ರಫಿ ತಜ್ಞರ ಕೊರತೆಯಿದೆ. ಇದು ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಉದಾಹರಣೆಗೆ, ಕಡಿಮೆ-ಸಂಪನ್ಮೂಲಗಳಿರುವ ಪರಿಸರಗಳಲ್ಲಿ 50% ವರೆಗಿನ ಗರ್ಭಿಣಿಯರಿಗೆ ಗರ್ಭಾವಸ್ಥೆಯ ಸಮಯದಲ್ಲಿ ಅಲ್ಟ್ರಾಸೌಂಡ್ ಸ್ಕ್ರೀನಿಂಗ್ ಸೌಕರ್ಯ ದೊರಕುವುದಿಲ್ಲ. ಇದರಿಂದ ಗರ್ಭಾವಸ್ಥೆಯಲ್ಲಿನ ತೊಡಕುಗಳ ರೋಗನಿರ್ಣಯ ಮತ್ತು ಚಿಕಿತ್ಸೆಯಲ್ಲಿ ವಿಳಂಬವಾಗಬಹುದು, ಇದು ಗಂಭೀರ ಪರಿಣಾಮಗಳನ್ನು ಬೀರಬಲ್ಲದು.

ಕೆಲವು ವೈದ್ಯಕೀಯ ಮಾಹಿತಿಯನ್ನು ಒಬ್ಬ ನುರಿತ ಸೋನೋಗ್ರಾಫರ್‌ನಷ್ಟೇ ನಿಖರವಾಗಿ

AI ಕೆಲವು ವೈದ್ಯಕೀಯ ಮಾಹಿತಿಯನ್ನು ಒಬ್ಬ ನುರಿತ ಸೋನೋಗ್ರಾಫರ್‌ನಷ್ಟೇ ನಿಖರವಾಗಿ ಗುರುತಿಸಬಲ್ಲದು ಎಂಬುದನ್ನು ನಮ್ಮ ಸಂಶೋಧನೆ ತೋರಿಸಿಕೊಟ್ಟಿದೆ

ನಾವು ಅಲ್ಟ್ರಾಸೌಂಡ್‌ನ ಲಭ್ಯತೆಯನ್ನು ವಿಸ್ತರಿಸಲು AI ಮಾಡೆಲ್‌ಗಳನ್ನು ನಿರ್ಮಿಸುತ್ತಿದ್ದೇವೆ, ಇದರಿಂದ ಅಲ್ಟ್ರಾಸೋನೋಗ್ರಫಿಯ ಅನುಭವವಿಲ್ಲದ ವ್ಯಕ್ತಿಗಳಿಗೆ ವೈದ್ಯಕೀಯವಾಗಿ ಉಪಯುಕ್ತವಾದ ಅಲ್ಟ್ರಾಸೌಂಡ್ ಸ್ಕ್ಯಾನ್‌ಗಳನ್ನು ಸಂಗ್ರಹಿಸಲು ಅನುಕೂಲವಾಗುತ್ತದೆ. ಇತ್ತೀಚೆಗೆ ಪ್ರಕಟವಾದ ಪೇಪರ್ ಒಂದರಲ್ಲಿ, ತಜ್ಞರಲ್ಲದವರು ಗರ್ಭಾವಸ್ಥೆಯ ಅವಧಿ ಮತ್ತು ಭ್ರೂಣದ ಪ್ರಸ್ತುತಿಯಂತಹ ಪ್ರಮುಖ ವಿಚಾರಗಳನ್ನು ತರಬೇತಿ ಪಡೆದ ಅಲ್ಟ್ರಾಸೋನೋಗ್ರಾಫರ್‌ಗಳಿಗೆ ಸರಿಸಾಟಿಯಾಗಿ ಪತ್ತೆಮಾಡಲು ಬ್ಲೈಂಡ್ ಸ್ವೀಪ್ ಪ್ರೊಟೊಕಾಲ್ ಎಂದು ಕರೆಯಲ್ಪಡುವ ಕಲಿಸಲು-ಸುಲಭವಾದ ಕಾರ್ಯಾಚರಣಾ ಪ್ರಕ್ರಿಯೆಯೊಂದನ್ನು ಬಳಸಬಹುದೆಂದು ನಾವು ತೋರಿಸಿಕೊಟ್ಟಿದ್ದೇವೆ. ಇದರಿಂದ ಸೂಲಗಿತ್ತಿಯರು, ಮುಂಚೂಣಿಯ ಆರೋಗ್ಯ ಕಾರ್ಯಕರ್ತರು ಅಥವಾ ಇತರರು ಅಲ್ಟ್ರಾಸೌಂಡ್ ಚಿತ್ರಗಳನ್ನು ಆಧರಿಸಿ ಆರೋಗ್ಯದ ಕುರಿತಾದ ಪ್ರಮುಖ ಒಳನೋಟಗಳನ್ನು ತ್ವರಿತವಾಗಿ ಪಡೆದುಕೊಳ್ಳುವ ಸಾಮರ್ಥ್ಯ ಗಳಿಸುತ್ತಾರೆ.

ಸಾವಿರಾರು ಗುರುತಿಸಲಾಗದಂತಹ ಅಲ್ಟ್ರಾಸೌಂಡ್ ಚಿತ್ರಗಳ ಮೂಲಕ ತರಬೇತಿ ಪಡೆದಿದೆ

ನಮ್ಮ AI ಮಾಡೆಲ್, ಸಾವಿರಾರು ಭ್ರೂಣ ಮತ್ತು ಸ್ತನದ ಅಲ್ಟ್ರಾಸೌಂಡ್ ಚಿತ್ರಗಳಿಂದ ಪ್ರಮುಖ ಫೀಚರ್‌ಗಳು ಮತ್ತು ಲಕ್ಷಣಗಳನ್ನು ಗುರುತಿಸುವ ಮೂಲಕ ಕಲಿತುಕೊಂಡಿದೆ. ಭ್ರೂಣದ ವಯಸ್ಸು, ಭ್ರೂಣದ ಪ್ರಸ್ತುತಿ, ಸ್ತನದ ಸಾಂದ್ರತೆ ಇತ್ಯಾದಿಗಳಿಗೆ ಸಂಬಂಧಿಸಿದ ದೃಶ್ಯರೂಪದ ಸುಳಿವುಗಳನ್ನು ಅರ್ಥಮಾಡಿಕೊಳ್ಳುವ ಮೂಲಕ, ತರಬೇತಿ ಪಡೆದ ಅಲ್ಟ್ರಾಸೋನೋಗ್ರಾಫರ್‌ಗಳಿಗೆ ಸರಿಸಾಟಿಯಾದ ನಿಖರತೆಯನ್ನು ಪ್ರದರ್ಶಿಸಲು ಈ ತಂತ್ರಜ್ಞಾನಕ್ಕೆ ಸಾಧ್ಯವಾಯಿತು.

ಡಾ. ಆ್ಯಂಬರ್ ವಾಟ್ಟರ್ಸ್ ಅವರ ಫೋಟೋ

ನಾರ್ತ್‌ವೆಸ್ಟರ್ನ್ ಮೆಡಿಸಿನ್‌ನೊಂದಿಗೆ ನಮ್ಮ ಸಂಶೋಧನೆಯನ್ನು ಮೌಲ್ಯೀಕರಿಸುವುದು

ಈ ತಂತ್ರಜ್ಞಾನ ಹೇಗೆ ಉಪಯುಕ್ತವಾಗಬಲ್ಲದು ಎಂಬುದನ್ನು ತೋರಿಸಲು ಮೂಲಭೂತ, ಓಪನ್-ಆ್ಯಕ್ಸೆಸ್ ಸಂಶೋಧನಾ ಅಧ್ಯಯನಗಳನ್ನು ಕೈಗೊಳ್ಳುವುದರ ಹೊರತಾಗಿ, ಈ ಮಾಡೆಲ್‌ಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಮತ್ತು ಪರೀಕ್ಷಿಸಲು ನಾವು ನಾರ್ತ್‌ವೆಸ್ಟರ್ನ್ ಮೆಡಿಸಿನ್‌ನೊಂದಿಗೆ ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವು ವೈವಿಧ್ಯಮಯ ಜನಸಮುದಾಯಗಳ ಜೊತೆಗೂಡಿ ಕೆಲಸ ಮಾಡುವ ಮೂಲಕ, ಅನುಭವದ ವಿವಿಧ ಹಂತಗಳಲ್ಲಿ ಮತ್ತು ತಂತ್ರಜ್ಞಾನಗಳ ವಿವಿಧ ಪ್ರಕಾರಗಳಲ್ಲಿ ನಮ್ಮ ತಂತ್ರಜ್ಞಾನದ ಬಳಕೆಯನ್ನು ಸಾಮಾನ್ಯೀಕರಿಸುವುದು ಹೇಗೆ ಎಂಬುದನ್ನು ಅನ್ವೇಷಿಸುತ್ತಿದ್ದೇವೆ.

ಡಾ. ಆ್ಯಂಬರ್ ವಾಟ್ಟರ್ಸ್ ಅವರ ಫೋಟೋ
ಡಾ. ಆ್ಯಂಬರ್ ವಾಟ್ಟರ್ಸ್

ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದ ಪ್ರಸೂತಿಶಾಸ್ತ್ರ ಮತ್ತು ಸ್ತ್ರೀರೋಗ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕರು

ಮಕ್ಕಳನ್ನು ಹೆರುವವರು ಮತ್ತು ಅವರ ಶಿಶುಗಳ ಆರೋಗ್ಯವನ್ನು ಆಪ್ಟಿಮೈಸ್ ಮಾಡಲು ಪ್ರಸೂತಿಶಾಸ್ತ್ರೀಯ ಅಲ್ಟ್ರಾಸೌಂಡ್ ಅವಶ್ಯಕ, ಆದರೂ ವಿಶ್ವದೆಲ್ಲೆಡೆಯ ಅರ್ಧದಷ್ಟು ಗರ್ಭಿಣಿಯರಿಗೆ ಈ ಸೌಕರ್ಯ ಲಭ್ಯವಿಲ್ಲ. ಆರೋಗ್ಯದ ಅಪಾಯಗಳ ಕಡೆಗೆ ಎಲ್ಲರ ಗಮನವನ್ನು ಸೆಳೆಯುವುದಕ್ಕಾಗಿ AI ತಂತ್ರಜ್ಞಾನವನ್ನು ಬಳಸಿ ಟೂಲ್‌ಗಳನ್ನು ಅಭಿವೃದ್ಧಿಪಡಿಸುವ ಮೂಲಕ, ತರಬೇತಿ ಪಡೆದ ಆಪರೇಟರ್‌ಗಳು ಇಲ್ಲದಿರುವಾಗಲೂ, ಹೆಚ್ಚಿನ ಗರ್ಭಿಣಿಯರಿಗೆ ಅಲ್ಟ್ರಾಸೌಂಡ್‌ನ ಪ್ರಯೋಜನಗಳು ಲಭ್ಯವಾಗುವಂತೆ ಮಾಡಬಹುದೆಂದು ನಾವು ಆಶಿಸುತ್ತೇವೆ.

ತಾಯಂದಿರ ಆರೋಗ್ಯಕ್ಕಾಗಿ ಅಲ್ಟ್ರಾಸೌಂಡ್=e30

ತಾಯಂದಿರ ಆರೋಗ್ಯಕ್ಕಾಗಿ ಅಲ್ಟ್ರಾಸೌಂಡ್ ಬಳಕೆಗಾಗಿ ಜಕರಾಂಡಾ ಹೆಲ್ತ್‌ನೊಂದಿಗೆ ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿದ್ದೇವೆ

ಜಕರಾಂಡಾ ಹೆಲ್ತ್, ಇದು ಕೀನ್ಯಾ ಮೂಲದ ಲಾಭರಹಿತ ಸಂಸ್ಥೆಯಾಗಿದ್ದು ಸರ್ಕಾರಿ ಆಸ್ಪತ್ರೆಗಳಲ್ಲಿ ತಾಯಂದಿರು ಮತ್ತು ಶಿಶುಗಳಿಗಾಗಿ ಆರೋಗ್ಯದ ಫಲಿತಾಂಶಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಸಬ್-ಸಹಾರನ್ ಆಫ್ರಿಕಾದಲ್ಲಿ, ತಾಯಂದಿರ ಮರಣದ ಪ್ರಮಾಣ ಈಗಲೂ ಹೆಚ್ಚಾಗಿದೆ ಮತ್ತು ಅಲ್ಲಿ ಸಾಂಪ್ರದಾಯಿಕ ಅಧಿಕ ವೆಚ್ಚದ ಅಲ್ಟ್ರಾಸೌಂಡ್ ಯಂತ್ರಗಳನ್ನು ನಿರ್ವಹಿಸಲು ತರಬೇತಿ ಪಡೆದ ಕಾರ್ಮಿಕರ ಕೊರತೆಯಿದೆ. ಈ ಪಾಲುದಾರಿಕೆಯ ಮೂಲಕ, ಕೀನ್ಯಾದಲ್ಲಿ ಅಲ್ಟ್ರಾಸೌಂಡ್ ಸೇವೆಯ ಡೆಲಿವರಿಯ ವಿಧಾನವನ್ನು ಅರ್ಥಮಾಡಿಕೊಳ್ಳಲು ನಾವು ಸಂಶೋಧನೆ ಕೈಗೊಳ್ಳುತ್ತಿದ್ದೇವೆ ಮತ್ತು ಗರ್ಭಿಣಿ ಮಹಿಳೆಯರಿಗೆ ಅವರು ಇರುವಲ್ಲಿಯೇ ಅಲ್ಟ್ರಾಸೌಂಡ್ ಸೇವೆಯನ್ನು ಒದಗಿಸಲು ಹೊಸ AI ಉಪಕರಣಗಳನ್ನು ಹೇಗೆ ಬಳಸಬಹುದು ಎಂಬುದನ್ನು ಅನ್ವೇಷಿಸುತ್ತಿದ್ದೇವೆ.

ಸ್ತನದ ಅಲ್ಟ್ರಾಸೌಂಡ=e30

ಸ್ತನದ ಅಲ್ಟ್ರಾಸೌಂಡ್‌ಗಾಗಿ ಚಾಂಗ್ ಗಂಗ್ ಸ್ಮಾರಕ ಆಸ್ಪತ್ರೆಯೊಂದಿಗೆ ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿದ್ದೇವೆ

ಮ್ಯಾಮೊಗ್ರಾಮ್‌ಗಳು ಸ್ತನದ ಕ್ಯಾನ್ಸರ್‌ನ ಸ್ಕ್ರೀನಿಂಗ್‌ಗೆ ಸಂಬಂಧಿಸಿದಂತೆ ಉತ್ಕೃಷ್ಟ ಮಾನದಂಡವಾಗಿವೆ, ಆದರೆ ಅಧಿಕ ವೆಚ್ಚದ ಕಾರಣ ಅವು ಎಲ್ಲರಿಗೂ ಲಭ್ಯವಾಗುವುದಿಲ್ಲ. ಅಲ್ಲದೇ, ಸ್ತನದ ಸಾಂದ್ರತೆ ಹೆಚ್ಚಿರುವ ಜನಸಂಖ್ಯೆಗಳಲ್ಲಿ ಮ್ಯಾಮೊಗ್ರಾಮ್‌ಗಳು ಹೆಚ್ಚು ಪರಿಣಾಮಕಾರಿಯಾಗಿರುವುದಿಲ್ಲ, ಇದರಿಂದ ಕ್ಯಾನ್ಸರ್ ಅನ್ನು ಮುಂಚಿತವಾಗಿ ಪತ್ತೆಹಚ್ಚುವುದು ಕಷ್ಟವಾಗುತ್ತದೆ. ಅಲ್ಟ್ರಾಸೌಂಡ್ ಬಳಸಿಕೊಂಡು ಸ್ತನ ಕ್ಯಾನ್ಸರ್ ಅನ್ನು ಮುಂಚಿತವಾಗಿ ಪತ್ತೆಹಚ್ಚಲು ನಮ್ಮ AI ಮಾಡೆಲ್‌ಗಳು ಸಹಾಯ ಮಾಡಬಲ್ಲವೇ ಎಂಬುದನ್ನು ಅನ್ವೇಷಿಸಲು ನಾವು ತೈವಾನ್‌ನಲ್ಲಿ CGMH ನೊಂದಿಗೆ ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿದ್ದೇವೆ.

ತಾಯಂದಿರ ಆರೋಗ್ಯಕ್ಕಾಗಿ ಅಲ್ಟ್ರಾಸೌಂಡ್‌ನ ಲಭ್ಯತೆಯನ್ನು ವಿಸ್ತರಿಸಲು ನಾವು ಕೈಗೊಳ್ಳುತ್ತಿರುವ ಕೆಲಸದ ಕುರಿತು ಇನ್ನಷ್ಟು ತಿಳಿಯಿರಿ