ನೇತ್ರಶಾಸ್ತ್ರದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯು ಅತಿದೊಡ್ಡ ಸವಾಲಾಗಿದೆ
ಡಯಾಬೆಟಿಕ್ ರಿಟಿನೋಪಥಿಯು ರೆಟಿನಾದ ಹಿಂಭಾಗದಲ್ಲಿ ಗಾಯಗಳನ್ನು ಉಂಟುಮಾಡುತ್ತದೆ ಮತ್ತು ಇದರಿಂದ ಸಂಪೂರ್ಣ ಕುರುಡುತನ ಉಂಟಾಗಬಹುದು. ಡಯಾಬೆಟಿಸ್ ರೋಗಪತ್ತೆಯಾಗಿರುವ ಜನರನ್ನು ಮುಂಚಿತವಾಗಿ ಪರೀಕ್ಷಿಸುವುದು ಬಹುಮುಖ್ಯವಾಗಿದೆ, ಆದರೆ ಜಾಗತಿಕವಾಗಿ 420 ಮಿಲಿಯನ್ ಜನರಿಗೆ ಡಯಾಬೆಟಿಸ್ ಇರುವ ಕಾರಣ, ಪ್ರತಿಯೊಬ್ಬ ರೋಗಿಯನ್ನು ಪರೀಕ್ಷಿಸುವುದು ಅಸಾಧ್ಯವಾದ ಸಂಗತಿಯಾಗಿದೆ. ರೋಗದ ಕುರಿತಾದ ಅರಿವಿನ ಕೊರತೆ ಮತ್ತು ಅದನ್ನು ಪರೀಕ್ಷಿಸಲು ಬೇಕಾಗುವ ಸಂಪನ್ಮೂಲಗಳ ಕೊರತೆ ದೊಡ್ಡ ಸಮಸ್ಯೆಗಳಾಗಿವೆ.