ಬಿಲಿಯನ್ಗಟ್ಟಲೆ ಜನರಿಗೆ ಆರೋಗ್ಯವಂತರಾಗಿರಲು ಸಹಾಯ ಮಾಡುವುದು
Google Health ಆರೋಗ್ಯ ಮಾಹಿತಿಯನ್ನು ಒಟ್ಟುಗೂಡಿಸುವ ಮತ್ತು ಅರ್ಥಪೂರ್ಣವಾಗಿಸುವ ಉತ್ಪನ್ನಗಳು ಮತ್ತು ಸೇವೆಗಳ ಮೂಲಕ ಎಲ್ಲೆಡೆಯೂ, ಪ್ರತಿಯೊಬ್ಬರಿಗೂ ಹೆಚ್ಚು ಆರೋಗ್ಯವಂತರಾಗಿರಲು ಸಹಾಯ ಮಾಡಲು ಬದ್ಧವಾಗಿದೆ. ಆರೋಗ್ಯದ ವಿಚಾರದಲ್ಲಿ ಕ್ರಮ ಕೈಗೊಳ್ಳಲು ಅಗತ್ಯವಿರುವ ಮಾಹಿತಿಯನ್ನು ಜನರಿಗೆ ನೀಡಿ ಅವರನ್ನು ಸಶಕ್ತರನ್ನಾಗಿಸುವ ಉತ್ಪನ್ನಗಳನ್ನು ನಾವು ತಯಾರಿಸುತ್ತಿದ್ದೇವೆ. ಹೆಚ್ಚು ಸಂಯೋಜಿತ ಆರೈಕೆಯನ್ನು ಒದಗಿಸಲು ಆರೈಕೆ ತಂಡಗಳನ್ನು ಸಜ್ಜುಗೊಳಿಸುವ ಸಲುವಾಗಿ ನಾವು ತಂತ್ರಜ್ಞಾನದ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಮತ್ತು ನಾವು ಕ್ಯಾನ್ಸರ್ ರೋಗಪತ್ತೆ, ಕುರುಡುತನ ತಡೆಗಟ್ಟುವಿಕೆ ಮತ್ತು ಇನ್ನೂ ಬಹಳಷ್ಟು ಕ್ಷೇತ್ರಗಳಲ್ಲಿ ಸಹಾಯಕ್ಕಾಗಿ ಕೃತಕ ಬುದ್ಧಿಮತ್ತೆಯ ಬಳಕೆಯನ್ನು ಪರಿಶೋಧಿಸುತಿದ್ದೇವೆ.