ಕ್ಲಿನಿಕಲ್ ವರ್ಕ್‌ಫ್ಲೋಗಳನ್ನು ಸುಧಾರಿಸಲು ಉಪಕರಣಗಳು ಮತ್ತು ಸಂಪನ್ಮೂಲಗಳನ್ನು ಬಳಸುವುದು

ನಮ್ಮ ಇಂಜಿನಿಯರ್‌ಗಳು, ಕ್ಲಿನಿಶಿಯನ್‌ಗಳು, ಸಂಶೋಧಕರು ಮತ್ತು ಇತರ ಆರೋಗ್ಯ ತಜ್ಞರ ತಂಡವು ತಮ್ಮ ರೋಗಿಗಳಿಗೆ ಉತ್ತಮವಾದ, ವೇಗವಾದ ಮತ್ತು ಹೆಚ್ಚು ಸೂಕ್ತ ಆರೈಕೆಯನ್ನು ನೀಡಲು ಅಗತ್ಯವಿರುವ ಮಾಹಿತಿ ಮತ್ತು ಉತ್ಪನ್ನಗಳನ್ನು ಆರೈಕೆ ತಂಡಗಳಿಗೆ ಒದಗಿಸುವ ಕ್ಲಿನಿಕಲ್ ಪರಿಕರಗಳು ಮತ್ತು ತಂತ್ರಜ್ಞಾನ ಪರಿಹಾರಗಳನ್ನು ನಿಯೋಜಿಸುವುದರ ಮೇಲೆ ಕೇಂದ್ರೀಕರಿಸಿದೆ.

ಮಾಸ್ಕ್ ಧರಿಸಿರುವ ವೈದ್ಯರು ಮಗುವಿನ ಜೊತೆಗೆ ಮಾತನಾಡುತ್ತಿರುವುದು
ವಾಕರ್‌ನ ಮೇಲೆ ವಯಸ್ಸಾದವರು ಮತ್ತು ಯುವಕರ ಕೈಗಳು

Streams ಆ್ಯಪ್ ಮೂಲಕ ತಕ್ಷಣವೇ ಮಾಹಿತಿಗೆ ಪ್ರವೇಶ ಪಡೆಯುವುದನ್ನು ಸುಧಾರಿಸುವುದು

Streams, ಒಂದು ಮೊಬೈಲ್ ವೈದ್ಯಕೀಯ ಸಾಧನವಾಗಿದ್ದು, ಕ್ಲಿನಿಶಿಯನ್‌ಗಳು ತಮ್ಮ ರೋಗಿಗಳಿಗಾಗಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಗತ್ಯವಿರುವ ನಿರ್ಣಾಯಕ ಮಾಹಿತಿಗೆ ತಕ್ಷಣವೇ ಪ್ರವೇಶ ಪಡೆಯುವುದನ್ನು ಸುಧಾರಿಸುತ್ತದೆ. ಕ್ಲಿನಿಶಿಯನ್‌ಗಳು ಕೆಲಸ ಮಾಡುವ ಸಂಕೀರ್ಣ ಆಸ್ಪತ್ರೆಯ ಪರಿಸರಕ್ಕೆ ಸರಿಹೊಂದುವಂತೆ ಅವರೊಂದಿಗೆ ನಿಕಟ ಸಹಭಾಗಿತ್ವದಲ್ಲಿ Streams ಅನ್ನು ವಿನ್ಯಾಸಗೊಳಿಸಲಾಗಿದೆ. ಇದನ್ನು ವೈದ್ಯಕೀಯ ಸಾಧನವಾಗಿ ನೋಂದಾಯಿಸಲಾಗಿದೆ ಮತ್ತು ಇದು DCB0129 ಕ್ಲಿನಿಕಲ್ ಅಪಾಯ ನಿರ್ವಹಣೆ ಮಾನದಂಡಗಳಿಗೆ ಅನುಗುಣವಾಗಿರುತ್ತದೆ. Streams, ಡೇಟಾ ರಕ್ಷಣೆ ಕಾನೂನು ಮತ್ತು ಡೇಟಾ ಭದ್ರತಾ ಮಾನದಂಡಗಳನ್ನು ಅನುಸರಿಸುತ್ತವೆ.

ಕಣ್ಣಿನ ರೆಟಿನಾದ ಚಿತ್ರ

ಕುರುಡುತನವನ್ನು ತಡೆಗಟ್ಟುವುದಕ್ಕೆ ಸಹಾಯ ಮಾಡಲು AI ಅನ್ನು ಬಳಸುವುದು

ಭಾರತ ಮತ್ತು ಥೈಲ್ಯಾಂಡ್‌ನಲ್ಲಿರುವ ಚಿಕಿತ್ಸಾಲಯಗಳಲ್ಲಿ, ನಮ್ಮ ಆಟೋಮೇಟೆಡ್ ರೆಟಿನಲ್ ಡಿಸೀಸ್ ಅಸೆಸ್‌ಮೆಂಟ್ ಪರಿಕರವು ಆರೋಗ್ಯ ಪೂರೈಕೆದಾರರಿಗೆ ಈ ದೇಶಗಳಲ್ಲಿ ಕುರುಡುತನಕ್ಕೆ ಪ್ರಮುಖ ಕಾರಣವಾಗಿರುವ ಡಯಾಬೆಟಿಕ್ ರೆಟಿನೋಪತಿಯನ್ನು ಪರೀಕ್ಷಿಸಲು ಸಹಾಯ ಮಾಡುತ್ತಿದೆ, ಇದು ಡಯಾಬಿಟಿಸ್ ಹೊಂದಿರುವ ಲಕ್ಷಾಂತರ ರೋಗಿಗಳಿಗೆ ತಮ್ಮ ದೃಷ್ಟಿಯನ್ನು ಉಳಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ರೋಗಿಯ ಮಾಹಿತಿಯನ್ನು ರಕ್ಷಿಸುವುದು

Google ವೈದ್ಯಕೀಯ ಪರಿಕರಗಳನ್ನು ನಿಯೋಜಿಸುತ್ತಿರುವ ಹಿನ್ನೆಲೆಯಲ್ಲಿ, ನಿಮ್ಮ ಆರೋಗ್ಯಸೇವಾ ಡೇಟಾ ಸೂಕ್ಷ್ಮ ಮತ್ತು ವೈಯಕ್ತಿಕ ಎಂಬುದು ನಮಗೆ ತಿಳಿದಿದೆ. ಅದನ್ನು ಗೌಪ್ಯ ಮತ್ತು ಸುರಕ್ಷಿತವಾಗಿಡುವುದು ನಮ್ಮ ಜವಾಬ್ದಾರಿ. ನಾವು HIPAA ಸೇರಿದಂತೆ ಉದ್ಯಮದ ಅತ್ಯುತ್ತಮ ಅಭ್ಯಾಸಗಳನ್ನು ಪಾಲಿಸುವ ರೀತಿಯಲ್ಲಿ ನಮ್ಮ ಉತ್ಪನ್ನಗಳನ್ನು ವಿನ್ಯಾಸಗೊಳಿಸುತ್ತೇವೆ, ಮತ್ತು ಆಧುನಿಕ ಸುರಕ್ಷತಾ ತಂತ್ರಜ್ಞಾನಗಳ ಮೂಲಕ ಮಾಹಿತಿಯನ್ನು ರಕ್ಷಿಸುತ್ತೇವೆ.