ಆರೋಗ್ಯ ಕುರಿತ ಮಾಹಿತಿಯ ಗುಣಮಟ್ಟದ ಮೂಲಗಳಿಗೆ ಪ್ರವೇಶ

Google Health ನಲ್ಲಿ, ಪ್ರತಿಯೊಬ್ಬರೂ ತಮಗಾಗಿ ಮತ್ತು ಅವರ ಪ್ರೀತಿಪಾತ್ರರಿಗಾಗಿ ಹೆಚ್ಚು ತಿಳುವಳಿಕೆಯುಳ್ಳ ಆರೋಗ್ಯದ ಕುರಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಸಹಾಯ ಮಾಡಲು ವಿನ್ಯಾಸಗೊಳಿಸಲಾದ ಪರಿಕರಗಳು ಮತ್ತು ಉಪಕ್ರಮಗಳನ್ನು ನಾವು ನಿಯೋಜಿಸುತ್ತಿದ್ದೇವೆ. ಅಧಿಕೃತ ಮಾಹಿತಿಯು ಹೆಚ್ಚಾಗಿ ಲಭ್ಯವಾಗುವಂತೆ ಮಾಡುವ ಮೂಲಕ, ವಿಶಾಲವಾದ ವೈಜ್ಞಾನಿಕ ಸಮುದಾಯಕ್ಕೆ ಸಹಾಯ ಮಾಡುವ ಮೂಲಕ ಮತ್ತು Google ನ ಶಕ್ತಿಯುತ ತಂತ್ರಜ್ಞಾನಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ, ಜನರು ಆರೋಗ್ಯಕರ ಜೀವನವನ್ನು ನಡೆಸುವಂತೆ ನಾವು ಸಹಾಯ ಮಾಡಬಹುದು.

ಮಗಳು ಮತ್ತು ತಾಯಿ ಬಾಸ್ಕೆಟ್‌ಬಾಲ್ ಆಡುತ್ತಿರುವುದು
Health Studies ಆ್ಯಪ್‌ನಿಂದ ಸ್ಕ್ರೀನ್‌ಗಳನ್ನು ಹೊಂದಿರುವ ಫೋನ್‌ಗಳ ಗ್ರಾಫಿಕ್

ನಿಮ್ಮ ಸಮುದಾಯದ ಆರೋಗ್ಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವುದಕ್ಕೆ ತಜ್ಞರಿಗೆ ಸಹಾಯ ಮಾಡಲು ತಂತ್ರಜ್ಞಾನವನ್ನು ಬಳಸಿ

ನಿಮ್ಮ ಫೋನ್‌ನಿಂದಲೇ ಪ್ರಮುಖ ಸಂಸ್ಥೆಗಳ ಆರೋಗ್ಯ ಸಂಶೋಧನೆಗೆ ಕೊಡುಗೆ ನೀಡಿ. ಅಧ್ಯಯನದ ಸಂಶೋಧನೆಗಳನ್ನು ಪರಿಶೀಲಿಸಿ ಮತ್ತು ನಿಮ್ಮ ಆರೋಗ್ಯದ ಡೇಟಾ ಸಂಶೋಧಕರಿಗೆ ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ನೋಡಿ. ವಾರಕ್ಕೆ ಕೇವಲ ಒಂದು ನಿಮಿಷದಲ್ಲಿ, ನೀವು ಆರೋಗ್ಯ ಸಂಶೋಧನೆಯ ಭವಿಷ್ಯವನ್ನು ಸುಧಾರಿಸಲು ಸಹಾಯ ಮಾಡಬಹುದು.

ಆರೋಗ್ಯ ಸೇವೆ ಒದಗಿಸುವವರ ಅಪಾಯಿಂಟ್‌ಮೆಂಟ್ ಲಭ್ಯತೆ ಮತ್ತು ವಿಮೆ ಫಿಲ್ಟರ್‌ಗಳನ್ನು ತೋರಿಸುವ Google Search ಗಾಗಿ ಸ್ಕ್ರೀನ್‌ಗಳನ್ನು ಹೊಂದಿರುವ ಫೋನ್‌ಗಳ ಗ್ರಾಫಿಕ್

ಆರೋಗ್ಯ ಮಾಹಿತಿಗೆ ಪ್ರವೇಶ ಮತ್ತು ಪ್ರತಿಯೊಬ್ಬರಿಗಾಗಿ ಆರೈಕೆಯನ್ನು ಸುಧಾರಿಸುವುದು

ಯಾವ ಆರೋಗ್ಯ ಸೇವೆ ಒದಗಿಸುವವರ ಬಳಿ ಅಪಾಯಿಂಟ್‌ಮೆಂಟ್‌ಗಳು ಲಭ್ಯವಿವೆ, ಅವರು ಯಾವ ವಿಮಾ ನೆಟ್‌ವರ್ಕ್‌ಗಳನ್ನು ಸ್ವೀಕರಿಸಬಹುದೆಂದು ತಿಳಿದುಕೊಳ್ಳಲು ಮತ್ತು ಕಡಿಮೆ ಘರ್ಷಣೆಯ ಮೂಲಕ ಸರಿಯಾದ ಆರೈಕೆಯನ್ನು ಹುಡುಕಲು ಜನರಿಗೆ ಸಹಾಯ ಮಾಡಲು ಇತರ ಮಾಹಿತಿಯನ್ನು ತೋರಿಸಲು ನಾವು Google Search ನಲ್ಲಿ ಫೀಚರ್‌ಗಳನ್ನು ಸೇರಿಸುತ್ತಿದ್ದೇವೆ. ಅನೇಕ ಜನರು ತಮ್ಮ ವಿಶಿಷ್ಟ ಆರೈಕೆಯ ಪ್ರಯಾಣವನ್ನು ಪ್ರಾರಂಭಿಸಲು ಹುಡುಕಾಟದ ಕಡೆಗೆ ತಿರುಗುತ್ತಾರೆ, ಅವರಿಗೆ ಸೂಕ್ತವಾದ ಮತ್ತು ಅಧಿಕೃತ ಮಾಹಿತಿಯನ್ನು ಸರಿಯಾದ ಕ್ಷಣಗಳಲ್ಲಿ ನೀಡುವುದು, ಎಲ್ಲರಿಗೂ ಆರೋಗ್ಯವನ್ನು ಹೆಚ್ಚಾಗಿ ಸಿಗುವಂತೆ ಮಾಡುವುದು ನಮ್ಮ ಧ್ಯೇಯವಾಗಿದೆ. ಇನ್ನಷ್ಟು ತಿಳಿಯಲು ಇಲ್ಲಿ ನೋಡಿ

ಪಾರ್ಕ್‌ನಲ್ಲಿ ಮಹಿಳೆ ಬೈಕ್ ಓಡಿಸುತ್ತಿರುವುದು

ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸ್ವಯಂ-ಮೌಲ್ಯಮಾಪನಗಳು

Google Search ನಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಪ್ರಾಯೋಗಿಕವಾಗಿ ಮೌಲ್ಯೀಕರಿಸಿದ ಸ್ವಯಂ-ಮೌಲ್ಯಮಾಪನಗಳನ್ನು ನಾವು ಪ್ರಾರಂಭಿಸಿದ್ದೇವೆ, ಅವುಗಳು PTSD ಯಂತಹ ಮಾನಸಿಕ ಆರೋಗ್ಯ ಪರಿಸ್ಥಿತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಯಾರಾದರೂ ಹುಡುಕಿದಾಗ ಕಾಣಿಸಿಕೊಳ್ಳುತ್ತವೆ. ಬಳಕೆದಾರರ ಪ್ರತಿಕ್ರಿಯೆಗಳನ್ನು ಅವಲಂಬಿಸಿ, ಕೆಲವು ಮಾನಸಿಕ ಆರೋಗ್ಯ ಪರಿಸ್ಥಿತಿಗಳಿಗೆ ಸಂಬಂಧಿಸಿದ ರೋಗಲಕ್ಷಣಗಳನ್ನು ಹೊಂದಿದೆಯೇ ಎಂಬುದನ್ನು ಅರ್ಥಮಾಡಿಕೊಳ್ಳಲು ಪರಿಕರಗಳು ಸಹಾಯ ಮಾಡುತ್ತವೆ, ಜೊತೆಗೆ ಮಾನಸಿಕ ಆರೋಗ್ಯಸೇವೆಗೆ ಸೂಕ್ತವಾದ ಸಂಪನ್ಮೂಲಗಳು ಮತ್ತು ಬೆಂಬಲ ಆಯ್ಕೆಗಳಿಗೆ ಲಿಂಕ್ ಮಾಡುತ್ತವೆ.

ನಿಖರ ಮತ್ತು ಉಪಯುಕ್ತ ಆರೋಗ್ಯ ಮಾಹಿತಿ

ಜನರು ತಮ್ಮ ಆರೋಗ್ಯದ ವಿಚಾರದಲ್ಲಿ ತಿಳಿವಳಿಕೆಯ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗಲು ನಾವು ಆರೋಗ್ಯ-ಸಂಬಂಧಿತ ಕಂಟೆಂಟ್‌ನ ಗುಣಮಟ್ಟ ಮತ್ತು ವೈವಿಧ್ಯತೆಯನ್ನು ವೃದ್ಧಿಸುತ್ತಿದ್ದೇವೆ ಹಾಗೂ Search, Maps ಮತ್ತು YouTube ನಂತಹ Google ಉತ್ಪನ್ನಗಳಾದ್ಯಂತ ಆರೈಕೆಯ ಆಯ್ಕೆಗಳಿಗೆ ಪ್ರವೇಶವನ್ನು ಹೆಚ್ಚಿಸುತ್ತಿದ್ದೇವೆ. ತಮಗೆ ಬೇಕಾದ ಆರೈಕೆಯನ್ನು ತಮಗೆ ಬೇಕಾದ ಸಮಯದಲ್ಲಿ ಹುಡುಕಿಕೊಳ್ಳಲು ಜನರಿಗೆ ಸಹಾಯ ಮಾಡಲು ತಂತ್ರಜ್ಞಾನವನ್ನು ಬಳಸುವ ಕುರಿತು ನಮ್ಮ ತಂಡ ಉತ್ಸುಕವಾಗಿದೆ.

ನಿಮ್ಮ ಗೌಪ್ಯತೆ ಬಹು ಮುಖ್ಯವಾದದ್ದು

ನೀವು Google Health ಉತ್ಪನ್ನಗಳು ಮತ್ತು ಸೇವೆಗಳನ್ನು ಬಳಸುವಾಗ, ನಿಮ್ಮ ಡೇಟಾವನ್ನು ಗೌಪ್ಯ ಮತ್ತು ಸುರಕ್ಷಿತವಾಗಿಡುವುದು ನಮ್ಮ ಜವಾಬ್ದಾರಿ. ಮತ್ತು Google Health ನಲ್ಲಿ ನೀವು ನಂಬಬಹುದಾದ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸಲು ನಾವು ಕಟ್ಟುನಿಟ್ಟಿನ ಗೌಪ್ಯತೆ ಮತ್ತು ಭದ್ರತೆಯ ತತ್ವಗಳನ್ನು ಪಾಲಿಸುತ್ತೇವೆ.