ಔಷಧ ಕ್ಷೇತ್ರದಲ್ಲಿ AI ನ ಶಕ್ತಿಯನ್ನು ವಿಸ್ತರಿಸುವುದು
ವೈದ್ಯರ ಜಾಗತಿಕ ಕೊರತೆಗಳನ್ನು ನೀಗಿಸಲು ಅಷ್ಟೇ ಅಲ್ಲದೇ ಜಗತ್ತಿನ ಕೆಲವು ಭಾಗಗಳಲ್ಲಿ ಆಧುನಿಕ ಇಮೇಜಿಂಗ್ ಮತ್ತು ಡಯಾಗ್ನಾಸ್ಟಿಕ್ಸ್ ಪರಿಕರಗಳ ಕಡಿಮೆ ಲಭ್ಯತೆಯ ಸಮಸ್ಯೆಯನ್ನು ಬಗೆಹರಿಸಲು ನೆರವಾಗುವ ಗುರಿಯನ್ನು ಹೊಂದಿರುವ AI ಮಾಡೆಲ್‌ಗಳನ್ನು ನಾವು ನಿರ್ಮಿಸುತ್ತಿದ್ದೇವೆ ಮತ್ತು ಪರೀಕ್ಷಿಸುತ್ತಿದ್ದೇವೆ. ಸುಧಾರಿತ ತಂತ್ರಜ್ಞಾನದ ಮೂಲಕ, ಲಭ್ಯತೆಯನ್ನು ಹೆಚ್ಚಿಸುವ ಮತ್ತು ಸಕಾಲಿಕ ಮತ್ತು ನಿಖರ ರೋಗಪತ್ತೆ ಹಾಗೂ ಆರೈಕೆಯನ್ನು ಸ್ವೀಕರಿಸಲು ಹೆಚ್ಚಿನ ರೋಗಿಗಳಿಗೆ ಸಹಾಯ ಮಾಡುವ ನಿರೀಕ್ಷೆ ನಮ್ಮದಾಗಿದೆ.