ಗೌಪ್ಯತೆ ಬಹು ಮುಖ್ಯವಾದದ್ದು

ನೀವು Google ನ ಉತ್ಪನ್ನಗಳು ಮತ್ತು ಸೇವೆಗಳನ್ನು ಬಳಸುವಾಗ, ನಿಮ್ಮ ಡೇಟಾದ ವಿಚಾರದಲ್ಲಿ ನೀವು ನಮ್ಮನ್ನು ನಂಬುತ್ತೀರಿ. ನಿಮ್ಮ ಡೇಟಾವನ್ನು ಗೌಪ್ಯ ಮತ್ತು ಸುರಕ್ಷಿತವಾಗಿಡುವುದು ನಮ್ಮ ಜವಾಬ್ದಾರಿ. ಮತ್ತು Google Health ನಲ್ಲಿ, ನಾವು ಹೊಸ ಉತ್ಪನ್ನ ಮತ್ತು ಸೇವೆಗಳ ರಚನೆಯಲ್ಲಿ ತೊಡಗುವಾಗ ಮೂಲಭೂತ ಗೌಪ್ಯತೆ ಮತ್ತು ಸುರಕ್ಷತೆಯ ತತ್ವಗಳಿಂದ ಮಾರ್ಗದರ್ಶನ ಪಡೆಯುತ್ತೇವೆ.

Google ನೊಂದಿಗೆ ಸುರಕ್ಷಿತ ಎಂದು ತೋರಿಸುತ್ತಿರುವ ಬ್ಲೂ ಶೀಲ್ಡ್

ಜವಾಬ್ದಾರಿಯುತ ಡೇಟಾ ನಿರ್ವಹಣಾ ಅಭ್ಯಾಸಗಳ ಮೂಲಕ ನಿಮ್ಮ ಗೌಪ್ಯತೆಯನ್ನು ರಕ್ಷಿಸಲಾಗಿದೆ

ನೀವು ಪ್ರತಿದಿನ ಬಳಸುವ ಉತ್ಪನ್ನಗಳು ಮತ್ತು ಸೇವೆಗಳನ್ನು ಹೆಚ್ಚು ಸಹಾಯಕವಾಗಿಸುವಲ್ಲಿ ಡೇಟಾ ಪ್ರಮುಖ ಪಾತ್ರ ವಹಿಸುತ್ತದೆ. ಆ ಡೇಟಾವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲು ಮತ್ತು ಕಟ್ಟುನಿಟ್ಟಾದ ಪ್ರೊಟೊಕಾಲ್‌ಗಳು ಹಾಗೂ ನವೀನ ಗೌಪ್ಯತಾ ತಂತ್ರಜ್ಞಾನಗಳ ಮೂಲಕ ನಿಮ್ಮ ಗೌಪ್ಯತೆಯನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ.

ನಿಮ್ಮ ಗೌಪ್ಯತೆಯನ್ನು ರಕ್ಷಿಸುವುದು ವಿಶ್ವದ ಅತ್ಯಾಧುನಿಕ ಭದ್ರತೆಯ ಮೂಲಕ ಪ್ರಾರಂಭವಾಗುತ್ತದೆ

ವಿಶ್ವದ ಅತ್ಯಂತ ಸುಧಾರಿತ ಭದ್ರತಾ ಮೂಲಸೌಕರ್ಯಗಳಿಂದ Google ಉತ್ಪನ್ನಗಳನ್ನು ನಿರಂತರವಾಗಿ ರಕ್ಷಿಸಲಾಗುತ್ತದೆ. ಈ ಬಿಲ್ಟ್-ಇನ್ ಭದ್ರತೆಯು, ಆನ್‌ಲೈನ್ ​​ಬೆದರಿಕೆಗಳನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚುತ್ತದೆ ಮತ್ತು ತಡೆಯುತ್ತದೆ. ಇದರಿಂದ ನಿಮ್ಮ ವೈಯಕ್ತಿಕ ಮಾಹಿತಿಯು ಸುರಕ್ಷಿತವಾಗಿದೆಯೆಂದು ನೀವು ವಿಶ್ವಾಸವಿಡಬಹುದು.

ಪ್ರತಿಯೊಂದು ಉತ್ಪನ್ನದ ಅಭಿವೃದ್ಧಿಯ ಉದ್ದಕ್ಕೂ ಕಟ್ಟುನಿಟ್ಟಾದ ಗೌಪ್ಯತೆ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗುತ್ತದೆ

ನಮ್ಮ ಉತ್ಪನ್ನಗಳನ್ನು ನಾವು ಹೇಗೆ ನಿರ್ಮಿಸುತ್ತೇವೆ ಎಂಬುದಕ್ಕೆ ಗೌಪ್ಯತೆಯು ಮುಖ್ಯವಾಗಿದೆ, ಕಠಿಣ ಗೌಪ್ಯತೆ ಮಾನದಂಡಗಳು ಉತ್ಪನ್ನ ಅಭಿವೃದ್ಧಿಯ ಪ್ರತಿಯೊಂದು ಹಂತದಲ್ಲಿಯೂ ಮಾರ್ಗದರ್ಶನ ನೀಡುತ್ತವೆ. ಪ್ರತಿಯೊಂದು ಉತ್ಪನ್ನ ಮತ್ತು ಫೀಚರ್ ಈ ಗೌಪ್ಯತೆ ಮಾನದಂಡಗಳಿಗೆ ಬದ್ಧವಾಗಿರುತ್ತವೆ, ಇವುಗಳನ್ನು ಸಮಗ್ರ ಗೌಪ್ಯತೆ ವಿಮರ್ಶೆಗಳ ಮೂಲಕ ಜಾರಿಗೊಳಿಸಲಾಗುತ್ತದೆ. ನಮ್ಮ ಗೌಪ್ಯತೆ ನೀತಿಯಲ್ಲಿ ಇನ್ನಷ್ಟು ತಿಳಿಯಿರಿ.

ನಮ್ಮ ಉತ್ಪನ್ನಗಳಾದ್ಯಂತ ನಿಮ್ಮ ಡೇಟಾವನ್ನು Google ಹೇಗೆ ಸುರಕ್ಷಿತವಾಗಿರಿಸುತ್ತದೆ ಎಂಬುದನ್ನು ನೋಡಿ

Care Studio

  • ರೋಗಿಗಳ ಡೇಟಾವನ್ನು ರಕ್ಷಿಸುವ ಮತ್ತು HIPAA ಸೇರಿದಂತೆ ಡೇಟಾವನ್ನು ಹೇಗೆ ಬಳಸಬಹುದು ಮತ್ತು ಪ್ರಕ್ರಿಯೆಗೊಳಿಸಬಹುದು ಎಂಬುದನ್ನು ನಿಯಂತ್ರಿಸುವ ಉದ್ಯಮದಾದ್ಯಂತ ಚಾಲ್ತಿಯಲ್ಲಿರುವ ನಿಯಮಾವಳಿಗಳು ಹಾಗೂ ಅತ್ಯುತ್ತಮ ಅಭ್ಯಾಸಗಳನ್ನು ಪಾಲಿಸುವ ರೀತಿಯಲ್ಲಿ Care Studio ಅನ್ನು ವಿನ್ಯಾಸಗೊಳಿಸಲಾಗಿದೆ. ರೋಗಿಗಳ ಡೇಟಾ Google ನ ಸ್ವತ್ತಲ್ಲ, ಮತ್ತು ನಾವು ಆ ಡೇಟಾವನ್ನು ಎಂದಿಗೂ ಮಾರಾಟ ಮಾಡುವುದಿಲ್ಲ. ನಾವು ಮಾಹಿತಿಯನ್ನು ರಕ್ಷಿಸಲು ಆಡಳಿತಾತ್ಮಕ, ತಾಂತ್ರಿಕ ಮತ್ತು ಭೌತಿಕ ರಕ್ಷಣಾ ಕ್ರಮಗಳನ್ನು ಕಾರ್ಯಗತಗೊಳಿಸುತ್ತೇವೆ.
    ಇನ್ನಷ್ಟು ತಿಳಿಯಿರಿ

Fitbit

  • ನಿಮ್ಮ ಪ್ರಮುಖ ಆರೋಗ್ಯ ಮಾಹಿತಿಯನ್ನು ನಂಬಿಕೆಯಿಂದ Fitbit ಗೆ ಒದಗಿಸುತ್ತೀರಿ, ಆದ್ದರಿಂದ ನಾವು ಅದನ್ನು ರಕ್ಷಿಸುತ್ತೇವೆ ಮತ್ತು ಜಾಹೀರಾತುಗಳಿಗಾಗಿ ಎಂದಿಗೂ ಬಳಸುವುದಿಲ್ಲ. ನಾವು ಸಂಗ್ರಹಿಸುವ ಡೇಟಾ, ನಾವು ಅದನ್ನು ಹೇಗೆ ರಕ್ಷಿಸುತ್ತೇವೆ ಮತ್ತು ಅದನ್ನು ಹೇಗೆ ಹಂಚಿಕೊಳ್ಳುತ್ತೇವೆ ಎಂಬುದರ ಕುರಿತು ನಾವು ನಿಮಗೆ ನೀಡುವ ನಿಯಂತ್ರಣಗಳ ಕುರಿತು ಇನ್ನಷ್ಟು ತಿಳಿಯಿರಿ.
    ಇನ್ನಷ್ಟು ತಿಳಿಯಿರಿ

Google Cloud

  • Google Cloud ನಲ್ಲಿ, ಗ್ರಾಹಕರ ಡೇಟಾದ ಗೌಪ್ಯತೆ ಮತ್ತು ಸುರಕ್ಷತೆಯು ನಾವು ನೀಡುವ ಎಲ್ಲಾ ಸೇವೆಗಳನ್ನು ಆಧರಿಸಿರುವ ಮುಖ್ಯ ವಿನ್ಯಾಸ ಮಾನದಂಡವಾಗಿದೆ. ಆರೋಗ್ಯ ಮಾಹಿತಿಯನ್ನು ಅದರ ಜೀವನಚಕ್ರದ ಉದ್ದಕ್ಕೂ ನಾವು ಹೇಗೆ ರಕ್ಷಿಸುತ್ತೇವೆ, ಹಾಗೆಯೇ Google Cloud ನಲ್ಲಿ ಗ್ರಾಹಕರಿಗೆ ಅವರ ಡೇಟಾದ ಮೇಲೆ ಪಾರದರ್ಶಕತೆ ಮತ್ತು ನಿಯಂತ್ರಣವನ್ನು ನಾವು ಹೇಗೆ ನೀಡುತ್ತೇವೆ ಎಂಬುದು ಇಲ್ಲಿದೆ.
    ಇನ್ನಷ್ಟು ತಿಳಿಯಿರಿ

Google Fit

  • ಇತರ ಆ್ಯಪ್‌ಗಳನ್ನು Google Fit ಗೆ ನೀವು ಕನೆಕ್ಟ್ ಮಾಡಿದಾಗ, ನಿಮ್ಮ ಎಲ್ಲಾ ಫಿಟ್‌ನೆಸ್ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಪಡೆಯುತ್ತೀರಿ. ನಿಮ್ಮ ಫಿಟ್‌ನೆಸ್ ಡೇಟಾಕ್ಕಾಗಿ ನೀವು Google Fit ಅನ್ನು ಒಂದೇ ಪ್ರವೇಶಬಿಂದುವಾಗಿ ಬಳಸಬಹುದು ಮತ್ತು ಆ ಅಪ್ಲಿಕೇಶನ್‌ಗಳ ಜೊತೆಗೆ ಯಾವ ಡೇಟಾವನ್ನು ಹಂಚಿಕೊಳ್ಳಲಾಗಿದೆ ಎಂಬುದನ್ನು ನೀವು ನಿಯಂತ್ರಿಸಬಹುದು.
    ಇನ್ನಷ್ಟು ತಿಳಿಯಿರಿ

Google Health Studies

  • ನೀವು Google Health Studies ಅಧ್ಯಯನಕ್ಕೆ ನೋಂದಣಿ ಮಾಡಲು ಆಯ್ಕೆ ಮಾಡಿದರೆ, ನಿಮ್ಮ ಡೇಟಾವನ್ನು ಖಾಸಗಿಯಾಗಿ ಮತ್ತು ಸುರಕ್ಷಿತವಾಗಿರಿಸುವುದಕ್ಕಾಗಿ ನಾವು ಗೌಪ್ಯತೆ ಕಾಪಾಡುವ ವಿಧಾನಗಳನ್ನು ಬಳಸುತ್ತೇವೆ. Google ನಿಮ್ಮ ಅಧ್ಯಯನದ ಡೇಟಾವನ್ನು ಮಾರಾಟ ಮಾಡುವುದಿಲ್ಲ ಅಥವಾ ನಿಮಗೆ ಜಾಹೀರಾತುಗಳನ್ನು ತೋರಿಸಲು ಅದನ್ನು ಬಳಸುವುದಿಲ್ಲ. ನೀವು ಅಧ್ಯಯನಗಳಿಂದ ಯಾವಾಗ ಬೇಕಾದರೂ ಸುಲಭವಾಗಿ ಹೊರಗುಳಿಯುವ ಆಯ್ಕೆ ಮಾಡಬಹುದು. ನೀವು ಆ್ಯಪ್ ಅನ್ನು ಅಳಿಸಿದರೆ, ನಿಮ್ಮ ಫೋನ್‌ನಲ್ಲಿರುವ ಅಧ್ಯಯನದ ಎಲ್ಲಾ ಡೇಟಾ ಅಳಿಸಿಹೋಗುತ್ತದೆ.
    ಇನ್ನಷ್ಟು ತಿಳಿಯಿರಿ

Google Research

  • AI ಅನ್ನು ಅಭಿವೃದ್ಧಿಪಡಿಸುವಾಗ ಮತ್ತು ಪರಿಕರಗಳು ಮತ್ತು ಮಾಹಿತಿಯ ಮೂಲಗಳನ್ನು ವಿಶಾಲವಾದ ಸಂಶೋಧನಾ ಸಮುದಾಯದೊಂದಿಗೆ ಹಂಚಿಕೊಳ್ಳುವಾಗ ಗೌಪ್ಯತೆಯನ್ನು ಕಾಪಾಡಿಕೊಳ್ಳಲು Google ಬದ್ಧವಾಗಿದೆ. ನಾವು ಜವಾಬ್ದಾರಿಯುತ ಡೇಟಾ ಸಂಗ್ರಹಣೆ ಮತ್ತು ನಿರ್ವಹಣೆಯ ಮೇಲೆ ಕೇಂದ್ರೀಕರಿಸುತ್ತೇವೆ, ಸಂಬಂಧಿತ ಸಾರ್ವತ್ರಿಕ ಆರೋಗ್ಯ ಡೇಟಾ ಕಾನೂನುಗಳು, ನೀತಿಗಳು ಮತ್ತು ಮಾನದಂಡಗಳನ್ನು ಅನುಸರಿಸುತ್ತೇವೆ, ಸೂಕ್ತವಾದಲ್ಲಿ ಸಾಧನದಲ್ಲಿನ ಪ್ರಕ್ರಿಯೆಗೊಳಿಸುವಿಕೆಯನ್ನು ನಿಯಂತ್ರಿಸುತ್ತೇವೆ ಮತ್ತು ಯಂತ್ರ ಕಲಿಕೆಯ ಮಾದರಿಗಳ ಗೌಪ್ಯತೆಯನ್ನು ರಕ್ಷಿಸಲು ಕ್ರಮ ಕೈಗೊಳ್ಳುತ್ತೇವೆ.
    ಇನ್ನಷ್ಟು ತಿಳಿಯಿರಿ

Google Search

  • ವಿನ್ಯಾಸದ ಪ್ರಕಾರ ಹುಡುಕಾಟವು ಖಾಸಗಿಯಾಗಿದೆ. ಔದ್ಯಮಿಕ-ದರ್ಜೆಯ ತಂತ್ರಜ್ಞಾನದ ಮೂಲಕ ಹಾಗೂ ಪ್ರತಿ ಹುಡುಕಾಟವನ್ನು ಎನ್‌ಕ್ರಿಪ್ಟ್ ಮಾಡುವ ಮೂಲಕ ನಿಮ್ಮ ಡೇಟಾವನ್ನು ನಾವು ಸುರಕ್ಷಿತವಾಗಿರಿಸುತ್ತೇವೆ. ನಾವು ನಿಯಂತ್ರಣಗಳನ್ನು ರಚಿಸುತ್ತೇವೆ, ಆದ್ದರಿಂದ ನಿಮಗೆ ಸೂಕ್ತವಾದ ಗೌಪ್ಯತೆ ಸೆಟ್ಟಿಂಗ್‌ಗಳನ್ನು ನೀವು ಆಯ್ಕೆ ಮಾಡಬಹುದು. ಹಾಗೂ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಎಂದಿಗೂ ಮಾರಾಟ ಮಾಡುವುದಿಲ್ಲ.
    ಇನ್ನಷ್ಟು ತಿಳಿಯಿರಿ

Android ನಿಂದ Health Connect

  • ನಿಮ್ಮ ಆರೋಗ್ಯ ಹಾಗೂ ಫಿಟ್‌ನೆಸ್ ಆ್ಯಪ್‌ಗಳ ನಡುವಿನ ಡೇಟಾವನ್ನು ಸಂಗ್ರಹಿಸಲು ಮತ್ತು ಕನೆಕ್ಟ್ ಮಾಡಲು Health Connect ನಿಮ್ಮ ಮೊಬೈಲ್ ಸಾಧನದಲ್ಲಿ ನಿಮಗೆ ಸರಳವಾದ ಮಾರ್ಗವನ್ನು ನೀಡುತ್ತದೆ, ಆದರೆ ಯಾವ ಅಪ್ಲಿಕೇಶನ್‌ಗಳು ಆ ಡೇಟಾವನ್ನು ಆ್ಯಕ್ಸೆಸ್ ಮಾಡಬಹುದು ಎಂಬುದನ್ನು ನಿಯಂತ್ರಿಸಲು ಅನುಮತಿಸುತ್ತದೆ. Health Connect ಮೂಲಕ, ಯಾವ ಆ್ಯಪ್‌ಗಳು ಯಾವ ಸಮಯದಲ್ಲಿ ಡೇಟಾವನ್ನು ನೋಡುತ್ತಿವೆ ಎಂಬುದನ್ನು ನೋಡಲು ನಿರ್ದಿಷ್ಟವಾದ ನಿಯಂತ್ರಣಗಳನ್ನು ಬಳಸಿ ನೀವು ಒಂದೇ ಸ್ಥಳದಲ್ಲಿ ಅನುಮತಿಗಳನ್ನು ಸುಲಭವಾಗಿ ನಿರ್ವಹಿಸಬಹುದು. ನಿಮ್ಮ ಡೇಟಾವನ್ನು ನೀವು ಯಾರೊಂದಿಗೆ ಹಂಚಿಕೊಳ್ಳಲು ಬಯಸುತ್ತೀರಿ ಮತ್ತು ಯಾವ ರೀತಿಯ ಡೇಟಾವನ್ನು ಹಂಚಿಕೊಳ್ಳಲು ಬಯಸುತ್ತೀರಿ ಎಂಬುದನ್ನು ನೀವು ನಿರ್ಧರಿಸುತ್ತೀರಿ.
    ಇನ್ನಷ್ಟು ತಿಳಿಯಿರಿ

Nest

  • ಸಹಾಯ ಮಾಡುವ ಮನೆ ಖಾಸಗಿಯಾಗಿರುತ್ತದೆ. ಅದರಲ್ಲಿ ವಾಸಿಸುವವರಿಗೆ ಮತ್ತು ಅದರ ಸುತ್ತಲಿನ ಪ್ರಪಂಚಕ್ಕಾಗಿ ಕಾಳಜಿವಹಿಸುವ ಮನೆಯನ್ನು ರಚಿಸಲು ಸಹಾಯ ಮಾಡಲು ವಿನ್ಯಾಸಗೊಳಿಸಲಾದ ಸಾಧನಗಳು ಮತ್ತು ಸೇವೆಗಳೊಂದಿಗೆ ನಿಮ್ಮ ನಂಬಿಕೆಯನ್ನು ಗಳಿಸಲು ನಾವು ಬದ್ಧರಾಗಿದ್ದೇವೆ. ನಿಮ್ಮ ಮಂಚದ ಪಕ್ಕದಲ್ಲಿ Nest Hub (2ನೇ ತಲೆಮಾರು) ಇದ್ದಾಗ, ಸ್ಲೀಪ್ ಸೆನ್ಸಿಂಗ್1 ರಾತ್ರಿ ಪೂರ್ತಿ ಹೆಚ್ಚು ಶಾಂತ ನಿದ್ರೆಯನ್ನು ಆನಂದಿಸಲು ನಿಮಗೆ ಸಹಾಯ ಮಾಡುತ್ತದೆ. ಯಾವಾಗ ಬೇಕಾದರೂ, ನೀವು ಸ್ಲೀಪ್ ಸೆನ್ಸಿಂಗ್ ಅನ್ನು ಆಫ್ ಮಾಡಬಹುದು. ಮೈಕ್ ಸ್ವಿಚ್ ಬಳಸಿ ನೀವು ಮೈಕ್ ಅನ್ನು ಸಹ ಆಫ್ ಮಾಡಬಹುದು. ಕೆಮ್ಮು ಮತ್ತು ಗೊರಕೆಯ ಧ್ವನಿ ಡೇಟಾವನ್ನು2 ಸಾಧನದ ಹೊರಗೆ ರವಾನಿಸುವುದಿಲ್ಲ ನಿಮ್ಮ ನಿದ್ರೆಯ ಡೇಟಾವನ್ನು ಜಾಹೀರಾತು ವೈಯಕ್ತೀಕರಣಕ್ಕಾಗಿ ಬಳಸಲಾಗುವುದಿಲ್ಲ ಮತ್ತು ಯಾವುದೇ ಸಮಯದಲ್ಲಿ ಪರಿಶೀಲಿಸಬಹುದು ಮತ್ತು ಅಳಿಸಬಹುದು.
    ಇನ್ನಷ್ಟು ತಿಳಿಯಿರಿ

    1ಸ್ಲೀಪ್ ಸೆನ್ಸಿಂಗ್ ಫೀಚರ್‌ಗಳು ನೀವು ಸೆಟ್ ಮಾಡಿದ ಅನುಮತಿಗಳು ಮತ್ತು ಸೆಟ್ಟಿಂಗ್‌ಗಳಿಗೆ ಅನುಸಾರವಾಗಿರುತ್ತವೆ. ಅವುಗಳು ಕಾರ್ಯನಿರ್ವಹಿಸಲು ಚಲನೆ, ಧ್ವನಿ, ಮತ್ತು ಇತರ ಸಾಧನ ಮತ್ತು ಸೆನ್ಸರ್ ಡೇಟಾವನ್ನು ಬಳಸುತ್ತವೆ ಮತ್ತು ಸಾಧನವನ್ನು ಮಂಚದ ಸಮೀಪ ಇರಿಸಬೇಕಾಗುತ್ತದೆ ಹಾಗೂ ಸಾಧನವನ್ನು ನೀವು ನಿದ್ರಿಸುವ ಸ್ಥಿತಿಗೆ ಕ್ಯಾಲಿಬ್ರೇಟ್ ಮಾಡುವ ಅಗತ್ಯವಿರುತ್ತದೆ. ಪೂರ್ಣ ಕಾರ್ಯಚಟುವಟಿಕೆಗೆ Google Assistant, Google Fit ಆ್ಯಪ್ ಮತ್ತು ಇತರ Google ಆ್ಯಪ್‌ಗಳು ಬೇಕಾಗಬಹುದು. Google Assistant ಗೆ Google ಖಾತೆಯ ಅಗತ್ಯವಿದೆ. myactivity.google.com ಗೆ ಭೇಟಿ ನೀಡುವ ಮೂಲಕ ನಿಮ್ಮ Assistant ಚಟುವಟಿಕೆಯನ್ನು ಪರಿಶೀಲಿಸಿ ಮತ್ತು ಅಳಿಸಿ. 2022 ರವರೆಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಸ್ಲೀಪ್ ಸೆನ್ಸಿಂಗ್‌ನ ಪೂರ್ವವೀಕ್ಷಣೆಯನ್ನು ಆನಂದಿಸಿ. 2023 ರಲ್ಲಿ, ಸ್ಲೀಪ್ ಸೆನ್ಸಿಂಗ್ ಅನ್ನು Fitbit Premium ಗೆ ಸಂಯೋಜಿಸಲು Google ಯೋಜಿಸಿದೆ (ಪ್ರಸ್ತುತವಾಗಿ ತಿಂಗಳಿಗೆ $9.99 ಅಥವಾ ವರ್ಷಕ್ಕೆ $79.99, ಬದಲಾವಣೆಗೆ ಒಳಪಟ್ಟಿರುತ್ತದೆ ಮತ್ತು ದೇಶಕ್ಕೆ ಅನುಗುಣವಾಗಿ ಬದಲಾಗಬಹುದು). g.co/sleepsensing/preview ನಲ್ಲಿ ಇನ್ನಷ್ಟು ತಿಳಿಯಿರಿ ಪೂರ್ವವೀಕ್ಷಣೆ ಮುಗಿದ ನಂತರ, ಪಾವತಿಸಿದ ಸಬ್‌ಸ್ಕ್ರಿಪ್ಶನ್‌ನ ಅಗತ್ಯವಿರಬಹುದು. 2ಸಾಧನದ ಸ್ಥಾನ ನಿಯೋಜನೆ ಮತ್ತು ಸಮೀಪದಲ್ಲಿರುವ ಜನರು, ಸಾಕು ಪ್ರಾಣಿಗಳು ಅಥವಾ ಗದ್ದಲಗಳಿಂದ ನಿಖರವಲ್ಲದ ರೀಡಿಂಗ್‌ಗಳು ದೊರೆಯಬಹುದು.

YouTube

  • ನಿಮ್ಮ YouTube ಅನುಭವವನ್ನು ನೀವು ನಿಯಂತ್ರಿಸುತ್ತೀರಿ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಯಾರಿಗೂ ಮಾರಾಟ ಮಾಡುವುದಿಲ್ಲ. ನಾವು ಜಾಹೀರಾತು ಸೆಟ್ಟಿಂಗ್‌ಗಳನ್ನು ಸಹ ಒದಗಿಸುತ್ತೇವೆ, ಇದರಿಂದ ನೀವು ವೀಕ್ಷಿಸುವ ಜಾಹೀರಾತುಗಳನ್ನು ನೀವು ಉತ್ತಮವಾಗಿ ನಿಯಂತ್ರಿಸಬಹುದು ಹಾಗೂ ಜಾಹೀರಾತುಗಳ ಸೆಟ್ಟಿಂಗ್‌ಗಳಲ್ಲಿರುವ ಜಾಹೀರಾತುಗಳ ವೈಯಕ್ತೀಕರಣವನ್ನು ಆಫ್ ಮಾಡಬಹುದು.
    ಇನ್ನಷ್ಟು ತಿಳಿಯಿರಿ