ಆರೋಗ್ಯ ಸೇವೆಯ ಡೇಟಾವನ್ನು ಒಂದುಗೂಡಿಸುವ ವೈದ್ಯಕೀಯ ಸಾಫ್ಟ್‌ವೇರ್
ಕೇರ್ ಸ್ಟುಡಿಯೋTM ರೋಗಿಗಳ ಆರೈಕೆಯಲ್ಲಿ ಹೆಚ್ಚು ಸಮಯ ಕಳೆಯಲು ವೈದ್ಯರಿಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನೋಡಿರಿ.
ಕ್ಲಿನಿಶಿಯನ್‌ಗಳಿಗೆ ರೋಗಿಗಳು ದಾಖಲೆಗಳ ಸಮಗ್ರ ವೀಕ್ಷಣೆಯನ್ನು ಒದಗಿಸುವುದು
JAMA ನೆಟ್‌ವರ್ಕ್ ಮುಕ್ತ ಅಧ್ಯಯನ ಪ್ರಕಾರ, ಕ್ಲಿನಿಶಿಯನ್‌ಗಳಿಗೆ ಅಗತ್ಯವಿರುವ ಮಾಹಿತಿಯ ಕಳಪೆ ಲಭ್ಯತೆಯಿಂದಾಗಿ ಅನೇಕ ವೈದ್ಯರಿಗೆ ಕಷ್ಟವಾಗುತ್ತಿದೆ. ಕೇರ್ ಸ್ಟುಡಿಯೋವನ್ನು ಕ್ಲಿನಿಶಿಯನ್‌ಗಳ ವರ್ಕ್‌ಫ್ಲೋವನ್ನು ಸುಗಮಗೊಳಿಸಲು ಮತ್ತು ಅತ್ಯಂತ ಅಮೂಲ್ಯವಾದ ಕಾರ್ಯದಲ್ಲಿ, ಎಂದರೆ ರೋಗಿಗಳ ಆರೈಕೆಯಲ್ಲಿ ತೊಡಗಿಕೊಳ್ಳಲು ಅವರಿಗೆ ಹೆಚ್ಚಿನ ಸಮಯ ನೀಡಲು ವಿನ್ಯಾಸಗೊಳಿಸಲಾಗಿದೆ.
ಔಷಧಕ್ಕಾಗಿ ಹುಡುಕಾಟದ ಸಾಮರ್ಥ್ಯ
ಕೇರ್ ಸ್ಟುಡಿಯೋ, ಕ್ಲಿನಿಶಿಯನ್‌ಗಳು ಆರೋಗ್ಯ ದಾಖಲೆ ಮಾಹಿತಿಯನ್ನು ತ್ವರಿತವಾಗಿ ಹುಡುಕುವುದಕ್ಕೆ ಸಹಾಯ ಮಾಡಲು ಮಾಹಿತಿಯನ್ನು ಸಂಘಟಿಸುವ Google ನ ಪರಿಣತಿಯನ್ನು ಅವಲಂಬಿಸಿದೆ. ಪರಿಕರದ ಕ್ಲಿನಿಕಲ್ ಹುಡುಕಾಟ ವೈಶಿಷ್ಟ್ಯವು ಕ್ಲಿನಿಶಿಯನ್‌ಗಳಿಗೆ ಅವರು ಹುಡುಕುತ್ತಿರುವುದನ್ನು ಸರಳವಾಗಿ ಟೈಪ್ ಮಾಡಲು ಮತ್ತು ವಿನಂತಿಸಿದ ನಿರ್ದಿಷ್ಟ ಮಾಹಿತಿಯನ್ನು ಹಾಗೂ ಸಂಬಂಧಿತ ಪರಿಕಲ್ಪನೆಗಳನ್ನು ತ್ವರಿತವಾಗಿ ಹುಡುಕಲು ಅನುವು ಮಾಡಿಕೊಡುತ್ತದೆ.
ಮೊದಲು ಪ್ರಮುಖ ಮಾಹಿತಿ
ಆಸ್ಪತ್ರೆಯ ಭೇಟಿಗಳು, ಹೊರರೋಗಿಗಳ ಘಟನೆಗಳು, ಲ್ಯಾಬೋರೇಟರಿ ಪರೀಕ್ಷೆಗಳು, ಔಷಧಿಗಳು ಹಾಗೂ ಚಿಕಿತ್ಸೆ ಮತ್ತು ಪ್ರಗತಿಯ ಟಿಪ್ಪಣಿಗಳು ಸೇರಿದಂತೆ — ರೋಗಿಯ ಪ್ರಮುಖ ಮಾಹಿತಿಯನ್ನು ಸ್ವಯಂಚಾಲಿತವಾಗಿ ಮುಂದಕ್ಕೆ ತರುವಂತಹ ಏಕ, ಕೇಂದ್ರೀಕೃತ ವೀಕ್ಷಣೆಯನ್ನು ನಮ್ಮ ಉಪಕರಣಗಳು ವೈದ್ಯರಿಗೆ ನೀಡುತ್ತವೆ. ಮತ್ತು ಸರಳವಾದ ಇಂಟರ್‌ಫೇಸ್, ಆರೋಗ್ಯದ ಡೇಟಾ ಮತ್ತು ಟೇಬಲ್‌ಗಳು, ಗ್ರಾಫ್‌ಗಳು ಮತ್ತು ಇತರ ಉಪಯುಕ್ತ ಫಾರ್ಮ್ಯಾಟ್‌ಗಳಲ್ಲಿ ಟ್ರೆಂಡ್‌ಗಳಲ್ಲಿ ವಿಷುವಲೈಸ್ ಮಾಡಲು ಅನನ್ಯ ವಿಧಾನಗಳನ್ನು ನೀಡುತ್ತದೆ.
ಗೌಪ್ಯತೆ ಎಂಬುದು ಮೂಲಭೂತ ತತ್ವವಾಗಿದೆ
ರೋಗಿಗಳ ಡೇಟಾವನ್ನು ರಕ್ಷಿಸುವ ಮತ್ತು HIPAA ಸೇರಿದಂತೆ ಡೇಟಾವನ್ನು ಹೇಗೆ ಬಳಸಬಹುದು ಮತ್ತು ಪ್ರಕ್ರಿಯೆಗೊಳಿಸಬಹುದು ಎಂಬುದನ್ನು ನಿಯಂತ್ರಿಸುವ ಉದ್ಯಮದಾದ್ಯಂತ ಚಾಲ್ತಿಯಲ್ಲಿರುವ ನಿಯಮಾವಳಿಗಳು ಹಾಗೂ ಅತ್ಯುತ್ತಮ ಅಭ್ಯಾಸಗಳನ್ನು ಪಾಲಿಸುವ ರೀತಿಯಲ್ಲಿ ಕೇರ್ ಸ್ಟುಡಿಯೋವನ್ನು ವಿನ್ಯಾಸಗೊಳಿಸಲಾಗಿದೆ. ರೋಗಿಗಳ ಡೇಟಾ Google ನ ಸ್ವತ್ತಲ್ಲ, ಮತ್ತು ನಾವು ಆ ಡೇಟಾವನ್ನು ಎಂದಿಗೂ ಮಾರಾಟ ಮಾಡುವುದಿಲ್ಲ. ನಾವು ಮಾಹಿತಿಯನ್ನು ರಕ್ಷಿಸಲು ಆಡಳಿತಾತ್ಮಕ, ತಾಂತ್ರಿಕ ಮತ್ತು ಭೌತಿಕ ರಕ್ಷಣಾ ಕ್ರಮಗಳನ್ನು ಕಾರ್ಯಗತಗೊಳಿಸುತ್ತೇವೆ.
ಕೇರ್ ಸ್ಟುಡಿಯೋ ಗೌಪ್ಯತೆಯ ಬದ್ಧತೆಗಳು
ನಿಯಂತ್ರಣ
ನಮ್ಮ ಆರೋಗ್ಯಸೇವೆ ಗ್ರಾಹಕರು, ನಮಗೆ ಒದಗಿಸುವ ಆರೋಗ್ಯ ಮಾಹಿತಿಯ ನಿಯಂತ್ರಣವನ್ನು ಹೊಂದಿರುತ್ತಾರೆ
ಉದ್ದೇಶ
ನಮ್ಮ ಆರೋಗ್ಯಸೇವೆ ಗ್ರಾಹಕರೊಂದಿಗಿನ ನಮ್ಮ ಒಪ್ಪಂದದ(ಗಳ) ಅನುಸಾರ ಉತ್ಪನ್ನಗಳು ಹಾಗೂ ಸೇವೆಗಳನ್ನು ಒದಗಿಸುವ ಉದ್ದೇಶಗಳಿಗಾಗಿ ಮಾತ್ರ ನಾವು ಆರೋಗ್ಯ ಮಾಹಿತಿಯನ್ನು ಬಳಸುತ್ತೇವೆ
ಕನಿಷ್ಠಗೊಳಿಸುವಿಕೆ
ಉತ್ಪನ್ನಗಳು ಹಾಗೂ ಸೇವೆಗಳನ್ನು ಸುರಕ್ಷಿತವಾಗಿ ಒದಗಿಸುವುದಕ್ಕಾಗಿ ಆರೋಗ್ಯ ಮಾಹಿತಿಯನ್ನು ನೋಡುವ ಅಗತ್ಯವಿದ್ದರೆ, HIPAA ಹಾಗೂ GDPR ನಂತಹ ಗೌಪ್ಯತಾ ನಿಯಮಗಳ ಅನುಸಾರ ಕನಿಷ್ಠಗೊಳಿಸುವಿಕೆಯ ಅಭ್ಯಾಸಗಳನ್ನು ನಾವು ಅನುಸರಿಸುತ್ತೇವೆ
ಪಾರದರ್ಶಕತೆ
ನಮ್ಮ ಆರೋಗ್ಯಸೇವೆ ಗ್ರಾಹಕರ ರೋಗಿಗಳ ಆರೋಗ್ಯ ಮಾಹಿತಿಯನ್ನು ನಾವು ನೋಡುವುದಕ್ಕೆ ಸಂಬಂಧಿಸಿದ ಹಾಗೆ, ಅವರ ಮನಶ್ಶಾಂತಿಗಾಗಿ ನಾವು ವರದಿಗಳನ್ನು ರಚಿಸಿ, ಲಭ್ಯಗೊಳಿಸುತ್ತೇವೆ
ಐಸೋಲೇಶನ್
ನಮ್ಮ ಆರೋಗ್ಯಸೇವೆ ಗ್ರಾಹಕರ ರೋಗಿಗಳ ಆರೋಗ್ಯ ಮಾಹಿತಿಯನ್ನು ನಾವು ಮಾರಾಟ ಮಾಡುವುದಿಲ್ಲ ಅಥವಾ ಅದನ್ನು ಜಾಹೀರಾತಿಗಾಗಿ ಅಥವಾ ಮಾರ್ಕೆಟಿಂಗ್ ಉದ್ದೇಶಗಳಿಗಾಗಿ ಬಳಸಿಕೊಳ್ಳುವುದಿಲ್ಲ
ಭದ್ರತೆ
ನಮ್ಮ ಸಿಸ್ಟಂಗಳು ಹಾಗೂ ಪರಿಹಾರಗಳಲ್ಲಿ ನಾವು ಪ್ರಬಲವಾದ ಔದ್ಯಮಿಕ-ದರ್ಜೆಯ ಗೌಪ್ಯತೆ ಹಾಗೂ ಭದ್ರತೆಯ ನಿಯಂತ್ರಣಗಳನ್ನು ಅಳವಡಿಸುತ್ತೇವೆ
ಖಾತರಿ
HIPAA ಹಾಗೂ GDPR ನಂತಹ ಗೌಪ್ಯತೆ ಹಾಗೂ ಭದ್ರತಾ ನಿಯಮಗಳಿಗೆ ಅನುಗುಣವಾಗಿ ನಮ್ಮ ಪರಿಹಾರಗಳನ್ನು ವಿನ್ಯಾಸಗೊಳಿಸುತ್ತೇವೆ ಮತ್ತು ಪ್ರತಿಷ್ಠಿತ ಸ್ವತಂತ್ರ ಮೂರನೇ-ಪಕ್ಷಗಳು ನಡೆಸುವ ಆಡಿಟ್‌ಗಳಲ್ಲಿ ಪಾಲ್ಗೊಳ್ಳುತ್ತೇವೆ
ವೈದ್ಯರು ಮತ್ತು ರೋಗಿಗಳಿಗೆ ಆರೋಗ್ಯ ಸೇವೆಯಿಂದ ಇನ್ನಷ್ಟು ಪ್ರಯೋಜನವನ್ನು ಪಡೆಯಲು ಸಹಾಯ ಮಾಡುವುದು
ಪೂರೈಕೆದಾರರು ಹೇಗೆ ಆರೈಕೆಯನ್ನು ನೀಡುತ್ತಾರೆ ಎಂಬುದನ್ನು ಸುಧಾರಿಸಲು, ಈ ಸಾಧನಗಳು ಏಕೆ ಸಹಾಯ ಮಾಡಬಹುದು ಎಂಬುದರ ಕುರಿತು ನಮ್ಮ ಆರೋಗ್ಯ ಸೇವಾ ವೃತ್ತಿಪರರು ಮತ್ತು ಉತ್ಪನ್ನ ವಿನ್ಯಾಸಕರ ಮಾತನ್ನು ಕೇಳಿ.