ಪದೇಪದೇ ಕೇಳಲಾಗುವ ಪ್ರಶ್ನೆಗಳು
Google Health ಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಿಕೊಳ್ಳಲು ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳ ಸಂಗ್ರಹವನ್ನು ಬ್ರೌಸ್ ಮಾಡಿರಿ.
Google Health ಎಂದರೇನು?
ಆರೋಗ್ಯ ಮಾಹಿತಿಯನ್ನು ಒಟ್ಟುಗೂಡಿಸುವ ಮತ್ತು ಅರ್ಥಪೂರ್ಣವಾಗಿಸುವ ಉತ್ಪನ್ನಗಳು ಮತ್ತು ಸೇವೆಗಳ ಮೂಲಕ ಆರೋಗ್ಯವಂತರಾಗಿರಲು ಬಿಲಿಯನ್‌ಗಟ್ಟಲೆ ಜನರಿಗೆ ಸಹಾಯ ಮಾಡಲು Google Health ಬದ್ಧವಾಗಿದೆ. ಉತ್ತಮ, ತ್ವರಿತ ಮತ್ತು ಹೆಚ್ಚು ಸಂಪರ್ಕಗೊಂಡಿರುವ ಆರೈಕೆಯನ್ನು ಒದಗಿಸಲು ಆರೈಕೆ ತಂಡಗಳನ್ನು ಸಶಕ್ತವಾಗಿಸುವ ತಂತ್ರಜ್ಞಾನದ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ Google Health ಗಮನ ಹರಿಸುತ್ತಿದೆ. ಆರೋಗ್ಯದ ವಿಚಾರದಲ್ಲಿ ಕ್ರಮ ಕೈಗೊಳ್ಳಲು ಅಗತ್ಯವಿರುವ ಮಾಹಿತಿ, ಸಹಾಯ ಮತ್ತು ಸಂಪರ್ಕಗಳನ್ನು ಒದಗಿಸುವ ಮೂಲಕ ಆರೋಗ್ಯವಂತರಾಗಿರಲು ಜನರನ್ನು ಸಶಕ್ತರನ್ನಾಗಿಸುವ ಉತ್ಪನ್ನಗಳು ಮತ್ತು ವೈಶಿಷ್ಟ್ಯಗಳನ್ನು ರಚನೆಯಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಹಾಗೂ ಕ್ಯಾನ್ಸರ್ ಪತ್ತೆಹಚ್ಚುವಿಕೆ, ರೋಗಿಗಳ ಫಲಿತಾಂಶಗಳ ಮುನ್ಸೂಚನೆ ನೀಡುವಿಕೆ, ಕುರುಡತನದ ತಡೆಗಟ್ಟುವಿಕೆ ಮತ್ತು ಇನ್ನೂ ಬಹಳಷ್ಟು ವಿಚಾರಗಳಲ್ಲಿ ನೆರವಾಗಲು ಕೃತಕ ಬುದ್ಧಿಮತ್ತೆಯನ್ನು (AI) ಬಳಸಬಹುದೇ ಎಂದು Google Health ಅನ್ವೇಷಿಸುತ್ತಿದೆ. ಪ್ರಪಂಚದ ಮಾಹಿತಿಯನ್ನು ವ್ಯವಸ್ಥಿತಗೊಳಿಸುವ ಹಾಗೂ ಅದು ಎಲ್ಲರಿಗೂ ದೊರಕುವಂತೆ ಮತ್ತು ಉಪಯುಕ್ತವಾಗುವಂತೆ ಮಾಡುವ Google ನ ಧ್ಯೇಯಕ್ಕೆ ನಮ್ಮ ಕೆಲಸ ಪೂರಕವಾಗಿದೆ.
Google Health ಉತ್ಪನ್ನಗಳು ಯಾವುವು?
ನಮ್ಮ ತಂಡಗಳು ನಾಲ್ಕು ಪ್ರಮುಖ ಕ್ಷೇತ್ರಗಳಲ್ಲಿನ ಉತ್ಪನ್ನಗಳು ಅಥವಾ ಪರಿಹಾರಗಳಿಗೆ ಸಂಬಂಧಿಸಿದಂತೆ ತಮ್ಮ ಪರಿಣಿತಿಯನ್ನು ಪ್ರಯೋಗಿಸುತ್ತಿವೆ:
- ಉನ್ನತ ಗುಣಮಟ್ಟದ ಮಾಹಿತಿ ಮತ್ತು ಪರಿಕರಗಳ ಸಹಾಯದಿಂದ Search, Maps, YouTube, Fitbit, Fit ಮತ್ತು Nest ನಂತಹ ಉತ್ಪನ್ನಗಳಲ್ಲಿ ತಮ್ಮ ಆರೋಗ್ಯ ಮತ್ತು ಯೋಗಕ್ಷೇಮವನ್ನು ನಿರ್ವಹಿಸಲು ಜನರಿಗೆ ನೆರವಾಗುವ ಮೂಲಕ ಗ್ರಾಹಕರಿಗೆ ನೆರವಾಗುತ್ತಿವೆ.
- Google Cloud ನ ಆರೋಗ್ಯಸೇವಾ ಡೇಟಾ ಇಂಜಿನ್ ಮತ್ತು ಕೇರ್ ಸ್ಟುಡಿಯೋದಂತಹ ಉತ್ಪನ್ನಗಳಲ್ಲಿ, ಆರೈಕೆ ಒದಗಿಸುವಿಕೆಯನ್ನು ಪರಿವರ್ತಿಸುವ ಪರಿಹಾರಗಳ ಮೂಲಕ ಆರೈಕೆದಾರರಿಗೆ ನೆರವಾಗುತ್ತಿವೆ.
- ಡಯಾಬೆಟಿಕ್ ರೆಟಿನೋಪಥಿ ಮತ್ತು ಮ್ಯಾಮ್ಮೋಗ್ರಫಿ, ಚರ್ಮಶಾಸ್ತ್ರ ಮತ್ತು ಕ್ಷಯದ ಸ್ಕ್ರೀನಿಂಗ್‌ನಲ್ಲಿನ ಅನ್ವೇಷಣೆಗಳಿಗಾಗಿ ARDA ನಂತಹ ಉತ್ಪನ್ನಗಳನ್ನು ಬಳಸಿಕೊಂಡು ರೋಗದ ಸ್ಕ್ರೀನಿಂಗ್ ಮತ್ತು ಪತ್ತೆಹಚ್ಚುವಿಗೆ ಕೃತಕ ಬುದ್ಧಿಮತ್ತೆಯ ಬಳಕೆಯನ್ನು ವೃದ್ಧಿಸುವ ಮೂಲಕ, ಆರೈಕೆದಾರರಿಗೆ ನೆರವಾಗುತ್ತಿವೆ.
- ಎಕ್ಸ್‌ಪೋಶರ್ ಅಧಿಸೂಚನೆಗಳು, ಸಮುದಾಯ ಸಂಚಾರ ವರದಿಗಳು, ಆರೋಗ್ಯ ಸಮಾನತೆಯ ಟ್ರ್ಯಾಕರ್ ಮತ್ತು Google.Org ಜಾಹೀರಾತು ಅನುದಾನಗಳ ಸಹಾಯದಿಂದ, ಜನರು ಬದುಕುವ, ಕೆಲಸ ಮಾಡುವ ಮತ್ತು ಆಟವಾಡುವ ಪರಿಸರಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾರ್ವಜನಿಕ ಆರೋಗ್ಯ ಸಮುದಾಯಕ್ಕೆ ಸಹಾಯ ಮಾಡಲು ಡೇಟಾ ಮತ್ತು ಒಳನೋಟಗಳನ್ನು ಒದಗಿಸುವ ಮೂಲಕ ಆರೋಗ್ಯವಂತ ಸಮುದಾಯಗಳಿಗೆ ನೆರವಾಗುತ್ತಿವೆ.
Google ಆರೋಗ್ಯಸೇವಾ ವಿಭಾಗ ಎಂಬುದಿದೆಯೇ?
Google Health ಎಂಬುದು ಆರೋಗ್ಯ ಮಾಹಿತಿಯನ್ನು ಒಟ್ಟುಗೂಡಿಸುವ ಮತ್ತು ಅರ್ಥಪೂರ್ಣವಾಗಿಸುವ ಉತ್ಪನ್ನಗಳು ಮತ್ತು ಸೇವೆಗಳ ಮೂಲಕ ಬಿಲಿಯನ್‌ಗಟ್ಟಲೆ ಜನರಿಗೆ ಆರೋಗ್ಯವಂತರಾಗಿರಲು ಸಹಾಯ ಮಾಡುವ ಕಂಪನಿ ಮಟ್ಟದ ಪ್ರಯತ್ನವಾಗಿದೆ. Google Health ಅನ್ನು ವ್ಯಕ್ತಿಗಳು ಮತ್ತು ಆರೋಗ್ಯಸೇವಾ ಪೂರೈಕೆದಾರರು ಇಬ್ಬರಿಗೂ ನೆರವಾಗಲು ವಿನ್ಯಾಸಗೊಳಿಸಲಾಗಿದೆಯಾದರೂ, ಇಂದು Google ನಲ್ಲಿ "Google ಆರೋಗ್ಯಸೇವೆ" ಎಂಬ ವಿಭಾಗ ಅಥವಾ ಪ್ಲ್ಯಾಟ್‌ಫಾರ್ಮ್ ಅಸ್ತಿತ್ವದಲ್ಲಿಲ್ಲ.
Google ನನ್ನ ಆರೋಗ್ಯಸೇವೆಯ ಮಾಹಿತಿಯನ್ನು ಸಂಗ್ರಹಿಸುತ್ತದೆಯೇ?
ನೀವು Google ನ ಉತ್ಪನ್ನಗಳು ಮತ್ತು ಸೇವೆಗಳನ್ನು ಬಳಸುವಾಗ, ನಿಮ್ಮ ಡೇಟಾದ ವಿಚಾರದಲ್ಲಿ ನೀವು ನಮ್ಮನ್ನು ನಂಬುತ್ತೀರಿ. ನಿಮ್ಮ ಡೇಟಾವನ್ನು ಗೌಪ್ಯ ಮತ್ತು ಸುರಕ್ಷಿತವಾಗಿಡುವುದು ನಮ್ಮ ಜವಾಬ್ದಾರಿ. ಮತ್ತು Google Health ನಲ್ಲಿ, ನಾವು ಹೊಸ ಉತ್ಪನ್ನ ಮತ್ತು ಸೇವೆಗಳ ರಚನೆಯಲ್ಲಿ ತೊಡಗುವಾಗ ಮೂಲಭೂತ ಗೌಪ್ಯತೆ ಮತ್ತು ಸುರಕ್ಷತೆಯ ತತ್ವಗಳಿಂದ ಮಾರ್ಗದರ್ಶನ ಪಡೆಯುತ್ತೇವೆ. ಇನ್ನಷ್ಟು ತಿಳಿದುಕೊಳ್ಳಲು ಸುರಕ್ಷತಾ ಕೇಂದ್ರಕ್ಕೆ ಭೇಟಿ ನೀಡಿ.
Google Health ವೈದ್ಯಕೀಯ ದಾಖಲಾತಿಗಳು ಇವೆಯೇ?
ಇಲ್ಲ. Google Health ನ ಕೇರ್ ಸ್ಟುಡಿಯೋ ವೈದ್ಯಕೀಯ ದಾಖಲೆಗಳನ್ನು ಒದಗಿಸುವುದಿಲ್ಲ. ಅದು ಆರೋಗ್ಯ ಸೇವೆ ಪೂರೈಕೆದಾರರ ವಿದ್ಯುನ್ಮಾನ ಆರೋಗ್ಯ ಸೇವಾ ದಾಖಲಾತಿ (EHR) ನಲ್ಲಿ ಈಗಾಗಲೇ ಲಭ್ಯವಿರುವ ಮಾಹಿತಿಯನ್ನು ಪಡೆದುಕೊಳ್ಳುತ್ತದೆ ಮತ್ತು EHR ಅನ್ನು ಹೊಸ ರೀತಿಯಲ್ಲಿ ಬಳಸುವ ವೈದ್ಯರೆದುರು ಪ್ರದರ್ಶಿಸುತ್ತದೆ. ರೋಗಿಗಳ ಡೇಟಾವನ್ನು ರಕ್ಷಿಸುವ ಮತ್ತು HIPAA ಸೇರಿದಂತೆ ಡೇಟಾವನ್ನು ಹೇಗೆ ಬಳಸಬಹುದು ಮತ್ತು ಪ್ರಕ್ರಿಯೆಗೊಳಿಸಬಹುದು ಎಂಬುದನ್ನು ನಿಯಂತ್ರಿಸುವ ಉದ್ಯಮದಾದ್ಯಂತ ಚಾಲ್ತಿಯಲ್ಲಿರುವ ನಿಯಮಾವಳಿಗಳನ್ನು ಪಾಲಿಸುವ ರೀತಿಯಲ್ಲಿ ಉತ್ಪನ್ನವನ್ನು ವಿನ್ಯಾಸಗೊಳಿಸಲಾಗಿದೆ. ನಾವು ಮಾಹಿತಿಯನ್ನು ರಕ್ಷಿಸಲು ಆಡಳಿತಾತ್ಮಕ, ತಾಂತ್ರಿಕ ಮತ್ತು ಭೌತಿಕ ರಕ್ಷಣಾ ಕ್ರಮಗಳನ್ನು ಕಾರ್ಯಗತಗೊಳಿಸುತ್ತೇವೆ.
Google Health Studies ಎಂದರೇನು?
Google Health Studies ಎಂಬುದು ಪ್ರಮುಖ ಸಂಸ್ಥೆಗಳಲ್ಲಿ ನಡೆಯುತ್ತಿರುವ ಬಹುಮುಖ್ಯ ಆರೋಗ್ಯ ಸಂಶೋಧನೆಗೆ ನಿಮ್ಮ ಫೋನ್‌ನಿಂದಲೇ ಸರಳವಾಗಿ ಮತ್ತು ಸುರಕ್ಷಿತವಾಗಿ ಕೊಡುಗೆ ನೀಡಲು ನಿಮ್ಮನ್ನು ಸಶಕ್ತಗೊಳಿಸುವ ಆ್ಯಪ್ ಆಗಿದೆ.
Google Health ಸಂಶೋಧನೆ ಮತ್ತು Google ವೈದ್ಯಕೀಯ ಸಂಶೋಧನೆಯ ಉದಾಹರಣೆಗಳು ಯಾವುವು?
ದೀರ್ಘಕಾಲೀನ ಆರೋಗ್ಯ ತಂತ್ರಜ್ಞಾನದ ಸಾಮರ್ಥ್ಯವನ್ನು ಸಾಧಿಸಲು ಆರೋಗ್ಯಸೇವಾ ತಂತ್ರಜ್ಞಾನಗಳ ಲಭ್ಯತೆ ಮತ್ತು ನಿಖರತೆಯನ್ನು ಜಾಗತಿಕವಾಗಿ ವೃದ್ಧಿಸುವ ಅವಕಾಶಗಳನ್ನು ಅನ್ವೇಷಿಸುವು ಮತ್ತು ಹೊಸ AI ರಚಿಸುವ ನಿಟ್ಟಿನಲ್ಲಿ Google Health ಕಾರ್ಯನಿರ್ವಹಿಸುತ್ತಿದೆ. ಡಯಾಬೆಟಿಕ್ ರೆಟಿನೋಪಥಿ, ಮ್ಯಾಮ್ಮೋಗ್ರಫಿ, ಚರ್ಮಶಾಸ್ತ್ರ ಮತ್ತು ಕ್ಷಯದ ಸ್ಕ್ರೀನಿಂಗ್‌ನಲ್ಲಿನ ಅನ್ವೇಷಣೆಗಳು, ಮತ್ತು ಇತ್ಯಾದಿಗಳಿಗಾಗಿ ARDA ನಂತಹ ಉತ್ಪನ್ನಗಳ ಸಹಾಯದಿಂದ ರೋಗವನ್ನು ಸ್ಕ್ರೀನ್ ಮಾಡಿ, ಪತ್ತೆಹಚ್ಚುವ ಮೂಲಕ ಇದನ್ನು ಸಾಧಿಸುತ್ತಿದ್ದೇವೆ.
Google Health Deepmind ಗೆ ಏನಾಯಿತು?
Deepmind ವಿಜ್ಞಾನದಲ್ಲಿ ಪ್ರಗತಿ ಸಾಧಿಸಿ, ಮನುಷ್ಯಕುಲಕ್ಕೆ ಪ್ರಯೋಜನ ಒದಗಿಸಲು ಬುದ್ಧಿವಂತಿಕೆಯ ಪರಿಹಾರಗಳನ್ನು ಒದಗಿಸಲು ಬದ್ಧವಾಗಿದೆ. DeepMind ಅನ್ನು Google 2014 ರಲ್ಲಿ ಸ್ವಾಧೀನಪಡಿಸಿಕೊಂಡಿತು.
Fitbit, Google Health ನ ಭಾಗವೇ?
Fitbit ಅನ್ನು ಸುರಕ್ಷಿತ ಮತ್ತು ಹೆಚ್ಚು ಸಕ್ರಿಯ ಜೀವನ ನಡೆಸಲು ಜನರಿಗೆ ನೆರವಾಗಲು ಮೀಸಲಿಡಲಾಗಿದೆ. Fitbit ಅನ್ನು Google 2021 ರಲ್ಲಿ ಸ್ವಾಧೀನಪಡಿಸಿಕೊಂಡಿತು.
ನನಗೆ ಇತ್ತೀಚಿನ Google Health ಸುದ್ದಿ ಎಲ್ಲಿ ದೊರೆಯುತ್ತದೆ?
Google Health ನಲ್ಲಿನ ಇತ್ತೀಚಿನ ಸುದ್ದಿಯನ್ನು ಕೀವರ್ಡ್, ಎಂಬ Google Health ಬ್ಲಾಗ್‌ನಲ್ಲಿ ಕಾಣಬಹುದು.
Google ನ DermAssist ಪರಿಕರ ಎಂದರೇನು?
DermAssist, Google Health ನ ನಿಯಂತ್ರಿತ ಚರ್ಮ ಸೇವೆಗಳ ಹುಡುಕಾಟದ ಆ್ಯಪ್ ಆಗಿದ್ದು, ಕೆಲವು ಪ್ರಶ್ನೆಗಳಿಗೆ ಉತ್ತರಿಸಿ, ಮೂರು ಫೋಟೋಗಳನ್ನು ತ್ವರಿತವಾಗಿ ಸಲ್ಲಿಸುವ ಮೂಲಕ ವೈಯಕ್ತಿಕಗೊಳಿಸಿದ ಚರ್ಮಶಾಸ್ತ್ರ ಸಂಬಂಧಿತ ಮಾಹಿತಿಯನ್ನು ಪಡೆಯಲು ಬಳಕೆದಾರರಿಗೆ ಸಹಾಯ ಮಾಡುತ್ತದೆ ಮತ್ತು ಇದನ್ನು ಕೆಲವು ಪ್ರದೇಶಗಳಲ್ಲಿ ಸೀಮಿತ ಬಿಡುಗಡೆಯ ಮೂಲಕ ಲಭ್ಯವಾಗಿಸಲಾಗುತ್ತದೆ. DermAssist ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಲಭ್ಯವಿಲ್ಲ.
Google Health ಚರ್ಮದ ಸಮಸ್ಯೆಗಳನ್ನು ಪತ್ತೆಹಚ್ಚುತ್ತದೆಯೇ?
DermAssist ಮಾಹಿತಿಯ ಉದ್ದೇಶಗಳನ್ನು ಮಾತ್ರ ಹೊಂದಿದೆ ಮತ್ತು ಅದು ವೈದ್ಯಕೀಯ ರೋಗಪತ್ತೆಯನ್ನು ಒದಗಿಸುವುದಿಲ್ಲ.
Google Health ಇನ್ನೂ ಅಸ್ತಿತ್ವದಲ್ಲಿದೆಯೇ?
Google Health ಸ್ಥಗಿತಗೊಳ್ಳುತ್ತಿಲ್ಲ ಮತ್ತು ಆರೋಗ್ಯ ಮಾಹಿತಿಯನ್ನು ಒಟ್ಟುಗೂಡಿಸುವ ಮತ್ತು ಅರ್ಥಪೂರ್ಣವಾಗಿಸುವ ಉತ್ಪನ್ನಗಳು ಮತ್ತು ಸೇವೆಗಳ ಮೂಲಕ ಜನರಿಗೆ ಆರೋಗ್ಯವಂತರಾಗಿರಲು ಸಹಾಯ ಮಾಡುವ ತನ್ನ ಧ್ಯೇಯವನ್ನು ಮುಂದುವರಿಸಿಕೊಂಡು ಹೋಗುತ್ತಿದೆ.
Google Health ಏಕೆ ವಿಫಲವಾಯಿತು?
ಆರೋಗ್ಯ ಮಾಹಿತಿಯ ಜೊತೆ ಸಂಪರ್ಕ ಸಾಧಿಸಲು ಮತ್ತು ಅದಕ್ಕೆ ಅರ್ಥ ಒದಗಿಸಲು Google Health ಹೊಸ ಉತ್ಪನ್ನಗಳು, ಸೇವೆಗಳು, ಅನುಭವಗಳು ಮತ್ತು ಸಂಶೋಧನೆಯನ್ನು ಬಿಡುಗಡೆಗೊಳಿಸುವುದನ್ನು ಮುಂದುವರಿಸುತ್ತದೆ.
Google Health ಗೆ ಏನಾಯಿತು?
Google Health ಎಂಬುದು ಕಂಪನಿ ಮಟ್ಟದ ಪ್ರಯತ್ನವಾಗಿದ್ದು, ಉತ್ತಮ, ತ್ವರಿತ ಮತ್ತು ಹೆಚ್ಚು ಸಂಪರ್ಕಗೊಂಡಿರುವ ಆರೈಕೆಯನ್ನು ಒದಗಿಸಲು ಆರೈಕೆ ತಂಡಗಳನ್ನು ಸಶಕ್ತವಾಗಿಸಲು ತಂತ್ರಜ್ಞಾನದ ಪರಿಹಾರಗಳನ್ನು ಅಭಿವೃದ್ಧಿಪಡಿಸುವ; ಆರೋಗ್ಯದ ವಿಚಾರದಲ್ಲಿ ಕ್ರಮ ಕೈಗೊಳ್ಳಲು ಅಗತ್ಯವಿರುವ ಮಾಹಿತಿ, ಸಹಾಯ ಮತ್ತು ಸಂಪರ್ಕಗಳನ್ನು ಒದಗಿಸುವ ಮೂಲಕ ಆರೋಗ್ಯವಂತರಾಗಿರಲು ಜನರನ್ನು ಸಶಕ್ತರನ್ನಾಗಿಸುವ; ಹಾಗೂ ಕ್ಯಾನ್ಸರ್ ಪತ್ತೆಹಚ್ಚುವಿಕೆ, ರೋಗಿಗಳ ಫಲಿತಾಂಶಗಳ ಮುನ್ಸೂಚನೆ ನೀಡುವಿಕೆ, ಕುರುಡತನದ ತಡೆಗಟ್ಟುವಿಕೆ ಮತ್ತು ಇನ್ನೂ ಬಹಳಷ್ಟು ವಿಚಾರಗಳಲ್ಲಿ ನೆರವಾಗಲು ಕೃತಕ ಬುದ್ಧಿಮತ್ತೆಯನ್ನು ಬಳಸಬಹುದೇ ಎಂದು ಅನ್ವೇಷಿಸುವ ಉದ್ದೇಶವನ್ನು ಹೊಂದಿದೆ.